ಈ ಬಾರಿ ಕಾಂಗ್ರೆಸ್ ಪಕ್ಷವು ಕರ್ನಾಟಕ ವಿಧಾನಸಭಾ ಎಲೆಕ್ಷನ್ 2023ರಲ್ಲಿ ಸ್ಪಷ್ಟ ಬಹುಮತ ಬೆಂಬಲದೊಂದಿಗೆ ಆಯ್ಕೆ ಆಗಿದೆ. ಕಾಂಗ್ರೆಸ್ ಗೆಲುವಿಗೆ ವರ್ಷದ ಆರಂಭದಿಂದಲೂ ಕಾಂಗ್ರೆಸ್ ಪಕ್ಷವು ಪ್ರಚಾರದ ವೇಳೆ ಹೇಳಿಕೊಂಡು ಬರುತ್ತಿದ್ದ ಪಂಚಖಾತ್ರಿ ಯೋಜನೆಗಳೇ ಕಾರಣ ಎನ್ನುವುದು ಜನಸಾಮಾನ್ಯರ ಅಭಿಪ್ರಾಯ.
ಕಾಂಗ್ರೆಸ್ ಪಕ್ಷವು ಹೇಳಿದ್ದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಭರವಸೆ ಇಟ್ಟು ಕರ್ನಾಟಕದ ನಾಗರಿಕರು ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯವನ್ನು ನಡೆಸುವ ಅಧಿಕಾರವನ್ನು ನೀಡಿದ್ದಾರೆ. ಜನತೆಗೆ ಕೊಟ್ಟಿದ್ದ ಮಾತನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ಕೂಡ ಮುಂದಾಗಿದೆ. ಕಾಂಗ್ರೆಸ್ ಪಕ್ಷವು ಪ್ರಚಾರದ ವೇಳೆ ಬಳಸಿದ್ದ 5 ಯೋಜನೆಗಳ ಗ್ಯಾರಂಟಿ ಕಾರ್ಡುಗಳಿಗೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರೇ ಸಹಿ ಮಾಡಿ ಕೊಟ್ಟಿದ್ದರು.
ಗೃಹಜ್ಯೋತಿ ಯೋಜನೆ ಅಡಿ ಪ್ರತಿ ಕುಟುಂಬಕ್ಕೆ 200 ಯೂನಿಟ್ ವಿದ್ಯುತ್ ಉಚಿತ, ಗೃಹಲಕ್ಷ್ಮಿ ಯೋಜನೆ ಅಡಿ ಕರ್ನಾಟಕದ ಎಲ್ಲಾ ಕುಟುಂಬಗಳ ಒಡತಿಗೆ 2,000 ರೂಪಾಯಿ ಸಹಾಯಧನ, ಯುವ ನಿಧಿ ಯೋಜನೆ ಅಡಿಯಲ್ಲಿ 2022-23ನೇ ಶೈಕ್ಷಣಿಕ ವರ್ಷದಲ್ಲಿ ಪದವಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಎರಡು ವರ್ಷದವರೆಗೆ 3000ರೂ. ಮತ್ತು ಡಿಪ್ಲೊಮೋ ವಿದ್ಯಾರ್ಥಿಗಳಿಗೆ 1,500ರೂ.
ನಿರುದ್ಯೋಗ ಭತ್ಯೆ, ಶಕ್ತಿ ಯೋಜನೆ ಅಡಿಯಲ್ಲಿ ಕರ್ನಾಟಕದ ಎಲ್ಲಾ ಮಹಿಳೆಯರಿಗೂ ಕೂಡ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ ಬಸ್ ಗಳಲ್ಲಿ ಉಚಿತ ಪ್ರಯಾಣ ಮತ್ತು ಅನ್ನಭಾಗ್ಯ ಯೋಜನೆ ಅಡಿ ಎಲ್ಲ ಕುಟುಂಬಗಳಿಗೂ ಕೂಡ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆಯನ್ನು ನೀಡಿತ್ತು ಅಂತೆಯೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಪ್ರಮಾಣವಚನವನ್ನು ಸ್ವೀಕರಿಸಿದ ದಿನವೇ ತಮ್ಮ ಸಚಿವರ ಜೊತೆ ಚರ್ಚಿಸಿ ಇದಕ್ಕೆ ತಾತ್ವಿಕ ಒಪ್ಪಿಗೆಯನ್ನು ಸಹ ನೀಡಿ ಆದೇಶ ಪ್ರತಿ ಹೊರಡಿಸಿದ್ದಾರೆ.
ಪ್ರಚಾರದ ವೇಳೆಯಲ್ಲಿ ಅಧಿಕಾರಕ್ಕೆ ಬಂದ ಒಂದು ವಾರದ ಒಳಗೆ ಐದು ಗ್ಯಾರಂಟಿಗಳನ್ನು ಜಾರಿಗೆ ತರುವ ಬಗ್ಗೆ ಜನತೆಗೆ ಕೊಟ್ಟಿದ್ದ ಮಾತನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಸದ್ಯಕ್ಕೆ ತಾತ್ವಿಕ ಒಪ್ಪಿಗೆ ನೀಡಿದ್ದು ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಕ್ಯಾಬಿನೆಟ್ ಮೀಟಿಂಗ್ ಕರೆಸಿ ಶೀಘ್ರವಾಗಿಯೇ ಇವುಗಳಿಗಿರುವ ಮಾರ್ಗಸೂಚಿ ಮತ್ತು ರೂಪುರೇಷೆಗಳ ಬಗ್ಗೆ ತಿಳಿಸುತ್ತೇವೆ ಎಂದು ಜನತೆಯಲ್ಲಿ ಸಮಯ ಕೇಳಿದ್ದಾರೆ.
ಬಲವಾದ ಮೂಲಗಳ ಪ್ರಕಾರ ಉಚಿತ ಬಸ್ ಪಾಸ್ ವ್ಯವಸ್ಥೆಗೆ ಶೀಘ್ರದಲ್ಲಿಯೇ ಸರ್ಕಾರದಿಂದ ವೆಬ್ಸೈಟ್ ಒಂದು ಬಿಡುಗಡೆ ಆಗಲಿದ್ದು ಆ ವೆಬ್ಸೈಟ್ ಮೂಲಕ ರಿಜಿಸ್ಟರ್ ಆದ ಮಹಿಳೆಯರಿಗೆ ಕರ್ನಾಟಕದಲ್ಲಿ KSRTC, BMTC, ವಾಯುವ್ಯ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡುವ ಚಾನ್ಸ್ ಸಿಗಲಿದೆ. ಇದಕ್ಕಾಗಿ ಸರ್ಕಾರ ಏನೆಲ್ಲಾ ದಾಖಲೆಗಳನ್ನು ಕೇಳಬಹುದು ಅಥವಾ ಫಲಾನುಭವಿಗಳಿಗೆ ಇರಬೇಕಾದ ಅರ್ಹತೆ ಏನು ಎನ್ನುವುದರ ಬಗ್ಗೆ ಗೊಂದಲ ಕೂಡ ಸೃಷ್ಟಿಯಾಗಿದೆ.
ಬಲವಾದ ಮೂಲಗಳ ಪ್ರಕಾರ ಉಚಿತ ಬಸ್ ಪಾಸ್ ಸಿಗಲು ಮಹಿಳೆಯರಿಗಿರುವ ಕಂಡಿಷನ್ ಗಳು ಈ ರೀತಿ ಇರಲಿದೆ.
● ಮಹಿಳೆಯು ಬಿಪಿಎಲ್ ರೇಷನ್ ಕಾರ್ಡ್ ಹೊಂದಿರಬೇಕು
● ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು
● ಪ್ಯಾನ್ ಕಾರ್ಡ್ ಕೂಡ ಹೊಂದಿರಬೇಕು
● ಕರ್ನಾಟಕದ ಮಹಿಳೆಯರಿಗಷ್ಟೇ ಈ ಯೋಜನೆಯ ಫಲಾನುಭವಿಗಳಾಗಲು ಅವಕಾಶ.
● ಯಾವ ಜಾಗದ ಹೆಸರನ್ನು ಹೇಳಿ ರಿಜಿಸ್ಟರ್ ಮಾಡಿಕೊಂಡು ಪಾಸ್ ಪಡೆಯುತ್ತಾರೋ ಆ ಜಾಗದಿಂದ 60 ಕಿಲೋ ಮೀಟರ್ ವರೆಗೆ ಮಾತ್ರ ಉಚಿತ ಪ್ರಯಾಣ ನೀಡುವ ಸಾಧ್ಯತೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.