Sunday, May 28, 2023
HomeJob Newsಭಾರತೀಯ ಆಹಾರ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ, ಯಾವುದೇ ಪರೀಕ್ಷೆ ಇಲ್ಲ ನೇರ ನೇಮಕಾತಿ, ವೇತನ...

ಭಾರತೀಯ ಆಹಾರ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ, ಯಾವುದೇ ಪರೀಕ್ಷೆ ಇಲ್ಲ ನೇರ ನೇಮಕಾತಿ, ವೇತನ 60 ಸಾವಿರ ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!

ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ತನ್ನಲ್ಲಿ ಖಾಲಿ ಇರುವ ಹಲವು ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಕರ್ನಾಟಕದಾದ್ಯಂತ ಇರುವ ಎಲ್ಲಾ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕಾಗಿ ಭಾರತೀಯ ಆಹಾರ ನಿಗಮ ಅಧಿಸೂಚನೆ ಕೂಡ ಹೊರಡಿಸಿದ್ದು, ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಮೊದಲು ಅಧಿಸೂಚನೆಗಳಿರುವ ಅಂಶಗಳನ್ನು ಅರ್ಥೈಸಿಕೊಂಡು ಆ ಪ್ರಕಾರವಾಗಿ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿ ಹೊಂದಿದ್ದರೆ ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಈ ಅಂಕಣದಲ್ಲೂ ಸಹ ಹುದ್ದೆಗಳಿಗೆ ಸಂಬಂಧಪಟ್ಟ ಹಾಗೆ ವಿವರ, ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಪ್ರಕ್ರಿಯೆ, ಬೇಕಾಗುವ ದಾಖಲೆಗಳು ಮತ್ತು ವಯೋಮಿತಿ, ನೀಡಿರುವ ವಯೋಮಿತಿ ಸಡಿಲಿಕೆ ಹಾಗೂ ಪ್ರಮುಖ ದಿನಾಂಕಗಳ ಬಗ್ಗೆ ತಿಳಿಸಿಕೊಡಲಾಗಿದೆ. ಹೆಚ್ಚಿನ ಮಾಹಿತಿ ಬೇಕಾದಲ್ಲಿ fci ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಮಾಹಿತಿ ತಿಳಿದುಕೊಳ್ಳಬಹುದು.

ನೇಮಕಾತಿ ಸಂಸ್ಥೆ:- ಭಾರತೀಯ ಆಹಾರ ನಿಗಮ.
ಒಟ್ಟು ಹುದ್ದೆಗಳ ಸಂಖ್ಯೆ:- 46.
ಉದ್ಯೋಗ ಸ್ಥಳ:- ಭಾರತದಾತ್ಯಂತ…
ಹುದ್ದೆಗಳು:- ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳು.

ಹುದ್ದೆಗಳ ವಿವರ:-
● ಸಹಾಯಕ ಜನರಲ್ ಮ್ಯಾನೇಜರ್ (CE).
● ಸಹಾಯಕ ಜನರಲ್ ಮ್ಯಾನೇಜರ್ (EM).

ವೇತನ ಶ್ರೇಣಿ:- ಭಾರತೀಯ ಆಹಾರ ನಿಗಮದ ಅಧಿಕೃತ ಅಧಿಸೂಚನೆ ಪ್ರಕಾರ ಈ ಮೇಲ್ಕಂಡ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ರೂ.60,000 ದಿಂದ 1,80,000 ಪ್ರತಿ ತಿಂಗಳು ವೇತನ ಸಿಗಲಿದೆ.

ವಯೋಮಿತಿ:-
● ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳನ್ನು ಪೂರೈಸಬೇಕು.
● ಗರಿಷ್ಠ 28 ವರ್ಷಗಳನ್ನು ಮೀರಿರಬಾರದು.

ವಯೋಮಿತಿ ಸಡಿಲಿಕೆ:-
● OBC ಅಭ್ಯರ್ಥಿಗಳಿಗೆ 3 ವರ್ಷಗಳು.
● SC/ST ಅಭ್ಯರ್ಥಿಗಳಿಗೆ 5 ವರ್ಷಗಳು.

ಅರ್ಹತೆಗಳು:-
ಶೈಕ್ಷಣಿಕ ಅರ್ಹತೆಯಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ, 12ನೇ ತರಗತಿ ಅಥವಾ ಅದಕ್ಕೆ ತತ್ಸಮಾನವಾದ ತರಗತಿಯನ್ನು ಉತ್ತೀರ್ಣರಾಗಿರಬೇಕು.

ಅರ್ಜಿ ಸಲ್ಲಿಸುವ ವಿಧಾನ:- ಆನ್ಲೈನ್ ಮೂಲಕ…
● ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ಫಾರಂ ಭರ್ತಿ ಮಾಡಿ ಕೇಳಲಾದ ಅಗತ್ಯ ದಾಖಲೆಗಳ ಪ್ರತಿಗಳನ್ನು ಕೂಡ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
ಅರ್ಜಿ ಸಲ್ಲಿಕೆ ಪೂರ್ತಿಗೊಂಡ ಬಳಿಕ ಅರ್ಜಿ ಸಲ್ಲಿಕೆ ಆದ ಫಾರಂ ಅನ್ನು ಭವಿಷ್ಯದ ಬಳಕೆ ಉದ್ದೇಶದಿಂದ ಪ್ರಿಂಟ್ ಔಟ್ ತೆಗೆದು ಇಟ್ಟುಕೊಳ್ಳಬೇಕು.

ಅರ್ಜಿ ಶುಲ್ಕ:-
● UR / ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ.
● SC/ST ಮತ್ತು ಮಹಿಳಾ ಅಭ್ಯರ್ಥಿಗಳಿಗೂ ಕೂಡ ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ.
● ಉಳಿದ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ಸೂಚಿಸಿರುವಷ್ಟು ಅರ್ಜಿಶುಲ್ಕವನ್ನು ಕ್ರೆಡಿಟ್ ಕಾರ್ಡ್ ಡೆಬಿಟ್ ಕಾರ್ಡ್ ಅಥವಾ ಆನ್ಲೈನ್ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಬಹುದು.

ಆಯ್ಕೆ ವಿಧಾನ:-
● ದೈಹಿಕ ಪರೀಕ್ಷೆ
● ಲಿಖಿತ ಪರೀಕ್ಷೆ
● ಸಂದರ್ಶನ
●ದಾಖಲೆಗಳ ಪರಿಶೀಲನೆ.

ದೈಹಿಕ ಪರೀಕ್ಷೆಯಲ್ಲಿ ಕೇಳಲಾಗುವ ಅರ್ಹತೆ:-
● ಪುರುಷ ಅಭ್ಯರ್ಥಿಗಳು165cm
● ಮಹಿಳಾ ಅಭ್ಯರ್ಥಿಗಳು 155cm
● ಉತ್ತರ ಭಾರತ ವಲಯದ ಪುರುಷ ಅಭ್ಯರ್ಥಿ 162 cm
● ಉತ್ತರ ಭಾರತ ವಲಯದ ಮಹಿಳಾ ಅಭ್ಯರ್ಥಿಗಳ 150cm

ವೆಬ್ ಸೈಟ್ ವಿಳಾಸ:- www.fci.gov.in

ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 03, ಏಪ್ರಿಲ್ 2023.
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 31, ಮೇ 2023.