ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಕಮಲಿ ಎಂಬ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಂತಹ ಅನಿಕ ಪಾತ್ರಧಾರಿಯಾ ಗ್ಯಾಬ್ರಿಯೆಲ್ಲಾ ಹಾಗೂ ಶಂಭು ಪಾತ್ರವನ್ನು ನಿರ್ವಹಿಸುತ್ತಿದ್ದಂತಹ ಸುಹಾಸ್ ಆತ್ರೇಯ ಅವರು ಇದೀಗ ದಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಎಷ್ಟೇ ತಾವು ಇಬ್ಬರೂ ಪ್ರೀತಿಸುವುದಾಗಿ ಹೇಳಿಕೊಂಡಿದ್ದರು. ಅಷ್ಟೇ ಅಲ್ಲದೆ ಸುಹಾಸ್ ಅವರು ಗ್ಯಾಬ್ರಿಯಾಲ ಅವರಿಗೆ ಉಂಗುರವನ್ನು ತೊಡಿಸುವ ಮೂಲಕ ತಮ್ಮ ಪ್ರೀತಿಯ ವಿಚಾರವನ್ನು ಹೇಳಿಕೊಂಡಿದ್ದರು. ಈ ವಿಡಿಯೋವನ್ನು ಸ್ವತಃ ಅನಿಕಾ ಮತ್ತು ಶಂಭು ಅವರೇ ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದರು.
ವಿಡಿಯೋ ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು ಅಷ್ಟೇ ಅಲ್ಲದೆ ಆಶ್ಚರ್ಯವನ್ನು ಕೂಡ ಪಟ್ಟರು ಏಕೆಂದರೆ. ಇವರಿಬ್ಬರೂ ಕೂಡ ಮೂರು ವರ್ಷದಿಂದ ಒಬ್ಬರನ್ನು ಒಬ್ಬರು ಪ್ರೀತಿಸುತ್ತಿದ್ದರು ಆದರೆ ಪ್ರೀತಿಸಿದಂತಹ ವಿಚಾರವನ್ನು ಎಲ್ಲಿಯೂ ಕೂಡ ತೋರ್ಪಡಿಸಿಕೊಂಡಿರಲಿಲ್ಲ. ಇದು ಒಂದು ಕಾರಣವಾದರೆ ಮತ್ತೊಂದು ಕಾರಣ ಸಹ ಅವರು ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು ಗ್ಯಾಬ್ರಿಯಾಲ ಅವರು ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದವರು. ಇವರಿಬ್ಬರ ಪ್ರೀತಿಗೆ ಮನೆಯವರ ವಿರೋಧವಿತ್ತು ಅದರಲ್ಲಿಯೂ ಕೂಡ ಇವರಿಬ್ಬರೂ ಮದುವೆಯಾಗುತ್ತೇವೆ ಎಂದಾಗ ಇಬ್ಬರ ಕುಟುಂಬದಲ್ಲಿಯೂ ಕೂಡ ಮನಸ್ತಾಪ ಉಂಟಾಯಿತು.
ಈ ಮದುವೆ ಆಗುವುದು ಬೇಡ ಎಂದು ಹೇಳಿದರು ಆದರೆ ಇವರಿಬ್ಬರೂ ಕೂಡ ತಮ್ಮ ತಮ್ಮ ಕುಟುಂಬದ ಸದಸ್ಯರನ್ನು ಮನವೊಲಿಸಿ ಈ ಮದುವೆಗೆ ಒಪ್ಪಿಸಿದರು. ಈಗಾಗಲೇ ಎಂಗೇಜ್ಮೆಂಟ್ ಮಾಡಿಕೊಂಡಿರುವ ಈ ಜೋಡಿ ನಿನ್ನೆ ಎಷ್ಟೇ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಹೌದು. ಆದರೆ ಈ ಒಂದು ಮದುವೆಯಲ್ಲಿ ಬೇರೆಯದೆ ವಿಶೇಷತೆ ಇದೆ ಅದೇನೆಂದರೆ ಬ್ರಾಹ್ಮಣ ಕುಟುಂಬಕ್ಕೆ ಸೇರಿದಂತಹ ಸಂಪ್ರದಾಯದಂತೆಯೂ ಮದುವೆಯಾಗಿಲ್ಲ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದಂತಹ ಸಂಪ್ರದಾಯದಲ್ಲಿಯೂ ಕೂಡ ಮದುವೆಯಾಗಿಲ್ಲ ಹೌದು, ಕೋರ್ಟ್ ನಾ ನಿಯಮದ ಪ್ರಕಾರ ಇಬ್ಬರೂ ಕೂಡ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ.
ಈ ರೀತಿ ಮದುವೆಯಾಗುವುದಕ್ಕೆ ಕಾರಣವೇನು? ಇಬ್ಬರ ಕುಟುಂಬದಲ್ಲಿಯೂ ಕೂಡ ಒಪ್ಪಿಗೆ ದೊರೆತಿದೆ ಆದರೂ ಕೂಡ ರಿಜಿಸ್ಟರ್ ಮ್ಯಾರೇಜ್ ಆಗಿದ್ದು ಯಾಕೆ ಎಂಬುವುದನ್ನು ನೋಡುವುದಾದರೆ. ಒಂದು ಸಂಪ್ರದಾಯದಂತೆ ಮದುವೆಯಾದರೆ ಮತ್ತೊಂದು ಸಂಪ್ರದಾಯಕ್ಕೆ ಚ್ಯೂತಿ ಅಥವಾ ಗೌರವ ತೋರಿಸಿದಂತಾಗುತ್ತದೆ ಹಾಗಾಗಿ ಇಬ್ಬರ ಕುಟುಂಬಕ್ಕೂ ಕೂಡ ಮನಸ್ತಾಪ ಉಂಟಾಗುವುದು ಬೇಡ ಎಂಬ ಕಾರಣಕ್ಕಾಗಿ ಕೋರ್ಟ್ ನಾ ನಿಯಮದ ಅನುಸಾರ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಆದರೆ ರಿಸೆಪ್ಶನ್ ಅನ್ನು ಬಹಳ ಅದ್ದೂರಿಯಾಗಿ ಮಾಡಿಕೊಂಡಿದ್ದಾರೆ ಈ ಒಂದು ರಿಸೆಪ್ಶನ್ ಗೆ ಕನ್ನಡ ಸೀರಿಯಲ್ ನ ಕಿರುತೆರೆಯ ಹಲವಾರು ನಾಯಕ ನಟ ನಟಿಯರು ಪಾಲ್ಗೊಂಡಿದ್ದಾರೆ.
ಸಧ್ಯಕ್ಕೆ ಪಾರು ಸೀರಿಯಲ್ ನಲ್ಲಿ ಅಭಿನಯಿಸುತ್ತಿರುವಂತಹ ಪ್ರೀತಂ ಹಾಗೂ ಗಟ್ಟಿಮೇಳ ಧಾರವಾಹಿಯಲ್ಲಿ ಅಭಿನಯಿಸುತ್ತಿರುವ ಅಂತಹ ವಿಕ್ರಂ ಸೇರಿದಂತೆ ಸಾಕಷ್ಟು ಕಲಾವಿದರು ಪಾಲ್ಗೊಂಡಿದ್ದಾರೆ. ಮದುವೆಯಾದಂತಹ ನೂತನ ವಧು ಮತ್ತು ವರರಿಗೆ ಶುಭಾಶಯಗಳು ಕೋರಿದ್ದಾರೆ. ಅಷ್ಟೇ ಅಲ್ಲದೆ ಈ ಒಂದು ರಿಸೆಪ್ಶನ್ ನಲ್ಲಿ ಮಧು ಮಗಳು ಮತ್ತು ಮಧು ಮಗ ಇಬ್ಬರೂ ಕೂಡ ಭರ್ಜರಿಯಾಗಿ ಹಾಕಿದ್ದಾರೆ ಸದ್ಯಕ್ಕೆ ಇವರಿಬ್ಬರು ಡ್ಯಾನ್ಸ್ ಮಾಡಿದಂತಹ ವಿಡಿಯೋ ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ನೀವು ಕೂಡ ಒಂದು ಬಾರಿ ಈ ವಿಡಿಯೋವನ್ನು ನೋಡಿ.
ಆದರೆ ಮುಂದಿನ ದಿನದಲ್ಲಿ ಇವರಿಬ್ಬರು ಹೇಗೆ ಬದುಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಏಕೆಂದರೆ ಇಬ್ಬರೂ ಕೂಡ ಬೇರೆ ಬೇರೆ ಸಂಪ್ರದಾಯಸ್ನ ಕುಟುಂಬಕ್ಕೆ ಸೇರಿದವರು ಇನ್ನೂ ಮುಂದೆ ಯಾವ ರೀತಿಯಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬುದೇ ಬಹುದೊಡ್ಡ ಸವಾಲಾಗಿದೆ. ನಿಮ್ಮ ಪ್ರಕಾರ ಈ ಮದುವೆಯ ಬಗ್ಗೆ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ. ಪ್ರೀತಿಸಿ ಮದುವೆಯಾದಂತಹ ಜೋಡಿ ಕೊನೆಯವರೆಗೂ ಉಳಿಯುತ್ತಾರೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ ಏಕೆಂದರೆ ಸುಹಾಸ್ ಅವರ ತಾಯಿಗೆ ಕ್ರಿಶ್ಚಿಯನ್ ಕುಟುಂಬದ ಹೆಣ್ಣು ಮಗಳನ್ನು ಮದುವೆಯಾಗುವುದು ಇಷ್ಟ ಇರಲಿಲ್ಲ.