ನಮ್ಮ ಜಾತಕದಲ್ಲಿ ಇಲ್ಲದ ಯೋಗ ಫಲಗಳು ಬರುವುದಕ್ಕೂ ಹಾಗೂ ಜಾತಕದಲ್ಲಿ ಇಲ್ಲದಿದ್ದರೂ ಕೂಡ ದೋಷಗಳು ಸಮಸ್ಯೆಗಳು ಕಾಡುವುದಕ್ಕೂ ನಾವು ವಾಸಿಸುವ ಮನೆಯ ವಾಸ್ತು ಕಾರಣವಾಗಿ ಬಿಡಬಹುದು ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು. ವಾಸ್ತುವಿನಿಂದ ಹಣಕಾಸು ಪರಿಸ್ಥಿತಿಯನ್ನು ಉತ್ತಮ ಗೊಳಿಸಿಕೊಳ್ಳಬಹುದು ಹಾಗಯೇ ಕೆಡಿಸಿಕೊಳ್ಳಬಹುದು.
ಹಾಗಾದರೆ ಹಣಕಾಸು ಉಳಿತಾಯ ವಿಚಾರದಲ್ಲಿ ವಾಸ್ತು ಹೇಗಿದ್ದರೆ ಸೂಕ್ತ ಎನ್ನುವ ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತೇವೆ. ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದ ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು ಎಲ್ಲರಿಗೂ ಅನುಕೂಲವಾಗುವಂತೆ ಮಾಡಿ.
ಸಾಮಾನ್ಯವಾಗಿ ಜನರು ಈಶಾನ್ಯ ದಿಕ್ಕಿನಲ್ಲಿ ನೀರಿನ ಸಂಗ್ರಹ ಇರುವುದರಿಂದ ಮನೆಯಲ್ಲಿ ಹಣಕಾಸಿನ ಕೊರತೆ ಬರುವುದಿಲ್ಲ ಎಂದುಕೊಂಡಿರುತ್ತಾರೆ. ಇದು ಕೂಡ ಸತ್ಯ ಆದರೆ ಇದರಲ್ಲಿ ಸ್ವಲ್ಪ ಬದಲಾವಣೆ ಇದೆ ಇದನ್ನು ಸರಿಯಾಗಿ ಹೇಗೆ ತಿಳಿಸುವುದೆಂದರೆ ನೀವು ವಾಯುವ್ಯದಿಂದ ಈಶಾನ್ಯಕ್ಕೆ 9 ಸಮ ಭಾಗ ಮಾಡಿಕೊಳ್ಳಿ ಇದರಲ್ಲಿ ಈಶಾನ್ಯದಿಂದ ವಾಯುವ್ಯದ ಕಡೆಗಿನ ಪಾಯಿಂಟ್ ಗಳಲ್ಲಿ ಮೊದಲನೇ ಹಾಗೂ ಎರಡನೇ ಸ್ಥಾನ ಬಿಟ್ಟು ಮೂರರಿಂದ ಐದು ಪಾಯಿಂಟ್ ವರೆಗೆ ಐದನೇ ಪಾಯಿಂಟ್ ನಲ್ಲಿ ಕರೆಕ್ಟಾಗಿ ಉತ್ತರ ಬರುತ್ತದೆ.
ಈ ಸುದ್ದಿ ಓದಿ:- ಈ ಐದು ಲಕ್ಷಣಗಳು ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗ ಆಗಿದೆ ಎನ್ನುವುದನ್ನು ತಿಳಿಸುತ್ತವೆ.!
ಉತ್ತರವೂ ಕೂಡ ಹಣಕಾಸಿಗೆ ಸಂಬಂಧಪಟ್ಟ ದಿಕ್ಕಾಗಿದೆ. ಈ ಭಾಗದಲ್ಲಿ ನೀರಿನ ಸಂಪ್ ಮಾಡಿಸಿ ನಿಮ್ಮ ಹಣಕಾಸಿನ ಪರಿಸ್ಥಿತಿಯು ಬಹಳ ಉತ್ತಮಗೊಳ್ಳುತ್ತದೆ. ಈ ದಿಕ್ಕಿನಲ್ಲಿ ಸಂಪು ಮಾಡುವುದರಿಂದ ನೀವು ಸಾಮಾನ್ಯವಾಗಿ 1000 ದುಡಿದು 500 ರೂಪಾಯಿ ಖರ್ಚು ಮಾಡುತ್ತಿದ್ದರೆ ಈ ರೀತಿ ವಾಸ್ತು ಬದಲಾದ ಮೇಲೆ ಖರ್ಚು ಕಡಿಮೆಯಾಗದೆ ಇದ್ದರೆ ದುಡಿಮೆ 2,000 ಆಗಿರುತ್ತದೆ.
ಆದರೆ ಕೆಲವರಿಗೆ ಉತ್ತರಕ್ಕೆ ಜಾಗ ಇರುವುದಿಲ್ಲ ಅಲ್ಲಿ ಸಂಪ್ ಮಾಡಲು ಆಗುವುದಿಲ್ಲ ಆಗ ಇದೇ ರೀತಿಯ ಸಂಪ್ ಮಾಡುವುದಕ್ಕೆ ಉತ್ತಮವಾದ ಮತ್ತೊಂದು ಸೂಕ್ತವಾದ ಸ್ಥಳ ಮತ್ತೊಂದು ಇದೆ. ಈಶಾನ್ಯದಿಂದ ಆಗ್ನೇಯದವರಿಗೆ ಇದೇ ರೀತಿ 9 ಸಮಭಾಗಗಳನ್ನಾಗಿ ಮಾಡ ಈಶಾನದಿಂದ ಪೂರ್ವದ ಕಡೆಗೆ ಮೊದಲ ಎರಡು ಸ್ಥಾನ ಬಿಟ್ಟು ಮೂರು ನಾಲ್ಕು ಐದನೇ ಆರನೇ ಸ್ಥಾನದ ವರೆಗೂ ಕೂಡ ಸಂಪ್ ಮಾಡಬಹುದು, ಪೂರ್ವದ ದಿಕ್ಕು ಹೆಸರು ಖ್ಯಾತಿ ಕೀರ್ತಿ ಇವುಗಳನ್ನು ಸೂಚಿಸುತ್ತದೆ.
ಈ ದಿಕ್ಕಿನ ಕಡೆಗೆ ಸಂಪ್ ಮಾಡುವುದರಿಂದ ಹಣಕಾಸಿನ ಪರಿಸ್ಥಿತಿ ಜೊತೆಗೆ ಇಂತಹ ವಿಚಾರದಲ್ಲಿ ಕೂಡ ಒಳಿತಾಗುತ್ತದೆ. ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಹೆಚ್ಚು ಹಣ ಗಳಿಸಬೇಕು ಮತ್ತು ಹಾಗೆ ದುಡಿದಿದ್ದನ್ನು ಉಳಿಸಬೇಕು ಎಂಬ ಇಚ್ಛೆ ಇರುತ್ತದೆ ಈ ರೀತಿ ಮಾಡಿದರೆ ನೀವು ಖಂಡಿತವಾಗಿಯೂ ಸಕರಾತ್ಮಕವಾದ ಫಲ ಕಾಣುತ್ತಿರಿ ಎಂದು ಹೇಳುತ್ತದೆ ವಾಸ್ತು ಶಾಸ್ತ್ರ.
ಈ ಸುದ್ದಿ ಓದಿ:- ಮಹಿಳೆಯರು ಮಾಡುವ ಯಾವ ತಪ್ಪಿನಿಂದ ಅವರು ಬೇಗ ವಿಧವೆಯರಾಗುತ್ತಾರೆ ಗೊತ್ತಾ.?, ಈ ವಿಚಾರ ಎಲ್ಲ ಮಹಿಳೆಯರಿಗೂ ತಿಳಿದಿರಬೇಕು ಎಚ್ಚರ…
ಆದರೆ ಮತ್ತೊಂದು ವಿಚಾರ ಇದೆ. ಅದೇನೆಂದರೆ, ಮನೆಯ ಮಧ್ಯಭಾಗವನ್ನು ಬ್ರಹ್ಮ ಸ್ಥಾನ ಎಂದು ಹೇಳಲಾಗುತ್ತದೆ. ಈ ಬ್ರಹ್ಮ ಸ್ಥಾನವನ್ನು ಬಹಳ ತಗ್ಗು ಮಾಡುವುದರಿಂದ ತುಂಬಾ ಸಮಸ್ಯೆಗಳು ಬರುತ್ತದೆ. ವಾಸ್ತುಶಾಸ್ತ್ರದಲ್ಲಿ ಇದನ್ನು ವಾಸ್ತು ಪುರುಷನ ನಾಭಿ ಎಂದು ಹೇಳಲಾಗುತ್ತದೆ, ಈ ಸ್ಥಾನವು ಯಾವಾಗಲೂ ಉಬ್ಬಾಗಿರಬೇಕು ಅಥವಾ ಸಮನಾಗಿರಬೇಕು.
ಇದು ತಗ್ಗಿರುವುದರಿಂದ ಆ ಮನೆಯಲ್ಲಿ ಧನ ಧಾನ್ಯಕ್ಕೆ ಕೊರತೆ ಕಷ್ಟ ಬರುತ್ತದೆ ಮತ್ತು ಎಲ್ಲಾ ಮೂಲಗಳು ಹರಿದು ಬಂದು ತಗ್ಗಾಗಿರುವ ಸ್ಥಳಕ್ಕೆ ಸೇರಿದಂತೆ ಯಾವುದೇ ಕಡೆಯಿಂದ ಹಣ ಬಂದರೂ ಎಲ್ಲವೂ ಖರ್ಚಾಗಿ ಹೋಗುತ್ತದೆ ಮತ್ತು ದುಡಿಮೆ ಹೊಟ್ಟೆಗೆ ಸಾಲುವುದಿಲ್ಲ ಎನ್ನುವ ರೀತಿ ಆಗಿ ಬಿಡುತ್ತದೆ ಹಾಗಾಗಿ ತಪ್ಪದೆ ಈ ವಿಚಾರಗಳ ಬಗ್ಗೆ ಮನೆ ಕಟ್ಟುವಾಗ ಎಚ್ಚರದಲ್ಲಿ ಇರಿ.