Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಸದಾ ಆರೋಗ್ಯವಾಗಿರಲು ಹಿರಿಯರ ಈ ಸಲಹೆಗಳನ್ನು ಪಾಲಿಸಿ…

Posted on December 8, 2023 By Kannada Trend News No Comments on ಸದಾ ಆರೋಗ್ಯವಾಗಿರಲು ಹಿರಿಯರ ಈ ಸಲಹೆಗಳನ್ನು ಪಾಲಿಸಿ…

 

ಈಗಿನ ಕಾಲದಲ್ಲಿ ನಾವು ಗೊತ್ತಿದ್ದೋ ಗೊತ್ತಿಲ್ಲದೆಯೋ ನಮ್ಮ ಆಹಾರ ಪದ್ಧತಿಯನ್ನು ತಪ್ಪಾಗಿಸಿಕೊಂಡಿದ್ದೇವೆ. ಅದರಿಂದ ಅನೇಕ ಕಾಯಿಲೆಗೆ ತುತ್ತಾಗುತ್ತಿದ್ದೇವೆ. ಇವುಗಳಲ್ಲಿ ಕೆಲವನ್ನಾದರೂ ಸರಿಪಡಿಸಿಕೊಳ್ಳಲಿ ಎನ್ನುವ ಉದ್ದೇಶದಿಂದ ಕೆಲ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.

* ಪ್ರತಿನಿತ್ಯವೂ 2-3 ಎಸಳು ಹಸಿ ಬೆಳ್ಳುಳ್ಳಿಯನ್ನು ಜಗಿದು ತಿನ್ನುವುದರಿಂದ ಕಣ್ಣುಗಳ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಕಣ್ಣಿನಲ್ಲಿರುವ ಮಸೂರದ ಆರೋಗ್ಯವನ್ನು ಹೆಚ್ಚಿಸುತ್ತದೆ.
* ನಿಯಮಿತವಾಗಿ ಮೊಸರನ್ನು ಸೇವನೆ ಮಾಡುವವರಿಗೆ ಮೂತ್ರಕೋಶದ ಸಂಬಂಧಿತ ಸೋಂಕುಗಳಾಗಲಿ, ಕಾಯಿಲೆಗಳಾಗಲಿ ಬರುವುದಿಲ್ಲ.

* ಹಿಂದಿನ ದಿನವೇ ಕತ್ತರಿಸಿಟ್ಟ ಈರುಳ್ಳಿಯನ್ನು ಬಳಸಬೇಡಿ ಇದು ಹೊಟ್ಟೆ ನೋವು, ಅತಿಸಾರ ಉಂಟಾಗಲು ಕಾರಣವಾಗುತ್ತದೆ.
ಅಡುಗೆ ಮಾಡುವಾಗ ಮಾತ್ರ ಈರುಳ್ಳಿಯನ್ನು ಕತ್ತರಿಸಬೇಕು ಈರುಳ್ಳಿಯನ್ನು ಕತ್ತರಿಸಿ ಇಟ್ಟು ಬಹಳ ಸಮಯದ ಬಳಿಕ ಅಡುಗೆ ಮಾಡುವುದು ಕೂಡ ಇದೇ ಪರಿಣಾಮ ಉಂಟುಮಾಡುತ್ತದೆ.
* ತುಟಿಗಳು ಬಹಳ ಒರಟಾಗಿದ್ದು, ಕಪ್ಪಾಗಿದ್ದರೆ ಪ್ರತಿದಿನ ರಾತ್ರಿ ಮಲಗುವ ಮುನ್ನ ಹಾಲಿನ ಕೆನೆ ಅಥವಾ ಮೊಸರಿನ ಕೆನೆಯನ್ನು ಹಚ್ಚಿ ಇದರಿಂದ ತುಟಿ ಬಣ್ಣ ಬದಲಾಗುತ್ತದೆ ಮತ್ತು ಮೃದುವಾಗುತ್ತದೆ.

* ಸೀಬೆಹಣ್ಣು, ಸೇಬಿನ ಹಣ್ಣಿನಲ್ಲಿ ಹೊಂದಿರುವಷ್ಟೇ ಪೋಷಕಾಂಶವನ್ನು ಹೊಂದಿರುತ್ತದ. ಪ್ರತಿದಿನವೂ ಕೂಡ ಸೀಬೆ ಹಣ್ಣಿನ ಸೇವನೆ ಮಾಡುವುದರಿಂದ ರಕ್ತಹೀನತೆ ಕಡಿಮೆ ಆಗುವುದರ ಜೊತೆಗೆ ಆ’ತಂ’ಕ ಮತ್ತು ಖಿ’ನ್ನ’ತೆಗಳು ದೂರವಾಗುತ್ತದೆ.
* ಪ್ರತಿದಿನವೂ ಆಹಾರದಲ್ಲಿ ಈರುಳ್ಳಿಯನ್ನು ಬಳಸುವುದರಿಂದ ರಕ್ತ ಶುದ್ಧಿ ಆಗುತ್ತದೆ ಮತ್ತು ಹೊಸ ರಕ್ತದ ಉತ್ಪಾದನೆಗೆ ಇದು ಸಹಕಾರಿಯಾಗುತ್ತದೆ.

* ದೇಹಕ್ಕೆ ಬಹಳ ಆಯಾಸವಾಗಿದ್ದಾಗ ಒಂದು ಲೋಟ ಬಿಸಿ ನೀರಿಗೆ ಸ್ವಲ್ಪ ಏಲಕ್ಕಿ ಪುಡಿ ಸೇರಿಸಿ ಕುಡಿಯಿರಿ, ರಿಲ್ಯಾಕ್ಸ್ ಆಗುತ್ತದೆ
* ವಾರಕ್ಕೆ ಎರಡು ಬಾರಿಯಾದರೂ ಎಳನೀರು ಕುಡಿಯುವುದರಿಂದ ನಿಶಕ್ತಿ ಕಡಿಮೆಯಾಗುತ್ತದೆ, ದೇಹಕ್ಕೆ ತಂಪಾಗುತ್ತದೆ.
* ಊಟದ ಸಮಯದಲ್ಲಿ ಮಾಮೂಲಿ ನೀರು ಕುಡಿಯುವುದಕ್ಕಿಂತ ಅಜ್ವೈನ್ ಹಾಕಿ ಕುದಿಸಿದ ನೀರನ್ನು ಆರಿದ ಮೇಲೆ ಕುಡಿಯಿರಿ. ಇದು ಗ್ಯಾಸ್ ಆಗದಂತೆ ತಡೆಯುತ್ತದೆ ಮತ್ತು ಜೀರ್ಣಕ್ರಿಯೆ ಸರಾಗವಾಗಿ ಆಗುವಂತೆ ಮಾಡುತ್ತದೆ.

* ನೀವು ಹೆಚ್ಚು ಸುಂದರವಾಗಿವಾಗಿ ಸ್ಮಾರ್ಟ್ ಆಗಿ ಕಾಣಬೇಕು ಎಂದರೆ ಆಹಾರದಲ್ಲಿ ಅನ್ನದ ಪ್ರಮಾಣವನ್ನು ಕಡಿಮೆ ಮಾಡಿ ಹಸಿ ಸೊಪ್ಪು ತರಕಾರಿ ಇವುಗಳ ಸೇವನೆ ಜಾಸ್ತಿ ಮಾಡಿ.
* ಪೈಲ್ಸ್ ನಿಂದ ಬಳಸುತ್ತಿರುವ ಹಸಿಮೆಣಸಿನಕಾಯಿಯನ್ನು ಸೇವಿಸಲೇಬಾರದು ಹಸಿಮೆಣಸಿನಕಾಯಿಯನ್ನು ಯಾವುದೇ ವ್ಯಕ್ತಿ ಸೇವಿಸಿದರು ಕೂಡ ಅದು ಅನಾರೋಗ್ಯಕ್ಕೆ ಕಾರಣವಾಗುತ್ತದೆ ಹಾಗಾಗಿ ಹಿರಿಯರು ಹಸಿಮೆಣಸಿನಕಾಯಿ ಆಯುಷ್ಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳುತ್ತಿದ್ದರು.

* ಒಂದು ದಿನದಲ್ಲಿ ನಾಲ್ಕರಿಂದ ಐದು ಗೋಡಂಬಿಗಳನ್ನು ಸೇವಿಸುವುದು ಒಳ್ಳೆಯದು. ಅದಕ್ಕಿಂತ ಹೆಚ್ಚಿದ ಪ್ರಮಾಣದಲ್ಲಿ ಸೇವಿಸಿದರೆ ನಿಮ್ಮ ಆರೋಗ್ಯಕ್ಕೆ ಪ್ರಯೋಜನ ಆಗುವ ಬದಲು ಹಾನಿ ಉಂಟಾಗುತ್ತದೆ
* ನೀರು ಕುಡಿಯುವುದು ಕಡಿಮೆ ಆದರೆ ತುಟಿಗಳು ಒಣಗುತ್ತವೆ.
* ಜೀರ್ಣಶಕ್ತಿ ಹೆಚ್ಚಾಗಬೇಕು ಎಂದರೆ ಅಥವಾ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಇದ್ದರೆ ಪ್ರತಿದಿನವೂ ಕಬ್ಬಿನ ಹಾಲನ್ನು ಸೇವಿಸುವುದರಿಂದ ಇದು ಪರಿಹಾರ ಆಗುತ್ತದೆ.

* ಕೆಂಪು ಮೆಣಸಿನಕಾಯಿಯ ಅತಿಯಾದ ಸೇವನೆ ಕಣ್ಣು ಹಾಗೂ ಮೆದುಳಿನ ಆರೋಗ್ಯಕ್ಕೆ ಹಾನಿಕರ.
* ಜ್ವರ ಬಂದಾಗ ಹಸಿರು ಏಲಕ್ಕಿಯನ್ನು ನೀರಿನಲ್ಲಿ ಕುದಿಸಿ ಕುಡಿದರೆ ಜ್ವರ ಕಡಿಮೆಯಾಗುತ್ತದೆ.
* ನಿಂಬೆ ಹಣ್ಣಿನ ಬಳಕೆ ಹೆಚ್ಚು ಮಾಡುವುದರಿಂದ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ, ಯಕೃತ್ತಿನ ಆರೋಗ್ಯಕ್ಕೂ ಇದು ಬಹಳ ಒಳ್ಳೆಯದು.

* ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಖರ್ಜೂರ ಸೇವಿಸುವುದರಿಂದ ಆಂತರಿಕ ದೌರ್ಬಲ್ಯಗಳು ಕಡಿಮೆಯಾಗುತ್ತವೆ.
* ಅತಿ ಹೆಚ್ಚು ಬಿಸಿಲಿದ್ದಾಗ ಚರ್ಮವನ್ನು ರಕ್ಷಿಸಿಕೊಳ್ಳಲು ಬಾದಾಮಿ ಎಣ್ಣೆಯನ್ನು ಮುಖಕ್ಕೆ ಹಚ್ಚಬಹುದು.
* ಅಲೋವೆರಾವನ್ನು ಅರಿಶಿಣದ ಜೊತೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದರೆ ಗುಳ್ಳೆಗಳು ಹಾಗೂ ಕಲೆಗಳು ಹೋಗುತ್ತವೆ.
* ಬಹಳ ತಣ್ಣಗಿರುವ ಪದಾರ್ಥಗಳನ್ನು ಸೇವಿಸುವುದರಿಂದ ಕೂದಲು ಉದುರುತ್ತದೆ.

Useful Information
WhatsApp Group Join Now
Telegram Group Join Now

Post navigation

Previous Post: ನಿದ್ರೆಯಿಂದ ಎದ್ದ ಮೇಲೆ ಇದನ್ನು ಮಾಡಿದರೆ ಕಾಲು ನೋವು ಬರುವುದಿಲ್ಲ, ಪಾದ ಮತ್ತು ಹಿಮ್ಮಡಿ ನೋವಿಗೆ ಬೆಸ್ಟ್ ಪರಿಹಾರ.!
Next Post: ಲಕ್ಷ್ಮಿ ದೇವಿ ಮನೆಯಲ್ಲಿ ಸ್ಥಿರವಾಗಿ ಉಳಿಯಬೇಕು ಎಂದರೆ ಯಾರಿಗೂ ಗೊತ್ತಾಗದ ರೀತಿಯಲ್ಲಿ ರಾತ್ರಿಹೊತ್ತು ಉಪ್ಪಿನಿಂದ ಈ ಒಂದು ಕೆಲಸ ಮಾಡಿ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore