Friday, June 9, 2023
HomeEntertainmentಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ ಮಾಡುತ್ತಿರುವ ಸುಮಲತಾ, ಹುಡುಗಿ ಯಾರು ಗೊತ್ತ.?

ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ ಮಾಡುತ್ತಿರುವ ಸುಮಲತಾ, ಹುಡುಗಿ ಯಾರು ಗೊತ್ತ.?

ಈ ವರ್ಷ ಸ್ಯಾಂಡಲ್ ವುಡ್ ನ ಅನೇಕ ನಟ ನಟಿಮಣಿಯರು ವಿವಾಹವಾಗಿ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟಿದ್ದಾರೆ. ಮತ್ತೆ ಕೆಲವರು ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಆದಷ್ಟು ಬೇಗ ಹಸೆ ಮಣೆ ಏರುವ ನಿರ್ಧಾರ ಮಾಡಿದ್ದಾರೆ. ಇನ್ನು ಕೆಲವು ಕಲಾವಿದರು ಈ ವರ್ಷ ತಾಯಿ ತಂದೆಯಾದ ಸಂಭ್ರಮದಲ್ಲಿದ್ದಾರೆ. ಈ ವರ್ಷ ಸ್ಯಾಂಡಲ್ವುಡ್ ಗೆ ಸಿನಿಮಾಗಳ ಸಕ್ಸಸ್ ಮತ್ತು ಅಲ್ಲದೆ ವೈಯಕ್ತಿಕ ಜೀವನದಲ್ಲೂ ಕೂಡ ಸೆಲೆಬ್ರಿಟಿಗಳಿಗೆ ಸಂತೋಷವನ್ನು ಕೊಟ್ಟ ವರ್ಷ ಆಗಿದೆ.

ಸದ್ಯಕ್ಕೆ ಕರ್ನಾಟಕದ ಚಂದನವನದ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಅವರೂ ಸಹಾ ಶೀಘ್ರದಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಬಗ್ಗೆ ಸುಮಲತ ಅಂಬರೀಶ್ ಅವರೇ ಆಗಲಿ ಅಭಿಷೇಕ್ ಅವರೇ ಆಗಲಿ ಯಾವ ಮಾಹಿತಿ ಬಹಿರಂಗಪಡಿಸದೆ ಇದ್ದರೂ ಡಿಸೆಂಬರ್ 11ರಂದು ಜೂನಿಯರ್ ರೆಬೆಲ್ ಸ್ಟಾರ್ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಬೆಂಗಳೂರಿನ ಅರಮನೆ ಮೈದಾನದ ಅಂಗಳದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎನ್ನುವ ಸುದ್ದಿ ಬಗ್ಗೆ ಗಾಂಧಿನಗರದಲ್ಲಿ ಗುಸು-ಗುಸು ಎದ್ದಿದೆ.

ಬಲವಾದ ಮಾಹಿತಿಗಳ ಪ್ರಕಾರ ಅಭಿಷೇಕ್ ಅಂಬರೀಶ್ ಅವರು ಅರೆಂಜ್ ಮ್ಯಾರೇಜ್ ಆಗುತ್ತಿದ್ದು, ತಮ್ಮ ತಾಯಿ ಸುಮಲತಾ ಅಂಬರೀಶ್ ತೋರಿಸಿದ ಹುಡುಗಿಯ ಕೈ ಹಿಡಿಯುತ್ತಿದ್ದಾರಂತೆ. ಸುಮಲತಾ ಅಂಬರೀಶ್ ಹಾಗೂ ಅಂಬರೀಶ್ ಅವರ ಏಕೈಕ ಪುತ್ರನಾದ ಅಭಿಷೇಕ ಅಂಬರೀಶ್ ಅವರಿಗೆ ಅವರ ತಾಯಿಯು ಸರಿಹೊಂದುವ ಜೋಡಿಯನ್ನು ಹುಡುಕಿದ್ದು ಅವರು ಕೂಡ ಫೇಮಸ್ ಮಾಡೆಲ್ ಎನ್ನುವ ಮಾಹಿತಿಗಳು ಇದೆ.

ಅಂಬರೀಶ್ ಅವರು ಕನ್ನಡ ಚಿತ್ರರಂಗದ ಹೆಸರಾಂತ ನಟ ಮತ್ತು ಇಡೀ ಚಿತ್ರರಂಗಕ್ಕೆ ಯಜಮಾನನಂತೆ ಇದ್ದ ಇವರ ಅಧ್ಯಕ್ಷತೆಯಲ್ಲಿಯೇ ಎಲ್ಲಾ ಕಾರ್ಯಗಳು ಜರುಗುತ್ತಿದ್ದವು ಮತ್ತು ಇವರ ಸಮ್ಮುಖದಲ್ಲಿ ಎಲ್ಲ ವಿವಾದಗಳು ಬಗೆಹರಿಯುತ್ತಿದ್ದವು. ಸಿನಿಮಾ ರಂಗ ಮಾತ್ರವಲ್ಲದೆ ರಾಜಕೀಯದಲ್ಲಿ ಕೂಡ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಅಂಬರೀಶ್ ಅವರು ಮಂಡ್ಯ ಜಿಲ್ಲೆಯನ್ನು ಅಭಿವೃದ್ಧಿಪಡಿಸುವಲ್ಲಿ ಬಹಳ ಶ್ರಮ ಪಟ್ಟವರು.

ಸಚಿವನಾಗಿ ಕೂಡ ಗುರುತಿಸಿಕೊಂಡಿದ್ದ ಇವರು ಕರ್ನಾಟಕದ ಕರ್ಣ ಎಂದು ಹೆಸರು ಹೊಂದಿದವರು. ಈಗ ಪುತ್ರ ಅಭಿಷೇಕ್ ಅಂಬರೀಶ್ ಅವರು ಕೂಡ ತಂದೆ-ತಾಯಿಯಂತೆ ಕಲೆಯನ್ನೇ ವೃತ್ತಿಯಾಗಿ ತೆಗೆದುಕೊಂಡು ಚಿತ್ರರಂಗ ಪ್ರವೇಶ ಮಾಡಿದ್ದಾರೆ. ಅಮರ್ ಎನ್ನುವ ಚಿತ್ರದ ಮೂಲಕ ಲಾಂಚ್ ಆಗಿರುವ ಅಂಬರೀಶ್ ಅವರು ಮೊದಲ ಸಿನಿಮಾದಲ್ಲೇ ಭರವಸೆ ನಾಯಕ ಎನ್ನುವ ನಂಬಿಕೆ ಗಿಟ್ಟಿಸಿಕೊಂಡಿದ್ದಾರೆ.

ಈಗ ಸಾಲು ಸಾಲು ಸಿನಿಮಾ ಆಫರ್ ಗಳು ಅಭಿಷೇಕ್ ಅಂಬರೀಶ್ ಅವರನ್ನು ಹರಸಿ ಬರುತ್ತಿದ್ದರು ಜವಾಬ್ದಾರಿತವಾಗಿ ಕಥೆ ತಿಳಿದುಕೊಂಡು ಸಿನಿಮಾ ಸೆಲೆಕ್ಟ್ ಮಾಡಿಕೊಳ್ಳುತ್ತಿರುವ ಇವರು ಡೈರೆಕ್ಟರ್ ಸೂರಿ ಅವರ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಎನ್ನುವ ಸಿನಿಮಾದಲ್ಲಿ ಸದ್ಯಕ್ಕೆ ಬಿಸಿ ಆಗಿದ್ದಾರೆ ಮತ್ತು ಇವರ ಮುಂದಿನ ಚಿತ್ರವು ಕೃಷ್ಣ ಅವರ ನಿರ್ದೇಶನದಲ್ಲಿರಲಿದೆ ಕಾಳಿ ಎಂದು ಚಿತ್ರಕ್ಕೆ ಈಗಾಗಲೇ ಹೆಸರನ್ನು ನಿಗದಿಪಡಿಸಲಾಗಿದ್ದು ಕಾಂತರಾ ಸಿನಿಮಾ ನಟಿ ಸಪ್ತಮಿ ಗೌಡ ಅವರು ಇದಕ್ಕೆ ನಾಯಕಿ ಅಗಲಿದ್ದಾರೆ ಎನ್ನುವ ಮಾಹಿತಿಗಳು ಇವೆ.

ಜೊತೆಗೆ ತನ್ನ ತಾಯಿಗೆ ಜೊತೆಯಾಗಿ ರಾಜಕೀಯದಲ್ಲಿ ಕೂಡ ಗುರುತಿಸಿಕೊಂಡಿರುವ ಅಭಿಷೇಕ್ ಅಂಬರೀಶ್ ಅವರು ವಿವಾಹ ವಾಗುವ ಮೂಲಕ ಮತ್ತೊಂದು ಮೈಲಿಗಲನ್ನು ಇಡುತ್ತಿದ್ದಾರೆ. ಆದರೆ ನಿಶ್ಚಿತಾರ್ಥದ ದಿನದವರೆಗೂ ಹುಡುಗಿ ಯಾರು ಎನ್ನುವುದನ್ನು ಗುಟ್ಟಾಗಿ ಇಡಬೇಕು ಎಂದು ಸುಮಲತಾ ಅಂಬರೀಶ್ ಅವರು ಡಿಸೈಡ್ ಮಾಡಿದ್ದಾರಂತೆ. ಈ ವರ್ಷ ಎಂಗೇಜ್ಮೆಂಟ್ ಆಗುತ್ತಿರುವ ಈ ಜೋಡಿಯು ಇಷ್ಟೇ ಅದ್ದೂರಿಯಾಗಿ ಮುಂದಿನ ವರ್ಷದಲ್ಲಿ ಹಸೆಮಣೆ ಏರುವ ಸಾಧ್ಯತೆಗಳಿವೆ.