* ತಲೆಗೆ ಅಭ್ಯಂಜನ ಸ್ನಾನ ಮಾಡುವುದರಿಂದ ತಲೆಕೂದಲು ಸೊಂಪಾಗಿ ಬೆಳೆಯುವುದಲ್ಲದೆ ತಲೆ ಮತ್ತು ಮೆದುಳಿಗೂ ಒಳ್ಳೆಯದು.
* ನಿಮ್ಮ ಕೂದಲಿಗೆ ಸ್ವಲ್ಪ ನಿಂಬೆಹಣ್ಣನ್ನು ಹಚ್ಚಿ ಅರ್ಧ ಗಂಟೆ ಸೀಗೇ ಪುಡಿ ಹಚ್ಚಿ ತಿಕ್ಕಿ ಸ್ನಾನ ಮಾಡಿ. ನಿಮ್ಮ ಕೂದಲು ಫಳ ಫಲನೆ ಹೊಳೆಯುತ್ತದೆ.
* ತಲೆಗೊದಲು ಹಸಿಯಾಗಿರುವಾಗ ಬಾಚಬಾರದು. ನಿತ್ಯದಲ್ಲಿ ತಲೆ ಯನ್ನು 2 ಬಾರಿ ಬಾಚಿಕೊಳ್ಳಿ. ತೊಡಕಾಗಿರುವ ಕೂದಲುಗಳನ್ನು ಕೈ ಬೆರಳುಗಳಿಂದ ನಿದಾನವಾಗಿ ಬಿಡಿಸಿ.
* ಕೂದಲನ್ನು ಕೀಳಬಾರದು ತಲೆಯಲ್ಲಿ ಹೊಟ್ಟು ಹೆಚ್ಚಾಗಿದ್ದರೆ ಹುಣಸೇ ನೀರಿಗೆ ಸ್ವಲ್ಪ ಬೆಲ್ಲದ ಪುಡಿ ಸೇರಿಸಿ ಕುದಿಸಿ ತಲೆಗೆ ಹಚ್ಚಿ ಸ್ನಾನ ಮಾಡಿ ಹೊಟ್ಟು ನಿವಾರಣೆ ಆಗುವುದು.
* ಕೇಶದ ತುದಿಗಳು ಸೀಳಿದ್ದರೆ ತುದಿಯನ್ನು ಕತ್ತರಿಸಿ ಇತರ ಉಪಚಾರವನ್ನು ಮಾಡಿರಿ.
* ಕೇವಲ ತುದಿ ಸೀಳಿದಾಗ ಕತ್ತರಿಸುವ ಪರಿಪಾಠವನ್ನು ಮಾಡಿಕೊಳ್ಳ ಬೇಡ.
ಈ ಸುದ್ದಿ ಓದಿ:- ಅಕ್ಕಿಯಲ್ಲಿ ಹುಳ ಆಗಿದ್ಯಾ? ಹೀಗೆ ಮಾಡಿ ಎರಡು ವರ್ಷ ಆದ್ರೂ ಅಕ್ಕಿ ಏನೂ ಆಗಲ್ಲ.!
* ಕಡಲೆಹಿಟ್ಟು ಮತ್ತು ಮೊಸರು ಇವುಗಳನ್ನು ಸೇರಿಸಿ ತಲೆಗೂದಲನ್ನು ತೊಳೆಯಿರಿ. ಕೂದಲಿನ ಕಾಂತಿ ಹೆಚ್ಚುತ್ತದೆ.
* ಅರ್ಧ ತೆಂಗಿನಕಾಯಿಯನ್ನು ತುರಿಯಿರಿ ಒಂದು ಲೋಟಾ ಬಿಸಿ ನೀರಿನಲ್ಲಿ ಹಾಕಿ ಕಲಕಿ ಸೋಸಿ ಹಾಲು ಮತ್ತು ನಿಂಬೆ ರಸ ಸೇರಿಸಿ ನಂತರ ಇದನ್ನು ತಲೆಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿರಿ ತುಸು ಸಮಯದ ನಂತರ ತಲೆ ಸ್ನಾನ ಮಾಡಿರಿ ಇದರಿಂದ ಉದುರುವ ಕೂದಲು ನಿಲ್ಲುತ್ತದೆ ಕೂದಲು ಸೊಂಪಾಗಿ ಬೆಳೆಯುತ್ತದೆ.
* ತಲೆ ಕೂದಲು ಗಟ್ಟಿಯಾಗಿ ನೆಲೆಯೂರಲು ತಲೆಯನ್ನು ನಿತ್ಯವೂ ಮಸಾಜ್ ಮಾಡಬೇಕು. ಇದೊಂದು ರೀತಿಯ ವ್ಯಾಯಾಮ ಕೂದಲಿನ ಬೇರಿಗೆ ರಕ್ತ ಸರಾಗವಾಗಿ ಹರಿಯುತ್ತದೆ.
* ನಿತ್ಯ ಉಪಯೋಗಿಸುವ ಬಾಚಣಿಗೆಯನ್ನು ಹಳೆಯ ಹಲ್ಲು ತಿಕ್ಕುವ ಬ್ರಷ್ ನಿಂದ ಶುಚಿಗೊಳಿಸಿ ನಂತರ ಶಾಂಪೂದಿಂದ ಬೆಚ್ಚಗಿನ ನೀರಿನಿಂದ ತೊಳೆಯಿರಿ.
* ಒಡೆದ ಹಾಲನ್ನು ಚೆಲ್ಲದೇ ಇದರ ನೀರನ್ನು ಕೂದಲನ್ನು ತೊಳೆಯಲು ಬಳಸಿ. ಇದೊಂದು ಪ್ರೋಟೀನ್ ಯುಕ್ತ ಉತ್ತಮವಾದ ಕೂದಲನ್ನು ತೊಳೆಯುವ ವಿಧಾನವಾಗಿರುತ್ತದೆ.
* ಬಳಸದೇ ಇರುವ ಒಣಗಿದ ಕರಿಬೇವು, ನೆಲ್ಲಿಕಾಯಿ ಮುಂತಾದವನ್ನು ಎಸೆಯದೇ ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕಾಯಿಸಿ ಆರಿಸಿ ದಿನನಿತ್ಯ ಬಳಸಿ ಕೂದಲು ಸೊಂಪಾಗಿ ಬೆಳೆಯುತ್ತದೆ.
ಈ ಸುದ್ದಿ ಓದಿ:- ದೇವರಲ್ಲಿ ಹರಿಕೆ ಹೊತ್ತು ನೀವು ಮರೆತಿರುವಿರೆ.! ಹರಿಕೆ ತೀರಿಸಲಾಗದೆ ಕಷ್ಟಗಳು ಎದುರಾಗುತ್ತಿದೆಯೇ.? ಇದಕ್ಕೆಲ್ಲಾ ಪರಿಹಾರ ಇಲ್ಲಿದೆ ನೋಡಿ
* ಬಿಸಿ ನೀರಿನಿಂದ ತಲೆಗೆ ಸ್ನಾನ ಮಾಡಿದ ಮೇಲೆ ಎರಡು ಚೆಂಬು ತಣ್ಣೀರಿಗೆ ನಿಂಬೆ ಕಾಯಿಯ ಒಂದು ಹೋಳು ರಸ ಹಿಂಡಿ ತಲೆಯ ಮೇಲೆ ಹಾಕಿಕೊಂಡರೆ ತುಂಬಾ ಒಳೆಯದು. ಹೀಗೆ ಮಾಡುವುದರಿಂದ ಕೂದಲಿಗೆ ಮೃದು ಮತ್ತು ಹೊಳಪು ಬರುತ್ತದೆ.
ಮೇಲಾಗಿ ಬಿಸಿ ತಣ್ಣೀರು ಹಿಂದೆ ಹಿಂದೆಯೇ ತಗುಲುವುದರಿಂದ ಕೂದಲಿನ ಬುಡ ಗಟ್ಟಿಯಾಗಿ ಕೂದಲು ಉದುರುವುದು ಕಡಿಮೆಯಾಗುತ್ತದೆ. ರಕ್ತ ಸಂಚಾರ ಚೆನ್ನಾಗಿ ಆಗುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.
* ಕೂದಲುಗಳಿಗೆ ಜಿಡ್ಡು ದೊರಕುವುದು ಅವಶ್ಯಕವಾಗಿದೆ. ಇದನ್ನು ಪೂರೈಸಲು ರಾತ್ರಿ ಮಲಗುವ ಮುಂಚೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಬುಡದಿಂದಲೂ ಹಚ್ಚಿ ನಯವಾಗಿ ತಿಕ್ಕಬೇಕು.
* ಒಂದು ಚಮಚ ವಿನೇಗರ್ ಅರ್ಧ ಬಕೆಟ್ ನೀರಿಗೆ ಹಾಕಬೇಕು. ಬಕೇಟಿನಲ್ಲಿ ಶಾಂಪೂ ಕೂಡಾ ಹಾಕಬೇಕು. ಆಮೇಲೆ ತಲೆಯನ್ನು ಈ ನೀರಿನಿಂದ ತೊಳೆದುಕೊಳ್ಳಬೇಕು. ಕೊನೆಗೆ ಸ್ವಲ್ಪ ವಿನೇಗರ್ ದ್ರವವನ್ನು ತಲೆಯ ಮೇಲೆ ಹಾಕಿಕೊಂಡು ಅರ್ಧ ಗಂಟೆಯ ಕಾಲ ಹಾಗೇ ಬಿಡಬೇಕು ಈ ರೀತಿ ಮಾಡುವುದರಿಂದ ಹೇನು ಕಚ್ಚುವ ಸಮಸ್ಯೆಯಿಂದ ಪರಿಹಾರ ಕಾಣಬಹುದು.
* ಪ್ರತಿ ದಿನ ರಾತ್ರಿ ಅಥವಾ ಮುಂಜಾನೆ ಕೂದಲಿಗೆ ಎಣ್ಣೆ ಹಚ್ಚಬೇಕು. ತಲೆಗೆ ಬೆವರು ಹಿಡಿದ ಕೂಡಲೇ ಗಾಳಿಗೆ ಆರಿಸಿಕೊಳ್ಳಬೇಕು. ಇಲ್ಲದಿದ್ದರೆ ಕೂದಲು ವಿಪರೀತ ಉದುರುತ್ತದೆ.
* ನಿಂಬೆಯ ರಸದಲ್ಲಿ ಉಪ್ಪು ಕಲಸಿ ಅದನ್ನು ತಲೆಗೆ ಹಚ್ಚಿಕೊಂಡು ಸ್ನಾನ ಮಾಡಿದರೆ ತಲೆಯಲ್ಲಿ ಇರುವ ಹೊಟ್ಟು ಹೋಗಿ ಕೂದಲು ಉದುರು ವುದು ಕಡಿಮೆಯಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.