ಆರ್ಥಿಕ ಸಮಸ್ಯೆಯ ಕಾರಣದಿಂದಾಗಿ ವಿದ್ಯಾರ್ಥಿಗಳ ಓದುವ ಕನಸು ಅದಕ್ಕೆ ನಿಲ್ಲಬಾರದು ಎನ್ನುವ ಕಾರಣಕ್ಕಾಗಿ ಸರ್ಕಾರ ಉಚಿತ ಶಾಲಾ ಕಾಲೇಜುಗಳನ್ನು ತೆರೆದು ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಅನುಕೂಲತೆ ಮಾಡಿಕೊಡುತ್ತಿದೆ. ಇದರ ಜೊತೆಗೆ ಉಚಿತ ಸಮವಸ್ತ್ರ ಪಠ್ಯಪುಸ್ತಕ ಮತ್ತು ಸ್ಕಾಲರ್ಶಿಪ್ ಕೂಡ ನೀಡುತ್ತಿದೆ. ಇದರ ಜೊತೆಗೆ ದೇಶದ ಪ್ರತಿಷ್ಠಿತ ಸಂಸ್ಥೆಗಳು ಕೂಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡುವ ಮೂಲಕ ಆರ್ಥಿಕ ಸಹಾಯ ಮಾಡಿ ಪುರಸ್ಕರಿಸುತ್ತಿವೆ.
ಕೆಲ ವಿದ್ಯಾರ್ಥಿಗಳ ಸಂಪೂರ್ಣ ಶೈಕ್ಷಣಿಕ ಶುಲ್ಕವನ್ನು ಕೂಡ ಭರಿಸುತ್ತಿವೆ. ಹಾಗೆಯೇ ಧಾರವಾಡದಲ್ಲಿರುವ ವಿದ್ಯಾ ಪೋಷಕ್ ಎನ್ನುವ ಸರ್ಕಾರೇತರ NGO ಸಂಸ್ಥೆ ಕೂಡ 2024-25ನೇ ಸಾಲಿನಲ್ಲಿ ಹತ್ತನೇ ತರಗತಿ, ಪಿಯುಸಿ, ಪದವಿ ಮತ್ತು ಸ್ನಾತಕೋತರ ಪದವಿ ಹಾಗೂ ವೃತ್ತಿಪರ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನ ಮಾಡಿದೆ. ಆಸಕ್ತರು ಅರ್ಜಿ ಕಲಿಸಬಹುದು ಅರ್ಹ ವಿದ್ಯಾರ್ಥಿಗಳ ಖಾತೆಗೆ ಸ್ಕಾಲರ್ಶಿಪ್ ಹಣ ನೇರ ವರ್ಗಾವಣೆಯಾಗಲಿದೆ.
ವಿದ್ಯಾ ಪೋಷಕ ಸ್ಕಾಲರ್ಶಿಪ್ ಪಡೆಯಲು ವಿದ್ಯಾರ್ಥಿಗಳಿಗೆ ಇರಬೇಕಾದ ಅರ್ಹತೆಗಳು:-
● ಹಿಂದಿನ ವರ್ಷದ ತರಗತಿಯಲ್ಲಿ ಶೇ. 85% ಅಂಕ ಪಡೆದಿರಬೇಕು.
● ಸರ್ಕಾರಿ ಶಾಲೆಗಳಲ್ಲಿ ಓದಿದ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಆದ್ಯತೆ.
ಅರ್ಜಿಯನ್ನು ಸಲ್ಲಿಸಲು ಬೇಕಾದ ದಾಖಲೆಗಳು:-
● ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಪಾಸಾದ ಮಾರ್ಕ್ಸ್ ಕಾರ್ಡ್ ಫೋಟೋ
● ನಿಮ್ಮ ಮನೆಯ ಇತ್ತೀಚಿನ ವಿದ್ಯುತ್ ಬಿಲ್ ಫೋಟೋ
● ಪಡಿತರ ಚೀಟಿ ಫೋಟೋ
● ಅರ್ಜಿದಾರರ ಕುಟುಂಬ ಗಳಿಸುವ ಸದಸ್ಯರ ಬ್ಯಾಂಕ್ ಪಾಸ್‌ಬುಕ್ 1 ನೇ ಪುಟ ಮತ್ತು 6 ತಿಂಗಳ ವಹಿವಾಟಿನ ಪುಟ ಫೋಟೋಗಳು.
● ಕುಟುಂಬದ ಆದಾಯ ಪ್ರಮಾಣಪತ್ರ
● ವಸತಿ ಘಟಕದ ಮುಂದೆ ಕುಟುಂಬದ ಫೋಟೋ (ಮನೆಯ ಮುಂದೆ)
● ವಾಸಿಸುವ ಘಟಕದ ಸಂಪೂರ್ಣ ವೀಡಿಯೊವನ್ನು ಮನೆಯ ಹೊರಗೆ ಮತ್ತು ಒಳಗೆ 30 ಸೆಕೆಂಡುಗಳಿಂದ 60 ಸೆಕೆಂಡ್ ವರೆಗೆ ಕವರ್ ಮಾಡಿ ಸಲ್ಲಿಸಬೇಕು.
ಆಯ್ಕೆ ಮಾಡುವ ವಿಧಾನ :-
● ಈ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಯ ಶೈಕ್ಷಣಿಕ ಅರ್ಹತೆ ಮತ್ತು ಅವರ ಆರ್ಥಿಕ ಪರಿಸ್ಥಿತಿಯನ್ನು ಆಧಾರವನ್ನಾಗಿಟ್ಟುಕೊಂಡು ಆಯ್ಕೆ ಮಾಡುತ್ತಾರೆ.
● ವಿದ್ಯಾ ಪೋಷಕ ಸಂಸ್ಥೆ ಪರೀಕ್ಷೆ ನಡೆಸುತ್ತದೆ ಅದರಲ್ಲಿ ಶೇ.70 ಅಂಕ ಪಡೆದವರ ಅರ್ಜಿ ಮಾತ್ರ ಮಾನ್ಯವಾಗುತ್ತದೆ.
ಅರ್ಜಿಯನ್ನು ಸಲ್ಲಿಸುವ ವಿಧಾನ:-
● ಮೊದಲಿಗೆ @ https://www.vidyaposhak.ngo/ ಈ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ.
● ಈ ವೆಬ್‌ಸೈಟ್‌ನಲ್ಲಿನ ಮುಖಪುಟದಲ್ಲಿ ಸ್ಕಾಲರ್ಶಿಪ್ ಅರ್ಜಿಗಳು ಕಾಣಿಸಿಕೊಳ್ಳುತ್ತದೆ. ನಿಮ್ಮ ತರಗತಿಗೆ ಅನುಸಾರವಾಗಿ ಸೆಲೆಕ್ಟ್ ಮಾಡಿಕೊಳ್ಳಿ.
● ವಿದ್ಯಾರ್ಥಿವೇತನ ಅರ್ಜಿ ಆಪ್ಷನ್ ಗೆ ಹೋಗಿ Apply Now ಕ್ಲಿಕ್ ಮಾಡಿ.
● ಹೊಸ ಟ್ಯಾಬ್‌ನಲ್ಲಿ ಪುಟವೊಂದು ತೆರೆದುಕೊಳ್ಳುತ್ತದೆ. ಆ ಪುಟದಲ್ಲಿನ ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಓದಿ ನಂತರ ಕೊನೆಯ ಭಾಗದಲ್ಲಿ “Apply Now” ಕ್ಲಿಕ್ ಮಾಡಿ.
● ಮತ್ತೆ ಹೊಸ ಟ್ಯಾಬ್ ಪುಟವೊಂದು ತೆರೆದುಕೊಳ್ಳುತ್ತದೆ, ಆ ಪುಟದಲ್ಲಿ ಗೂಗಲ್ ಫಾರ್ಮ್ ಇದೆ, ಅದರಲ್ಲಿ ನೀವು ಎಲ್ಲಾ ಸರಿಯಾದ ಮಾಹಿತಿಯನ್ನು ಭರ್ತಿ ಮಾಡಬೇಕು ಮತ್ತು ಅಗತ್ಯವಿರುವ ಈ ಮೇಲೆ ಹೇಳಿದ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
● ಈಗ ಅಧಿಕಾರಿಯು ನಿಮ್ಮ ದಾಖಲೆಗಳನ್ನು ಪರಿಶೀಲಿಸುತ್ತಾರೆ ಮತ್ತು ನೀವು ಅರ್ಹರಾಗಿದ್ದರೆ ನಿಮ್ಮ ವಿದ್ಯಾರ್ಥಿ ವೇತನದ ಮೊತ್ತವು ನೀವು ನೀಡಿದ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಆಗುತ್ತದೆ.
ವಿದ್ಯಾರ್ಥಿ ವೇತನದ ವಿವರ:-
● 10ನೇ ತರಗತಿ – 10,100
● PUC – 15,000
● ಪದವಿ – 20,000
● ಸ್ನಾತಕೋತ್ತರ ಪದವಿ – 25,000
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:-
ದೂ.ಸಂಖ್ಯೆ:- 0836-2747357 (10AM-5PM ನಡುವೆ).