ಕೈಯಲ್ಲಿ ಹಣವಿಲ್ಲ; ನೀರಿನ ಸಮಸ್ಯೆಯನ್ನು ಹೇಗೆ ಬಗೆಹರಿಸಿಕೊಳ್ಳುವುದು ಎಂದು ದಾರಿ ಹುಡುಕುತ್ತಿದ್ದೀರಾ? ಹಾಗಾದರೆ ಗಂಗಾ ಕಲ್ಯಾಣ ಯೋಜನೆಯ ಈ ಉಪಯುಕ್ತ ಮಾಹಿತಿಯನ್ನು ನೀವು ತಿಳಿದುಕೊಳ್ಳಲೇಬೇಕು…! ಸರ್ಕಾರದ 10 ಹಲವು ಯೋಜನೆಗಳು ನೀರಿನ ಸಮಸ್ಯೆಯನ್ನು ಬಗೆಹರಿಸಲೆಂದೇ ಇವೆ. ಅದರಲ್ಲಿ ಗಂಗಾ ಕಲ್ಯಾಣ ಯೋಜನೆಯು ಒಂದು. ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಉಚಿತ ಬೋರ್ವೆಲ್ ಕೊರೆಸುವ ಕಾರ್ಯವನ್ನು ಮಾಡುತ್ತಿದೆ.
ಇದಕ್ಕಾಗಿ ಅರ್ಜಿಯನ್ನು ಸಲ್ಲಿಸಲು ತಿಳಿಸಿದೆ. ಉಚಿತ ಬೋರ್ವೆಲ್ ವ್ಯವಸ್ಥೆಗಾಗಿ ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು ಹಾಗೂ ಯಾವ ಮುಖಾಂತರ ಹೇಗೆ ಅರ್ಜಿಯನ್ನು ಸಲ್ಲಿಸಬೇಕು ಎಂಬುದರ ಕುರಿತಾದ ಸಂಪೂರ್ಣ ಮಾಹಿತಿಯು ಈ ಲೇಖನದಲ್ಲಿ ಇದೆ. ಬೆಳೆಗಳನ್ನು ಬೆಳೆಯುವುದಕ್ಕಾಗಿ, ಕಾರ್ಖಾನೆಗಳನ್ನು ನಡೆಸುವುದಕ್ಕಾಗಿ, ಕುಡಿಯಲು, ಮನೆ ಕಟ್ಟಲು ಹೀಗೆ ಅಧಿಕ ಪ್ರಮಾಣದ ನೀರು ಹಲವಾರು ಕಡೆ ಬೇಕೇ ಬೇಕು. ಆದರೆ ಅಂತರ್ಜಲ ಮಟ್ಟ ಕುಸಿಯುತ್ತಾ ಇರುವುದರಿಂದ ಎಲ್ಲೆಡೆ ನೀರಿನ ಸಮಸ್ಯೆ ಹೆಚ್ಚಾಗಿದೆ.
ಬಾವಿ ತೋಡಿಸಲು ಬೋರ್ವೆಲ್ ತೆಗೆಸಲು ಅಥವಾ ದೊಡ್ಡದಾದ ಕೆರೆ ಅಥವಾ ಗುಂಡಿಯ ನಿರ್ಮಾಣಕ್ಕೂ ಕೂಡ ಹಣದ ಅವಶ್ಯಕತೆ ಇದೆ. ಇದರಿಂದಾಗಿ ಮಧ್ಯಮ ವರ್ಗದ ಜನರು ಕಂಗಾಲಾಗಿ ತಲೆ ಮೇಲೆ ಕೈ ಇಟ್ಟು ಕೂರುವಂತೆ ಆಗಿದೆ. ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು : ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ ಕಾರ್ಡ್, ಸಣ್ಣ ಅಥವಾ ಅತಿ ಸಣ್ಣ ರೈತರ ಎಂಬ ಪ್ರಮಾಣ ಪತ್ರ, ರೇಷನ್ ಕಾರ್ಡ್, ಉತಾರ ಅಥವಾ ಪಹಣಿ ಪತ್ರದ ಅವಶ್ಯಕತೆ ಇರುತ್ತದೆ. ಇವೆಲ್ಲ ದಾಖಲಾತಿಗಳನ್ನು ಜೆಪಿಜೆ ಅಥವಾ ಪಿಡಿಎಫ್ ಫಾರ್ಮಟದಲ್ಲಿ ಸ್ಕ್ಯಾನ್ ಮಾಡಿ ಇಟ್ಟುಕೊಂಡಿರಬೇಕು.
ಉಪ್ಪಾರ ಅಭಿವೃದ್ಧಿ ನಿಗಮ, ಮಡಿವಾಳ ಮತ್ತು ಸವಿತಾ ಕಲ್ಯಾಣ ಅಭಿವೃದ್ಧಿ ನಿಗಮಗಳು ಅರ್ಜಿಯನ್ನು ಕರೆದಿವೆ. ಇನ್ನು ಯಾವುದೇ ಕರ್ನಾಟಕದ ಅಭಿವೃದ್ಧಿ ನಿಗಮಗಳು ಯೋಜನೆಯ ಉಪಯೋಗವನ್ನು ಪಡೆಯಲು ಅರ್ಜಿ ಕರೆದರೆ ಅರ್ಜಿ ಸಲ್ಲಿಸುವ ವಿಧಾನವು ಅಥವಾ ಪ್ರಕ್ರಿಯೆಯು ಒಂದೇ ತರನಾಗಿ ಇರುತ್ತದೆ.
ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಉಚಿತ ಬೋರ್ವೆಲ್ ವ್ಯವಸ್ಥೆಯನ್ನು ಪಡೆಯಲು ಅರ್ಜಿ ಸಲ್ಲಿಸುವ ವಿಧಾನ :
ಮೊದಲಿಗೆ ಸೇವಾ ಸಿಂಧೂರಿನಲ್ಲಿ ಲಾಗಿನ್ ಆಗಿ ತೆರೆದುಕೊಂಡ ಪುಟದ ಬಲ ಮೇಲ್ಭಾಗದಲ್ಲಿ ಇರುವ ಸರ್ಚ್ ನಲ್ಲಿ ಗಂಗಾ ಕಲ್ಯಾಣ ಎಂದು ಟೈಪ್ ಮಾಡಿದ ನಂತರ ಗಂಗಾ ಕಲ್ಯಾಣ ಯೋಜನೆ/ ಜೀವಜಲ ಯೋಜನೆ/ ಜಿಜಾವು ಜಲ ಭಾಗ್ಯ ಯೋಜನೆ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
ನಂತರ ಅಭಿವೃದ್ಧಿ ನಿಗಮವನ್ನು ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ಆಧಾರ್ ಕಾರ್ಡನ್ನು ದೃಢೀಕರಿಸಬೇಕು. ಓಟಿಪಿ ಮುಖಾಂತರ ದೃಢೀಕರಿಸಿ, ವಿವರಗಳನ್ನು ಪಡೆಯಿರಿ. ಅರ್ಜಿ ಸಲ್ಲಿಸಲು ಪಿಎಂ ಕಿಸಾನ್ ಕಾರ್ಡ್ ನ ಬಳಕೆಯಲ್ಲಿ ಸಿಗುವ ಫ್ರೂಟ್ಸ್ ಡಿಪಾರ್ಟ್ಮೆಂಟ್ ನೀಡಿದ ಫಾರ್ಮರ್ ಐಡಿಯನ್ನು ಸಮೀಪದ ರೈತ ಸಂಪರ್ಕ ಕೇಂದ್ರಗಳಿಂದ ಅಥವಾ ಫ್ರೂಟ್ಸ್ ವೆಬ್ಸೈಟ್ ನಿಂದ ಪಡೆದಿಟ್ಟುಕೊಳ್ಳಬೇಕು.
ಬಳಿಕ ಪಹಣಿ ಸಂಖ್ಯೆ, ಜಾತಿ ಹಾಗೂ ಆದಾಯ ಪ್ರಮಾಣ ಪತ್ರದ ವಿವರಗಳು, ವಾಸ ಸ್ಥಳದ ವಿವರಗಳು ಸೇರಿದಂತೆ ಅವರು ಕೇಳಿದ ಎಲ್ಲಾ ಅವಶ್ಯಕ ಮಾಹಿತಿಯನ್ನು ಭರ್ತಿ ಮಾಡಬೇಕು.
ಮೇಲೆ ತಿಳಿಸಿದಂತೆ ಸ್ಕ್ಯಾನ್ ಮಾಡಿರುವ ಎಲ್ಲಾ ದಾಖಲಾತಿ ಪತ್ರಗಳನ್ನು ಬ್ರೌಸ್ ಮಾಡಿ ಅಪ್ಲೋಡ್ ಮಾಡಬೇಕು. ಅರ್ಜಿ ಫಾರಂ ಅನ್ನು ಭರ್ತಿ ಮಾಡಿ ಸಬ್ಮಿಟ್ ಮಾಡಿದ ಬಳಿಕ ತುಂಬಿದ ಅರ್ಜಿ ಪತ್ರವನ್ನು ಪ್ರಿಂಟ್ ಮಾಡಿ ನಿಮ್ಮ ಬಳಿ ಇರಿಸಿಕೊಳ್ಳಿ. ನೀವು ಅರ್ಜಿ ಸಲ್ಲಿಸಿದ ಅಭಿವೃದ್ಧಿ ನಿಗಮಕ್ಕೆ ಈ ಎಲ್ಲಾ ನಿಖರ ಮಾಹಿತಿಯನ್ನು ಹಾಗೂ ದಾಖಲಾತಿ ಪತ್ರಗಳನ್ನು ನೀಡುವ ಮೂಲಕ ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಉಚಿತ ಬೋರ್ವೆಲ್ ವ್ಯವಸ್ಥೆಯನ್ನು ಪಡೆಯಬಹುದು.