ಶುಕ್ರವಾರ ಎನ್ನುವುದು ಲಕ್ಷ್ಮಿಯ ವಾರ. ನಮಗೆ ಹಣ ಆಸ್ತಿ ಸಂಪತ್ತು ಒಲಿದು ಬರಬೇಕು ಎಂದರೆ ತಾಯಿ ಮಹಾಲಕ್ಷ್ಮಿಯ ಅನುಗ್ರಹ ಕೃಪಾಕಟಾಕ್ಷ ಬೇಕೇ ಬೇಕು. ಹಾಗಾಗಿ ಶುಕ್ರವಾರ ತಾಯಿ ಮಹಾಲಕ್ಷ್ಮಿಯ ಇಷ್ಟವಾದ ವಾರ ಕೂಡ ಆಗಿರುವುದರಿಂದ ಆ ದಿನ ಭಯ ಭಕ್ತಿಯಿಂದ ಮಹಾಲಕ್ಷ್ಮಿ ಆರಾಧನೆಯನ್ನು ಮಾಡಿದರೆ, ತಾಯಿ ಪ್ರಸನ್ನರಾಗಿ ಸುಖ ಸಮೃದ್ಧಿ ಸಂಪತ್ತು ಕರುಣಿಸುತ್ತಾಳೆ.
ಲಕ್ಷ್ಮಿ ದೇವಿ ಆಶೀರ್ವಾದ ದೊರಕಿದವರಿಗೆ ಅವರ ದು’ರಾ’ದೃ’ಷ್ಟ’ವೆ’ಲ್ಲಾ ಅದೃಷ್ಟವಾಗಿ ಬದಲಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗೇ ಈ ಶುಕ್ರವಾರಗಳಂದು ಮಹಾಲಕ್ಷ್ಮಿಗೆ ಮೆಚ್ಚುಗೆ ಆಗುವ ರೀತಿ ನಡೆದುಕೊಂಡು ಆಕೆಯ ಅನುಗ್ರಹ ಪಡೆದು ಅನೇಕರು ತಮ್ಮ ಬದಲು ಬದಲಾಯಿಸಿಕೊಂಡಿರುವ ಉದಾಹರಣೆಗಳು ಕೂಡ ಇವೆ. ಹಾಗಾಗಿ ನೀವು ಸಹ ಜೀವನದಲ್ಲಿ ಯಶಸ್ಸು ಹೊಂದಬೇಕು ಹಣಕಾಸಿನ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದರೆ ಶುಕ್ರವಾರದ ದಿನದಂದು ತಪ್ಪದೆ ಈ ಕೆಲಸಗಳನ್ನು ಮಾಡಿ.
* ಶುಕ್ರವಾರದ ದಿನದಂದು ಮಾತ್ರವಲ್ಲದೆ ಪ್ರತಿದಿನ ಕೂಡ ಈ ಒಂದು ಆಚರಣೆ ಮಾಡಿದರೆ ಬಹಳ ಶುಭ ಫಲಗಳು ಸಿಗುತ್ತವೆ. ಅದರಿಂದ ಬೆಳಗ್ಗೆ ಹಾಗೂ ರಾತ್ರಿ ಮನೆಯಲ್ಲಿ ದೀಪ ಹಚ್ಚಿ ಪೂಜೆ ಮಾಡಬೇಕು ಮತ್ತು ವಿಶೇಷವಾಗಿ ಶುಕ್ರವಾರದಂದು ತುಳಸಿ ಗಿಡದ ಬಳಿ ತುಪ್ಪದ ದೀಪ ಹಚ್ಚಿ ಇಟ್ಟು ಶ್ರೀ ವಾಸುದೇವಾಯ ನಮಃ ಎನ್ನುವ ಮಂತ್ರವನ್ನು ಎರಡು ಬಾರಿ ಹೇಳಬೇಕು ಹೀಗೆ ಹೇಳುವುದರಿಂದ ಮಹಾವಿಷ್ಣು ಹಾಗೂ ತಾಯಿ ಮಹಾಲಕ್ಷ್ಮಿ ಇಬ್ಬರ ಆಶೀರ್ವಾದ ಕೂಡ ದೊರಕುತ್ತದೆ.
* ಮನೆಯಲ್ಲಿ ಶ್ರೀ ಕೃಷ್ಣ ವಿಗ್ರಹ ಇದ್ದರೆ ಇದಕ್ಕೆ ದಕ್ಷಿಣಾವರ್ತಿ ಶಂಖದಿಂದ ಅಭಿಷೇಕ ಮಾಡಿ, ಇದರಿಂದ ಮನೆಯ ಸದಸ್ಯರಿಗೆ ಯಾವುದೇ ರೋಗದ ರುಜಿನಗಳಿದ್ದರೂ ಗುಣವಾಗುತ್ತದೆ ಮತ್ತು ಶ್ರೀ ಮಹಾಲಕ್ಷ್ಮಿಯ ಆಶೀರ್ವಾದ ಅಖಂಡವಾಗಿ ದೊರೆಯುತ್ತದೆ.
* ಶುಕ್ರವಾರದಂದು ಪೂಜೆ ಮಾಡುವ ಹಿಂದಿನ ದಿನ ಗುರುವಾರ ಮಾಮೂಲಿಯಂತೆ ಪೂಜೆ ಮಾಡಿ ಹಳದಿ ಧಾನ್ಯಗಳನ್ನು ದಾನ ಮಾಡಿದರೆ ಆಗಲು ಕೂಡ ಲಕ್ಷ್ಮಿ ದೇವಿಯ ಆಶೀರ್ವಾದ ದೊರೆಯುತ್ತದೆ ಎಂದು ಹೇಳಲಾಗುತ್ತದೆ.
* ಹಣಕಾಸಿನ ಸಮಸ್ಯೆ ಎದುರಿಸುತ್ತಿರುವ ಅಥವಾ ಹೆಚ್ಚು ಹಣಕಾಸಿನ ಆಕರ್ಷಣೆ ಮಾಡಲು ಬಯಸುವವರು ಶುಕ್ರವಾರ ಮಧ್ಯರಾತ್ರಿ ಕೆಂಪುವಸ್ತ್ರ ಧರಿಸಿ ಏಕಾಂಗಿಯಾಗಿ ಕುಳಿತು ಎದುರುಗಡೆ 10 ದೀಪಗಳನ್ನು ಹಚ್ಚಿ 10 ಕವಡೆಯನ್ನು ತೆಗೆದುಕೊಂಡು ಪ್ರತಿ ಕವಡೆಗೂ ಅರಿಶಿಣ ಕುಂಕುಮ ಹಚ್ಚಿ ಕಮಲದ ಬೀಜಗಳ ಮಾಲೆಗಳನ್ನು ಹಿಡಿದು ಓಂ ಹ್ರೀಂ ಶ್ರೀಂ ಶ್ರೀ ಐಂ ಫಟ್ ಮಂತ್ರವನ್ನು ಐದು ಬಾರಿ ಭಕ್ತಿಯಿಂದ ಪಠಿಸಿ ನಂತರ ಪೂಜೆಗೆ ಇಡಲಾಗಿದ್ದ ಕವಡೆಗಳನ್ನು ತೆಗೆದುಕೊಂಡು ನೀವು ಹಣ ಇಡುವ ಡಬ್ಬದಲ್ಲಿ ಹಾಕಿ ಇಡಿ. ಆಶ್ಚರ್ಯಕರ ರೀತಿಯಲ್ಲಿ ನಿಮ್ಮ ಹಣಕಾಸಿನ ಸಮಸ್ಯೆಗಳು ಬಗ್ಗೆ ಹರಿದು ಆರ್ಥಿಕವಾಗಿ ಸದೃಢರಾಗುತ್ತೀರಿ.
* ಎಷ್ಟು ದುಡಿದರೂ ಹಣ ಉಳಿಯುತ್ತಿಲ್ಲ ಎನ್ನುವವರು ಶುಕ್ರವಾರದಂದು ಪೂಜೆ ಮಾಡುವಾಗ ಸ್ವಲ್ಪ ಹಣವನ್ನು ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡಿ ನಂತರ ಆ ಹಣವನ್ನು ತೆಗೆದುಕೊಂಡು ಹಣ ಇಟ್ಟುಕೊಂಡು ಡಬ್ಬದಲ್ಲಿ ಅಥವಾ ನಿಮ್ಮ ಪರ್ಸ್ ಗಗಳಲ್ಲಿ ಇಟ್ಟುಕೊಳ್ಳಿ. ಈ ಹಣದಿಂದ ಹಣದ ಆರ್ಕರ್ಷಣೆ ಹೆಚ್ಚಾಗುತ್ತದೆ ಹಾಗೂ ಹಣ ನಿಮ್ಮ ಬಳಿ ಹೆಚ್ಚು ದಿನ ಉಳಿಯುವಂತಾಗುತ್ತದೆ.
* ಅದೃಷ್ಟವನ್ನು ಹೆಚ್ಚಿಸಿಕೊಳ್ಳಲು ಬಯಸುವವರು ಪ್ರತಿದಿನ ಈ ಒಂದು ಮಂತ್ರವನ್ನು ಭಕ್ತಿಯಿಂದ 51 ಬಾರಿ ಜಪಿಸಿ ಈ ಮಂತ್ರ ಹೀಗಿದೆ.
ಮಂತ್ರ: ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀ ಕೃಷ್ಣಾಯ ಗೋವಿಂದಾಯ ಗೋಪಿಜನಾ ವಲ್ಲಭಾಯ ಶ್ರೀಂ ಶ್ರೀಂ ಶ್ರೀ.