ಹೃದಯವು ನಮ್ಮ ದೇಹದ ಒಂದು ಅತ್ಯಗತ್ಯ ಅಂಗ. ಇಡೀ ದೇಹದಲ್ಲಿ ಎಲ್ಲಾ ಅಂಗಗಳಿಗೂ ಕೂಡ ವಿಶ್ರಾಂತಿ ಸಿಗುತ್ತದೆ ಆದರೆ ಹೃದಯಕ್ಕೆ ವಿಶ್ರಾಂತಿ ಎನ್ನುವುದು ಇಲ್ಲ. ನಾವು ಗರ್ಭದ ಒಳಗೆ ಇದ್ದಾಗಲೇ ಮಿಡಿಯಲು ಶುರು ಮಾಡುವ ಈ ಹೃದಯವು ಒಂದೇ ಸಮನೆ ನಾವು ಇರುವ ತನಕ ಕೂಡ ಬಡಿದುಕೊಳ್ಳುತ್ತಲೇ ಇರುತ್ತದೆ. ಇದರಲ್ಲಿ ವ್ಯತ್ಯಾಸಗಳಾಗದಂತೆ ಆರೋಗ್ಯ ಕಾಪಾಡಿಕೊಳ್ಳಬೇಕಾದದ್ದು ನಮ್ಮ ಜವಾಬ್ದಾರಿ.
ಹೃದಯಕ್ಕೆ ನಾನಾ ರೀತಿಯ ಕಾರಣಗಳಿಂದಾಗಿ ಸಮಸ್ಯೆ ಬರುತ್ತದೆ. ಕೆಲವರಿಗೆ ಹುಟ್ಟಿನಿಂದಲೇ ವಂಶ ಪಾರಂಪರ್ಯಯಾಗಿ ಹೃದಯ ಸಂಬಂಧಿತ ಸಮಸ್ಯೆಗಳು ಬಂದಿರುತ್ತವೆ. ಕೆಲವರ ಹೃದಯ ವೀಕ್ ಇರುತ್ತದೆ, ಕೆಲವರ ಹೃದಯ ಅತಿ ಹೆಚ್ಚು ಪಡೆದುಕೊಳ್ಳುತ್ತದೆ, ಕೆಲವರ ಹೃದಯದ ಬಡಿತ ಕಡಿಮೆಯಾಗಿರುತ್ತದೆ, ಇನ್ನು ಕೆಲವರಿಗೆ ಹೃದಯದಲ್ಲಿ ಹೋಲ್ ಆಗುತ್ತದೆ.
ಈ ಸುದ್ದಿ ಓದಿ:- ಸ್ನಾನದ ನೀರಿನಲ್ಲಿ ಇದನ್ನು ಬೆರೆಸಿ ಕೋಟಿ ಸಾಲ ಇದ್ದರೂ ತೀರುತ್ತದೆ…
ಕೆಲವರಿಗೆ ವಾಲ್ ಗಳು, ರಕ್ತನಾಳಗಳು ಬ್ಲಾಕ್ ಆಗುತ್ತದೆ, ಹೃದಯ ಒರಟಾಗುತ್ತದಗ ಸಿಂಕ್ ಆಗುತ್ತದೆ ಇನ್ನು ಮುಂತಾದ ಅನೇಕ ಕಾಯಿಲೆಗಳು ಬರುತ್ತವೆ. ಇದಕ್ಕೆಲ್ಲಾ ಕಾರಣ ಏನೆಂದರೆ, ಆಯುರ್ವೇದ ಹೇಳುವ ಪ್ರಕಾರ ಅವಲಂಬಕ ಕಫ, ಸಾಧಕ ಪಿತ್ತ, ಪ್ರಾಣ ವಾಯುವಿನ ವಿಚಾರ ಇದೆಲ್ಲವೂ ಕೂಡ ಹೃದಯ ಸಮಸ್ಯೆ ಬರಲು ಮೂಲ ಕಾರಣ.
ಪಿತ್ತಜನ್ಯ, ವಾತ ಜನ್ಯ ಹಾಗೂ ಕಫಜನ್ಯ ಮೂರರಿಂದಲೂ ಹೃದಯದ ಸಮಸ್ಯೆ ಬರುತ್ತದೆ. ಇದರಲ್ಲಿ ಪಿತ್ತಜನ್ಯ ಬಂದು ನರಳುವವರ ಸಂಖ್ಯೆ ಹೆಚ್ಚು. ಒಬ್ಬ ವ್ಯಕ್ತಿಗೆ ವಾತ ವಿಕಾರದಿಂದ ಸಮಸ್ಯೆ ಬಂದಿದ್ದರೆ ಅದಕ್ಕೂ ಕೂಡ ಅದರದ್ದೇ ಆದ ಚಿಕಿತ್ಸೆ ಇದೆ, ಹೀಗೆ ಪಿತ್ತಜನ್ಯ ಅಥವಾ ಕಫಜನ್ಯದಿಂದ ಹೃದಯ ಸಮಸ್ಯೆ ಆಗಿದ್ದರು ಪರಿಹಾರ ಇದೆ.
ತ್ರಿದೋಷಗಳಿಂದ ಹೃದಯದ ಸಮಸ್ಯೆ ಉಂಟಾಗಿದ್ದರೆ ಅದನ್ನು ಕೂಡಪಡಿಸುವುದು ಅಸಾಧ್ಯ ಎಂದು ಹೇಳಲಾಗುತ್ತದೆ. ಹಾಗಾಗಿ ಇಂತಹ ದೋಷಗಳು ಉಂಟಾಗಿ ದೇಹದ ಆರೋಗ್ಯ ಕೆಡದಂತೆ ನಾವು ಎಚ್ಚರಿಕೆ ವಹಿಸಬೇಕು ಇದಕ್ಕಾಗಿ ಏನು ಮಾಡಬೇಕು ಪರಿಹಾರ ಹೀಗಿದೆ ನೋಡಿ.
ಈ ಸುದ್ದಿ ಓದಿ:- 2024 ಮಾರ್ಚ್ ತಿಂಗಳ ರಾಶಿ ಫಲ, ಮಿಥುನ ರಾಶಿಯವರು ಸದೃಢರಾಗಲು ಒಂದು ಒಳ್ಳೆಯ ಅವಕಾಶ.!
* ತ್ರಿಫಲ ಚೂರ್ಣದ ಸೇವನೆ ಇದಕ್ಕೆ ಅತ್ಯುತ್ತಮ ಔಷಧಿ ಆದರೆ ನೀವು ಕಫಜನ್ಯದಿಂದ ಬಳಲುತ್ತಿದ್ದರೆ ಇದನ್ನು ಜೇನುತುಪ್ಪದೊಂದಿಗೆ ಸೇವನೆ ಮಾಡಬೇಕು. ಪಿತ್ತ ವಿಕಾರದಿಂದ ಹೃದಯದ ಸಮಸ್ಯೆ ಬಂದಾಗ ಲಕ್ಷಣಗಳು ಹೆಚ್ಚಾಗಿದೆ ಎನ್ನುವುದಾದರೆ ಹಸುವಿನ ತುಪ್ಪದೊಂದಿಗೆ ಸೇವನೆ ಮಾಡಬೇಕು ಮತ್ತು ಏನಾದರೂ ವಾತ ವಿಕಾರದ ಲಕ್ಷಣ ಹೆಚ್ಚಾಗಿ ಕಾಣಿಸಿ ಕೊಳ್ಳುತ್ತಿದೆ ಎನ್ನುವುದಾದರೆ ಎಳ್ಳೆಣ್ಣೆಯೊಂದಿಗೆ ಸೇವನೆ ಮಾಡಬೇಕು.
ಒಂದು ಚಮಚದಷ್ಟು ನಿಮ್ಮ ದೇಹಕ್ಕನುಗುಣವಾದ ಪದಾರ್ಥದೊಂದಿಗೆ ಮಿಕ್ಸ್ ಮಾಡಿ ರಾತ್ರಿ ಊಟ ಆದ ನಂತರ ಸೇವಿಸಬೇಕು. ಅರ್ಧ ತಾಸಿನ ನಂತರ ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿಯಬೇಕು. ನಾಡಿಶೋಧನ ಪರೀಕ್ಷೆ ಮೂಲಕ ಯಾವ ವಿಕಾರ ಹೆಚ್ಚಾಗಿದೆ ಎಂದು ತಿಳಿದುಕೊಳ್ಳಬಹುದು.
* ನಮ್ಮ ಆಹಾರದಲ್ಲಿ ಬೇಯಿಸಿದ ಸೊಪ್ಪು ಬೇಯಿಸಿದ ತರಕಾರಿ ಮೊಳಕೆ ಕಟ್ಟಿದ ಕಾಳುಗಳು ಇಂತಹ ಪದಾರ್ಥಗಳು ಹೇರಳವಾಗಿದ್ದರೆ ಇದರಿಂದ ಆಂಟಿ ಆಕ್ಸಿಡೆಂಟ್ ಗಳು ಮತ್ತು ನೈಟ್ರಿಕ್ ಆಕ್ಸೈಡ್ ಹೆಚ್ಚಾಗಿ ದೇಹಕ್ಕೆ ಸೇರುತ್ತದೆ. ಯಾವುದೇ ವಿಧದ ವಿಕಾರಗಳಿದ್ದರೂ ಕೂಡ ಕಂಟ್ರೋಲ್ ಗೆ ತರುತ್ತದೆ. ಈ ಆಹಾರದಲ್ಲಿರುವ ಫೈಬರ್ ಅಂಶವು ದೇಹದಲ್ಲಿರುವ ಟಾಕ್ಸಿನ್ ಪದಾರ್ಥಗಳನ್ನು ಹೊರ ಹಾಕುತ್ತದೆ.
ಈ ಸುದ್ದಿ ಓದಿ:- ಮನೆ ಕಟ್ಟುವವರಿಗೆ ಕೇಂದ್ರಸರ್ಕಾರದಿಂದ 2.7 ಲಕ್ಷ ಸಹಾಯಧನ, ಹೇಗೆ ಅರ್ಜಿ ಸಲ್ಲಿಸಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ಯಾರು ಅರ್ಹರು ನೋಡಿ.!
* ಪಿತ್ತ ವಿಕಾರಗಳು ಇದ್ದವರು ಹಸಿ ಸೊಪ್ಪು ತರಕಾರಿಗಳ ಸೇವನೆ ಕಫ ದೋಷ ಇದ್ದವರು ಬೇಯಿಸಿದ ಸೊಪ್ಪು ತರಕಾರಿಗಳು ಮತ್ತು ವಾತ ದೋಷ ಇದ್ದವರು ಬೇಯಿಸಿದ ಸೊಪ್ಪು ತರಕಾರಿಗಳ ಜೊತೆಗೆ ಉಷ್ಣವೀರ್ಯ ಗುಣ ಹೇರಳವಾಗಿರುವ ಪದಾರ್ಥಗಳನ್ನು ಸೇವಿಸಬೇಕು
* ಇದರೊಂದಿಗೆ ಅತಿಯಾದ ಪಾಸ್ಟ್ ಪುಟ್ ಜಂಕ್ ಫುಡ್ಗಳ ಸೇವನೆ ತಪ್ಪಿಸುವುದು, ಆದಷ್ಟು ಮನೆಯಲ್ಲಿ ಮಾಡಿದ ಆಹಾರ ಪದಾರ್ಥಗಳ ಸೇವನೆ ಮಾಡುವುದು, ನಿದ್ರಾಹೀನತೆ ಸರಿಪಡಿಸಿಕೊಳ್ಳುವುದು, ಪ್ರತಿನಿತ್ಯ ವ್ಯಾಯಾಮಕ್ಕೆ ಪ್ರಾಣಾಯಾಮಕ್ಕೆ ಸಮಯ ನೀಡುವುದು, ಸರಿಯಾದ ಸಮಯಕ್ಕೆ ಆಹಾರ ನಿದ್ರೆ ಮಾಡಿ ಉತ್ತಮ ಜೀವನ ಶೈಲಿಯಲ್ಲಿ ತೊಡಗಿಕೊಳ್ಳುವುದು ಇದೆಲ್ಲವೂ ಕೂಡ ಒಳ್ಳೆಯದು.
* ಹೃದಯದ ಆರೋಗ್ಯಕ್ಕೆ ವಾಕಿಂಗ್ ಒಳ್ಳೆಯದು ಎಂದು ಹೇಳಲಾಗುತ್ತದೆ, ದಿನಕ್ಕೆ ಕನಿಷ್ಠ 20 ನಿಮಿಷಗಳಾದರೂ ವಾಕಿಂಗ್ ಮಾಡಿ.