ಇತ್ತೀಚಿನ ದಿನಗಳಲ್ಲಿ ಥೈರೊಯ್ಡ್ ಸಮಸ್ಯೆ ಎನ್ನುವುದು ಎಲ್ಲರನ್ನು ಕಾಡುತ್ತಿದೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಈ ಸಮಸ್ಯೆ ಜಾಸ್ತಿ ಇದೆ. ಥೈರಾಯ್ಡ್ ಎನ್ನುವುದು ಕಾಯಿಲೆ ಎನ್ನುವುದಕ್ಕಿಂತ ಅದು ದೇಹದಲ್ಲಿ ಆರೋಗ್ಯ ಹದ ತಪ್ಪಿ ಆಗುವ ಡಿಸ್ಆರ್ಡರ್ ಎನ್ನಬಹುದು. ಥೈರಾಯ್ಡ್ ಆಗಿರುವಾಗ ಹಲವಾರು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ವೈದ್ಯರು ಇದಕ್ಕೆ ಸಂಬಂಧಿಸಿದ ಪರೀಕ್ಷೆ ಮಾಡಿ ದೃಡೀಕರಿಸುತ್ತಾರೆ.
ಕೆಲವೊಮ್ಮೆ ಇದು ಹೆಚ್ಚಿನ ಮಟ್ಟದಲ್ಲಿದ್ದಾಗ ಮಾತ್ರೆಗಳನ್ನು ಶುರು ಮಾಡುತ್ತಾರೆ ಆದರೆ ಇದು ಒಂದೆರಡು ದಿನಗಳಲ್ಲಿ ಮಾತ್ರೆ ತೆಗೆದುಕೊಂಡರೆ ಗುಣವಾಗುವ ಸಮಸ್ಯೆ ಅಲ್ಲ ತಿಂಗಳುಗಟ್ಟಲೇ ಕೆಲವೊಮ್ಮೆ ವರ್ಷಗಟ್ಟಲೇ ಮಾತ್ರೆಗಳನ್ನು ಸೇವಿಸಬೇಕು. ಆದರೆ ಇದ್ದಕ್ಕಿದ್ದಂತೆ ಕಡಿಮೆ ಕೂಡ ಆಗುತ್ತದೆ ಆಗ ಟೆಸ್ಟ್ ಮಾಡಿಸಿ ಡೋಸೆಜ್ ಕಡಿಮೆ ಮಾಡಿಕೊಳ್ಳಬೇಕು.
ಆಗಾಗ ಟೆಸ್ಟ್ ಮಾಡಿಸಿಕೊಳ್ಳದೆ ಒಂದೇ ಸಮನೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ ಅದು ಕೂಡ ತಪ್ಪು ಥೈರಾಯ್ಡ್ ಬರಬಾರದು ಎಂದರೆ ನಾವು ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕು ಹಾಗೂ ಆರೋಗ್ಯಕರವಾದ ಆಹಾರ ಪದಾರ್ಥಗಳನ್ನು ತಿನ್ನಬೇಕು. ಅತಿಯಾದ ಕರಿದ ಪದಾರ್ಥಗಳ ಸೇವನೆ, ಜಂಕ್ ಫುಡ್ಗಳ ಸೇವನೆ, ಬೇಕರಿ ಪದಾರ್ಥಗಳ ಸೇವನೆ ಇವುಗಳನ್ನು ಸಂಪೂರ್ಣವಾಗಿ ಬಿಡಬೇಕು.
ಬೇಗ ಮಲಗುವುದು, ಬೇಗ ಏಳುವುದು ಸಮಯಕ್ಕೆ ಸರಿಯಾಗಿ ಊಟ ಮಾಡಿ ಊಟ ಆದ ಎರಡು ತಾಸಿನಲ್ಲಿ ಮಲಗುವುದು, ಊಟದಲ್ಲಿ ಸೊಪ್ಪು ತರಕಾರಿ ಹಣ್ಣುಗಳು ಹೆಚ್ಚಿಗೆ ಮಾಡುವುದು, ಕೆಟ್ಟ ಕೊಲೆಸ್ಟ್ರಾಲ್ ಬದಲು ತುಪ್ಪ ಬೆಣ್ಣೆಯಂತಹ ಒಳ್ಳೆಯ ಕೊಲೆಸ್ಟ್ರಾಲ್ ತಿನ್ನುವುದು ಫ್ಯಾಟ್ ಕಡಿಮೆ ಮಾಡಿಕೊಳ್ಳುವುದು ಇವುಗಳು ಥೈರಾಯ್ಡ್ ಬರದಂತೆ ತಡೆಯಲು ಹಾಗೂ ಥೈರಾಯಿಡ್ ಇರುವುದನ್ನು ಗುಣಪಡಿಸಲು ಇರುವ ಮಾರ್ಗ ಆಗಿದೆ.
ಇದರ ಜೊತೆಗೆ ಥೈರಾಯ್ಡ್ ಈಗಾಗಲೇ ಬಂದಿದ್ದರೆ ಅದನ್ನು ನ್ಯಾಚುರಲ್ ಆಗಿ ಕ್ಲಿಯರ್ ಮಾಡಿಕೊಳ್ಳಲು ಕನಿಷ್ಠ ಆರು ತಿಂಗಳೇ ಬೇಕು ಈ ಸಮಯದಲ್ಲಿ ನಾವು ಹೇಳುವ ಇಂತಹ ಮನೆ ಮದ್ದುಗಳನ್ನು ಮಾಡಿದರೆ ಇದಕ್ಕಿಂತಲೂ ಬೇಗನೆ ಕಂಟ್ರೋಲ್ ಗೆ ಬರುತ್ತದೆ.
* ಪ್ರತಿದಿನವೂ ಕೂಡ ಇವರು ನಿಂಬೆಹಣ್ಣಿನ ಪಾನಕವನ್ನು ಸೇವಿಸಬೇಕು
* ನೆಲ್ಲಿಕಾಯಿ, ನಿಂಬೆ ರಸ ಹಾಗೂ ಸೈಂಧವ ಲವಣ ಹಾಕಿ ಜ್ಯೂಸ್ ಮಾಡಿ ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಲು ಸಾಧ್ಯವಾಗದೇ ಇದ್ದರೆ ಬೆಳಗ್ಗೆ ಹಾಗೂ ರಾತ್ರಿ ಊಟ ಆದ ನಂತರ ಸೇವಿಸಬೇಕು
* ನೆಲ್ಲಿಕಾಯಿ ಅಗಸೆ ಬೀಜ ಹಾಗೂ ಒಣಶುಂಟಿ, ಟಮೋಟೊ ಹಾಕಿ ಜ್ಯೂಸ್ ಮಾಡಿ ಕೂಡ ಕುಡಿಯಬಹುದು
* ಒಂದು ಹಿಡಿ ಪಾಲಕ್, ಕ್ಯಾರೆಟ್ ಮತ್ತು ಅರ್ಥ ಹೋಳು ನಿಂಬೆ ರಸದಿಂದ ಜ್ಯೂಸ್ ಮಾಡಿ ಕೂಡ ಕುಡಿಯಬಹುದು. ಅಥವಾ ಸಲಾಡ್ ಮಾಡಿ ಕೂಡ ತೆಗೆದುಕೊಳ್ಳಬಹುದು
* ಲಾವಂಚದ ಪುಡಿ, ಶತಾವರಿ ಪುಡಿ, ಹರಿತಕಿ ಚೂರ್ಣ ಇವೆಲ್ಲವನ್ನೂ ತಲಾ ಒಂದೊಂದು ಚಮಚ ತೆಗೆದುಕೊಂಡು200ml ನೀರಿಗೆ ಹಾಕಿ 100ml ಬರುವವರೆಗೂ ಚೆನ್ನಾಗಿ ಕುದಿಸಿ ಶೋಧಿಸಿ ಕುಡಿಯಬೇಕು
* ಉದ್ದದ ಕಾಟನ್ ಬಟ್ಟೆ ತೆಗೆದುಕೊಂಡು ಅದನ್ನು ನೀರಿನಲ್ಲಿ ಆದ್ದಿ ಕತ್ತಿನ ಸುತ್ತ ಸುತ್ತಿಕೊಂಡು ಮತ್ತು ಅದರ ಮೇಲೆ ಉಲ್ಲನ್ ಒಣ ಬಟ್ಟೆ ಕೂಡ ಸುತ್ತಿಪ್ಯಾಕ್ ಹಾಕಬೇಕು. ಈ ರೀತಿ ಮಾಡುವುದರಿಂದ ಕೂಡ ಥೈರಾಯಿಡ್ ಕಂಟ್ರೋಲ್ ಗೆ ಬರುತ್ತದೆ
* ಕುತ್ತಿಗೆಯ ಥೈರೊಯ್ಡ್ ಭಾಗದಲ್ಲಿ ಥೈರಾಯಿಡ್ ಮ್ಯಾಗ್ನೆಟ್ ಇಟ್ಟುಕೊಳ್ಳುವುದರಿಂದ ರಕ್ತ ಸಂಚಾರ ನಾರ್ಮಲ್ ಆಗಿ ಕೂಡ ಥೈರಾಯ್ಡ್ ಕಂಟ್ರೋಲ್ ಗೆ ಬರುತ್ತದೆ.
* ದೇಹ ಶುದ್ದಿ ಮಾಡಿಕೊಳ್ಳುವುದರಿಂದ ಕೂಡ ಥೈರಾಯಿಡ್ ನಿಯಂತ್ರಣಕ್ಕೆ ಬರುತ್ತದೆ ಆಯುರ್ವೇದದ ಪಂಚ ಕರ್ಮ ಚಿಕಿತ್ಸೆ ಅಥವಾ ಪ್ರಕೃತಿ ಚಿಕಿತ್ಸೆ, ಮಸಾಜ್, ಸ್ಟ್ರೀಮಿಂಗ್ ತೆಗೆದುಕೊಳ್ಳುವುದು ಇದೆಲ್ಲವೂ ಬಾಡಿ ಟಾಕ್ಸಿನ್ ಅಂಶವನ್ನು ಹೊರಹಾಕಿ ಹಾರ್ಮೋನ್ ಇಂಬ್ಯಾಲೆನ್ಸ್ ನಾರ್ಮಲ್ ಮಾಡುತ್ತವೆ. ಥೈರಾಯಿಡ್ ನಿಂದ ಆಗುವ ಬೊಜ್ಜು ಕೂಡ ಇದರಿಂದ ಕಡಿಮೆ ಆಗುತ್ತದೆ.
* ಇದರೊಂದಿಗೆ ದಿನಾಚರ್ಯನ್ನು ಸರಿಯಾದ ಕ್ರಮದಲ್ಲಿ ರೂಢಿಸಿಕೊಳ್ಳುವುದು ಕೂಡ ಸಹಕಾರಿ ಆಗುತ್ತದೆ. ಪ್ರತಿ ದಿನ ವ್ಯಾಯಾಮ, ಯೋಗ, ಧ್ಯಾನ ಮಾಡುವುದು ಕೂಡ ಥೈರಾಯ್ಡ್ ಕಂಟ್ರೋಲ್ ಗೆ ಅನುಕೂಲ ಮಾಡಿಕೊಡುತ್ತದೆ.