ಕೆಲವರಿಗೆ ಚರ್ಮದ ಮೇಲೆ ಗಂಟುಗಂಟಾಗಿರುತ್ತದೆ ಇದನ್ನು ಆಡು ಭಾಷೆಯಲ್ಲಿ ನರಹುಲಿ, ನರುಳ್ಳಿ ಎಂದು ಕರೆಯುತ್ತಾರೆ. ಸ್ಕಿನ್ ಟ್ಯಾಗ್ ಎಂದೂ ಕರೆಯಲಾಗುವ ಇದು, ಒಂದು ರೀತಿಯ ಚರ್ಮ ಸಮಸ್ಯೆ. ಯಾಕೆಂದರೆ ಚರ್ಮದ ಮೇಲೆ ಇರುವ ಹೆಚ್ಚಿನ ಜೀವಕೋಶಗಳ ರಚನೆಯಂತೆ ಇದು ಚರ್ಮಕ್ಕೆ ಅಂಟಿಕೊಂಡಿರುತ್ತದೆ.
ಈ ರೀತಿ ನರುಳ್ಳಿ ಆಗುವುದರಿಂದ ಅವರ ಮುಖ ಹಾಳಾಗುತ್ತದೆ ಕೆಲವರಿಗೆ ಮುಖದ ಮೇಲೆ ಕೆಲವರಿಗೆ ಹೊಟ್ಟೆ ಭಾಗದಲ್ಲಿ ಇನ್ನು ಕೆಲವರಿಗೆ ಅತಿ ಹೆಚ್ಚಾಗಿ ಕುತ್ತಿಗೆಯ ಭಾಗದಲ್ಲಿ ಕೈಕಾಲುಗಳಲ್ಲಿ ಹೀಗೆ ಎಲ್ಲಾ ಭಾಗದಲ್ಲೂ ಕೂಡ ನರುಳ್ಳಿಗಳು ಕಾಣಿಸಿಕೊಳ್ಳುತ್ತವೆ. ಇವುಗಳನ್ನು ಕೆಲವರು ಲೇಸರ್ ಚಿಕಿತ್ಸೆ ಮೂಲಕ ಗುಣಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
ಆದರೆ ಒಂದು ಅಥವಾ ಎರಡು ಇದ್ದರೆ ಇದನ್ನು ಸುಲಭವಾಗಿ ಗುಣ ಮಾಡಬಹುದು ಕೆಲವರಿಗೆ ಮೈ ಪೂರ್ತಿ ಇದೇ ರೀತಿ ಆಗಿರುವುದರಿಂದ ಅದಕ್ಕೆ ಲೇಸರ್ ಚಿಕಿತ್ಸೆ ಮಾಡಿಸಲು ಆಗುವುದಿಲ್ಲ ಮತ್ತು ಭವಿಷ್ಯದಲ್ಲಿ ಈ ರೀತಿಯ ಸಮಸ್ಯೆಗಳಿಗೆ ಲೇಸರ್ ಚಿಕಿತ್ಸೆಗೆ ಒಳಗಾದವರಲ್ಲಿ ಚರ್ಮ ಸಮಸ್ಯೆಗಳು ಮತ್ತು ಇನ್ನಿತರ ಸೈಡ್ ಎಫೆಕ್ಟ್ ಉಂಟಾಗುವ ಸಾಧ್ಯತೆಗಳು ಕೂಡ ಇರುತ್ತವೆ.
ಅದಕ್ಕಾಗಿ ಸ್ಕಿನ್ ಟ್ಯಾಗ್ ಇರುವವರು ಈಗ ನಾವು ಹೇಳುವ ಈ ಮನೆಮದ್ದನ್ನು ಒಮ್ಮೆ ಟ್ರೈ ಮಾಡಿ ನೋಡಿ ನೀವೇ ಆಶ್ಚರ್ಯ ಪಡುವ ರೀತಿಯಲ್ಲಿ ಕೇವಲ ಒಂದೇ ವಾರದಲ್ಲಿ ಇದು ಸಂಪೂರ್ಣ ಗುಣವಾಗಿ ಹೋಗಿರುತ್ತದೆ. ಯಾವುದೇ ಕಾಯಿಲೆ ಆಗಿದ್ದರೂ ಕೂಡ ಈ ರೀತಿ ಆಗಲು ಕಾರಣ ಏನು ಎನ್ನುವುದನ್ನು ಅರಿತುಕೊಂಡರೆ ಆ ಕಾಯಿಲೆ ಅರ್ಧ ಗುಣವಾತಂತೆ.
ಈ ರೀತಿ ಉಂಟಾಗಲು ಕಾರಣ ದೇಹದಲ್ಲಿನ ಅಜೀರ್ಣತೆ ಹಾಗೂ ಮಲಬದ್ಧತೆ ಕಾರಣ ಎಂದು ಹೇಳಬಹುದು. ದೇಹದಲ್ಲಿ ಅಜೀರ್ಣತೆ ಹಾಗೂ ಮಲಬದ್ಧತೆ ಆದಾಗ ಟಾಕ್ಸಿನ್ ಅಂಶಗಳು ಹೆಚ್ಚಾಗುತ್ತದೆ, ದೇಹವು ಆ ಟಾಕ್ಸಿನ್ ಅಂಶವನ್ನು ಹೊರಹಾಕಲು ಈ ರೀತಿ ಸ್ಕಿನ್ ಟ್ಯಾಗ್ ಉಂಟಾಗುವ ಸಾಧ್ಯತೆಗಳು ಇರುತ್ತವೆ.
ಇವುಗಳು ಸ’ತ್ತಿರುವ ಜೀವಕೋಶಗಳು ಆಗಿರುತ್ತವೆ, ಆದರೆ ಚರ್ಮಕ್ಕೆ ಹೊಂದಿಕೊಂಡಿರುವುದರಿಂದ ಸುಲಭವಾಗಿ ಉದುರಿ ಹೋಗುವುದಿಲ್ಲ. ಕೆಲವೊಮ್ಮೆ ಕಣ್ಣುಗಳ ಮೇಲೆ ಈ ರೀತಿ ಸೂಕ್ಷ್ಮವಾದ ಜಾಗಗಳಲ್ಲೂ ಕೂಡ ಈ ಸ್ಕಿನ್ ಟ್ಯಾಗ್ ಉಂಟಾಗಿರುತ್ತದೆ ಇದರಿಂದ ಕಣ್ಣುಗಳಿಗೂ ಬಹಳ ಡಿಸ್ಟರ್ಬ್ ಆಗುತ್ತಿರುತ್ತದೆ.
ಕಣ್ಣಿನ ಪ್ರದೇಶಕ್ಕೆ ಮನೆ ಮದ್ದು ಹಾಕಲು ಅಥವಾ ಚಿಕಿತ್ಸೆಗೆ ಒಳಗಾಗಲು ಖಂಡಿತವಾಗಿಯೂ ಭ’ಯ ಇದ್ದೇ ಇರುತ್ತದೆ. ಈ ಬಗ್ಗೆ ಬಹಳ ಎಚ್ಚರಿಕೆವಹಿಸಿ ನ್ಯಾಚುರಲ್ ಆಗಿ ಇವುಗಳನ್ನು ಗುಣಪಡಿಸಿಕೊಳ್ಳಲು ಪ್ರಯತ್ನಿಸಬೇಕು, ಅದಕ್ಕಾಗಿ ಒಂದು ಅದ್ಭುತ ಮನೆ ಮದ್ದಿನ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಸುಣ್ಣ, ಅಡಿಗೆ ಸೋಡಾ, ಪಟ್ಟಕ ಹಾಗೂ ನಿಂಬೆರಸ ಈ ನಾಲ್ಕನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಪೇಸ್ಟ್ ಮಾಡಿ ಅದನ್ನು ನರುಳ್ಳಿ ಮೇಲೆ ಅಪ್ಲೈ ಮಾಡುತ್ತಾ ಬರಬೇಕು. ಯಾವುದೇ ಕಾರಣಕ್ಕೂ ಇದನ್ನು ಚರ್ಮದ ಇತರ ಭಾಗದಲ್ಲಿ ಹಾಕಬಾರದು ಏಕೆಂದರೆ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ ಮತ್ತು ಕಣ್ಣಿನ ಭಾಗಕ್ಕೆ ಖಂಡಿತವಾಗಿಯೂ ಇದನ್ನು ಹಾಕಬಾರದು.
ಇದನ್ನು ಹೊರತುಪಡಿಸಿ ದೇಹದ ಯಾವುದೇ ಭಾಗದಲ್ಲಿ ನರಳ್ಳಿ ಆಗಿದ್ದರು ಅದರ ಮೇಲೆ ದಿನದಲ್ಲಿ ಎರಡು ಬಾರಿ ಈ ಔಷಧಿ ಹಾಕಿ ನೋಡಿ ಒಂದೇ ವಾರದಲ್ಲಿ ಇದು ತಾನಾಗೆ ಉದುರಿ ಹೋಗುತ್ತದೆ. ಒಂದು ವೇಳೆ ಇದನ್ನು ಮಾಡಲು ತಿಳಿಯದವರು ಆಯುರ್ವೇದ ಅಂಗಗಳಲ್ಲಿ ಸಿಗುವ ನರುಳ್ಳಿ ಲೇಪನವನ್ನು ಕೂಡ ತೆಗೆದುಕೊಂಡು ಹಾಕಬಹುದು ಅದು ಕೂಡ ಅಷ್ಟೇ ಪರಿಣಾಮಕಾರಿಯಾಗಿ ರಿಸಲ್ಟ್ ನೀಡುತ್ತದೆ.