ಸೊಸೆಯಂದಿರೇ ಮಾವನನ್ನು ವೃದ್ಧಾಶ್ರಮ ಸೇರಿಸಲು ಯೋಚಿಸುತ್ತಿದ್ದೀರಾ.! ಈ ರೀತಿಯ ಪ್ಲಾನ್ ಗೆ ಇಲ್ಲೊಬ್ಬ ಮಾವ ಮಾಡಿದ್ದೇನು ಗೊತ್ತಾ.? ತಮಿಳುನಾಡಿನ ಸುಂದರ್ ಎಂಬುವವರ ಸಂಸಾರದ ಕಥೆ ಇದು. ಸುಂದರ ಹಾಗೂ ಮೀನ ದಂಪತಿಗಳು ಅಂಗಡಿಯನ್ನು ನಡೆಸುತ್ತಾ ಹಗಲು ಇರುಳು ಶ್ರಮಿಸಿ ಸ್ವಂತ ಮನೆಯನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿರುತ್ತಾರೆ. ಸುಂದರವರಿಗೆ ಇಬ್ಬರು ಗಂಡು ಮಕ್ಕಳು ಅವರಿಬ್ಬರಿಗೂ ಮದುವೆಯಾಗಿ ಮಕ್ಕಳಾಗಿದ್ದಾರೆ. ಎಲ್ಲರೂ ಗಟ್ಟಿ ಇರುವಾಗ ಸಂಸಾರವು ಚಂದವಾಗಿ ನಡೆಯುತ್ತಿತ್ತು.
ಮೊಮ್ಮಕ್ಕಳನ್ನು ಎತ್ತಾಡಿಸಿದ್ದ ಅಜ್ಜ ಅಜ್ಜಿಗೆ ಅದಾಗಲೇ ವಯಸ್ಸಾಗಿತ್ತು. ಹೀಗಿರುವಾಗ ಒಂದು ದಿನ ಸುಂದರ್ ಅವರ ಪತ್ನಿ ಮೀನಾ ಹೃದಯಾಘಾತದಿಂದ ಮೃ-ತ-ಪಟ್ಟರು. ಪತ್ನಿಯ ಸಾ-ವಿನ ಬಳಿಕ ಸುಂದರ್ ಮಾನಸಿಕವಾಗಿ ನೋವನ್ನು ಅನುಭವಿಸುತ್ತಾ ಕುಗ್ಗಿ ಹೋದರು. ವಯೋ ಸಹಜ ಶಕ್ತಿ ಕುಂದುವಿಕೆಯಿಂದ ಸುಂದರವರಿಗೆ ಅಂಗಡಿಗೆ ಹೋಗಿ ಕೆಲಸ ಮಾಡಲು ಆಗುತ್ತಿರಲಿಲ್ಲ. ಅಂಗಡಿಯನ್ನು ಅವರ ಮಕ್ಕಳೇ ನೋಡಿಕೊಳ್ಳುತ್ತಿದ್ದರು. ಸುಮಾರು ಆರು ತಿಂಗಳುಗಳ ಕಾಲ ಹೀಗೆ ಕಳೆಯಿತು.
ಗಂಡು ಮಕ್ಕಳಿಬ್ಬರು ಅಂಗಡಿಗೆ ಹೋದ ಸಮಯದಲ್ಲಿ ಸೊಸೆಯಂದಿರು ಒಂದು ರೂಮಿನ ಒಳ ಹೊಕ್ಕು ಗುಸು ಗುಸು ಎಂದು ಮಾತನಾಡಲು ಪ್ರಾರಂಭಿಸಿದರು. ಸುಂದರ್ ಆ ರೂಮಿನ ಬಾಗಿಲ ಬಳಿ ನಿಂತು ಅವರು ಏನು ಮಾತನಾಡುತ್ತಿದ್ದಾರೆ ಎಂದು ಕೇಳಿಸಿಕೊಂಡರು. ಚಿಕ್ಕ ಸೊಸೆ ದೊಡ್ಡ ಸೊಸೆಯ ಬಳಿಯಲ್ಲಿ, ‘ ಅಕ್ಕಾ, ಅತ್ತೆ ತೀರಿ ಹೋದಾಗಿನಿಂದ ಅಂದರೆ ಆರು ತಿಂಗಳಿನಿಂದ ಮಾವ ಅತ್ತೆಯ ನೆನಪಿನಲ್ಲಿಯೇ ಇದ್ದಾರೆ. ಅಂಗಡಿಗೂ ಸಹ ಹೋಗುತ್ತಿಲ್ಲ. ನಮ್ಮ ಗಂಡಂದಿರು ಇದೀಗ ಅಂಗಡಿಯ ಕೆಲಸವನ್ನು ಚೆನ್ನಾಗಿಯೇ ಕಲಿತು ಒಳ್ಳೆಯ ಲಾಭವನ್ನು ಪಡೆಯುತ್ತಿದ್ದಾರೆ.
ಅತ್ತೆ ಇದ್ದಾಗ ಮಾವನನ್ನು ಅವರೆ ನೋಡಿಕೊಳ್ಳುತ್ತಿದ್ದರು. ಆದರೆ ಈಗ ಮಾವನನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲೆ ಇದೆ. ಮಾವನನ್ನು ನೋಡಿಕೊಂಡು ಮಕ್ಕಳನ್ನು ನೋಡಿಕೊಂಡು ಹೋಗುವುದು ಸುಲಭದ ಮಾತಲ್ಲ. ಹಾಗಾಗಿ ಮಾವ ಸುಂದರ್ ಅವರನ್ನು ವೃದ್ದಾಶ್ರಮಕ್ಕೆ ಸೇರಿಸೋಣ. ಈ ಮನೆಯಲ್ಲಿ ನಾವಷ್ಟೇ ಆರಾಮವಾಗಿ ಇರಬಹುದು. ಮನೆಯ ಮೇಲ್ಭಾಗವನ್ನು ಬಾಡಿಗೆಗೆ ನೀಡಿದ್ದಾರಲ್ಲ; ಅಲ್ಲಿ ಒಂದು ಜೋಡಿ ಹಾಗೂ ಈ ಭಾಗದಲ್ಲಿ ಒಂದು ಜೋಡಿ ಉಳಿದುಕೊಳ್ಳಬಹುದು.
ನಾವು ನಮ್ಮ ಸ್ವಂತ ಮನೆಯಲ್ಲಿ ಉಳಿದು ಉಳಿತಾಯ ಮಾಡಿ ಮಕ್ಕಳನ್ನು ಚೆನ್ನಾಗಿ ಓದಿಸಬಹುದು’ ಎಂದಳು. ತಂಗಿಯ ಮಾತಿಗೆ ಹೌದೆಂದು ತಲೆ ಅಲ್ಲಾಡಿಸಿದ ಅಕ್ಕ, ‘ನಮ್ಮ ಗಂಡಂದಿರನ್ನು ಈ ವಿಚಾರವಾಗಿ ಒಪ್ಪಿಸಬೇಕು’ ಎಂದಳು. ಇವೆಲ್ಲವನ್ನು ಸುಂದರ್ ಕೇಳಿಸಿಕೊಂಡು ಒಂದೆರಡು ವಾರಗಳು ಕಳೆದ ಮೇಲೆ ಗಂಡು ಮಕ್ಕಳಿದ್ದರೂ ಸಪ್ಪೆ ಮುಖವನ್ನು ಹೊತ್ತುಕೊಂಡು ಬಂದು ಸುಂದರ್ ಅವರ ಎದುರಲ್ಲಿ ನಿಂತರು.
ತನ್ನ ಮಕ್ಕಳಿಬ್ಬರು ಮುಂದೆ ಏನು ಹೇಳುತ್ತಾರೆ ಎಂದು ಊಹಿಸಿದ್ದ ಸುಂದರ್, ‘ನೋಡ್ರಪ್ಪ ನನಗೂ ವಯಸ್ಸಾಗಿದೆ. ಅಂಗಡಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ನೀವು ಹೇಗಂದರೂ ಅಂಗಡಿಯಲ್ಲಿ ಕೆಲಸ ಮಾಡಿ ಅನುಭವವನ್ನು ಪಡೆದು ಒಳ್ಳೆಯ ಲಾಭವನ್ನು ಗಳಿಸುತ್ತಿದ್ದೀರಾ. ಹಾಗಾಗಿ ನೀವು ನಿಮ್ಮ ಮಡದಿ ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ಇದ್ದು ಕೊಂಡು ಕೆಲಸವನ್ನು ನಿರ್ವಹಿಸಬಹುದು’ ಎಂದು ನೇರವಾಗಿ ಹೇಳಿಯೇ ಬಿಟ್ಟರು.
ಮಾವನನ್ನು ಮನೆಯಿಂದ ಹೊರಹಾಕಿ ವೃದ್ದಾಶ್ರಮವನ್ನು ಸೇರಿಸಬೇಕು ಎಂದು ಉಪಾಯ ಹೂಡಿದ ಸೊಸೆಯಂದಿರು ಇಬ್ಬರೂ, ‘ಮಾವ ಹೀಗೆ ಹೇಳಿಬಿಟ್ಟರಲ್ಲ’ ಎಂದು ತಲೆಯ ಮೇಲೆ ಕೈ ಹೊತ್ತು ಕೂತರು. ಅಪ್ಪನ ನೇರ ಹಾಗೂ ಕಾರ ನುಡಿಯನ್ನು ಕೇಳಿದ ಗಂಡು ಮಕ್ಕಳಿಬ್ಬರು ಬೆಚ್ಚಾದರು. ಸಾಕಿ, ಸಲಹಿ, ಕೈಲಾದಷ್ಟು ವಿದ್ಯಾಭ್ಯಾಸವನ್ನು ಕೊಡಿಸಿ, ಮಕ್ಕಳ ನಗುವಿನಲ್ಲಿ ತಮ್ಮ ಆನಂದವನ್ನು ಕಾಣುವ ತಂದೆ ತಾಯಿಗೆ ವಯಸ್ಸಾದಾಗ ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ಮಕ್ಕಳದೇ..