ಸದ್ಯಕ್ಕೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ಒಂದರ ಹಿಂದೆ ಮತ್ತೊಂದರಂತೆ ಬಿಡುಗಡೆಯಾಗುತ್ತಿದೆ ಹೌದು 2017 ರಲ್ಲಿ ತೆರೆಕಂಡ ಕೆಜಿಫ್ ಸಿನಿಮಾದ ನಂತರ ಬಂದಂತಹ ಕನ್ನಡದ ಬಹುತೇಕ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿ ಹೊರ ಹೊಮ್ಮಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ತೆರೆಕಂಡ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ರಾಬರ್ಟ್ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿತ್ತು ಕನ್ನಡ ಮತ್ತು ತೆಲುಗುನಲ್ಲಿ ಇದು ಬಿಡುಗಡೆಯಾಯಿತು.
ತದನಂತರ ಕಿಚ್ಚ ಸುದೀಪ್ ಅಭಿನಯದ ವಿಕ್ರಂತ್ ರೋಣ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಧೃವ ಸರ್ಜಾ ಅಭಿನಯದ ಪೊಗರು ಸಿನಿಮಾ ಕೂಡ ಕನ್ನಡ ಮತ್ತು ತೆಲಗಿನಲ್ಲಿ ಬಿಡುಗಡೆಯಾಗುವ ಮೂಲಕ ಪ್ಯಾನ್ ಇಂಡಿಯಾ ಸಿನಿಮಾವಾಯಿತು. ಇದಾದ ನಂತರ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜಾ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿ ಸುಮಾರು ಏಳು ಭಾಷೆಯಲ್ಲಿ ಬಿಡುಗಡೆಯಾಗಲಿದೆ.
ಇದನ್ನು ಹೊರತು ಪಡಿಸಿದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ರಾಂತಿ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಸುಮಾರು ಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಇವೆಲ್ಲವನ್ನು ನೋಡುತ್ತಿದ್ದರೆ ಇತ್ತೀಚಿನ ದಿನದಲ್ಲಿ ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವ ಪ್ರತಿಯೊಂದು ಸಿನಿಮಾ ಕೂಡ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ಗೋಲ್ಡನ್ ಸ್ಟಾರ್ ಗಣೇಶ ಅವರು ಮಾತ್ರ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಘಟನೆ ಮಾಡಿಲ್ಲ.
ಈ ಬಗ್ಗೆ ಸಂದರ್ಶನಗಾರರು ಗಣೇಶ ಅವರಿಗೆ ನೇರವಾಗಿ ಪ್ರಶ್ನೆಯನ್ನು ಕೇಳಿದ್ದಾರೆ ಇಂದು ನೀವು ಯಾಕೆ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟನೆ ಮಾಡಿಲ್ಲ, ಇದಕ್ಕೆ ನಿಜವಾದ ಕಾರಣವೇನು ಅಂತ ಪ್ರಶ್ನೆ ಕೇಳಿದ್ದಾರೆ. ಮಾಧ್ಯಮದವರು ಕೇಳಿದಂತಹ ಪ್ರಶ್ನೆಗೆ ಗಣೇಶ್ ಕೊಟ್ಟ ಉತ್ತರ ಇದೀಗ ಎಲ್ಲೆಡೆ ವೈರಲ್ ಆಗಿದೆ ಅಷ್ಟೇ ಅಲ್ಲದೆ ಸಾಕಷ್ಟು ಅಭಿಮಾನಿಗಳ ಮೆಚ್ಚಗೆಯನ್ನು ಕೂಡ ಪಡೆದುಕೊಂಡಿದೆ.
ಹೌದು ಅಷ್ಟಕ್ಕೂ ಗಣೇಶ ಹೇಳಿದ್ದಾದರೂ ಏನು ಎಂಬುದನ್ನು ನೋಡಿದರೆ ” ನಂಗೆ ಯಾವ ರೀತಿ ಎಂದರೆ ನಮ್ಮ ಸಿನಿಮಾವನ್ನು ಎಲ್ಲರೂ ನಮ್ಮ ಭಾಷೆಯಲ್ಲೇ ನೋಡಬೇಕು ಅಂತ ಆಸೆ. ಅದಾದ ಮೇಲೆ ಪ್ಯಾನ್ ಇಂಡಿಯಾಗೆ ಹೋಗಬೇಕು ಅಂತ. ಒಂದೆರಡು ಚಿತ್ರಗಳ ಮಾತುಕತೆ ನಡೀತಿದೆ. ಈ ವರ್ಷ ಮಾಡಿಕೊಂಡು ಹೋಗ್ತೇನೆ” ಎಂದು ಗಣೇಶ್ ಉತ್ತರಿಸಿದರು.
ಈಗಾಗಲೇ ಕಾಂತಾರ ಸಿನಿಮಾ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಬಿಡುಗಡೆಯಾಗಿದ್ದು ಈ ಸಿನಿಮಾವನ್ನು ಎಲ್ಲರೂ ನೋಡಿ ಮೆಚ್ಚಿಕೊಂಡು ತದನಂತರ ಪರಭಾಷೆಯಲ್ಲಿ ಡಬ್ ಮಾಡಿ ಕೊಡುವಂತೆ ಕೇಳಿದರು. ಕನ್ನಡದಲ್ಲಿ ಬಿಡುಗಡೆಯಾದ ನಂತರ ಮೊಟ್ಟಮೊದಲ ಬಾರಿಗೆ ಬೇರೆ ಭಾಷೆಗೆ ಡಬ್ಬಿಂಗ್ ಆಗಿದ ಸಿನಿಮಾ ಅಂದರೆ ಅದು ಕಾಂತಾರ ಹಾಗಾಗಿ ಇದೊಂದು ಪ್ಯಾನ್ ಇಂಡಿಯಾ ಸಿನೆಮಾ ಅಂತ ಹೇಳಬಹುದು.
ಗಣೇಶ ಅವರು ಕೂಡ ಇಂತಹದ್ದೇ ಒಂದು ಆಲೋಚನೆಯನ್ನು ಮಾಡಿದ್ದಾರೆ ಸಾಮಾನ್ಯವಾಗಿ ತಮಿಳು ತೆಲುಗು ಸಿನಿಮಾದಲ್ಲಿ ಬಿಡುಗಡೆಯಾದಂತಹ ಚಿತ್ರವನ್ನು ಕರ್ನಾಟಕದಲ್ಲಿಯೂ ಕೂಡ ಬಿಡುಗಡೆ ಮಾಡಲಾಗುತ್ತದೆ. ಅದನ್ನು ನಾವು ನೋಡುತ್ತೇವೆ ಮೂಲ ಭಾಷೆಯಲ್ಲಿ ಇದ್ದರೂ ಕೂಡ ಆ ಚಿತ್ರವನ್ನು ಮೆಚ್ಚಿಕೊಳ್ಳುತ್ತೇವೆ ಹಾಗಾಗಿ ಗಣೇಶ್ ಅವರು ಕೂಡ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದಂತಹ ಸಿನಿಮಾವನ್ನು ಕನ್ನಡದ ಭಾಷೆಯಲ್ಲಿ ಬೇರೆ ರಾಜ್ಯದವರು ಕೂಡ ನೋಡಬೇಕು ಆವಾಗಲೇ ನನಗೆ ಸಂತೋಷ.
ಈ ರೀತಿ ಯಾವಾಗ ಆಗುತ್ತದೆ ಆನಂತರ ಅಷ್ಟೇ ನಾನು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟನೆ ಮಾಡುತ್ತೇನೆ ಎಂದು ಉತ್ತರ ಕೊಟ್ಟಿದ್ದಾರೆ. ಸದ್ಯಕ್ಕೆ ಗಣೇಶ್ ಹೇಳಿರುವಂತಹ ಮಾತನ್ನು ಎಲ್ಲರೂ ಕೂಡ ಮೆಚ್ಚಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಇದು ನ್ಯಾಯಯುತವಾದ ಹೇಳಿಕೆ ಎಂದು ಕೂಡ ಮೆಚ್ಚಿಕೊಂಡಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಾಮೆಂಟ್ ಮಾಡಿ.