ಕಾಂಗ್ರೆಸ್ ಪಕ್ಷವು (Congress Party) ಕಳೆದ ವರ್ಷ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆ – 2024ರ (Karnataka Assembly Election – 2024) ಸಂದರ್ಭದಲ್ಲಿ ತಮ್ಮ ಪಕ್ಷ ಬಹುಮತ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿ ಯೋಜನೆಗಳನ್ನು (Gyaranty Schemes) ನೀಡುವುದಾಗಿ ಭರವಸೆ ನೀಡಿತ್ತು.
ಅಂತೆಯೇ ನುಡಿದಂತೆ ನಡೆದು ತಾನು ನೀಡಿದ ಆಶ್ವಾಸನೆಯಂತೆ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ ಹಾಗೂ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ. ಇದರಲ್ಲಿ ಗೃಹಜ್ಯೋತಿ ಯೋಜನೆಯು ಮೊದಲನೇ ಗ್ಯಾರಂಟಿಯಾಗಿ ಘೋಷಣೆಯಾಗಿತ್ತು ಕತ್ತಲು ಮುಕ್ತ ಕರ್ನಾಟಕ ಎನ್ನುವ ಧ್ಯೇಯದೊಂದಿಗೆ ಕರ್ನಾಟಕದ ಪ್ರತಿ ಕುಟುಂಬಕ್ಕೂ 200 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ನೀಡುವ ಭರವಸೆಯಾಗಿ ಜಾರಿಗೆ ಕೂಡ ಬಂದಿದೆ.
ಕಳೆದ ಜುಲೈ ತಿಂಗಳಿನಿಂದಲೂ (July – 2023) ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಜಾರಿಯಲ್ಲಿದ್ದು ತಮ್ಮ ವಿದ್ಯುತ್ ಖಾತೆ ಸಂಖ್ಯೆ ಹಾಗೂ ಆಧಾರ್ ಕೊಟ್ಟು ನೋಂದಾಯಿಸಿಕೊಂಡಿರುವ ಕುಟುಂಬಗಳು ಇಂದು ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿವೆ ಆದರೆ ಇದರಲ್ಲಿ ಒಂದು ಸಣ್ಣ ಟ್ವಿಸ್ಟ್ ಇದೆ.
ಏನೆಂದರೆ, ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ಇದ್ದರೂ ಆ ಕುಟುಂಬಗಳು ಯೋಜನೆ ಜಾರಿ ಆಗುವುದಕ್ಕೂ ಹಿಂದಿನ ಒಂದು ವರ್ಷದಲ್ಲಿ ಎಷ್ಟು ವಿದ್ಯುತ್ ಬಳಕೆ ಮಾಡಿತ್ತು ಅದರ ಸರಾಸರಿಯ ಜೊತೆಗೆ ಕೇವಲ 10% ಪಾತ್ರ ಹೆಚ್ಚು ವಿದ್ಯುತ್ ಉಚಿತವಾಗಿ ಪಡೆಯಲು ಅರ್ಹವಾಗಿವೆ.
ಮತ್ತು ಗೃಹ ಜ್ಯೋತಿ ಯೋಜನೆ ಜಾರಿಯಾದ ಮೇಲೆ ಒಂದು ವೇಳೆ ಈ ಸರಾಸರಿ ವಿದ್ಯುತ್ ಬಳಕೆ ಗಿಂತ ಮತ್ತು ಹೆಚ್ಚುವರಿ 10% ಮೀರಿಯೂ ವಿದ್ಯುತ್ ಬಳಕೆ ಮಾಡಿದ್ದಕ್ಕೆ ಉಚಿತ ಸರಾಸರಿ ಹೊರತುಪಡಿಸಿ ಉಳಿದ ಬಳಕೆಗೆ ವಿದ್ಯುತ್ ಬಿಲ್ ಪಡೆಯುತ್ತಿವೆ.
ಇದುವರೆಗೂ ಯೋಜನೆಯಡಿ 200 ಯೂನಿಟ್ ದಾಟಿ ವಿದ್ಯುತ್ ಬಳಕೆ ಮಾಡಿದ್ದರೂ ಕೂಡ ಕುಟುಂಬ ಸರಾಸರಿಯಾಗಿ ಪಡೆಯಲು ಅರ್ಹರಾಗಿದ್ದ ವಿದ್ಯುತ್ ಬಳಕೆ ಮತ್ತು ಅದರ ಮೇಲೆ 10% ಬಿಟ್ಟು ಉಳಿದ ಹೆಚ್ಚುವರಿ ಬಳಕೆ ಮಾಡಿದಷ್ಟು ವಿದ್ಯುತ್ ಗೆ ಮಾತ್ರ ಬಿಲ್ ನೀಡಲಾಗುತ್ತಿತ್ತು.
ಆದರೆ ಏಪ್ರಿಲ್ 01, 2024ದಿಂದ ರಾಜ್ಯದಾದ್ಯಂತ ಉಚಿತ ವಿದ್ಯುತ್ ಬಳಕೆ ಕುರಿತಾಗಿ ಮಹತ್ವದ ಬದಲಾವಣೆ ಆಗುತ್ತಿದೆ. ಸ್ವತಃ ಇಂಧನ ಇಲಾಖೆಯೇ ಸಂದರ್ಭವನ್ನು ವಿವರಿಸಿ ಇದಕ್ಕೆ ಉತ್ತರಿಸಿದೆ. ಇಲಾಖೆ ಅಧಿಕಾರಿಗಳೊಬ್ಬರು ನೀಡಿದ ಮಾಹಿತಿ ಪ್ರಕಾರವಾಗಿ ಬೇಸಿಗೆ ಸಮೀಪವಾಗುತ್ತಿರುವುದರಿಂದ ಹೆಚ್ಚು ವಿದ್ಯುತ್ ಬಳಕೆ ಆಗುತ್ತಿದೆ ಇದೇ ಸಂದರ್ಭದಲ್ಲಿ ಈ ವರ್ಷ ಮಳೆ ಕೊರತೆ ಆಗಿರುವ ಕಾರಣದಿಂದಾಗಿ ವಿದ್ಯುತ್ ಉತ್ಪಾದನೆ ಸಂಕಷ್ಟದ ಪರಿಸ್ಥಿತಿಯಲ್ಲಿದೆ.
ಇದನ್ನು ಸದ್ಯದ ಮಟ್ಟಿಗೆ ಸರಿದೂಗಿಸುವ ಕಾರಣದಿಂದಾಗಿ ಇನ್ನು ಮುಂದೆ ಒಂದು ವೇಳೆ ಕುಟುಂಬಗಳು 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸಿದ್ದೇ ಆದರೆ ಪೂರ್ತಿ ವಿದ್ಯುತ್ ಬಳಕೆಗೆ 20% ಹೆಚ್ಚುವರಿಯಾಗಿ ವಿದ್ಯುತ್ ಶುಲ್ಕ ಪಾವತಿ ಮಾಡಬೇಕು ಎನ್ನುವ ಕಂಡೀಶನ್ ಹಾಕಲಾಗಿದೆ.
ಈಗಾಗಲೇ ಫೆಬ್ರವರಿ ತಿಂಗಳಿನ ವಿದ್ಯುತ್ ಬಳಕೆಗೂ ಕೂಡ 200 ಯೂನಿಟ್ ಗಡಿ ಮೀರಿದ ಕುಟುಂಬಗಳು ಪೂರ್ತಿ ಬಿಲ್ ಪಡೆದಿದ್ದಾರೆ, ಇನ್ನು ಮುಂದೆ ಇದೇ ರೀತಿ ಮುಂದುವರೆಯಲಿದೆ ಎನ್ನುವ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ. ಒಂದು ವೇಳೆ ಫಲಾನುಭವಿಗಳು ವಿದ್ಯುತ್ ಬಳಕೆ ನಿಯಂತ್ರಣ ಮಾಡಿದ್ದಲ್ಲಿ ಮತ್ತು ಅವರಿಗೆ ಅರ್ಹವಿರುವ ಸರಾಸರಿ ಒಳಗೆ ಬಳಕೆ ಮಾಡಿದ್ದಲ್ಲಿ ಎಂದಿನಂತೆ ಜೀರೋ ಬಿಲ್ (Zero Bill) ಪಡೆಯಲು ಅರ್ಹರಾಗುತ್ತಾರೆ ಎಂದು ಹೇಳಿದ್ದಾರೆ.