ಕಳೆದ ವರ್ಷ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election-2023) ಭಾರಿ ಸದ್ದು ಮಾಡಿದ್ದ ಗ್ಯಾರಂಟಿ ಯೋಜನೆಗಳು (Gyaranty Scheme) ಯಶಸ್ವಿಯಾಗಿ ಕಾಂಗ್ರೆಸ್ ಸರ್ಕಾರ ಸ್ಥಾಪನೆಯಾದ ವರ್ಷದೊಳಗೆ ಜಾರಿಗೆ ಬಂದಿವೆ. ಅದರಲ್ಲೂ ಗೃಹಲಕ್ಷ್ಮಿ ಯೋಜನೆಗೆ ಹೈ ಬಜೆಟ್ ಯೋಜನೆಯಾಗಿದ್ದು ಇಲ್ಲಿಯವರೆಗೂ ಒಟ್ಟು 10 ಕಂತುಗಳನ್ನು ಪೂರ್ತಿಗೊಳಿಸಿದೆ.
ಈಗ ಈ ಯೋಜನೆ ಬಗ್ಗೆ ಸರ್ಕಾರದ ಕಡೆಯಿಂದ ಮತ್ತೊಂದು ಅಪ್ಡೇಟ್ ಇದೆ. ಅದೇನೆಂದರೆ, ಇನ್ನು ಮುಂದೆ ಗೃಹಲಕ್ಷ್ಮಿಯರು (Gruhalakshmi Scheme) ತಮಗೆ ಪ್ರತಿ ತಿಂಗಳು ಸಿಗುವ ರೂ.2000 ಗೃಹಲಕ್ಷ್ಮಿ ಸಹಾಯಧನದ ಜೊತೆಗೆ ಹೆಚ್ಚುವರಿ ಆಗಿ ರೂ.1200 ರೂಪಾಯಿಯನ್ನು ಪಡೆಯಬಹುದು ಒಟ್ಟಾರೆಯಾಗಿ ಅವರ ಬ್ಯಾಂಕ್ ಖಾತೆಗೆ ರೂ.3200 ಜಮೆ ಆಗುತ್ತದೆ.
ಈ ಸುದ್ದಿ ಓದಿ:- ರೇಷನ್ ಕಾರ್ಡ್ ಇದ್ದವರಿಗೆ ಇನ್ಮುಂದೆ ಮನೆ ಬಳಕೆಯ ಈ 46 ವಸ್ತುಗಳು ಉಚಿತವಾಗಿ ಸಿಗುತ್ತವೆ.!
ಆದರೆ ಈ ರೀತಿ ಹೆಚ್ಚುವರಿ ರೂ.1500 ಹಣ ಪಡೆದುಕೊಳ್ಳಲು ಅವರು ಮತ್ತೊಂದು ವಿಶೇಷ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಯಾವ ಯೋಜನೆ? ಎಲ್ಲಿ ಅರ್ಜಿ ಸಲ್ಲಿಸಬೇಕು? ಇದಕ್ಕಿರುವ ಮಾನದಂಡಗಳೇನು? ಎಲ್ಲಾ ವಿವರ ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ.
ಗೃಹಲಕ್ಷ್ಮಿ ಯೋಜನೆ ಮೂಲಕ ಕುಟುಂಬದಲ್ಲಿ ಮುಖ್ಯಸ್ಥೆ ಆಗಿರುವ ಹಿರಿಯ ಮಹಿಳೆಗೆ (HOF Women) ರೂ.2000 ಸಹಾಯಧನ ಪ್ರತಿ ತಿಂಗಳ ಕುಟುಂಬ ನಿರ್ವಹಣೆಗಾಗಿ ಸಿಗುತ್ತಿದೆ. ರೇಷನ್ ಕಾರ್ಡ್ ಆಧಾರಿತವಾಗಿ (Ration Card Based) ಅರ್ಜಿ ಸ್ವೀಕರಿಸಿ ಕುಟುಂಬದ ಮುಖ್ಯಸ್ಥೆ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ.
ಈ ಸುದ್ದಿ ಓದಿ:- ಬ್ಲೌಸ್ ಶೋಲ್ಡರ್ ಯಾಕೆ ಬೀಳುತ್ತೆ.? ಇದಕ್ಕೆ ಕಾರಣ ಮತ್ತು ಪರಿಹಾರ ಹೀಗಿದೆ ನೋಡಿ.!
ಒಂದು ಕುಟುಂಬದಲ್ಲಿ ಹಿರಿಯ ಮಹಿಳೆ ಎನಿಸಿಕೊಳ್ಳುವವರು ಸಾಮಾನ್ಯವಾಗಿ ಅತ್ತೆ ಅಥವಾ ತಾಯಿ ಆಗಿರುತ್ತಾರೆ. ನಿಮ್ಮ ರೇಷನ್ ಕಾರ್ಡ್ ನಲ್ಲಿ ಗೃಹಲಕ್ಷ್ಮಿ ಹಣವು ನಿಮ್ಮ ತಾಯಿ ಅಥವಾ ಅತ್ತೆಗೆ ಸಿಗುತ್ತಿದ್ದರೆ ಇನ್ನು ಮುಂದೆ ಅವರು ರೂ.2000 ದ ಬದಲು ರೂ.3200 ಪಡೆದುಕೊಳ್ಳಬಹುದು. ಆದರೆ ಅವರಿಗೆ 65 ವರ್ಷ ಮೇಲ್ಪಟ್ಟು ವಯಸ್ಸಾಗಿರಬೇಕು.
ಕರ್ನಾಟಕ ರಾಜ್ಯ ಸರ್ಕಾರವು ಸಂಧ್ಯಾ ಸುರಕ್ಷಾ ಯೋಜನೆಯಡಿ (Sandhya Suraksha Scheme) ಹಿರಿಯ ನಾಗರಿಕರಿಗೆ ಪಿಂಚಣಿ ರೂಪದಲ್ಲಿ ಜೀವನ ನಿರ್ವಹಣೆಗಾಗಿ ರೂ.1200 ಪೆನ್ಷನ್ ನೀಡುತ್ತಿದೆ. 2007-08 ಆರ್ಥಿಕ ವರ್ಷದಲ್ಲಿ ಜೀವನದಲ್ಲಿ ಇಳಿವಯಸ್ಸಿನಲ್ಲಿರುವ ಹಿರಿಯ ಜೀವಗಳ ಆರ್ಥಿಕ ಹೊರೆ ಕಡಿಮೆಗೊಳಿಸಿ ಸುರಕ್ಷಿತ ಭಾವನೆ ಮೂಡಿಸುವ ಸಲುವಾಗಿಯೇ ಈ ಯೋಜನೆ ಜಾರಿಗೆ ತರಲಾಗಿತ್ತು.
ಈ ಸುದ್ದಿ ಓದಿ:- ಮನೆ, ಜಮೀನು, ಫ್ಲಾಟ್ ಇರುವ ಆಸ್ತಿಗಳ ಮಾಲೀಕರಿಗೆ ಹೊಸ ರೂಲ್ಸ್ ಜಾರಿ.!
65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಈ ಯೋಜನೆ ಮೂಲಕ ರೂ.1200 ಹಣವನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ಪಡೆಯುತ್ತಾರೆ. ಒಂದು ವೇಳೆ ಗೃಹಲಕ್ಷ್ಮಿ ಹಣ ಪಡೆಯುತ್ತಿರುವ ಮಹಿಳೆಯರು ಕಮ65 ವರ್ಷ ಮೇಲ್ಪಟ್ಟವರಾಗಿದ್ದರೆ ಈ ಯೋಜನೆಗೆ ಅರ್ಜಿ ಸಲ್ಲಿಸಿ ಒಟ್ಟು ರೂ.3200 ಪಡೆಯಬಹುದು.
ನಿಮ್ಮ ತಾಲ್ಲೂಕು ಕಚೇರಿಗಳ ಬಳಿ ಹೋಗಿ ಅಥವಾ ಅಟಲ್ ಜಿ ಜನಸ್ನೇಹಿ ಕೇಂದ್ರಗಳಿಗೆ ಹೋಗಿ ನೀವು ಸಂಧ್ಯಾ ಸುರಕ್ಷತಾ ಯೋಜನೆಗೆ ಪೂರಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಅನುಮೋದನೆಯಾದ ಮುಂದಿನ ತಿಂಗಳಿನಿಂದ ರೂ.1200 ಸಂಧ್ಯಾ ಸುರಕ್ಷಾ ಯೋಜನೆ ಮಾಸಾಶನ ಕೂಡ ನಿಮ್ಮ ಗೃಹಲಕ್ಷ್ಮಿ ಹಣ ಬರುವ ಖಾತೆಗೆ ಜಮೆ ಆಗುತ್ತದೆ.
ಈ ಸುದ್ದಿ ಓದಿ:- ಗ್ರಾಮೀಣ ಭಾಗದ ರೈತರಿಗೆ ಗುಡ್ ನ್ಯೂಸ್ 2 ಲಕ್ಷ ಸಹಾಯಧನ ಘೋಷಣೆ.!
ನೀವು ಇದಕ್ಕಾಗಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಇತ್ತೀಚಿನ ಭಾವಚಿತ್ರ, ಬ್ಯಾಂಕ್ ಪಾಸ್ ಬುಕ್ ವಿವರ ಹಾಗೂ ವೈದ್ಯಕೀಯ ಧೃಡೀಕರಣ ಪತ್ರಗಳನ್ನು ತೆಗೆದುಕೊಂಡು ದಾಖಲೆಗಳಾಗಿ ನೀಡಬೇಕು. ಆದರೆ ನೀವೇನಾದರೂ ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದರು 65 ವರ್ಷ ಒಳಪಟ್ಟವರಾಗಿದ್ದರೆ ನಿಮಗೆ ಈ ಯೋಜನೆಯ ಪ್ರಯೋಜನ ಸಿಗುವುದಿಲ್ಲ ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.