ಗ್ಯಾಸ್ಟಿಕ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಕಾಮನ್ ಆಗಿಬಿಟ್ಟಿದೆ. ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರಿಗೆ ಎದೆ ಉರಿ, ಹುಳಿತೇಗು, ಹೊಟ್ಟೆ ಉಬ್ಬರ, ಹೊಟ್ಟೆ ನೋವು ಸ್ವಲ್ಪ ಮಸಾಲೆ ಪದಾರ್ಥಗಳನ್ನು ತಿಂದರೂ ಕೂಡ ರಿಯಾಕ್ಟ್ ಆಗುವುದು ಇನ್ನೂ ಮುಂತಾದ ಅನೇಕ ಲಕ್ಷಣಗಳು ಇರುತ್ತವೆ. ಈ ಗ್ಯಾಸ್ಟಿಕ್ ಎನ್ನುವುದು ಮನುಷ್ಯನಿಗೆ ಬಹಳಷ್ಟು ಕಾಡುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರಿಗೆ ಇತರ ಹಿಂದೆಯೇ BP, ಶುಗರ್, ಥೈರಾಯಿಡ್ ಮುಂತಾದ ಡಿಸ್ ಆರ್ಡರ್ ಗಳು ಕೂಡ ಭಾವಿಸುತ್ತವೆ. ಗ್ಯಾಸ್ಟ್ರಿಕ್ ಸಮಸ್ಯೆಗೆ ಮಾತ್ರೆಗಳನ್ನು ಅಥವಾ ರಾಸಾಯನಿಕಯುಕ್ತ ಔಷಧಿಗಳನ್ನು ಸೇವಿಸುವುದರಿಂದ ಕಿಡ್ನಿ, ಲಿವರ್, ಹಾರ್ಟ್, ಬ್ರೈನ್ ಎಲ್ಲದಕ್ಕೂ ಕೂಡ ಅದು ಡ್ಯಾಮೇಜ್ ಮಾಡುತ್ತದೆ. ಅದರ ಬದಲು ನ್ಯಾಚುರಲ್ ಆಗಿ ಗುಣಪಡಿಸಿಕೊಳ್ಳಲು ನೋಡಬೇಕು. ಹಾಗಾಗಿ ಗ್ಯಾಸ್ಟಿಕ್ ಸಮಸ್ಯೆ ಆಗದಂತೆ ತಡೆಯಲು ಅಥವಾ ಈಗಾಗಲೇ ಗ್ಯಾಸ್ಟಿಕ್ ನಿಂದ ಬಳಲುತ್ತಿದ್ದರೆ ಅವುಗಳನ್ನು ಶೀಘ್ರವಾಗಿ ಗುಣ ಮಾಡಿಕೊಳ್ಳಲು ಈಗ ನಾವು ಹೇಳುವ ಈ ಮನೆಮದ್ದುಗಳನ್ನು ಪಾಲಿಸಿ.
* ಗ್ಯಾಸ್ಟ್ರಿಕ್ ಸಮಸ್ಯೆಯಾಗಲು ಮುಖ್ಯ ಕಾರಣ ಜಂಕ್ ಫುಡ್, ಫಾಸ್ಟ್ ಫುಡ್ ಗಳ ಸೇವನೆ, ಬೇಕರಿ ಪದಾರ್ಥಗಳ ಸೇವನೆ, ಅತಿ ಮಸಾಲೆಯುಕ್ತ ಆಹಾರ ಪದಾರ್ಥಗಳು ಸೇವನೆ ಇವುಗಳನ್ನು ಬಿಡಬೇಕು. ಅತಿ ಹೆಚ್ಚು ಮಾಂಸಹಾರ ಸೇವನೆ ಮಾಡುವುದು, ಕಾಫಿ ಹಾಗೂ ಚಹಾ ಸೇವನೆ, ಧೂಮಪಾನ ಮಧ್ಯಪಾನಂದ ಸಾರಾಯಿ ಗುಟ್ಕಾ ಈ ದು’ಶ್ಚ’ಟಗಳ ಅಭ್ಯಾಸ ಕೂಡ ಗ್ಯಾಸ್ಟಿಕ್ ಬರಲು ಕಾರಣವಾಗುತ್ತದೆ. ಇವುಗಳನ್ನು ಬಿಟ್ಟುಬಿಡಬೇಕು ಜೊತೆಗೆ ತಡವಾಗಿ ಮಲಗುವುದು ಮತ್ತು ತಡವಾಗಿ ಏಳುವುದು, ತಡವಾಗಿ ಆಹಾರ ಸೇವಿಸುವುದು ಕೂಡ ಗ್ಯಾಸ್ಟ್ರಿಕ್ ಸಮಸ್ಯೆಗೆ ಮುಖ್ಯ ಕಾರಣ ಇದನ್ನು ತಪ್ಪಿಸಿ ಸರಿಯಾದ ಆಹಾರ ಪದ್ಧತಿ ಮತ್ತು ಜೀವನ ಕ್ರಮವನ್ನು ರೂಢಿಸಿಕೊಳ್ಳಬೇಕು.
* ಹಸಿರು ಸೊಪ್ಪು ತರಕಾರಿಗಳು, ಹಣ್ಣುಗಳು ಇವುಗಳು ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರಬೇಕು ಆದಷ್ಟು ಕಡಿಮೆ ಎಣ್ಣೆ ಬಳಕೆ ಹಾಗೂ ಕಡಿಮೆ ಮಸಾಲೆ ಪದಾರ್ಥಗಳ ಬಳಕೆ ಗ್ಯಾಸ್ಟ್ರಿಕ್ ಬರದಂತೆ ತಡೆಯುತ್ತದೆ.
* ನೀವೇನಾದರೂ ಈಗಾಗಲೇ ಗ್ಯಾಸ್ಟ್ರಿಕ್ ಗೆ ತುತ್ತಾಗಿ ಬಹಳ ಕ’ಷ್ಟ ಪಡುತ್ತಿದ್ದರೆ ಬೆಳಗ್ಗೆ ಎದ್ದ ಕೂಡಲೇ ಈ ಒಂದು ಮನೆ ಮದ್ದನ್ನು ಸೇವಿಸಿ. 3-4 ಬೆಟ್ಟದ ನೆಲ್ಲಿಕಾಯಿ ತೆಗೆದು ಕೊಂಡು ಅದನ್ನು ಜ್ಯೂಸ್ ಮಾಡಿ ಒಂದು ಲೋಟ ಆಗುವಷ್ಟು ನೀರು ಮಿಕ್ಸ್ ಮಾಡಿ ಇದಕ್ಕೆ ಪುದೀನವನ್ನು ಚಚ್ಚಿ ಅರ್ಧ ಚಮಚದಷ್ಟು ಪುದೀನ ರಸ ಹಾಗೂ ಒಂದು ಚಮಚದಷ್ಟು ಶುಂಠಿ ರಸವನ್ನು ಸೇರಿಸಿ, 4-5 ಚಿಟಕಿ ಸೈಂಧವ ಲವಣ ಹಾಕಿ ಮಿಕ್ಸ್ ಮಾಡಿ ಕುಡಿಯಿರಿ, ಈ ರೀತಿ ಮಾಡುವುದರಿಂದ ಗ್ಯಾಸ್ಟಿಕ್ ಕಂಟ್ರೋಲ್ ಗೆ ಬರುತ್ತದೆ.
* ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಮಧ್ಯಾಹ್ನದ ಸಮಯ ದಾಳಿಂಬೆ ಹಣ್ಣಿನ ರಸ ಅಥವಾ ಕಪ್ಪು ದ್ರಾಕ್ಷಿ ಹಣ್ಣಿನ ರಸವನ್ನು ಸೇವಿಸುತ್ತಾ ಬರುವುದರಿಂದ ಕಂಟ್ರೋಲ್ ಆಗುತ್ತದೆ ಆದರೆ ಇದಕ್ಕೂ ಕೂಡ ಒಂದು ಚಮಚ ಶುಂಠಿ ರಸ ಹಾಗೂ ಚಿಟಿಕೆ ಸೈಂಧವ ಲವಣ ಹಾಕಿಯೇ ಸೇವಿಸಬೇಕು.
* ರಾತ್ರಿ ಸಮಯ 10 ಬಿಲ್ಪತ್ರೆಯ 30 ದಳಗಳನ್ನು ತೆಗೆದುಕೊಂಡು ಅದನ್ನು ನುಣ್ಣಗೆ ಪೇಸ್ಟ್ ಮಾಡಿ ಇದಕ್ಕೆ ಒಂದು ಲೋಟ ನೀರು ಹಾಕಿ ಜ್ಯೂಸ್ ತಯಾರಿಸಿಕೊಳ್ಳಿ, ಇದನ್ನು ರಾತ್ರಿ ಮಲಗುವಾಗ ತಪ್ಪದೆ ಸೇವಿಸಿ ಅಥವಾ ಇದರ ಬದಲು ಗರಿಕೆಯ ಜ್ಯೂಸ್ ಕೂಡ ಸೇರಿಸಬಹುದು. ಹೀಗೆ ಮಾಡುವುದರಿಂದ ಕೂಡ ಗ್ಯಾಸ್ಟ್ರಿಕ್ ಬಹಳ ಬೇಗ ಗುಣವಾಗುತ್ತದೆ.
https://youtu.be/FtrTI9BCgeA?si=R0h3FBFTXI0trC_d