ಕೇಂದ್ರ ಸರ್ಕಾರದ ವತಿಯಿಂದ ದೇಶದ ರೈತರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಅದೇನೆಂದರೆ ರೈತರಿಗೆ ರಸಗೊಬ್ಬರಗಳ ಮೇಲೆ ಸಬ್ಸಿಡಿ ಕೊಡುವ ಕುರಿತು ಬುಧವಾರ ನಡೆದ ಕ್ಯಾಬಿನೆಟ್ ಅಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದೆ ಎನ್ನುವುದನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆ ಸಚಿವ ಮನ್ಸುಖ್ ಮಾಂಡವಿಯ ರವರೇ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಪ್ರತಿ ವರ್ಷವೂ ಕೂಡ ರೈತರಿಗಾಗಿ ಈ ರೀತಿಯ ಹಲವು ಯೋಜನೆಗಳನ್ನು ಜಾರಿಗೆ ತರುತ್ತಲಿದೆ. ಈಗಾಗಲೇ ಹಲವು ಬಾರಿ ಇದೇ ರೀತಿ ರಸಗೊಬ್ಬರಗಳ ಮೇಲೆ ಸಬ್ಸಿಡಿ ನೀಡಿದೆ, ಮತ್ತೊಮ್ಮೆ 2023-24 ಸಾಲಿನಲ್ಲಿ ಖಾರಿಫ್ ಬೆಳೆ ಬೆಳೆಯುವ ರೈತರಿಗೆ ಈ ಅನುಕೂಲತೆ ಮಾಡಿಕೊಡಲು ನಿರ್ಧರಿಸಿದೆ.
ದೇಶದಲ್ಲಿ ರೈತರಿಗೆ ಈ ಖಾರಿಫ್ ಸೀಸನ್ ಬಹಳ ಮುಖ್ಯ. ಈ ಸಮಯದಲ್ಲಿ ದೇಶದಾದ್ಯಂತ ಎಲ್ಲಾ ಭಾಗಗಳಲ್ಲೂ ಕೂಡ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಚಟುವಟಿಕೆ ಬೆಳೆಯುತ್ತವೆ. ಉತ್ತಮ ಇಳುವರಿಯನ್ನು ಪಡೆಯಲು ಎಲ್ಲರೂ ಕೂಡ ಈಗ ರಸಗೊಬ್ಬರಗಳ ಮೊರೆ ಹೋಗುತ್ತಿರುವುದರಿಂದ ಸಹಜವಾಗಿ ರಸಗೊಬ್ಬರಗಳ ಬೇಡಿಕೆ ಹೆಚ್ಚಾಗುತ್ತದೆ. ಈ ಸಮಯದಲ್ಲಿ ರಸಗೊಬ್ಬರಗಳ ಬೆಲೆ ಅಧಿಕವಾಗಬಹುದು ಮತ್ತು ಗುಣಮಟ್ಟ ಕುಸಿಯಬಹುದು.
ಆದ್ದರಿಂದ ಸರ್ಕಾರವು ಇಂತಹ ಸಮಯಗಳಲ್ಲಿ ರೈತಸ್ನೇಹಿ ನಿರ್ಧಾರವನ್ನು ತೆಗೆದುಕೊಂಡು ರಸಗೊಬ್ಬರಗಳ ಬೆಲೆಯನ್ನು ಸಬ್ಸಿಡಿ ನೀಡುವ ಮೂಲಕ ಈ ಹೊರೆಯನ್ನು ಕೊಂಚ ನಿಯಂತ್ರಿಸುವ ಕೆಲಸವನ್ನು ಮಾಡುತ್ತಿದೆ. ರಸಗೊಬ್ಬರಗಳ ಬೆಲೆ ನಿಯಂತ್ರಣ ಮತ್ತು ಉತ್ತಮ ಗುಣಮಟ್ಟದ ರಸ ಗೊಬ್ಬರಗಳನ್ನು ರೈತರಿಗೆ ಅವಶ್ಯಕವಾದ ಸಮಯದಲ್ಲಿ ತಲುಪಿಸಲು ಕೇಂದ್ರ ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಮತ್ತು ಇದಕ್ಕಾಗಿ ಈ ಬಾರಿಯ ಖಾರಿಫ್ ಸೀಸನ್ನ ಅಲ್ಲಿ ಒಟ್ಟಾರೆಯಾಗಿ ರಸಗೊಬ್ಬರಗಳ ಮೇಲೆ 1.08 ಲಕ್ಷ ಕೋಟಿ ಗಳನ್ನು ಸಬ್ಸಿಡಿ ನೀಡುತ್ತಿದೆ. ಎನ್ನುವುದನ್ನು ಸಹ ಸಚಿವರು ತಿಳಿಸಿದ್ದಾರೆ. ಏಪ್ರಿಲ್ ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಸರಿಸುಮಾರು 12 ಕೋಟಿಗೂ ಹೆಚ್ಚಿನ ರೈತರು ರಸಗೊಬ್ಬರಗಳ ಖರೀದಿಗೆ ಮುಂದಾಗುತ್ತಾರೆ. ಮಾರ್ಕೆಟ್ಗಳಲ್ಲಿ ರಸಗೊಬ್ಬರಗಳ ಬೆಲೆಯು, ಈಗ ಒಂದು ಚೀಲ ಯೂರಿಯಾ 276 ರೂಪಾಯಿ ಇದ್ದರೆ, DAP ಗೆ 1,350 ರೂಪಾಯಿ ಇದೆ
ಸರ್ಕಾರವು ಯೂರಿಯ ಮೇಲೆ 70,000 ಕೋಟಿ ಮತ್ತು DAP ಮೇಲೆ 38,000 ಕೋಟಿ ಸಬ್ಸಿಡಿ ನೀಡಲು ಮುಂದಾಗಿದೆ. ಇದರಿಂದ ರೈತರು ಅದೇ ಬೆಲೆಗೆ ರಸಗೊಬ್ಬರಗಳನ್ನು ಖರೀದಿಸಿದರು ಸಬ್ಸಿಡಿ ಹಣ ನಂತರ ಅವರ ಖಾತೆಗಳಿಗೆ ಜಮೆ ಆಗುತ್ತದೆ. ಆದರೆ ನೇರವಾಗಿ MRP ಗಳ ಬೆಲೆಯಲ್ಲಿ ವ್ಯತ್ಯಾಸವನ್ನು ಮಾಡಲಾಗುವುದಿಲ್ಲ ಎನ್ನುವುದನ್ನು ಕೂಡ ಸಚಿವರು ಸ್ಪಷ್ಟಪಡಿಸಿದ್ದಾರೆ.
ಈ ನೀತಿಯಿಂದ ನ್ಯಾಯಯುತವಾದ ಬೆಲೆಯಲ್ಲಿ ಮತ್ತು ಸಮಂಜಕರವಾದ ರೀತಿಯಲ್ಲಿ ದೇಶದ ಎಲ್ಲ ರೈತರಿಗೂ ಕೂಡ ರಸಗೊಬ್ಬರವು ಸರಿಯಾದ ಸಮಯಕ್ಕೆ ಸಿಗಲಿದೆ ಮತ್ತು ಗುಣಮಟ್ಟವು ಕೂಡ ಉತ್ತಮವಾಗಿರಲಿದೆ ಎನ್ನುವುದು ಜನಾಭಿಪ್ರಾಯ. ಸರಕಾರದ ಈ ಸಬ್ಸಿಡಿ ನೀತಿಯು DAP, ಪೊಟ್ಯಾಶಿಕ್ ಮತ್ತು ಇತರ ಪಾಸ್ಫೇಟಿಕ್ ರಸಗೊಬ್ಬರ ಮೇಲೆ ಅನ್ವಯ ಆಗಲಿದೆ. ಸಚಿವ ಸಂಪುಟದ ಈ ನಿರ್ಧಾರವು ದೇಶದ ಎಲ್ಲ ರೈತರ ಮುಖದಲ್ಲೂ ಕೂಡ ಸಂತಸ ಮೂಡಿಸಿದೆ ಸರ್ಕಾರದ ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ಕಾಮೆಂಟ್ ಮಾಡಿ ತಿಳಿಸಿ.