* ಈಶಾನ್ಯ ದಿಕ್ಕಿನಲ್ಲಿ ಕಲಶವನಿಟ್ಟು ಕೆಂಪು ಕಮಲದ ಹೂವಿನಿಂದ ಲಕ್ಷ್ಮಿಯನ್ನು ಪೂಜಿಸಿದರೆ ಅತಿ ಶೀಘ್ರದಲ್ಲಿ ಹೇರಳ ಧನ ಪ್ರಾಪ್ತಿ.
* ಪೂಜಾ ಕೋಣೆ ಸದಾ ಶುದ್ದವಾಗಿರಬೇಕು ಹಾಗೂ ದೇವರನ್ನು ಹೂಗಳಿಂದ ಅಲಂಕರಿಸಿದರೆ ಧನಾಭಿವೃದ್ಧಿಯಾಗಿ ಸುಖ ಸಂತೋಷ ಗಳು ಲಭಿಸುತ್ತದೆ.
* ಅಡುಗೆ ಮನೆಯಲ್ಲಿ ಪೂಜಾ ಕೋಣೆ ಇರಬಾರದು ಹಾಗೆ ಇದ್ದಲ್ಲಿ ಧನ ಸಂಪಾದನೆಗೆ ತೊಡಕು ಉಂಟಾಗುತ್ತದೆ.
* ಅಡುಗೆ ಮನೆಯಲ್ಲಿ ವಾಷಿಂಗ್ ಮಷೀನ್ ಬಳಸುವುದರಿಂದ ಹಲ ವಾರು ನಷ್ಟಗಳು ಹಾಗೂ ಧನ ಹಾನಿ ಸಾಧ್ಯತೆಗಳಿರುತ್ತದೆ.
* ಮನೆಯ ಮುಂಭಾಗಿಲನ್ನು ಹಸಿರು ತೋರಣದಿಂದ ಸಿಂಗರಿಸಿದರೆ ಮನೆಯಲ್ಲಿ ನೆಮ್ಮದಿ ಹಾಗೂ ಶುಭಫಲಗಳು ಲಭಿಸುತ್ತವೆ.
* ದೇವರ ಮನೆಯಲ್ಲಿ ಸದಾ ದೀಪವನ್ನು ಬೆಳಗಿಸಿದರೆ ಧನಕನಕಾದಿ ಭಾಗ್ಯಗಳು ಲಭಿಸುತ್ತದೆ.
* ಮನೆ ಅಥವಾ ಅಂಗಡಿಯಲ್ಲಿ ಈಶಾನ್ಯ ದಿಕ್ಕಿನಲ್ಲಿ ಅಥವಾ ದೇವರ ಮನೆಯಲ್ಲಿ ಬಿಲ್ವಪತ್ರೆ ಮತ್ತು ತೆಂಗಿನಕಾಯಿ, ಬಾಳೆಹಣ್ಣು, ವೀಳ್ಯದೆಲೆ ಅಡಿಕೆ ಹೂ ಇವುಗಳಿಂದ ಲಕ್ಷ್ಮಿ ಪೂಜೆಯನ್ನು ಮಾಡಿದರೆ ಸಕಲ ರೀತಿಯ ದೋಷಗಳು ಪರಿಹಾರವಾಗಿ ಸುಖ ಸಂತೋಷಗಳು ಪ್ರಾಪ್ತಿಯಾಗುತ್ತದೆ.
ಈ ಸುದ್ದಿ ಓದಿ:- ಹೆಣ್ಣು ಮಕ್ಕಳು ತವರಿನಿಂದ ಈ ವಸ್ತುಗಳನ್ನು ತಂದರೆ ಅದೃಷ್ಟ ಬರುತ್ತದೆ.!
* ಮನೆಯ ಪೂರ್ವ ದಿಕ್ಕನ್ನು ಸಂಪೂರ್ಣವಾಗಿ ಮುಚ್ಚುವುದರಿಂದ ಪತಿ-ಪತ್ನಿಯರಲ್ಲಿ ವಿರಸ ಸಂಭವಿಸುತ್ತದೆ. ಪೂರ್ವ ದಿಕ್ಕಿನಲ್ಲಿ ಕನಿಷ್ಠ ಒಂದು ಕಿಟಕಿಯನ್ನು ಇಡುವುದರಿಂದ ಈ ದೋಷ ಪರಿಹಾರ ಆಗುತ್ತದೆ.
* ಹಣಕಾಸು ಹಾಗೂ ಒಡವೆಗಳನ್ನು ಕೆಂಪು ವಸ್ತ್ರದಲ್ಲಿ ಸುತ್ತಿ ದಕ್ಷಿಣ ಅಥವಾ ಉತ್ತರ ದಿಕ್ಕಿನಲ್ಲಿ ತಿಜೋರಿಯಲ್ಲಿದ್ದರೆ ಅಭಿವೃದ್ಧಿ ಪ್ರಾಪ್ತಿ.
* ಪಶ್ಚಿಮ ಅಥವಾ ದಕ್ಷಿಣ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ಶೀಘ್ರವಾಗಿ ನಿದ್ದೆ ಬರುತ್ತದೆ. ಹಾಗೂ ಆರೋಗ್ಯ ವೃದ್ಧಿಸುತ್ತದೆ.
* ಪೂಜಾ ಕೋಣೆಯಲ್ಲಿ ದೇವರ ಫೋಟೋಗಳನ್ನು ಒಂದರ ಹಿಂದೆ ಒಂದರಂತೆ ಸಾಲು ಸಾಲಾಗಿ ಇಟ್ಟಿರಬಾರದು.
* ಈಶಾನ್ಯ ದಿಕ್ಕಿನ ಕೋಣೆಯಲ್ಲಿ ಮಂಗಳಕರವಾದ ವಸ್ತುಗಳನ್ನು ಇಡುವುದರಿಂದ ಸಕಲ ರೀತಿಯ ಶುಭಕಾರ್ಯಗಳು ನಡೆಯುತ್ತವೆ.
* ನಿಮ್ಮ ಡೈನಿಂಗ್ ಟೇಬಲ್ ಅನ್ನು ಎಂದಿಗೂ ಮನೆಯ ಮುಖ್ಯ ದ್ವಾರದ ಮುಂದೆ ಇಡಬಾರದು. ಊಟದ ಪ್ರದೇಶವನ್ನು ನಿರ್ಧರಿಸುವಾಗ ಅದು ನಿಮ್ಮ ಮುಖ್ಯ ಬಾಗಿಲಿನಿಂದ ನೇರವಾಗಿ ಗೋಚರಿಸಬಾರದು ಎಂಬುದನ್ನು ನೆನಪಿನಲ್ಲಿಡಿ.
* ಬಾಗಿಲು ತೆರೆದಾಗಲೆಲ್ಲ ಉತ್ತರ ದಿಕ್ಕಿಗೆ ತೆರೆದುಕೊಳ್ಳುವ ರೀತಿಯಲ್ಲಿ ಮನೆಯ ಕಪಾಟುಗಳನ್ನು ಇರಿಸಿ.
* ಮನೆಯ ಬಾಗಿಲುಗಳು ಹಳೆಯದಾಗಿದ್ದರೆ ಮತ್ತು ತೆರೆಯುವಾಗ ಅಥವಾ ಮುಚ್ಚುವಾಗ ಅವುಗಳಿಂದ ಶಬ್ದ ಬಂದರೆ ಅದು ಶುಭವಲ್ಲ. ಆದ್ದರಿಂದ ಸಮಯಕ್ಕೆ ಎಣ್ಣೆಯನ್ನು ಸೇರಿಸುವ ಮೂಲಕ ಅವುಗಳನ್ನು ಸರಿಪಡಿಸಿ.
ಈ ಸುದ್ದಿ ಓದಿ:- ಸಾಲ ಕೊಟ್ಟ ಹಣ ವಾಪಸ್ ಬರುತ್ತಿಲ್ಲ ಅಂದ್ರೆ ಹೀಗೆ ಮಾಡಿ ಸಾಕು ಅವರೇ ವಾಒಸ್ ತಂದು ಕೊಡ್ತಾರೆ.!
* ನೀವು ಮಲಗಿದಾಗಲೆಲ್ಲ ನಿಮ್ಮ ತಲೆಯನ್ನು ದಕ್ಷಿಣ ದಿಕ್ಕಿಗೆ ಮತ್ತು ನಿಮ್ಮ ಪಾದಗಳನ್ನು ಉತ್ತರ ದಿಕ್ಕಿನಲ್ಲಿ ಇರಿಸಿ. ಹೀಗೆ ಮಾಡುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.
* ಆಗ್ನೇಯ ದಿಕ್ಕು. ಹನುಮಂತನ ಮೂರ್ತಿಯನ್ನು ಈ ದಿಕ್ಕಿನಲ್ಲಿ ಸ್ಥಾಪಿಸಬಾರದು. ಮನೆಯಲ್ಲಿ ಈ ದಿಕ್ಕಿನಲ್ಲಿ ಹನುಮಂತನ ವಿಗ್ರಹವಿದ್ದರೆ ಅದರ ಸ್ಥಳವನ್ನು ಬದಲಾಯಿಸಿ.
*ಮನೆಯ ಈಶಾನ್ಯ ದಿಕ್ಕನ್ನು ಸಾಧ್ಯವಾದಷ್ಟು ತೆರೆದಿಡಿ ಈ ದಿಕ್ಕಿನಲ್ಲಿ ಹೆಚ್ಚಿನ ನಿರ್ಮಾಣವನ್ನು ಮಾಡಬಾರದು.
* ಮನೆಗೆ ಒಂದು ಬಾಗಿಲು ಇದ್ದರೆ ಸಕಲ ರೀತಿಯಲ್ಲಿ ಅಭಿವೃದ್ಧಿ ಮತ್ತು ಸುಖ ಸಂತೋಷಗಳು ಲಭಿಸುತ್ತದೆ.
• ಮನೆಗೆ ಎರಡು ಬಾಗಿಲುಗಳು ಇದ್ದರೆ, ನೆಮ್ಮದಿ ಹಾಗೂ ಆಯುರಾರೋಗ್ಯ ಭಾಗ್ಯಗಳು ಪ್ರಾಪ್ತಿಯಾಗುತ್ತದೆ.
• ಮನೆಗೆ ಮೂರು ಬಾಗಿಲುಗಳು ಇದ್ದರೆ, ಸಂತೋಷ, ಧನವ್ಯಯ ಇತ್ಯಾದಿಗಳು ಸಂಭವಿಸುತ್ತದೆ.
• ಮನೆಗೆ ನಾಲ್ಕು ಬಾಗಿಲುಗಳು ಇದ್ದರೆ, ಸಕಲ ರೀತಿಯಲ್ಲಿ ಸುಖ ಸಂತೋಷ ಹಾಗೂ ಕೀರ್ತಿ ಪ್ರತಿಷ್ಠೆಗಳು ಪ್ರಾಪ್ತಿಯಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.