ಒಂದು ಹಳ್ಳಿಯಲ್ಲಿ ಒಬ್ಬ ತಾಯಿ ತನ್ನ ಮಗ ಮತ್ತು ಸೊಸೆಯೊಂದಿಗೆ ವಾಸಿಸುತ್ತಿದ್ದಳು. ಮಗ ದೊಡ್ಡವನಾಗಿದ್ದರು ಆದಾಯವಿಲ್ಲದೆ ಅಲೆದಾಡುತ್ತಿದ್ದ. ಎಲ್ಲಿಗೆ ಹೋದರು ಊಟದ ಸಮಯಕ್ಕೆ ಮನೆಗೆ ಬರುತ್ತಿದ್ದನು. ಮಗನಿಗೆ ಅಮ್ಮ ದಿನ ಊಟ ಬಡಿಸುತ್ತಿದ್ದಳು. ತಾಯಿ ಊಟ ಕೊಡುವಾಗ ಮಗನಿಗೆ ತಂಗಳು ಅನ್ನ ತಿನ್ನು ಎಂದು ಹೇಳುತ್ತಿದ್ದಳು.
ದಿನವೂ ಅಮ್ಮ ಊಟ ಬಡಿಸುವಾಗ ಯಾಕೆ ಅನ್ನುತ್ತಾಳೆಂದು ಮಗನಿಗೆ ಅರ್ಥವಾಗಲಿಲ್ಲ. ಒಂದು ದಿನ ತಾಯಿ ಯಾವುದೋ ಕೆಲಸದ ಮೇಲೆ ಹೊರಗೆ ಹೋಗುತ್ತಿದ್ದಾಗ ಸೊಸೆಯನ್ನು ಅಡುಗೆ ಮಾಡಲು ಹೇಳಿದಳು. ಮತ್ತು ಮಗನಿಗೆ ಅನ್ನ ಬಡಿಸುವಾಗ ತಂಗಳು ಅನ್ನ ತಿನ್ನು ಎಂದು ಹೇಳುವುದನ್ನು ಮರೆಯಬೇಡ ಎಂದು ಸೊಸೆಗೆ ಎಚ್ಚರಿಸಿದ್ದಳು.
ಹೆಂಡತಿ ತನ್ನ ಗಂಡನಿಗೆ ಅನ್ನ ಬಡಿಸಿ ಅವನು ತಿನ್ನುವ ಮೊದಲು ತಂಗಳು ಅನ್ನವನ್ನು ತಿನ್ನೋ ಎಂದು ಹೇಳಿದಳು. ಈ ಮಾತಿನಿಂದ ಅವನಿಗೆ ತುಂಬಾ ಕೋಪ ಬಂತು. ಅನ್ನ ಮತ್ತು ಸಾರು ತುಂಬಾ ಬಿಸಿಯಾಗಿದೆ ಆದರೂ ನನ್ನ ತಾಯಿಯಂತೆ ಇವಳು ಕೂಡ ಬಿಸಿಬಿಸಿಯಾದಂತಹ ಅನ್ನವನ್ನು ತಂಗಳು ಅನ್ನ ತಿನ್ನು ಎಂದು ಹೇಳುತ್ತಿದ್ದಾಳೆ ಎಂದು ಹೆಂಡತಿ ಯ ಮೇಲೆ ಕೋಪಗೊಳ್ಳುತ್ತಾನೆ.
ಅದಕ್ಕೆ ಅವನ ಹೆಂಡತಿ ಹೇಳುತ್ತಾಳೆ ಅತ್ತೆಯವರು ನನಗೆ ಈ ರೀತಿಯಾಗಿ ಮರೆಯದೆ ಹೇಳಲು ಹೇಳಿದ್ದಾರೆ. ಅದಕ್ಕೆ ನಾನು ಹಾಗೆ ಹೇಳಿದೆ ಎಂದು ಹೆಂಡತಿ ಹೇಳುತ್ತಾಳೆ. ಇದರಿಂದ ಕೋಪಗೊಂಡ ಗಂಡ ಊಟವೇ ಮಾಡಲಿಲ್ಲ. ತಾಯಿ ಮನೆಗೆ ಬಂದ ಮೇಲೆ ಮಗನೇ ಊಟ ಮಾಡಿದಿಯಾ ಅಂತ ಕೇಳುತ್ತಾಳೆ. ಅದಕ್ಕೆ ಅವನು ಕೋಪಗೊಂಡು ನೀನು ಸಹ ಬಿಸಿ ಬಿಸಿಯಾದಂತಹ ಊಟ ವನ್ನು ತಂಗಳನ್ನ ತಿನ್ನು ಎಂದು ಹೇಳುತ್ತೀಯಾ.
ನಿನ್ನ ಸೊಸೆಯು ಸಹ ನನಗೆ ಬಿಸಿಬಿಸಿ ಆದಂತಹ ಊಟವನ್ನು ತಂಗಳನ್ನು ತಿನ್ನು ಎಂದು ಹೇಳುತ್ತಾಳೆ. ಬಿಸಿಬಿಸಿ ಅನ್ನವನ್ನು ತಂಗಳನ್ನ ಎಂದು ಯಾಕೆ ಹೇಳುತ್ತೀರಿ ಎಂದು ಕೇಳುತ್ತಾನೆ. ಅದಕ್ಕೆ ತಾಯಿ ತಂಗಳು ಅನ್ನ ಎಂದರೆ ಏನು ಅಂತ ಮಗನನ್ನು ಕೇಳುತ್ತಾಳೆ. ಇವತ್ತು ಮಾಡಿ ನಾಳೆ ತಿಂದರೆ ಅದು ತಂಗಳು ಅನ್ನ. ಇವತ್ತು ಮಾಡಿ ಇವತ್ತೇ ತಿಂದರೆ ಅದು ಬಿಸಿ ಅನ್ನ ಎಂದು ಮಗನು ಉತ್ತರಿಸುತ್ತಾನೆ.
ಅದಕ್ಕೆ ನೀನು ಆಲೋಚನೆ ಮಾಡಿ ನೋಡು ನಿನ್ನ ತಂದೆಯವರು ಸಂಪಾದನೆ ಮಾಡಿದ ಆಸ್ತಿಯನ್ನು ನೀನು ತಿನ್ನುತ್ತಿದ್ದೀಯಾ. ಅದು ನಿನಗೆ ತಂಗಳನ್ನವಾಗುತ್ತದೆ ನೀನು ಸಂಪಾದಿಸಿ ಅದರಲ್ಲಿ ಊಟ ಮಾಡಿದರೆ ನಿನಗೆ ಬಿಸಿ ಬಿಸಿ ಅನ್ನವಾಗುತ್ತದೆ. ನಿನಗೆ ಇದು ಅರ್ಥವಾಯಿತಾ ಎಂದು ತಾಯಿ ಮಗನಿಗೆ ಕೇಳುತ್ತಾಳೆ.
ಕಸ ಪೊರಕೆ ಬಗ್ಗೆ ತಿಳಿಯಲೇ ಬೇಕಾದ ಮಾಹಿತಿ.!
ಅದಕ್ಕೆ ಮಗನಿಗೆ ಪಶ್ಚಾತಾಪವಾಗಿ ನಾನು ಇನ್ನು ಮುಂದೆ ನಾನೇ ಸಂಪಾದಿಸಿ ಅದರಿಂದಲೇ ಊಟ ಮಾಡುತ್ತೇನೆ ಎಂದು ತಾಯಿಗೆ ಮಾತು ಕೊಡುತ್ತಾನೆ. ಈ ಕಥೆಯ ನೀತಿ ವಿವಾಹಿತ ಪುರುಷನೂ ತನ್ನ ಸಂಪಾದನೆಯಿಂದ ತನ್ನ ಕುಟುಂಬವನ್ನು ಪೋಷಿಸಬೇಕು, ಮೇಲಾಗಿ ಪೂರ್ವಜರು ದುಡಿದುದ್ದ ನ್ನು ತಿನ್ನಲು ಆರಂಭಿಸಿದರೆ ಕೂತು ತಿಂದರೆ ಬೆಟ್ಟಗಳು ಕೂಡ ಕರಗುತ್ತವೆ ಎಂಬ ಮಾತು ಹೇಳಿದ್ದಾರೆ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ಕೈಲಾದಷ್ಟು ಹಣವನ್ನು ಸಂಪಾದನೆ ಮಾಡುವುದು ಬಹಳ ಮುಖ್ಯ ಹಾಗೂ ಯಾವುದೇ ಕಾರಣಕ್ಕೂ ನಮ್ಮ ತಂದೆ ತಾಯಿಗಳು ಮತ್ತು ಪೂರ್ವಜರು ಮಾಡಿದಂತಹ ಆಸ್ತಿಯನ್ನು ನಾವು ನಂಬಿಕೊಂಡು ಜೀವನ ಮಾಡಬಾರದು ಅವರು ಮಾಡಿದಂತಹ ಆಸ್ತಿಯ ಮೇಲೆ ನಾವು ಕೂಡ ನಮ್ಮ ಪರಿಶ್ರಮವನ್ನು ಹಾಕಿ ಹಣವನ್ನು ಸಂಪಾದನೆ ಮಾಡುವುದು ಒಳ್ಳೆಯದು.