ಇಂದಿನ ಗಡಿಬಿಡಿಯ ಬದುಕಿನಲ್ಲಿ ಬದುಕಿಗೆ ಅತಿ ಮುಖ್ಯವಾದ ಅದೆಷ್ಟೋ ಮೌಲ್ಯಗಳನ್ನು ಕಡೆಗಣಿಸಿ ನಾವು ಮನಸ್ಸಿಗೆ ದೋಚಿದಂತೆ ಬದುಕುತ್ತಿದ್ದೇವೆ. ಇದರಿಂದ ದೇಹದ ಮೇಲೆ ದುಷ್ಪರಿಣಾಮವಾಗುತ್ತಿದೆ ಹಾಗೂ ಮಾನಸಿಕ ಆರೋಗ್ಯವು ಕೆಡುತ್ತಿದೆ, ಇದರಲ್ಲಿ ಸರಿಪಡಿಸಿಕೊಳ್ಳಬಹುದಾದ ಕೆಲವು ಅಂಶಗಳ ಬಗ್ಗೆ ತಿಳಿಸುತ್ತಿದ್ದೇವೆ ಇನ್ನಾದರೂ ಇದರ ಬಗ್ಗೆ ಜಾಗರೂಕರಾಗಲು ಪ್ರಯತ್ನಿಸೋಣ…
* ರಭಸವಾಗಿ ಹರಿಯುತ್ತಿರುವ ನದಿಗಳಲ್ಲಿ ಸ್ನಾನ ಮಾಡಬಾರದು.
* ಯಾವ ಕೆಲಸ ಮಾಡಬೇಕಾದರೂ ಕೂಡ ಎರಡೆರಡು ಬಾರಿ ಯೋಚಿಸಿ ಆ ಕಾರ್ಯವನ್ನು ಮಾಡಬೇಕು. ಅರ್ಧ ಮನಸ್ಸಿನಿಂದ ಯಾವ ಕೆಲಸವನ್ನು ಮಾಡಬೇಡಿ.
* ಹೊಸ ಜಾಗಗಳಲ್ಲಿ ರಾತ್ರಿ ಹೊತ್ತು ಸುತ್ತಾಡಬಾರದು.
* ಮೂಗಿನ ಒಳಗೆ ಬೆರಳು ಹಾಕಿ ಮೇಲಿಂದ ಮೇಲೆ ತಿರುವುತ್ತಿರಬಾರದು.
* ಬೇರೆಯವರು ಊಟ ಮಾಡಿ ಬಿಟ್ಟಿದ್ದನ್ನು ಯಾವುದೇ ಕಾರಣಕ್ಕೂ ತಿನ್ನಬಾರದು.
* ಇತರರ ಬಟ್ಟೆ ಬರೆಗಳನ್ನು ಪಾದರಕ್ಷೆಗಳನ್ನು ಒಡವೆಗಳನ್ನು ನಾವು ಧರಿಸಬಾರದು. ಹಾಗೆ ನಮ್ಮ ಬಟ್ಟೆ, ಒಡವೆ, ಪಾದರಕ್ಷೆ ಮುಂತಾದ ವೈಯಕ್ತಿಕ ಸಾಮಗ್ರಿಗಳನ್ನು ಇತರರಿಗೂ ಕೊಡಬಾರದು.
* ಕುಡಿಯುವ ನೀರಿನ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರಬೇಕು ಯಾವಾಗಲೂ ನೀರನ್ನು ಶೋಧಿಸಿ ಕುಡಿಯಬೇಕು.
* ದೇಹಕ್ಕೆ ಹಾಗೂ ಮನಸ್ಸಿಗೆ ನೋ’ವು ಮಾಡುವ ಕೆಲಸ ಕಾರ್ಯಗಳನ್ನು ಮಾಡಲೇಬಾರದು.
* ಬರಿ ನೆಲದ ಮೇಲೆ ಕುಳಿತುಕೊಳ್ಳುವುದಕ್ಕಾಗಿ, ಮಲಗುವುದಾಗಲಿ ಆರೋಗ್ಯಕ್ಕೆ ಒಳ್ಳೆಯದಲ್ಲ.
* ಹೊಟ್ಟೆ ಹಸಿದಿರುವಾಗ ಹಾಗೂ ಹೊಟ್ಟೆ ತುಂಬಿರುವಾಗ ಶ್ರಮದ ಕೆಲಸವನ್ನು ಮಾಡಬಾರದು, ಹೊಟ್ಟೆ ತುಂಬಿದ ಮೇಲೆ ವ್ಯಾಯಾಮ ಕೂಡ ಮಾಡಬಾರದು
* ಯಾವುದೇ ಕಾರ್ಯ ಮಾಡಬೇಕಾದರೆ ಶಕ್ತಿ ಸಾಮರ್ಥ್ಯ ಅರಿತು ಮಾಡುವುದು ಒಳ್ಳೆಯದು, ತಮ್ಮ ಶಕ್ತಿ ಮೀರಿ ಮಾಡುವ ಯಾವುದೇ ಕೆಲಸಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲ
* ದೇಹದಿಂದ ಹೊರ ಹೋಗುವ ವಸ್ತುಗಳಾದ ಮಲ,ಮೂತ್ರ, ವೀರ್ಯ, ಹೆಣ್ಣು ಮಕ್ಕಳ ಮುತ್ತು, ಸೀನು, ಕೆಮ್ಮು, ತೇಗು, ಕಣ್ಣೀರು, ವಾಂತಿ ಇತ್ಯಾದಿಗಳನ್ನು ತಡೆಯಲು ಪ್ರಯತ್ನಿಸಬಾರದು. ಇದರಿಂದ ಆಯಾ ದೇಹ ಭಾಗಗಳು ವಿಕಾರವಾಗಿ ರೋಗಗಳಿಗೆ ಕಾರಣವಾಗುತ್ತದೆ
* ಆದರೆ ಮನಸ್ಸಿನೊಳಗಡೆ ಉಂಟಾಗುವ ಕೆ’ಟ್ಟ ಆಲೋಚನೆಗಳು, ಕಾಮ, ಕ್ರೋಧ, ಮದ, ಮತ್ಸರ, ಲೋಬ, ಮೋಹ ಮುಂತಾದ ಅರಿಷಡ್ವರ್ಗಗಳನ್ನು ಮನಸ್ಸಿನಲ್ಲಿಯೇ ಕಂಟ್ರೋಲ್ ಮಾಡಿ ಉತ್ತಮರಾಗಲು ಪ್ರಯತ್ನಿಸಬೇಕು.
* ಇನ್ನೊಬ್ಬರ ವಸ್ತುವಿಗೆ ಎಂದು ಬಯಸಬಾರದು, ಅದರಲ್ಲೂ ಪರ ಸ್ತ್ರೀಯರ ಮೇಲೆ ವ್ಯಾಮೋಹ ಪಡಲೇಬಾರದು.
* ಕೆ’ಟ್ಟವರ ಸಹವಾಸ ಗೊತ್ತಾದ ಮೇಲು ಮುಂದುವರಿಸಬಾರದು.
* ಸಾಧ್ಯವಾದಷ್ಟು ಒಳ್ಳೆಯ ಯೋಚನೆಗಳಲ್ಲಿ ಒಳ್ಳೆಯ ಕಾರ್ಯಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು.
* ಸ್ವಾರ್ಥ ಬುದ್ಧಿಯನ್ನು ಬಿಟ್ಟುಬಿಡಬೇಕು ಎಲ್ಲರೂ ಚೆನ್ನಾಗಿರಲಿ ಎನ್ನುವ ಮನಸಿರಬೇಕು, ಉಪಕಾರ ಮಾಡಲಾಗದಿದ್ದರೂ ಅಪಕಾರ ಮಾಡಬಾರದು.
* ಧ್ಯಾನ, ಭಕ್ತಿ, ಪೂಜೆ, ಪ್ರಾರ್ಥನೆ, ಅಧ್ಯಯನ, ಮಂತ್ರ ಘೋಷ ಮುಂತಾದ ಕಾರ್ಯಗಳಲ್ಲಿ ಸಾಧ್ಯವಾದಷ್ಟು ಭಾಗಿಯಾಗಿ ಮನಸ್ಸನ್ನು ಸಕಾರಾತ್ಮಕವಾಗಿ ಇಟ್ಟುಕೊಳ್ಳಬೇಕು.
* ಅಡುಗೆ ಮಾಡುವಾಗ ಊಟ ಬಡಿಸುವಾಗ ಪ್ರೀತಿ ಹಾಗೂ ಒಳ್ಳೆಯ ಭಾವನೆಗಳು ಇರಬೇಕು. ಊಟ ತಿನ್ನುವಾಗಲು ಕೂಡ ಮನಸ್ಸು ಪ್ರಶಾಂತವಾಗಿರಬೇಕು. ಕೋ’ಪ, ಸಿ’ಟ್ಟು, ಆ’ಕ್ರೋ’ಶ, ಕೆಟ್ಟ ಯೋಚನೆಗಳನ್ನು ಇಟ್ಟುಕೊಂಡು ಊಟ ಮಾಡಬಾರದು. ಅಂತಹ ಸಮಯದಲ್ಲಿ ಊಟ ಮಾಡಿದರೆ ಮನಸ್ಸು ಕೂಡ ಅದೇ ರೀತಿ ಆಗುತ್ತದೆ
* ಊಟ ಮಾಡುವಾಗ ನೆಮ್ಮದಿಯಾಗಿ ನಿಧಾನವಾಗಿ ಚೆನ್ನಾಗಿ ಅಗಿದು ಆಹಾರವನ್ನು ಸೇವಿಸಬೇಕು. ನಿಂತುಕೊಂಡು ಅಥವಾ ಅವಸರವಾಗಿ ಊಟ ಮಾಡಬಾರದು.
* ತಾಯಿ ಮಗುವಿಗೆ ಹಾಲು ಕೊಡುವಾಗ ಆಕೆಗೆ ಯಾವುದೇ ದುಃ’ಖ ಇದ್ದರು ಅಥವಾ ರೋ’ಷ ಇದ್ದರೂ ಅಂತಹ ಸಮಯದಲ್ಲಿ ಹಾಲು ಕೊಡಬಾರದು. ಯಾಕೆಂದರೆ ಇದನ್ನು ಸೇವಿಸುವ ಮಗುವಿನ ಮನಸ್ಸಿನ ಮೇಲೆ ಮತ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
* ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣಬೇಕು ನಮಗಿಂತ ಚಿಕ್ಕವರರಾಗಿದ್ದರು ಅಥವಾ ಹಿರಿಯರಾಗಿದ್ದರು ಎಲ್ಲಾ ಸ್ತ್ರೀಯರನ್ನು ಗೌರವ ಪ್ರಮುಖವಾಗಿ ಕಾಣಬೇಕು ಅವರ ಮನಸ್ಸಿಗೆ ನೋವುಂಟು ಮಾಡುವ ಅವರಿಂದ ಕಣ್ಣೀರಾಕಿಸುವ ಮಾತುಗಳನ್ನು ಆಡಲೇಬಾರದು.
* ಬಟ್ಟೆಬರೆ ಸ್ವಚ್ಛವಾಗಿಟ್ಟುಕೊಳ್ಳಲು ಮುಖ್ಯ, ಇದರ ಜೊತೆ ಮನಸ್ಸನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಹಾಗೂ ಮನೆಯ ವಾತಾವರಣವನ್ನು ಅಷ್ಟೇ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಕೂಡ ಮುಖ್ಯ.
* ಪ್ರತಿಯೊಬ್ಬರೂ ಕೂಡ ಸಾಧ್ಯವಾದಷ್ಟು ವ್ಯಾಯಾಮಕ್ಕೆ ಸಮಯ ಮೀಸಲಿಡಬೇಕು.
* ಶುದ್ಧವಾದ ಗಾಳಿ, ಸೂರ್ಯನ ಬೆಳಕು, ಬಿಸಿಲು ಇದೆಲ್ಲವೂ ಉಚಿತವಾಗಿಯೇ ಇದೆ ಆದಷ್ಟು ಪ್ರಕೃತಿಯಿಂದ ಸಿಗುವ ಈ ಉತ್ತಮ ಅಂಶಗಳನ್ನು ಪ್ರತಿಯೊಬ್ಬರು ಗ್ರಹಿಸಬೇಕು. ಇದು ದೇಹ ಹಾಗೂ ಮನಸ್ಸಿನ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.
ಪ್ರತಿನಿತ್ಯ ಸ್ನಾನ ಮಾಡಬೇಕು, ಸಂಪೂರ್ಣ ಬೆತ್ತಲೆಯಾಗಿ ಸ್ನಾನವನ್ನು ಮಾಡಬಾರದು, ತಣ್ಣೀರಿನಿಂದ ಸ್ನಾನ ಮಾಡುವುದು ಒಳ್ಳೆಯ ಅಭ್ಯಾಸ.