ರೈಲಿನಲ್ಲಿ ಸಂಚಾರ ಮಾಡುವವರಿಗೆ ಸಿಹಿ ಸುದ್ದಿ, ಇನ್ನು ಮುಂದೆ ರೈಲಿನಲ್ಲಿ ಸಿಗಲಿದೆ ಉಚಿತ ಆಹಾರ.! ಪಡೆಯೋದು ಹೇಗೆ ನೋಡಿ

.

ರೈಲು ಸಂಪರ್ಕ ಭಾರತದಂತಹ ಜನಸಂಖ್ಯೆ ಹೆಚ್ಚು ಹೊಂದಿರುವ ದೇಶಗಳಿಗೆ ಒಂದು ಪ್ರಮುಖ ಸಾರಿಗೆ ಸಂಪರ್ಕ. ರೈಲು ಪ್ರಯಾಣವು ಎರಡು ರೀತಿಯಲ್ಲೂ ಕೂಡ ಅನುಕೂಲವಾಗುವಂತಹ ಒಂದು ಸಾರಿಗೆ ವ್ಯವಸ್ಥೆ. ಭಾರತದಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ಅತಿ ಹೆಚ್ಚು ಆದಾಯವನ್ನು ಹೊಂದಿರುವುದೇ ರೈಲು ಇಲಾಖೆ. ಅದಕ್ಕಾಗಿ ಸರ್ಕಾರ ಇದರ ಬಗ್ಗೆ ಹೆಚ್ಚಿನ ಗಮನ ಕೊಡುತ್ತದೆ ಹಾಗೂ ಹಾಗಾಗ ಹೊಸ ಕಾನೂನುಗಳನ್ನು ಕೂಡ ತರುತ್ತಿರುತ್ತದೆ.

ಇನ್ನು ರೈಲು ಪ್ರಯಾಣದ ಬಗ್ಗೆ ಹೇಳುವಂತೆ ಇಲ್ಲ. ಮನೆಯಲ್ಲಿ ಇರುವಂತಹ ಅನುಭವವನ್ನು ರೈಲು ಪ್ರಯಾಣ ನೀಡುತ್ತದೆ. ಈ ಕಾರಣಕ್ಕಾಗಿ ಹೆಚ್ಚಿನ ಜನರು ರೈಲು ಪ್ರಯಾಣವನ್ನು ಬಯಸುತ್ತಾರೆ. ಇದೊಂದೇ ಕಾರಣ ಮಾತ್ರವಲ್ಲ ರೈಲು ಪ್ರಯಾಣವನ್ನು ಇಷ್ಟಪಡಲು, ಮೆಚ್ಚಿಕೊಳ್ಳಲು ಇನ್ನು ಸಾಕಷ್ಟು ಕಾರಣಗಳನ್ನು ಸಹ ನೀಡಬಹುದು.

ರೈಲಿನಲ್ಲಿ ಪ್ರಯಾಣ ಮಾಡುವಾಗ ಆಯಾಸ ಕೂಡ ಕಡಿಮೆ ಇರುತ್ತದೆ. ರೈಲಿನಲ್ಲಿ ಮಲಗಿ ಪ್ರಯಾಣ ಮಾಡಬಹುದಾದ ಅನುಕೂಲತೆ ಕೂಡ ಇರುವುದರಿಂದ ದೂರದ ಊರುಗಳಿಗೆ ಟೂರು ಟ್ರಿಪ್, ಪ್ರಯಾಣ ಹೋಗುವುದಾದರೆ ರೈಲು ಪ್ರಯಾಣ ಉತ್ತಮ. ಜೊತೆಗೆ ಟಿಕೆಟ್ ದರವೂ ಕೂಡ ಕಡಿಮೆ ಇದ್ದು ಪ್ರಯಾಣಿಕರ ಸ್ನೇಹಿ ಆಗಿರುವುದರಿಂದ ಪ್ರತಿನಿತ್ಯ ಶಾಲಾ ಕಾಲೇಜಿಗೆ ಹೋಗುವವರಿಂದ ಹಿಡಿದು ಉದ್ಯೋಗಕ್ಕೆ ಹೋಗುವವರು ಕೂಡ ಅನುಕೂಲವಿದ್ದರೆ ರೈಲು ಪ್ರಯಣದಲ್ಲಿಯೇ ಪ್ರಯಾಣ ಮಾಡಲು ಬಯಸುತ್ತಾರೆ.

ಕುಟುಂಬ ಸಮೇತವಾಗಿ ಮತ್ತೊಂದು ಜಾಗಗಳಿಗೆ ಭೇಟಿ ಕೊಡಬೇಕು ಅಂದಾಗ ರೈಲು ಪ್ರಯಾಣ ತುಂಬಾ ಅಚ್ಚುಕಟ್ಟಾದ ವ್ಯವಸ್ಥೆ. ಉಚಿತ ಶೌಚಾಲಯದ ಸೌಲಭ್ಯದಿಂದ ಹಿಡಿದು ಆಗಾಗ ಭೋಗಿಗಳ ಒಳಗೆ ತಿಂಡಿ ಮಾರುವವರು ಬರುವುದರಿಂದ ಪ್ರಯಾಣಿಕನಿಗೆ ಯಾವುದಕ್ಕೂ ಚಿಂತೆ ಇರುವುದಿಲ್ಲ. ಈ ಎಲ್ಲಾ ಕಾರಣಗಳಿಂದಲೂ ಕೂಡ ರೈಲು ಪ್ರಯಾಣ ಅತ್ಯುತ್ತಮ.

ಆಹಾರದ ವ್ಯವಸ್ಥೆ ಬಗ್ಗೆ ಇನ್ನು ಮುಂದೆ ರೈಲು ಪ್ರಯಾಣಿಕರಿಗೆ ಇನ್ನು ಹೆಚ್ಚಿನ ಅನುಕೂಲತೆ ಸಿಗಲಿದೆ. ಯಾಕೆಂದರೆ, ರೈಲಿನಲ್ಲಿ ಮಾರುವ ಬರುವ ತಿಂಡಿ ಪದಾರ್ಥಗಳನ್ನು ಖರೀದಿಸಲು ಕೆಲವರು ಹಿಂದೂ ಮುಂದು ನೋಡುತ್ತಿದ್ದರು. ಹೆಚ್ಚಿನ ಜನ ಮನೆಯಲ್ಲಿ ಪ್ಯಾಕ್ ಮಾಡಿಕೊಂಡು ಹೋಗಿ ರೈಲಿನಲ್ಲಿ ಅದನ್ನು ಸೇವಿಸುತ್ತಿದ್ದರು. ಆದರೆ ಇದೀಗ ಹೊಸದಾಗಿ ಮಾಡಲಾಗಿರುವ IRCTC ರೂಲ್ಸ್ ಪ್ರಕಾರ ರೈಲಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಉಚಿತವಾಗಿ ರೈಲ್ವೆ ಇಲಾಖೆಯೇ ಆಹಾರ ಕೊಡಲು ನಿರ್ಧರಿಸಿದೆ.

ಈ ಬಗ್ಗೆ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರೇ ಸುದ್ದಿಗೋಷ್ಠಿ ನಡೆಸಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಹಾಗೆಯೇ ಯಾವ ಪ್ರಯಾಣಿಕರಿಗೆ ಈ ಅನುಕೂಲ ಸಿಗುತ್ತದೆ ಎನ್ನುವುದರ ಬಗ್ಗೆಯೂ ತಿಳಿಸಿದ್ದಾರೆ. ನೀವು ಪ್ರಯಾಣಿಸಬೇಕಾದ ರೈಲು 2 ಗಂಟೆಗಳು ಅಥವಾ ಅದಕ್ಕಿಂತಲೂ ಹೆಚ್ಚಿನ ಕಾಲ ತಡವಾಗಿ ಬಂದಾಗ ನಿಮಗೆ ಈ ರೀತಿಯಾಗಿ ಉಚಿತ ಆಹಾರದ ವ್ಯವಸ್ಥೆ ಸಿಗುತ್ತದೆ. ಅದರಲ್ಲೂ ಎಕ್ಸ್ಪ್ರೆಸ್ ರೈಲು ಪ್ರಯಾಣಿಕರುಗಳಿಗೆ ಮಾತ್ರ ಈ ಅನುಕೂಲತೆ ಸಿಗುತ್ತದೆ.

ಶತಾಬ್ದಿ, ರಾಜಧಾನಿ, ದುರಂತೋ ಮುಂತಾದ ಎಕ್ಸ್ಪ್ರೆಸ್ ರೈಲುಗಳ ಪ್ರಯಾಣಿಕರಿಗೆ ಈ ಅನುಕೂಲತೆಯನ್ನು ಮಾಡಿಕೊಳ್ಳಲಾಗುತ್ತಿದೆ. ನೀವು ಆನ್ಲೈನ್ ಮೂಲಕ ರಿಸರ್ವ್ ಟಿಕೆಟ್ ಖರೀದಿಸಿದ್ದರೆ ನಿಮಗೂ ಸಹ ಈ ಸೌಲಭ್ಯದ ಅನುಕೂಲತೆ ಸಿಗಲಿದೆ. ಒಂದು ವೇಳೆ ನೀವೇನಾದರೂ ಟ್ರೈನ್ ಮಿಸ್ ಆದಾಗ ಟಿಕೆಟ್ ಕ್ಯಾನ್ಸಲ್ ಮಾಡಲು ಬಯಸಿದರೆ ಅದಕ್ಕೆ ಕೂಡ ಅವಕಾಶ ಇದೆ.

ಟ್ರೈನ್ ಮಿಸ್ಸ್ ಆದ ಒಂದು ಗಂಟೆ ಒಳಗಡೆ TDR ಫಾರ್ಮ್ ಭರ್ತಿ ಮಾಡಿ ಟಿಕೆಟ್ ಕೌಂಟರ್ ಅಲ್ಲಿ ಸಲ್ಲಿಸಿದರೆ ನಿಮಗೆ ಟಿಕೆಟ್ ದರ ವಾಪಸ್ ಸಿಗಲಿದೆ. ಈ ಉಪಯುಕ್ತ ಮಾಹಿತಿಯನ್ನು ರೈಲು ಪ್ರಯಾಣ ಇಚ್ಛೆಪಡುವ ನಿಮ್ಮ ಎಲ್ಲಾ ಸ್ನೇಹಿತರಿಗೂ ಕೂಡ ಶೇರ್ ಮಾಡಿ.

Leave a Comment