ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ಇಲ್ಲ ಎಂದು ಯಾರು ಎಷ್ಟೇ ತೇಪೆ ಹಾಕಿದರೂ ಕೂಡ ಒಳ ಒಳಗೆ ನಡೆಯುತ್ತಿದ್ದ ಕೋಲ್ಡ್ ವಾರ್ ಇಂದು ಜಗಜ್ಡಾಹಿರಾಗಿ ಹೋಗಿದೆ. ಈವರೆಗೂ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕೆಸರೆರಚಾಟ ನಡೆಯುತ್ತಿತ್ತು. ಈಗ ಕಳೆದ ಹಲವು ದಿನಗಳಿಂದ ಸುದ್ದಿ ಆಗುತ್ತಿರುವ ಹೊಸಪೇಟೆಯಲ್ಲಿ ನಡೆದ ಘಟನೆಯ ಬಳಿಕ ಪುನೀತ್ ಹಾಗೂ ದರ್ಶನ್ ಅಭಿಮಾನಿಗಳಿಗೂ ಆಗಿ ಬರುವುದಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ.
ಇದಕ್ಕೆಲ್ಲ ಕಾರಣವಾಗಿರುವುದು ಕ್ರಾಂತಿ ಸಿನಿಮಾದ ಬೊಂಬೆ ಬೊಂಬೆ ಹಾಡಿನ ರಿಲೀಸ್ ಕಾರ್ಯಕ್ರಮ. ಕ್ರಾಂತಿ ಸಿನಿಮಾವನ್ನು ಭಿನ್ನವಾಗಿ ಪ್ರಚಾರ ಮಾಡುವ ಯೋಜನೆಯಿಂದ ಕರ್ನಾಟಕ ಪ್ರಮುಖ ಒಂದೊಂದು ನಗರಗಳಲ್ಲಿ ಒಂದೊಂದು ಹಾಡನ್ನು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿತ್ತು ಇದರ ಅಂಗವಾಗಿ ಬೊಂಬೆ ಬೊಂಬೆ ಹಾಡನ್ನು ರಿಲೀಸ್ ಮಾಡಲು ಹೊಸಪೇಟೆಗೆ ಹೋಗಿತ್ತು. ಆ ವೇಳೆ ದರ್ಶನ್ ಅವರು ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಬರುತ್ತಿತ್ತಂತೆ ಕೆಲವು ಕಿಡಿ ಕೇಡಿಗಳು ದರ್ಶನ್ ಅವರ ಮೇಲೆ ಚಪ್ಪಲಿ ಎಸೆದು ಹ.ಲ್ಲೆ ಮಾಡಿದರು.
ಆ ಬಳಿಕ ಇದು ಎಲ್ಲೆಲ್ಲೋ ಹೋಗಿ ಪುನೀತ್ ಅಭಿಮಾನಿಗಳ ಕಡೆ ತಿರುಗಿದೆ. ಎಲ್ಲರೂ ಈ ಘಟನೆಗೆ ಪುನೀತ್ ಅವರ ಅಂದ ಅಭಿಮಾನಿಗಳೇ ಕಾರಣ ಎಂದು ಘೋಷಿಸುತ್ತಿದ್ದಾರೆ. ಯಾಕೆಂದರೆ ಹೊಸಪೇಟೆ ರಾಜ್ ಕುಟುಂಬದ ಅಖಾಡ ಇದ್ದ ಹಾಗೆ. ಇಲ್ಲಿ ಪ್ರತಿ ಮನೆಯಲ್ಲೂ ರಾಜ್ ಮತ್ತು ಅಪ್ಪು ಅಭಿಮಾನಿಗಳು ಸಿಗುತ್ತಾರೆ ಅಲ್ಲಿನ ಜನ ಇವರನ್ನು ದೈವದಂತೆ ಕಾಣುತ್ತಾರೆ, ಇದು ಅವರ ತವರು ಮನೆ ಇದ್ದಹಾಗೆ ದರ್ಶನ್ ಅಲ್ಲಿಗೆ ಬರುವುದು ಅವರಿಗೆ ಇಷ್ಟ ಇರಲಿಲ್ಲ.
ಹಾಗಾಗಿ ಈ ರೀತಿ ಮಾಡಿದ್ದಾರೆ ಎಂದು ದರ್ಶನ್ ಅಭಿಮಾನಿಗಳು ದೂಷಿಸುತ್ತಿದ್ದರೆ ಪುನೀತ್ ಅಭಿಮಾನಿಗಳು ದರ್ಶನ್ ಅವರನ್ನು ಮೀಡಿಯಾಗಳ ಬ್ಯಾನ್ ಮಾಡಿರುವ ಕಾರಣದಿಂದಾಗಿ ಪ್ರಚಾರ ಪಡೆಯುವುದಕ್ಕಾಗಿ ಹೊಸಪೇಟೆಗೆ ಬಂದಿದ್ದಾರೆ ಮತ್ತು ಈ ಘಟನೆಗೆ ಪುನೀತ್ ಅಭಿಮಾನಿಗಳು ಕಾರಣ ಆಗದೆ ಇದ್ದರೂ ಕೂಡ ನಮ್ಮ ಕಡೆ ಬೆರಳು ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ಮುಂದುವರೆದು ಕ್ರಾಂತಿ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಕನ್ನಡ ಚಲನಚಿತ್ರ ಮಂಡಳಿಗೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದ್ದಾರೆ ಇದೀಗ ಇದಕ್ಕೆಲ್ಲ ದರ್ಶನ್ ಅಭಿಮಾನಿಗಳು ಸೆಡ್ಡು ಹೊಡೆಯುತ್ತಿತ್ತು. ಹೊಸಪೇಟೆಯಲ್ಲಿ ತಲೆ ಎತ್ತಿ ನಿಂತಿರುವ ಪುನೀತ್ ಅವರ ಕಂಚಿನ ಪ್ರತಿಮೆ ಅಂತೆಯೇ ಅದಕ್ಕಿಂತಲೂ ದೊಡ್ಡದಾಗಿ ದರ್ಶನ್ ಪ್ರತಿಮೆ ಮಾಡಲು ನಿರ್ಧರಿಸಿದ್ದಾರೆ.
ಯಾಕೆಂದರೆ ದರ್ಶನ್ ಅವರನ್ನು ಉದ್ದೇಶ ಪೂರ್ವಕವಾಗಿ ಈ ಜಾಗದಲ್ಲಿ ಅವಮಾನಿಸಲಾಗಿದೆ ಹಾಗಾಗಿ ಎಲ್ಲಿ ಅವರಿಗೆ ಅವಮಾನ ನಡೆದಿತ್ತು ಅದೇ ಜಾಗದಲ್ಲಿ ನಾವು ಅವರ ಪ್ರತಿಮೆಗೆ ಸನ್ಮಾನ ಮಾಡುತ್ತೇವೆ ಎಂದು ನಿರ್ಧಾರ ಮಾಡಿದ್ದಾರೆ. ಈ ನಿರ್ಧಾರಕ್ಕೆ ಕರ್ನಾಟಕದ ಎಲ್ಲಾ ದರ್ಶನ್ ಫ್ಯಾನ್ ಗಳು ಕೂಡ ಬೆಂಬಲ ಸೂಚಿಸಿದ್ದಾರೆ. ದಿನ ದಿನಕ್ಕೆ ಪ್ರಕರಣ ಎಲ್ಲೆಲ್ಲೋ ಹೋಗಿ ತಲುಪುತ್ತಿದೆ. ಎಷ್ಟೇ ಸ್ಟಾರ್ ವಾರ್ ಇಲ್ಲ ಎಂದು ಹೇಳಿಕೊಂಡರು ಕೂಡ ಈ ರೀತಿ ನಡೆಯುವ ಕೆಲ ಘಟನೆಗಳು ಬೂದಿ ಮುಚ್ಚಿದ ಕೆಂಡದಂತೆ ಇದ್ದ ಇದನ್ನು ಕೆಣಕುತ್ತಿವೆ.
ಇನ್ನೇನು ಜನವರಿ 26ರಂದು ಕ್ರಾಂತಿ ಸಿನಿಮಾ ತೆರೆಗೆ ಅಪ್ಪಳಿಸುತ್ತಿದೆ. ಇನ್ನೂ ಬಾಕಿ ಇರುವ ಹಾಡುಗಳನ್ನು ಬೇರೆ ನಗರಗಳಲ್ಲಿ ರಿಲೀಸ್ ಮಾಡಲು ಸಿನಿಮಾ ತಂಡ ಓಡಾಡುತ್ತಿದ್ದು, ಕ್ರಾಂತಿ ಸಿನಿಮಾದ ಅಫಿಷಿಯಲ್ ಟ್ರೈಲರ್ ಅನ್ನು ಜನವರಿ 7ರಂದು ರಿಲೀಸ್ ಮಾಡುವುದಾಗಿ ಹೇಳಿದೆ. ಇದೇ ರೀತಿ ಫ್ಯಾನ್ಸ್ ಗಳ ಹಗ್ಗ ಜಗ್ಗಾಟ ಮುಂದುವರೆದರೆ ಅದು ಸಿನಿಮಾ ಬಿಡುಗಡೆ ಮೇಲೆ ಯಾವ ರೀತಿ ಪ್ರಭಾವ ಬೀಳಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ