Sunday, June 4, 2023
HomeUseful Informationಈ ಕಾರ್ಡ್ ಹೊಂದಿರುವ ರೈತರ 2 ಲಕ್ಷದ ವರೆಗಿನ ಸಾಲ ಮನ್ನಾ, ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಘೋಷಣೆ.!

ಈ ಕಾರ್ಡ್ ಹೊಂದಿರುವ ರೈತರ 2 ಲಕ್ಷದ ವರೆಗಿನ ಸಾಲ ಮನ್ನಾ, ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಘೋಷಣೆ.!

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಬಹುಮತ ಬೆಂಬಲದೊಂದಿಗೆ ಗೆದ್ದು ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸ್ಥಾಪನೆ ಮಾಡಿದ್ದಾರೆ. ಅಧಿಕಾರಕ್ಕೆ ಬಂದ ನಂತರ ಜನರಿಗೆ ಪ್ರಚಾರದ ವೇಳೆಯಲ್ಲಿ ವಾಗ್ದಾನ ಕೊಟ್ಟಿದ್ದ 5 ಪಂಚಖಾತ್ರಿ ಯೋಜನೆಗಳನ್ನು ರಾಜ್ಯದ ಸಾಲದ ಹೊರೆ ಹೆಚ್ಚಾಗದಂತೆ ಜಾರಿಗೆ ತರುತ್ತೇವೆ ಎನ್ನುವ ಭರವಸೆಯನ್ನು ಮತ್ತೊಮ್ಮೆ ನೀಡಿದ್ದಾರೆ.

ಈಗ ರೈತರ ಸಾಲದ ಬಗ್ಗೆ ಕೂಡ ಗಮನ ಹರಿಸಿರುವ ಇವರು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ರೈತರ ಸಾಲ ಮನ್ನಾ ಮಾಡುವಂತಹ ಯೋಜನೆಗೂ ಕೂಡ ಕೈ ಹಾಕಿದ್ದಾರೆ. ಇದಕ್ಕಾಗಿ ವಿಶೇಷವಾದ ರೂಪುರೇಷೆ ರಚಿಸಿ ಆ ನಿಯಮಾವಳಿಗಳ ಒಳಗೆ ಬರುವ ರೈತರ ಸಾಲ ಮನ್ನಾ ಮಾಡಲು ಆದೇಶ ನೀಡಿದ್ದಾರೆ. ಇದರ ಬಗ್ಗೆ ಈ ಅಂಕಣದಲ್ಲಿ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ.

ರೈತರಿಗೆ ಬ್ಯಾಂಕ್ ಗಳಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಎನ್ನುವ ಕಾರ್ಡ್ಗಳನ್ನು ನೀಡಲಾಗುತ್ತಿದೆ. ಆದರೆ ರಾಜ್ಯದಲ್ಲಿ ಅನೇಕ ರೈತರಿಗೆ ಈ ಬಗ್ಗೆ ಮಾಹಿತಿ ಇಲ್ಲ ಈಗಾಗಲೇ ದೇಶದಾದ್ಯಂತ ರೈತರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಡೆಯಿಂದ ಕಿಸಾನ್ ಸಮ್ಮರ್ ಯೋಜನೆ ಅಡಿಯಲ್ಲಿ ಸಹಾಯಧನ ಸಿಗುತ್ತಿದೆ.

ಈ ಸಹಾಯಧನ ಪಡೆಯುವ ರೈತರು ಯಾವ ಬ್ಯಾಂಕ್ ಖಾತೆಯ ಮೂಲಕ ಸಹಾಯಧನ ಪಡೆಯುತ್ತಿದ್ದಾರೋ ಅದೇ ಬ್ಯಾಂಕಿನ ಶಾಖೆಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಬಹುದು. ಈಗ ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ ಮಾಡಲು ಇದೇ ಬ್ಯಾಂಕ್ಗಳಿಗೆ ಮನವಿ ಮಾಡಿದೆ. ಯಾವ ಬ್ಯಾಂಕ್ ನಲ್ಲಿ ಎಷ್ಟು ರೈತರು ಕಿಸಾನ್ ಯೋಜನೆಯ ಹಣ ಪಡೆಯುತ್ತಿದ್ದಾರೋ ಅವರೆಲ್ಲರ ಪಟ್ಟಿ ರಚಿಸಿ ಆ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಬೇಕು ಎಂದು ಕೇಳಿದೆ.

ರೈತರು ಸಹ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಸಂಬಂಧಪಟ್ಟ ಬ್ಯಾಂಕುಗಳಿಗೆ ಹೋಗಿ ಅರ್ಜಿ ಫಾರಂ ಪಡೆದು ಭರ್ತಿ ಮಾಡಿ ಕೇಳಲಾಗುವ ಕೆಲ ದಾಖಲೆ ಪತ್ರಗಳನ್ನು ಕೊಟ್ಟು ಅರ್ಜಿ ಸಲ್ಲಿಸಬೇಕು. ಪಡಿತರ ಚೀಟಿ, ಸಂಯೋಜಿತ ಐಡಿ, KCC ಬ್ಯಾಂಕ್ ಪಾಸ್ ಬುಕ್ ಮೊಬೈಲ್ ನಂಬರ್, ಆದಾಯ ಪ್ರಮಾಣ ಪತ್ರ ಮತ್ತು ಭೂಮಿ ದಾಖಲೆಗಳು ಇವುಗಳನ್ನು ನೀಡಿ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಬಹುದು.

1,60,000 ದ ವರೆಗೂ ಕೂಡ ಈ ರೀತಿ ಕಿಸಾನ್ ಕ್ರೆಡಿಟ್ ಕಾರ್ಡ್ ಇಂದ ಸಾಲ ಪಡೆಯಬಹುದು. ಇದರ ಜೊತೆಗೆ ರೈತರಿಗಾಗಿ ಮತ್ತೊಂದು ಮಹತ್ವದ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ರೈತರಿಗೆ ಬಡ್ಡಿ ಸಬ್ವೆನ್ಷನ್ ಸ್ಕೀಮ್ ಅಡಿಯಲ್ಲಿ 2023ರ ಆರ್ಥಿಕ ವರ್ಷದಲ್ಲಿ ಸಾಲ ಮನ್ನಾ ಮಾಡುವಂತ ನಿರ್ಧಾರವನ್ನು ಸರ್ಕಾರ ಮಾಡಿದೆ. ಈ ರೀತಿ ಸಾಲಮನ್ನದ ಫಲಾನುಭವಿಗಳಾಗಲು ಸರ್ಕಾರ ಹೇಳಿರುವ ನಿಯಮಗಳನ್ನು ಪಾಲಿಸಿ ಈ ಕ್ರಮದಲ್ಲಿ ಅರ್ಜಿ ಸಲ್ಲಿಸಿದರೆ ಸಾಲ ಮನ್ನಾ ಆಗಲಿದೆ.

● ಹತ್ತಿರದ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬೇಕು
● ಶಾಖೆ ವ್ಯವಸ್ಥಾಪಕರ ಬಳಿ ಸಾಲ ಮನ್ನಾ ಕುರಿತು ಚರ್ಚಿಸಬೇಕು
● ಸಾಲ ಮನ್ನಾ ಅಜ್ಜಿ ಫಾರಂ ಪಡೆದು ಭರ್ತಿ ಮಾಡಿ ಬ್ಯಾಂಕ್ ಗೆ ಸಲ್ಲಿಸಬೇಕು.
● ಆನ್ಲೈನ್ ಅಲ್ಲಿಯೂ ಕೂಡ ಅಧಿಕೃತ ವೆಬ್ಸೈಟ್ ಗೆ ತೆರಳಿ ಅರ್ಜಿ ಸಲ್ಲಿಸಬಹುದು.
● ಸಾಲ ಪಡೆದ ವಿವರ ಮತ್ತು ಇದಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಕೂಡ ಅರ್ಜಿ ಫಾರಂ ಜೊತೆ ಸಲ್ಲಿಸಬೇಕು.
● ಆದರೆ ಈ ಸಾಲ ಮನ್ನಾ ಸೌಲಭ್ಯವು ಮಾರ್ಚ್ 31, 2016 ಕ್ಕಿಂತ ಮುನ್ನ ಜಿಲ್ಲಾ ಸಹಕಾರಿ ಬ್ಯಾಂಕಿಂದ ಸಾಲ ಪಡೆದ ರೈತರಿಗಷ್ಟೇ ಲಭ್ಯವಾಗಲಿದೆ.