ದೇವರ ಮನೆಯಲ್ಲಿ ನಾವು ದೇವರ ಪೂಜೆ ಮಾಡುವಂತಹ ಸಂದರ್ಭ ದಲ್ಲಿ ಕೆಲವೊಂದಷ್ಟು ವಿಚಾರಗಳನ್ನು ಕೆಲವೊಂದಷ್ಟು ನಿಯಮಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಅದು ಏನೆಂದರೆ ದೇವರ ಮನೆಯನ್ನು ಯಾವ ದಿನ ಸ್ವಚ್ಛ ಮಾಡಬೇಕು ಹಾಗೂ ದೇವರ ಮನೆಯಲ್ಲಿ ಇಟ್ಟಿರುವಂತಹ ಕಳಶದಲ್ಲಿರುವಂತಹ ಕಾಯಿಯನ್ನು ಯಾವ ದಿನ ಬದಲಾಯಿಸಬೇಕು.
ಹಾಗೆಯೇ ಮನೆಯ ಮುಂದಿನ ಹೊಸ್ತಿಲನ್ನು ಸ್ನಾನ ಮಾಡಿಯೇ ಸ್ವಚ್ಛ ಮಾಡಬೇಕಾ, ದೇವರ ಮನೆಯ ಪಾತ್ರೆಗಳನ್ನು ಯಾವ ದಿನ ತೊಳೆಯಬೇಕು, ಗೆಜ್ಜೆ ವಸ್ತ್ರವನ್ನು ಎಷ್ಟು ಎಳೆ ಹಾಕಬೇಕು, ಹೀಗೆ ಎಲ್ಲಾ ರೀತಿಯ ಪ್ರಶ್ನೆಗಳು ಕೆಲವೊಂದಷ್ಟು ಜನರಲ್ಲಿ ಇದೆ ಇದೆಲ್ಲದಕ್ಕೂ ಕೂಡ ಈ ದಿನ ಸಂಪೂರ್ಣವಾದಂತಹ ಮಾಹಿತಿ ಯನ್ನು ತಿಳಿದುಕೊಳ್ಳೋಣ.
ಈ ಸುದ್ದಿ ಓದಿ:- ಪುರುಷರೇ ಈ 6 ಗುಟ್ಟುಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ..||
ನಿಮಗೆ ಸಮಯ ಇದ್ದರೆ ಭಾನುವಾರದ ದಿನವೇ ದೇವರ ಮನೆಯ ಎಲ್ಲಾ ಸಾಮಗ್ರಿಗಳನ್ನು ಸ್ವಚ್ಛ ಮಾಡಿಕೊಂಡು ಒಂದು ಕಡೆ ಇಟ್ಟುಕೊಳ್ಳಿ ಹಾಗೂ ಸಮಯ ಇದ್ದರೆ ಆ ಒಂದು ದಿನವೇ ದೇವರ ವಿಗ್ರಹಗಳಿಗೆ ಫೋಟೋಗಳಿಗೆ ಅರಿಶಿನ ಕುಂಕುಮ ಇಟ್ಟು ಒಂದು ಕಡೆ ಇಡಬೇಕು ಆನಂತರ ಸೋಮವಾರದ ದಿನ ಬೆಳಗಿನ ಸಮಯ ನೀವು ದೇವರ ಪೂಜೆಯನ್ನು ಮಾಡಬೇಕಾಗುತ್ತದೆ.
ಹಾಗೂ ಹಿಂದಿನ ದಿನ ನೀವು ಕಳಶವನ್ನು ಖಾಲಿ ಹಾಗೆ ಇಡಬಾರದು ಅದಕ್ಕೆ ನೀರನ್ನು ತುಂಬಿಸಿ ಇಡಬೇಕು ಬದಲಿಗೆ ಯಾವುದೇ ಪೂಜೆ ಮಾಡಬಾರದು. ಪೂಜೆಯನ್ನು ಮಾಡುವಂತಹ ಸಂದರ್ಭದಲ್ಲಿ ದೇವರ ಮನೆಯ ಕಟ್ಟೆ ಅಂದರೆ ದೇವರ ವಿಗ್ರಹಗಳನ್ನು ಕಳಶವನ್ನು ಇಡುವಂತಹ ಸ್ಥಳದಲ್ಲಿ ಮೊದಲು ಒಂದು ರಂಗೋಲಿಯನ್ನು ಇಟ್ಟು ಅದರ ಮೇಲೆ ಪೀಠವನ್ನು ಇಟ್ಟು ಅದರ ಮೇಲೆ ಒಂದು ತಟ್ಟೆಯನ್ನು ಇಟ್ಟು ಅಕ್ಕಿ ಹಾಕಿ ಅದರ ಮೇಲೆ ಕಳಶವನ್ನು ಪ್ರತಿಷ್ಠಾಪನೆ ಮಾಡಬೇಕು.
ಯಾವುದೇ ಕಾರಣಕ್ಕೂ ಕಳಶವನ್ನು ಪ್ರತಿಷ್ಠಾಪನೆ ಮಾಡುವಾಗ ಮೊದಲು ಖಾಲಿ ಬಿಂದಿಗೆಯನ್ನು ಇಟ್ಟು ಆನಂತರ ನೀರನ್ನು ಹಾಕ ಬಾರದು ಬದಲಿಗೆ ನೀರನ್ನು ತುಂಬಿಸಿಯೇ ಆನಂತರ ಕಳಶವನ್ನು ಪ್ರತಿಷ್ಠಾಪನೆ ಮಾಡಬೇಕು. ಕಳಶವನ್ನು ಪ್ರತಿಷ್ಠಾಪನೆ ಮಾಡುವಂತಹ ಸಂದರ್ಭದಲ್ಲಿ ಕಳಶದ ಒಳಗಡೆ ಬೆಳ್ಳಿಯ ಲಕ್ಷ್ಮಿ ನಾಣ್ಯವನ್ನು ಹಾಕುವುದರಿಂದ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ.
ಈ ಸುದ್ದಿ ಓದಿ:- Rs14490/-ರೂಪಾಯಿ ಬರ ಪರಿಹಾರ ಹಣ ಜಮಾ.!
ಆನಂತರ ನೀರನ್ನು ತುಂಬಿರುವಂತಹ ಕಳಶಕ್ಕೆ ಐದು ವಿಳ್ಯದೆಲೆಯನ್ನು ಇಟ್ಟು ಅದರ ಮೇಲೆ ಕಾಯಿ ಹಾಕಿ ಅರಿಶಿಣ ಕುಂಕುಮ ಇಟ್ಟು ಆನಂತರ ನಿಮ್ಮ ಮನೆಯಲ್ಲಿ ಲಕ್ಷ್ಮಿ ಮುಖವಾಡ ಹಾಕುವ ಪದ್ಧತಿ ಇದ್ದರೆ ಅದನ್ನು ಹಾಕಬೇಕು. ಕೆಲವೊಂದಷ್ಟು ಜನರ ಮನೆಯಲ್ಲಿ ಪ್ರತಿನಿತ್ಯ ಕಳಶಕ್ಕೆ ಲಕ್ಷ್ಮಿ ಮುಖವಾಡ ವನ್ನು ಹಾಕುವುದಿಲ್ಲ ಅಂತವರು ನಿಮ್ಮ ಮನೆಯಲ್ಲಿ ಯಾವ ಪದ್ದತಿ ಇರುತ್ತದೆಯೋ ಆ ವಿಧವಾಗಿ ಪೂಜೆ ಮಾಡುವುದು ಉತ್ತಮ.
ಕಲಶದ ಒಳಗಡೆ ಮೇಲೆ ಹೇಳಿದಂತೆ ಬೆಳ್ಳಿ ನಾಣ್ಯವನ್ನು ಹಾಕುತ್ತೇವೆ ಅದರ ಜೊತೆ ಕಳಸದ ಅಕ್ಕಿಯನ್ನು ಇಡುವಂತಹ ಸ್ಥಳದಲ್ಲಿ ಗುಂಡು ಅಡಿಕೆ ಯನ್ನು ಕೂಡ ಇಡುವುದು ತುಂಬಾ ಶ್ರೇಷ್ಠ. ಪ್ರತಿಯೊಬ್ಬರೂ ಕೂಡ ದೇವರ ಮನೆಯನ್ನು ವಾರಕ್ಕೆ ಒಮ್ಮೆಯಾದರೂ ಸ್ವಚ್ಛ ಮಾಡಿ ಕೊಳ್ಳುವುದು ತುಂಬಾ ಒಳ್ಳೆಯದು.
ಅದರಲ್ಲೂ ಭಾನುವಾರದ ದಿನ ದೇವರ ಮನೆಯನ್ನು ಸ್ವಚ್ಛ ಮಾಡಿಟ್ಟುಕೊಂಡರೆ ಸೋಮವಾರ ಪೂಜೆ ಮಾಡುವುದಕ್ಕೆ ಸರಿ ಹೋಗುತ್ತದೆ. ಅದೇ ರೀತಿಯಾಗಿ ಭಾನುವಾರ ಏನಾದರೂ ಅಮಾವಾಸ್ಯೆ ಅಥವಾ ಪೌರ್ಣಮಿ ಇದ್ದರೆ ಆ ಒಂದು ದಿನ ಯಾವುದೇ ಕಾರಣಕ್ಕೂ ದೇವರ ಮನೆಯನ್ನು ಸ್ವಚ್ಛ ಮಾಡಬೇಡಿ ಬದಲಿಗೆ ಹಿಂದಿನ ದಿನವೇ ಅಂದಈ ಶನಿವಾರದ ದಿನವೇ ದೇವರ ಮನೆಯನ್ನು ಸ್ವಚ್ಛ ಮಾಡಿಟ್ಟುಕೊಂಡು ಆನಂತರವೇ ಪೂಜೆ ಮಾಡುವುದು ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.