ಸಾ.ವು ಯಾವಾಗ ಯಾರಿಗೆ ಯಾವ ರೀತಿ ಬರುತ್ತದೆ ಎಂದು ಯಾರೂ ಸಹ ಊಹಿಸಲು ಸಾಧ್ಯವಿಲ್ಲ. ಅದೊಂದು ಕಾಲದಲ್ಲಿ ಸಾ.ವೆಂದರೆ ವಯಸ್ಸಾಗಿ ಸಾಯುವುದು ಅಥವಾ ಅನಾರೋಗ್ಯಕ್ಕೆ ತುತ್ತಾಗಿ ಸಾ.ಯುವುದು, ಇಲ್ಲ ಕಾಡಿನಲ್ಲಿ ದಾರಿ ತಪ್ಪಿಸಿಕೊಂಡು ಕಾಡು ಮೃಗಗಳ ಪಾಲಾಗುವುದು, ಇಲ್ಲ ಕಾಲು ಜಾರಿ ನೀರಿಗೆ ಬಿದ್ದರೆ ಸಾ.ವಾಗುವುದು ಎಂದಷ್ಟೇ ನಂಬಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಯಾವ ಕಾರಣಕ್ಕಾಗಿ ಸಾ.ವು ಬರುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ.
ಕಣ್ಣೆದುರಿಗೆ ಚೆನ್ನಾಗಿ ಇದ್ದವರು ಕಣ್ಮುಚ್ಚಿ ಬಿಡುವಷ್ಟರಲ್ಲಿ ನಮ್ಮಿಂದ ದೂರವಾಗಿ ಬಿಟ್ಟಿರುತ್ತಾರೆ. ಅಷ್ಟರ ಮಟ್ಟಿಗೆ ನಮ್ಮ ಬೆನ್ನ ಹಿಂದೆ ಇರುವ ಮೃ.ತ್ಯು ದೇವತೆ ಇತ್ತೀಚೆಗೆ ಬಹಳ ಕ್ರೂ.ರವಾಗಿ ಬಿಟ್ಟಿದ್ದಾನೆ. ಆಡುವ ಕೂಸು, ಇರುವ ಒಬ್ಬನೇ ಮಗ ಎನ್ನುವ ಯಾವುದೇ ಭೇದವನ್ನು ನೋಡದೆ ತನ್ನ ಯ.ಮ ಪಾಶ ಹಾಕಿ ಎಳೆದು ಮ.ಸಣದೂರಿಗೆ ಹೊತ್ತೊಯ್ಯುತ್ತಿದ್ದಾನೆ. ಇಂತಹದೇ ಒಂದು ಅಕಾಲ ಮೃ.ತ್ಯುವಿಕೆ 13 ವರ್ಷದ ಬಾಲಕನೊಬ್ಬ ಇಂದು ಬ.ಲಿಯಾಗಿದ್ದಾನೆ.
ಬೆಂಗಳೂರಿನ ಹೆಬ್ಬಾಳ ಬಳಿ ಇರುವ ಗುಡ್ಡೇದ ಹಳ್ಳಿಯಲ್ಲಿ ಇಂದು ಈ ಘಟನೆ ಸಂಭವಿಸಿದೆ. ಘಟನೆಯ ವಿವರ ಈ ರೀತಿ ಇದೆ ನೋಡಿ. ದೂರದ ಯಾದಗಿರಿ ಜಿಲ್ಲೆಯ ರಾಮಸಮುದ್ರದ ಒಂದು ಹಳ್ಳಿಯಿಂದ ಬಂದ ಇಬ್ಬರು ಬಡ ದಂಪತಿಗಳಾದ ಸರವ್ವ ಮತ್ತು ಮಲ್ಲಪ್ಪ ಎನ್ನುವರು ಹೊಟ್ಠೆಪಾಡಿಗಾಗಿ ಬೆಂಗಳೂರಿಗೆ ಬಂದು ಇಲ್ಲೇ ಜೀವನ ಕಂಡು ಕೊಂಡಿದ್ದರು. ಮಲ್ಲಪ್ಪ ಗಾರೆ ಕೆಲಸಕ್ಕೆ ಹೋಗುತ್ತಿದ್ದರೆ, ಸರವ್ವ ಮನೆ ಮನೆಗೆ ಹೋಗಿ ಮನೆಕೆಲಸ ಮಾಡಿಕೊಂಡು ಬರುತ್ತಿದ್ದಳು.
ಬಡ ಕುಟುಂಬ ಆಗಿದ್ದರು ಇದ್ದೊಬ್ಬ ಮಗ 13 ವರ್ಷದ ಮಹೇಶನ ಬಗ್ಗೆ ಕನಸು ಕಾಣುತ್ತಾ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದರೆ ಅವರ ನೆಮ್ಮದಿ ಮೇಲೆ ವಿಧಿಯ ಕ್ರೂ.ರ ಕಣ್ಣು ಬಿದ್ದಿದೆ. ಇಂದು ಮಾರ್ಚ್ 5, ಭಾನುವಾರವಾದ್ದರಿಂದ ಬಾಲಕ ಮಹೇಶ್ ಆಟವಾಡುತ್ತಾ ಅವನ ಮನೆ ಬಳಿಯೇ ಇದ್ದ ಗ್ಯಾಸ್ ಸಿಲಿಂಡರ್ ರಿಫಿಲ್ಲಿಂಗ್ ಮಾಡುವ ಅಂಗಡಿ ಬಳಿ ಹೋಗಿದ್ದಾನೆ. ಅಲ್ಲಿ ಅದೇನು ಕುತೂಹಲ ಕಂಡಿದ್ದನೋ ಅಥವಾ ಅವನ ಹಣೆ ಬರಹವೇ ಅವನನ್ನು ಅಲ್ಲಿಗೆ ಕರೆ ತಂದಿತ್ತೋ ಗ್ಯಾಸ್ ಸಿಲಿಂಡರ್ ರಿಫಿಲ್ಲಿಂಗ್ ಮಾಡುವ ವೇಳೆ ಸಿಲಿಂಡರ್ ಬ್ಲಾಸ್ಟ್ ಆಗಿದೆ.
ಅದರ ತೀವ್ರತೆಗೆ ಮಹೇಶನಿಗೆ ಗಂಭೀರವಾಗಿ ಗಾಯಗಳಾಗಿವೆ. ತಕ್ಷಣವೇ ಅಕ್ಕ-ಪಕ್ಕದವರೆಲ್ಲ ಬಂದು ಮಹೇಶನನ್ನು ನೋಡಿ ಹತ್ತಿರದಲ್ಲೇ ಇರುವ ಹೆಬ್ಬಾಳದ ಬ್ಯಾಪಿಸ್ಟ್ ಆಸ್ಪತ್ರೆಗೆ ದಾಖಲು ಮಾಡಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಮಾರ್ಗ ಮಧ್ಯದಲ್ಲಿಯೇ ಪುಟ್ಟ ಕಂದ ಕೊನೆ ಉಸಿರೆಳೆದಿದ್ದಾನೆ ಮಗನ ಸ್ಥಿತಿ ನೋಡಿ ಹೆತ್ತವರು ಕಂಗಾಲಾಗಿ ಹೋಗಿದ್ದಾರೆ. ಬೆಳಗ್ಗಿನಿಂದ ಆಡಿಕೊಂಡು ಚೆನ್ನಾಗಿದ್ದ ಮಗ ಕ್ಷಣ ಹೊತ್ತಿನಲ್ಲಿ ಹೆಣವಾಗಿರುವುದು ಕಂಡು ಹೆತ್ತ ಕರುಳು ನರಳಾಡಿದೆ.
ಗ್ಯಾಸ್ ರೀಫಿಲ್ಲಿಂಗ್ ಮಾಡಲು ಜಾಗವನ್ನು ಬಾಡಿಗೆ ಕೊಟ್ಟಿದ್ದ ಮಾಲಿಕ ದೇವರಾಜ್ ಎನ್ನುವಾತ ಮತ್ತು ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಲಿಕಾಯತ್ ಎನ್ನುವವನು ಇಬ್ಬರು ಇಷ್ಟೆಲ್ಲಾ ಆಗುತ್ತಿದ್ದಂತೆ ಸ್ಥಳದಿಂದ ಪರಾರಿ ಆಗಿದ್ದಾರೆ. ಈ ಪ್ರಕರಣದ ಸಂಬಂಧ ಸ್ಥಳೀಯ ಪೊಲೀಸ್ ಅಧಿಕಾರಿಗಳು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಗ್ಯಾಸ್ ರೀ ಫಿಲ್ಲಿಂಗ್ ಅಥವಾ ಇನ್ಯಾವುದೇ ಇಂತಹ ಅವಘಡಗಳು ಸಂಭವಿಸ ಬಹುದಾದಂತಹ ಚಟುವಟಿಕೆಗಳು ನಡೆಯುವ ಸ್ಥಳದಲ್ಲಿ ಕೆಲ ಮುಂಜಾಗ್ರತೆ ತೆಗೆದುಕೊಂಡಿದ್ದರೆ ಇಂದು ಈ ರೀತಿ ಆಗುವ ಅನಾಹುತವನ್ನು ತಪ್ಪಿಸಬಹುದಾಗಿತ್ತೋ ಏನೋ, ಇನ್ನು ಮುಂದಾದರೂ ಜನ ಜಾಗೃತವಾಗಲಿ.