ದುಡ್ಡು ಎನ್ನುವುದು ಜೀವನದ ಅತ್ಯಾವಶ್ಯಕತೆಯ ವಸ್ತು. ಪ್ರತಿಯೊಬ್ಬರೂ ಕೂಡ ತಾವು ಹೆಚ್ಚು ದುಡ್ಡು ಸಂಪಾದನೆ ಮಾಡಬೇಕು, ತಾವು ಅಂದುಕೊಂಡ ರೀತಿ ಚೆನ್ನಾಗಿ ಬದುಕಬೇಕು, ಶ್ರೀಮಂತಿಕೆ ಅನುಭವಿಸಬೇಕು ಎನ್ನುವ ಆಸೆ ಇರುತ್ತದೆ. ಆದರೆ ಎಲ್ಲರಿಗೂ ಕೂಡ ದುಡ್ಡು ಒಂದೇ ರೀತಿಯಾಗಿ ಹಂಚಿಕೆಯಾಗಿಲ್ಲ ಕೆಲವರು ಹುಟ್ಟಿನಿಂದಲೇ ಪುಣ್ಯವಂತರಾಗಿರುತ್ತಾರೆ.
ಆ ಕಾರಣ ಶ್ರೀಮಂತರ ಮನೆಯಲ್ಲಿ ಹುಟ್ಟಿ ಐಶ್ವರ್ಯವನ್ನು ಅನುಭವಿಸುತ್ತಾರೆ, ಹಾಗೆಯೇ ಕೆಲವರಿಗೆ ಮದುವೆ ನಂತರ ಅಂತಹ ಯೋಗ ಬರುತ್ತದೆ, ಶ್ರೀಮಂತರ ಮನೆಗೆ ಮದುವೆ ಆಗುತ್ತಾರೆ. ಇನ್ನು ಕೆಲವರು ತಾವೇ ದುಡಿದು ಶ್ರೀಮಂತಿಕೆ ಪಡೆಯುತ್ತಾರೆ. ವ್ಯಾಪಾರ ವ್ಯವಹಾರಗಳಲ್ಲಿ ಹಗಲು ರಾತ್ರಿ ಎನ್ನದೇ ಸಮಯ ಮತ್ತು ಬಂಡವಾಳ ಹಾಕಿ ಹಣ ಸಂಪಾದಿಸುತ್ತಾರೆ.
ಈ ರೀತಿ ನಾವು ಮನಸ್ಸು ಮಾಡಿ ಕ’ಷ್ಟಪಟ್ಟರೆ ಅಸಾಧ್ಯವಾದದ್ದು ಯಾವುದು ಇಲ್ಲ. ನಮ್ಮ ಹುಟ್ಟು ನಮ್ಮ ಕೈಲಿ ಇರಲಿಲ್ಲ ಹಾಗಾಗಿ ಬಡತನದಲ್ಲಿ ನಾವು ಹುಟ್ಟಿರಬಹುದು ಆದರೆ ಅದನ್ನು ಬದಲಾಯಿಸಿಕೊಂಡು ಶ್ರೀಮಂತರಾಗಿ ಬದುಕುವ ಸಂಪೂರ್ಣ ಅವಕಾಶ ನಮ್ಮ ಕೈಯಲ್ಲಿ ಇರುತ್ತದೆ.
ಅದಕ್ಕೆ ತಕ್ಕ ಹಾಗೆ ನಾವು ಬದುಕಿನಲ್ಲಿ ಕೆಲ ಮಾರ್ಪಾಡುಗಳನ್ನು ಮಾಡುತ್ತಾ ಬೆಳೆಯುತ್ತಾ ಹೋಗಬೇಕು ಜೀವನದಲ್ಲಿ ಈ ರೀತಿ ಶ್ರೀಮಂತರಾಗಬೇಕು ಎಂದರೆ ನಮ್ಮ ಗುರಿ ಸ್ಪಷ್ಟವಾಗಿರಬೇಕು ಒಮ್ಮೆ ನಮ್ಮ ಕಡೆಗೆ ಹಣದ ಆಕರ್ಷಣೆ ಆದರೆ ಅದು ನಂತರ ನದಿಯ ರೀತಿ ಹರಿದು ಬರುತ್ತದೆ ಹಾಗಾಗಿ ದುಡ್ಡು ಇರುವ ಕಡೆಗೆ ದುಡ್ಡು ಸೇರುವುದು.
ಈ ರೀತಿ ಬಂದ ದುಡ್ಡನ್ನು ಜೋಪಾನವಾಗಿ ಇಟ್ಟುಕೊಂಡು ಹೆಚ್ಚು ಹಣಾಕರ್ಷಣೆ ಬರುವಂತೆ ಮಾಡಿಕೊಳ್ಳಲು ನಮ್ಮ ಬುದ್ಧಿವಂತಿಕೆ ಅದೃಷ್ಟದ ಜೊತೆಗೆ ಕೆಲವೊಂದು ತಂತ್ರಗಳನ್ನು ಕೂಡ ಮಾಡಬೇಕಾಗುತ್ತದೆ. ಅಂತಹದೊಂದು ತಂತ್ರದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ನಂಬಿಕೆಯಿಂದ ನೀವು ಈ ಒಂದು ಚಟುವಟಿಕೆ ಮಾಡಿದರೆ ಸಾಕು ನಿಮ್ಮ ಕಡೆಗೆ ಹಣದ ಆಕರ್ಷಣೆ ಆಗುತ್ತದೆ. ನಿಮ್ಮ ಬಳಿ ಇರುವ ಹಣ ದುಪ್ಪಟ್ಟಾಗುತ್ತದೆ ಅಥವಾ ನಿಮಗೆ ಯಾರಿಂದಲೋ ಹಣ ಬರಬೇಕಾಗಿ ಸಮಸ್ಯೆಯಾಗಿದ್ದರೆ ಪರಿಹಾರವಾಗಿ ಅವರೇ ದುಡ್ಡು ತಂದುಕೊಡುತ್ತಾರೆ ಅಥವಾ ನಿಮ್ಮ ವ್ಯಾಪಾರ ವ್ಯವಹಾರ ಅಭಿವೃದ್ಧಿ ಆಗುತ್ತದೆ ನಿಮ್ಮ ಸಂಬಳಕ್ಕಿಂತ ಹೆಚ್ಚಿನ ಸಂಬಳ ಸಿಗುವ ಹುದ್ದೆಗೆ ನೀವು ಬಡ್ತಿ ಹೊಂದಿರುತ್ತೀರಿ ಈ ರೀತಿ ಬದಲಾವಣೆಗಳು ಉಂಟಾಗುತ್ತವೆ.
ಇದನ್ನು ಮಾಡುವುದು ಹೇಗೆ ಎಂದರೆ ನೀವು ಒಂದು ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ ಮಾಡಿ ಏಕಾಗ್ರತೆಯಿಂದ ದೇವರ ಕೋಣೆಯಲ್ಲಿ ಕುಳಿತುಕೊಂಡು ಒಂದು ಚೀಟಿ ತೆಗೆದುಕೊಳ್ಳಿ, ಆ ಚೀಟಿಯಲ್ಲಿ ಕೇಸರಿ ಬಣ್ಣದ ಮಾರ್ಕರ್ ಪೆನ್ನಿಂದ ಅಥವಾ ಕೇಸರಿ ಇಂಕಿನಲ್ಲಿ 8 8 8 ಎಂದು ಬರೆದು ಅದರ ಕೆಳಗೆ ನಿಮಗೆ ಯಾವ ಮೂಲದಿಂದ ಹಣ ಬರಬೇಕು ಎನ್ನುವ ನಿಮ್ಮ ಇಚ್ಛೆ ಬರೆದುಕೊಳ್ಳಿ.
ಉದಾಹರಣೆಗೆ ನಿಮ್ಮ ಕೆಲಸದಲ್ಲಿ ಪ್ರಮೋಷನ್ ಆಗಿ ಹೆಚ್ಚು ಸಂಬಳ ಬರಬೇಕು ಎಂದಿದ್ದರೆ ಅದನ್ನೇ ಒಂದು ಸಾಲಿನಲ್ಲಿ ಬರೆಯಿರಿ. ಈಗ ಅದನ್ನು ಮಡಚಿ ನಿಮ್ಮ ದೇವರು ಕೋಣೆಯಲ್ಲಿ ಬಿಟ್ಟು ದೇವರಿಗೆ ಪೂಜೆ ಮಾಡುವಾಗ ಇದಕ್ಕೂ ಕೂಡ ಪೂಜೆ ಮಾಡಿ ಮನಸಾರೆ ತಾಯಿ ಮಹಾಲಕ್ಷ್ಮಿ ಹಾಗೂ ನಿಮ್ಮ ಕುಲದೇವರು ಮತ್ತು ಇಷ್ಟ ದೇವರನ್ನು ಪ್ರಾರ್ಥಿಸಿ.
ನಿಮ್ಮ ಕೋರಿಕೆಯನ್ನು ಒಮ್ಮೆ ಯುನಿವರ್ಸಿಗೆ ಹೇಳಿ ಈಗ ಆ ಚೀಟಿಯನ್ನು ನಿಮ್ಮ ಪರ್ಸನಲ್ಲಿ ಇಟ್ಟುಕೊಳ್ಳಿ. ಪ್ರತಿ ವಾರ ಇದನ್ನು ಚೇಂಜ್ ಮಾಡಬೇಕು ಬದಲಿಸುವಾಗ ನಿಮ್ಮ ಬಳಿ ಇರುವ ಹಳೆ ಚೀಟಿಯನ್ನು ಹರಿಯುವ ನೀರಿಗೆ ಬಿಡಬೇಕು ಮತ್ತು ದಿನ ಬೆಳಗ್ಗೆ ಎದ್ದ ಕೂಡಲೇ ಈ ರೀತಿ ಬರೆದ ವಿಚಾರವನ್ನು ನೆನಪು ಮಾಡಿಕೊಂಡು ಮನಸಿನಲ್ಲಿ ಒಮ್ಮೆ 8 8 8 ಎಂದು ಹೇಳಿ ನೀವು ಬರೆದಿರುವ ಲೈನ್ ಅನ್ನು ಕೂಡ ಹೇಳಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ಬಹಳ ಉತ್ತಮ ಬದಲಾವಣೆಗಳು ನಿಮ್ಮ ಹಣಕಾಸಿನ ಪರಿಸ್ಥಿತಿಯಲ್ಲಿ ಉಂಟಾಗುತ್ತವೆ. ಬೇಕಾದರೆ ಪರೀಕ್ಷೆ ಮಾಡಿ ನೋಡಿ.