ಮನೆ ಕ್ಲೀನ್ ಮಾಡುವುದು ಬಹಳ ಸಮಯ ಹಿಡಿಯುವ ಹಾಗೆಯೇ ಕಿರಿಕಿರಿ ಉಂಟು ಮಾಡುವ ಒಂದು ವಿಷಯ. ಯಾಕೆಂದರೆ ನಾವು ಎಷ್ಟೇ ಕ್ಲೀನ್ ಆಗಿ ಮನೆಯನ್ನು ಇಟ್ಟುಕೊಂಡಿದ್ದರು ಕೂಡ ಒಂದು ವಾರದ ಒಳಗೆ ಅದು ಮತ್ತೆ ಧೂಳಿನಿಂದ ಅವೃತವಾಗುತ್ತದೆ. ಮನೆಯಲ್ಲಿ ಮಕ್ಕಳಿದ್ದರಂತೂ ಈ ರೀತಿ ಮನೆ ಗಲೀಜು ಆಗೋದು ಇನ್ನು ಹೆಚ್ಚು.
ಕೆಲಸಕ್ಕೆ ಹೋಗುವ ಮಹಿಳೆಯರು ತಮಗೆ ರಜೆ ದಿನ ಇದ್ದಾಗ ಅಥವಾ ಹಬ್ಬಹರಿದಿನಗಳಿಗೂ ಮುಂಚೆ ಈ ರೀತಿ ಮನೆಯನ್ನು ಸ್ವಚ್ಛಗೊಳಿಸುತ್ತಾರೆ. ಮನೆಯನ್ನು ಕ್ಲೀನ್ ಮಾಡುವುದು ಎಂದರೆ ಮನೆಯಲ್ಲಿನ ಗೋಡೆಗಳು ಹಾಗೂ ಫ್ಲೋರ್ ಮಾತ್ರವಲ್ಲದೆ ಮನೆಯಲ್ಲಿ ನಾವು ಬಳಸುವ ಪ್ರತಿಯೊಂದು ವಸ್ತುವನ್ನು ಕೂಡ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.
ಅದರ ಮೇಲೆ ಧೂಳು ಕೂರದಂತೆ ಹಳೆ ಕಲೆಗಳು ಇರದಂತೆ ನೋಡಿಕೊಂಡಾಗ ನಮ್ಮ ಕೆಲಸದ ಮೇಲೆ ನಮಗೆ ಸಮಾಧಾನ ಆಗುತ್ತದೆ. ಮನೆಯಲ್ಲಿರುವ ವಸ್ತುಗಳನ್ನು ಕ್ಲೀನ್ ಮಾಡುವುದು ತುಂಬಾ ಕ’ಷ್ಟ’ದ ಕೆಲಸ. ಅದರಲ್ಲೂ ಸೀಲಿಂಗ್ ಫ್ಯಾನ್ ಇನ್ನೂ ಹೆಚ್ಚಿನ ತ್ರಾಸಿನ ಕೆಲಸ. ಯಾಕೆಂದರೆ ಹೆಚ್ಚು ಧೂಳು ಹಾಗೂ ಕೊಳೆ ತುಂಬಿರುತ್ತದೆ, ಎತ್ತರದಲ್ಲಿರುವುದರಿಂದ ಅದನ್ನು ಕ್ಲೀನ್ ಮಾಡಲು ಮತ್ತೊಬ್ಬರ ಸಹಾಯ ಬೇಕು.
ಸ್ಟೂಲ್ ಚೇರ್ ಇಲ್ಲದಂತೆ ಕ್ಲೀನ್ ಮಾಡುವುದು ಸಾಧ್ಯವಿಲ್ಲ. ಹಾಗಾಗಿ ಸೀಲಿಂಗ್ ಫ್ಯಾನ್ ಕ್ಲೀನ್ ಮಾಡುವುದು ಒಬ್ಬರಿಂದ ಮಾಡಲಾಗದ ಅತಿ ಹೆಚ್ಚು ಸಮಯ ಕೂಡ ಹಿಡಿಯುವ ಕೆಲಸವಾಗಿದೆ. ಜೊತೆಗೆ ಫ್ಯಾನ್ ಕ್ಲೀನ್ ಮಾಡುವಾಗ ಮನೆಯಲ್ಲಿ ಮಕ್ಕಳಿದ್ದರೆ, ಅಲರ್ಜಿ ಆಗುವವರಿದ್ದರೆ ಹುಷಾರಾಗಿರಬೇಕು ಇಲ್ಲವಾದರೆ ಆ ಧೂಳಿನಿಂದ ಅವರಿಗೆ ಇನ್ಫೆಕ್ಷನ್ ಆಗುವ ಸಂಭವವಿರುತ್ತದೆ. ಹಾಗಾಗಿ ಸುಲಭವಾಗಿ ಕ್ಲೀನ್ ಮಾಡುವ ಯಾರ ಸಹಾಯವಿಲ್ಲದೆ ಒಬ್ಬರೇ ಕ್ಲೀನ್ ಮಾಡಬಹುದಾದ ಕೆಲ ಟಿಪ್ ಗಳ ಬಗ್ಗೆ ನಾವು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
● ಅಲರ್ಜಿ ಹಾಗೂ ಮಕ್ಕಳಿರುವವರು ಮನೆಯೆಲ್ಲ ಧೂಳಾಗದಂತೆ ಫೀಲಿಂಗ್ ಸಾಂಗ್ ಕ್ಲೀನ್ ಮಾಡಬೇಕು ಎಂದರೆ ನೀವು ನಿಮ್ಮ ಮನೆಯಲ್ಲಿರುವ ಯಾವುದಾದರೂ ಹಳೆಯ ದಿಂಬಿನ ಕವರ್ ತೆಗೆದುಕೊಳ್ಳಿ. ಆ ಕವರನ್ನು ಓಪನ್ ಮಾಡಿ ಒಂದು ಬದಿಯಿಂದ ಸೀಲಿಂಗ್ ಫ್ಯಾನ್ ಗಳ ಧೂಳು ದಿಂಬಿನ ಕವರಿನ ಒಳಗಡೆ ಬೀಳುವಂತೆ ಒರೆಸುತ್ತಾ ಬನ್ನಿ ಆಗ ಆ ಕೆಮ್ಮು ನೆಗಡಿ ಬರುವುದು ತಪ್ಪುತ್ತದೆ.
● ಯಾರ ಸಹಾಯವಿಲ್ಲದೆ ಸೀಲಿಂಗ್ ಫ್ಯಾನ್ ಕ್ಲೀನ್ ಮಾಡಲು ಒಂದು ಉದ್ದವಾಗಿರುವ ವಾಟರ್ ಬಾಟಲ್ ತೆಗೆದುಕೊಳ್ಳಿ. ವಾಟರ್ ಬಾಟಲ್ ಹೊಟ್ಟೆಯ ಮೇಲೆ ಎರಡು ಬದಿಗಳಲ್ಲಿ ಒಂದು ಇಂಚಿನಷ್ಟು ಕಟ್ ಮಾಡಿ ಅದನ್ನು ಓಪನ್ ಮಾಡಿಕೊಳ್ಳಿ ಇನ್ನು ಉಳಿದ ಎರಡು ಕಡೆಯಲ್ಲಿ ಒಂದು ಕಡೆಗೆ ನಿಮ್ಮ ಮನೆಯಲ್ಲಿರುವ ಯಾವುದಾದರೂ ಉದ್ದನೆಯ ಕೋಲ್ ತೆಗೆದುಕೊಂಡು ಆ ಕೋಲಿನ ಸುತ್ತಳತೆಯ ಪ್ರಕಾರ ಮಾರ್ಕ್ ಮಾಡಿಕೊಂಡು ಹೋಲ್ ಮಾಡಿಕೊಳ್ಳಿ.
ಈಗ ಅದನ್ನು ಹಾಕಿ ಬಹಳ ಸಡಿಲವಾಗಿದ್ದರೆ ರಬ್ಬರ್ ಬ್ಯಾಂಡ್ ಸಹಾಯದಿಂದ ಎರಡು ಕಡೆ ಅದು ಅಲುಗಾಡದಂತೆ ಮಾಡಿ. ಇಲ್ಲವಾದರೆ ಯಾವುದಾದರೂ ಬಟ್ಟೆ ಸಹಾಯದಿಂದ ಕಟ್ಟಿ ಅದು ಗ್ರಿಪ್ ಆಗಿರುವಂತೆ ನೋಡಿಕೊಳ್ಳಿ. ಈಗ ನೀವು ಹೊಟ್ಟೆ ಭಾಗದಲ್ಲಿ ಓಪನ್ ಮಾಡಿದ ಜಾಗಕ್ಕೆ ನಿಮ್ಮ ಮನೆಯಲ್ಲಿರುವ ಹಳೆಯ ಬಟ್ಟೆಗಳನ್ನು ಫೋಲ್ಡ್ ಮಾಡಿ ತುಂಬಿ.
ಉದು ಉದ್ದವಾಗಿರುತ್ತದೆ ಮೊದಲಿಗೆ ಒಣ ಬಟ್ಟೆಯ ಸಹಾಯದಿಂದ ವಿಂಗ್ ಗಳನ್ನು ಕ್ಲೀನ್ ಮಾಡಿ ಚೆನ್ನಾಗಿ ಕ್ಲೀನ್ ಆದಮೇಲೆ ಮತ್ತೆ ಒದ್ದೆ ಬಟ್ಟೆಯನ್ನು ತೆಗೆದುಕೊಂಡು ಮತ್ತೊಮ್ಮೆ ಅದನ್ನು ಒರೆಸಿ ಯಾವಾಗಲೂ ಕಾಟನ್ ಬಟ್ಟೆ ಬಳಸಿದರೆ ಕ್ಲೀನ್ ಮಾಡುವುದಕ್ಕೆ ಇನ್ನಷ್ಟು ಸುಲಭವಾಗುತ್ತದೆ.