Sunday, May 28, 2023
HomeNewsಜೂನ್ 14ರ ಒಳಗೆ ನಿಮ್ಮ ಆಧಾರ್ ಮಾಹಿತಿಯನ್ನು ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಿ, ಇಲ್ಲದಿದ್ರೆ ಶುಲ್ಕ ನೀಡಬೇಕಾಗುತ್ತದೆ...

ಜೂನ್ 14ರ ಒಳಗೆ ನಿಮ್ಮ ಆಧಾರ್ ಮಾಹಿತಿಯನ್ನು ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಿ, ಇಲ್ಲದಿದ್ರೆ ಶುಲ್ಕ ನೀಡಬೇಕಾಗುತ್ತದೆ…

ಆಧಾರ್ ಕಾರ್ಡ್ ಹೊಂದಿರುವವರಿಗೆ ಎಲ್ಲರಿಗೂ ಕೂಡ ಇದು ಬಹು ಮುಖ್ಯವಾದ ಸುದ್ದಿಯಾಗಿದೆ. ಯಾಕೆಂದರೆ ಆಧಾರ್ ಕಾರ್ಡ್ ಜಾರಿಗೆ ಬಂದು 10 ವರ್ಷಗಳಿಗಿಂತಲೂ ಹೆಚ್ಚು ಸಮಯವಾಯಿತು. ಇಂಥಹ ಸಮಯದಲ್ಲಿ ಆಧಾರ್ ಕುರಿತು UIDAI ಸಂಸ್ಥೆ ಆಧಾರ್ ಗ್ರಾಹಕರಿಗೆ ಪ್ಲಮುಖ ಸುದ್ದಿಯೊಂದನ್ನು ಅನೌನ್ಸ್ ಮಾಡಿದೆ. ಕಳೆದ ಹತ್ತು ವರ್ಷಗಳಿಂದ ಯಾರು ಒಮ್ಮೆ ಕೂಡ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಿಲ್ಲ ಅಂತವರು ಕಡ್ಡಾಯವಾಗಿ ಜೂನ್ 14ರ ಒಳಗೆ ಅಪ್ಡೇಟ್ ಮಾಡಿಸಬೇಕು ಎಂದು ಹೇಳಿದೆ.

ಈಗ ಆನ್ಲೈನ್ ಮೂಲಕ ಮೈ ಆಧಾರ್ ಪೋರ್ಟಲ್ ಸೇವೆಗೆ ಹೋಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವವರಿಗೆ ಇದನ್ನು ಉಚಿತವಾಗಿ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅಪ್ಡೇಟ್ ಮಾಡಿಸುವುದಕ್ಕಾಗಿ ಭಾರಿ ಶುಲ್ಕ ಪಾವತಿಸಬೇಕಾಗುತ್ತದೆ.

ನಿವಾಸಿಗಳು ತಮ್ಮ ಜನಸಂಖ್ಯೆ ವಿವರಗಳನ್ನು ಮರು ಮೌಲ್ಯೀಕರಿಸಲು ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಅದರಲ್ಲಿ ಬದಲಾವಣೆಗಳಿದ್ದರೆ ಈಗ ಬದಲಿಸಿಕೊಳ್ಳಲು ಅವಕಾಶ ನೀಡಿದೆ. ಇದರೊಂದಿಗೆ ಹುಟ್ಟಿದ ದಿನಾಂಕ ಅಥವಾ ಹೆಸರುಗಳಲ್ಲಿರುವ ಲಿಪ್ಯಂತಕರಣ ದೋಷ ಇನ್ನು ಮುಂತಾದ ಯಾವುದೇ ಮಾಹಿತಿಯಲ್ಲಿ ಸಮಸ್ಯೆಗಳು ಇದ್ದರೂ ಕೂಡ ಇವುಗಳನ್ನು ಸರಿಪಡಿಸಿಕೊಳ್ಳಲು ಇದು ಸಕಾಲ.

ಯಾಕೆಂದರೆ ಈಗ ಆನ್ಲೈನಲ್ಲಿ ಮೈ ಆಧಾರ್ ಪೋರ್ಟಲ್ ಮೂಲಕ ಇದನ್ನು ಉಚಿತವಾಗಿ ಮಾಡಿಕೊಳ್ಳಬಹುದು. ಕಳೆದ ಹತ್ತು ವರ್ಷಗಳಿಂದ ಒಂದು ಬಾರಿ ಕೂಡ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳದವರಿಗೆ ಮಾತ್ರ ಇದು ಉಚಿತವಾಗಿ ಸಿಗಲಿದೆ. ಸುಧಾರಿತ ಜೀವನ, ಉತ್ತಮ ಸೇವೆ ವಿತರಣೆ ಮತ್ತು ಧೃಡೀಕರಣದ ಯಶಸ್ಸಿನ ಪ್ರಮಾಣವನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ ಎನ್ನುವುದನ್ನು UIDAI ಸಂಸ್ಥೆ ಹೇಳುತ್ತಿದೆ.

ಆದರೆ ಈ ಅಪ್ಡೇಟ್ ಅನ್ನು ಭೌತಿಕವಾಗಿ ಆಧಾರ್ ಕೇಂದ್ರಗಳಿಗೆ ಹೋಗಿ ಮಾಡಿಸುವವರು 50ರೂ. ಶುಲ್ಕ ಪಾವತಿಸಲೇಬೇಕುಹ ಹಾಗಾಗಿ ಆನ್ಲೈನಲ್ಲಿ ಮೈ ಆಧಾರ್ ಪೋರ್ಟಲ್ ಮೂಲಕ ಇದನ್ನು ಹೇಗೆ ಅಪ್ಡೇಟ್ ಎನ್ನುವ ಮಾಹಿತಿಯನ್ನು ತಿಳಿದುಕೊಳ್ಳಿ.

● ಮೊದಲಿಗೆ ಆಧಾರ್ ಅಪ್ಡೇಟ್ ಮಾಡಲು ಬಯಸುವ ನಿವಾಸಿಗಳು https://myaadhaar.uidai.gov.in ಲಾಗಿನ್ ಮಾಡಬೇಕು.
● ವಿಳಾಸವನ್ನು ನವೀಕರಿಸುವುದಾದರೆ ಮುಂದುವರೆಯಲಿ ಎನ್ನುವ ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿ.
● ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಂದು OTP ಬರುತ್ತದೆ, ಅದನ್ನು ನಮೂದಿಸಿ.
● ಡಾಕ್ಯುಮೆಂಟ್ ಅಪ್ಡೇಟ್ ಎನ್ನುವ ಆಪ್ಶನ್ ಕಾಣುತ್ತೆ ಅದನ್ನು ಕ್ಲಿಕ್ ಮಾಡಿದಾಗ ನಿವಾಸಿಯ ಅಸ್ತಿತ್ವದಲ್ಲಿರುವ ವಿವರಗಳು ಬರುತ್ತದೆ.

● ನಿವಾಸಿಗಳು ವಿವರಗಳನ್ನು ನೋಡಿ ಸರಿಯಾಗಿದ್ದರೆ ಮುಂದೆ ಇರುವ ಹೈಪರ್ ಲಿಂಕ್ ಅನ್ನು ಕ್ಲಿಕ್ ಮಾಡಿ
ಮುಂದಿನ ಸ್ಕ್ರೀನ್ ಮೇಲೆ ಡ್ರಾಪ್ ಡೌನ್ ಪಟ್ಟಿಯಿಂದ ಗುರುತಿನ ಪುರಾವೆ ಮತ್ತು ವಿಳಾಸದ ದಾಖಲೆಗಳನ್ನು ಆಯ್ಕೆ ಮಾಡಬೇಕು.
● ವಿಳಾಸದ ಪುರಾವೆಯನ್ನು ಸ್ಕ್ಯಾನ್ ಮಾಡಿ ಆ ಪ್ರತಿಯನ್ನು ಅಪ್ಲೋಡ್ ಮಾಡಿ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ.
● ದಾಖಲೆಗಳನ್ನು ನವೀಕರಿಸಲು ಅದರ ಪ್ರತಿಗಳನ್ನು ಕೂಡ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.

● ಅಪ್ಡೇಟ್ ವಿನಂತಿಯನ್ನು ಸ್ವೀಕರಿಸಲಾಗುತ್ತದೆ. ಮತ್ತು 14 ಅಂಕಿಗಳ ಅಪ್ಡೇಟ್ ವಿನಂತಿ ಸಂಖ್ಯೆಯನ್ನು ಕೂಡ (URN) ರಚಿಸಿ ನೀಡಲಾಗುತ್ತದೆ.
● ಈ URN ಸಂಖ್ಯೆ ಬಳಸಿಕೊಂಡು ನೀವು ನಿಮ್ಮ myaadhaar ಪೋರ್ಟಲ್ ಮೂಲಕ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು. ಅಪ್ಡೇಟ್ ಆದ ನಂತರ ಅದರ ಪ್ರಿಂಟ್ ಔಟ್ ಕೂಡ ಪಡೆದುಕೊಳ್ಳಬಹುದು.