ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ (Gurantee Scheme) ಪೈಕಿ ಗೃಹಲಕ್ಷ್ಮಿ (Gruhalkshmi) ಯೋಜನೆಯು ಆಗಸ್ಟ್ 30ನೇ ತಾರೀಕು ಲಾಂಚ್ ಆಗಿದೆ. ಈ ಯೋಜನೆ ಮೂಲಕ ಕರ್ನಾಟಕದ ಎಲ್ಲಾ ಕುಟುಂಬದ ಯಜಮಾನಿ ಖಾತೆಗೂ ಕೂಡ ಸಹಾಯಧನವನ್ನು ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ ನೀಡಲಾಗುವುದು ಎಂದು ಸರ್ಕಾರ ಭರವಸೆ ನೀಡಿತ್ತು, ಅದೇ ರೀತಿ ಜುಲೈ 19 ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಲು ಸೂಚಿಸಿತ್ತು.
ಯಾರೆಲ್ಲಾ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದರು ಅವರೆಲ್ಲರೂ ಕೂಡ ಆಗಸ್ಟ್ 30ನೇ ತಾರೀಕಿನಿಂದ ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಪಡೆಯುತ್ತಿದ್ದಾರೆ. ಯೋಜನೆ ಲಾಂಚ್ ಆದ ದಿನವೇ ಅನೇಕ ಜನರಿಗೆ ತಮ್ಮ ಖಾತೆಗೆ ಹಣ ವರ್ಗಾವಣೆ ಆಗುವ ಕುರಿತು SMS ಸಂದೇಶ ಬಂದಿದೆ. ಸರ್ಕಾರದ ಬಳಿ ಇರುವ ಅಂಕಿ ಅಂಶದ ಪ್ರಕಾರ ಈವರೆಗೆ 1.28 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ.
ಸರ್ವರ್ ಸಮಸ್ಯೆ ಹಾಗೂ ಇನ್ನಿತರ ತಾಂತ್ರಿಕ ಸಮಸ್ಯೆಗಳ ಕಾರಣದಿಂದಾಗಿ ಎಲ್ಲರೂ SMS ಸಂದೇಶ ಪಡೆಯಲು ಸಾಧ್ಯವಾಗಿಲ್ಲ, ಕೆಲವರಿಗೆ SMS ಬರದಿದ್ದರೂ ಕೂಡ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಆಗಿದೆ. ಕೋಟ್ಯಂತರ ಮಹಿಳೆಯರು ಯೋಜನೆಗೆ ನೋಂದಾಯಿಸಿದ್ದ ಕಾರಣದಿಂದಾಗಿ ಹಂತ ಹಂತವಾಗಿ ಎಲ್ಲಾ ಅರ್ಹ ಮಹಿಳೆಯರ ಖಾತೆಗೂ ಹಣ ವರ್ಗಾವಣೆ ಮಾಡಲಾಗುವುದು, ಸೆಪ್ಟೆಂಬರ್ 5 ರ ಒಳಗೆ ಎಲ್ಲಾ ಮಹಿಳಾ ಫಲಾನುಭವಿಗಳ ಖಾತೆಗೂ ಕೂಡ ಖಂಡಿತವಾಗಿ ಹಣ ವರ್ಗಾವಣೆ ಆಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Minister Lakshmi Hebbalkar) ಅವರು ತಿಳಿಸಿದ್ದರು.
ಆ ಗಡುವು ಮುಗಿದಿದ್ದರೂ ಕೂಡ ಅನೇಕರಿಗೆ ಈ ಕುರಿತು ಯಾವುದೇ ಸಂದೇಶ ಬಂದಿಲ್ಲ. ಆಗಿದ್ದರೆ ನೀವು ನೇರವಾಗಿ ನಿಮ್ಮ ಬ್ಯಾಂಕ್ ಖಾತೆ ಚೆಕ್ ಮಾಡುವ ಮೂಲಕ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿದೆಯೇ ಇಲ್ಲವೇ ಎನ್ನುವುದನ್ನು (Co firm through Bank transaction details) ದೃಢಪಡಿಸಿಕೊಳ್ಳಬಹುದು. ಆದರೆ ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆಗಳನ್ನು ಹೊಂದಿರುವವರಿಗೆ ತಮ್ಮ ಯಾವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿದೆ ಎನ್ನುವುದರ ಕುರಿತು ಗೊಂದಲ ಆಗಿರುತ್ತದೆ. ಹಾಗಾಗಿ ಈಗ ನಾವು ಹೇಳುವ ಈ ವಿಧಾನವನ್ನು ಪಾಲಿಸಿ, ನೀವು ನಿಮ್ಮ ಯಾವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗುತ್ತದೆ ಎನ್ನುವುದನ್ನು ಪತ್ತೆ ಹಚ್ಚಬಹುದು.
● ಮೊದಲಿಗೆ ನೀವು UIDAIನ ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಡಿ
Check Aadhar / Bank Seeding status ಎನ್ನುವ ಆಪ್ಶನನ್ನು ಕ್ಲಿಕ್ ಮಾಡಿ.
● ನಿಮ Aadhar num. ಹಾಕಿ ಅಲ್ಲಿರುವ Captcha code ಹಾಕಲು ತಿಳಿಸಲಾಗುತ್ತದೆ, ಅದನ್ನು ಪೂರ್ತಿಗೊಳಿಸಿ Send OTP ಎಂದು ಕ್ಲಿಕ್ ಮಾಡಿ.
● ಕೂಡಲೇ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಒಂದು OTP ಹೋಗುತ್ತದೆ, ಅದನ್ನು ಚೆಕ್ ಮಾಡುವಂತೆ ಪಾಪ್ ಆಫ್ ಮೆಸೇಜ್ ಕೂಡ ಬರುತ್ತದೆ.
● OTP ಸಂಖ್ಯೆಯನ್ನು ನಮೂದಿಸಿ Submit ಕೊಡಿ.
ಆಧಾರ್ ಬ್ಯಾಂಕಿಂಗ್ ಸೀಡಿಂಗ್ ಸ್ಟೇಟಸ್ ಡೀಟೇಲ್ ಇರುವ ಪೇಜ್ ಓಪನ್ ಆಗುತ್ತದೆ.
● ಅದರಲ್ಲಿ Bank Seeding status ಎಂದು ಇರುವುದನ್ನು ನೋಡಿ ಅದರಲ್ಲಿ Active ಎಂದು ಇರಬೇಕು. ಆಗ ನಿಮ್ಮ ಯಾವ ಬ್ಯಾಂಕ್ ಖಾತೆ ಆಗಿದೆ ಮತ್ತು ಯಾವ ದಿನಾಂಕದಂದು ಲಿಂಕ್ ಆಗಿದೆ ಎನ್ನುವ ಮಾಹಿತಿ ಕೂಡ ಅದರ ಕೆಳಗೆ ನೀಡಲಾಗಿರುತ್ತದೆ. ಅದೇ ಬ್ಯಾಂಕ್ ಖಾತೆಗೆ ಸರ್ಕಾರದ ವತಿಯಿಂದ ಬರುವ ಎಲ್ಲಾ ಯೋಜನೆಗಳ ಹಣವು ವರ್ಗಾವಣೆ ಆಗಿರುತ್ತದೆ. ನೇರವಾಗಿ ಅದೇ ಬ್ಯಾಂಕ್ ಗೆ ಭೇಟಿ ಕೊಡುವ ಮೂಲಕ ನಿಮ್ಮ ಪಾಸ್ ಬುಕ್ ವಿವರವನ್ನು ಪರಿಶೀಲಿಸಿ ಧೃಡಪಡಿಸಿಕೊಳ್ಳಬಹುದು.