ಹಣ ನಮ್ಮ ಅಗತ್ಯತೆಯನ್ನು ಪೂರೈಸುವಂತಹ ವಸ್ತು. ಹಣ ಎನ್ನುವ ವಸ್ತು ಇಲ್ಲದೆ ಯಾರು ಕೂಡ ನೆಮ್ಮದಿಯನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ಹಣ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಅತ್ಯಗತ್ಯವಾಗಿದೆ ಹಣವಿಲ್ಲದೆ ಜೀವನದಲ್ಲಿ ಏನನ್ನು ಪಡೆದು ಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ.
ಲಕ್ಷ್ಮಿ ದೇವಿಯ ಪ್ರತಿರೂಪವಾಗಿ ರುವಂತಹ ಹಣ ಹಾಗೂ ಹಣದ ಪೆಟ್ಟಿಗೆಯನ್ನು ಮನೆಯಲ್ಲಿ ವಿಶೇಷ ವಾದ ಸ್ಥಾನದಲ್ಲಿ ಇಟ್ಟು ಪೂಜಿಸಬೇಕು ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾವು ಮನೆಯಲ್ಲಿ ಹಣವನ್ನು ಯಾವ ಸ್ಥಳದಲ್ಲಿ ಹಾಗೂ ಹಣವನ್ನು ಯಾವ ದಿಕ್ಕಿನಲ್ಲಿ ಇಡುತ್ತೇವೆ ಎನ್ನುವುದರ ಆಧಾರದ ಮೇಲೆ ಸಂತೋಷ ಮತ್ತು ಸಮೃದ್ಧಿ ವೃದ್ಧಿಯಾಗುತ್ತದೆ.
ಜೀವನದಲ್ಲಿ ಎಂದಿಗೂ ಹಣಕಾಸಿನ ಕೊರತೆಯಾಗಬಾರದು ವ್ಯಾಪಾರ ವ್ಯವಹಾರಗಳಲ್ಲಿ ನಿರಂತರವಾಗಿ ಹಣದ ಹರಿವು ಇರಬೇಕು ಎಂದರೆ ಕೆಲವು ನಿಯಮಗಳನ್ನು ಅನುಸರಿಸಬೇಕು. ಹಾಗಾದರೆ ಆ ನಿಯಮ ಗಳು ಯಾವುದು ಎನ್ನುವುದನ್ನು ಈ ದಿನ ತಿಳಿದುಕೊಳ್ಳೋಣ. ಮನೆಯಲ್ಲಿ ಹಣ ಇಡುವಂತಹ ಸ್ಥಳ ಹಾಗೂ ಒಡವೆಗಳನ್ನು ಇಡುವಂತಹ ಬೀರು ಅಥವಾ ತಿಜೋರಿಗಳ ವಿಷಯದಲ್ಲಿಯೂ ವಾಸ್ತು ಶಾಸ್ತ್ರದ ಪಾಲನೆ ಬಹಳ ಮುಖ್ಯವಾಗಿರುತ್ತದೆ.
ಮನೆಯ ಯಾವುದಾದರೂ ಒಂದು ಕೋಣೆಯಲ್ಲಿ ಈ ಬೀರು ಇದ್ದರೆ ಆಯಿತು ಎಂದು ಉದಾ ಸೀನ ಮಾಡುವುದರಿಂದಲೇ ಆರ್ಥಿಕ ಸಂಕಷ್ಟ ಎದುರಾಗುವುದು. ಇದೇ ಕಾರಣಕ್ಕೆ ಮನೆಯ ಸಂಪತ್ತನ್ನು ಹೊಂದಿರುವಂತಹ ಈ ಬೀರುಗಳು ಸರಿಯಾದ ವಾಸ್ತು ದಿಕ್ಕಿನಲ್ಲಿ ಇರಬೇಕು ಅಂತ ಹೇಳಲಾಗುತ್ತದೆ. ಮನೆಯ ಕೊಠಡಿಯ ಉದ್ದಳತೆ ಹಾಗೂ ಕೆಲವು ವಸ್ತುಗಳನ್ನು ನಮಗೆ ಹೇಗೆ ಅನುಕೂಲವಾಗುತ್ತದೆಯೋ ಹಾಗೆ ವಸ್ತುಗಳನ್ನು ಜೋಡಿಸಿ ಕೊಳ್ಳುತ್ತೇವೆ.
ಆದರೆ ಹೀಗೆ ಮಾಡುವುದು ತಪ್ಪು ಇದರಿಂದ ನಮ್ಮ ಹಣದ ಹರಿವು ಐಶ್ವರ್ಯ ಕುಂಠಿತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಹಣವನ್ನು ಇಡುವಂತಹ ಪೆಟ್ಟಿಗೆ ಅಥವಾ ಬೀರುವನ್ನು ನೈರುತ್ಯ ದಿಕ್ಕಿನಲ್ಲಿ ಇಡಬೇಕು. ಆಗ ಲಕ್ಷ್ಮಿ ದೇವಿ ಯು ಆಕರ್ಷಿಗಳಾಗುತ್ತಾಳೆ ಮತ್ತು ಮನೆಯಲ್ಲಿ ಯಾವುದೇ ಕುಂದು ಕೊರತೆ ಉಂಟಾಗುವುದಿಲ್ಲ ಹಾಗೂ ಅಗತ್ಯಕ್ಕೆ ಬೇಕಾಗಿರುವಂತಹ ಹಣಕಾಸು ನಿರಂತರವಾಗಿ ಹರಿದು ಬರುತ್ತದೆ.
ಹಣವನ್ನು ಇಡುವಂತಹ ಪೆಟ್ಟಿಗೆ ಅಥವಾ ಬೀರುವನ್ನು ಈಶಾನ್ಯ ದಿಕ್ಕಿನಲ್ಲಿ ಇಡಬಾರದು ಹಾಗೇನಾ ದರೂ ಈಶಾನ್ಯ ದಿಕ್ಕಿನಲ್ಲಿ ಇಟ್ಟರೆ ಹಣಕಾಸಿನ ಕೊರತೆಗಳು ಒಂದರ ಮೇಲೊಂದು ತಲೆದೂರುತ್ತಲೆ ಇರುತ್ತದೆ. ಹಣದ ಪೆಟ್ಟಿಗೆ ಅಥವಾ ಬೀರುವನ್ನು ತೆರೆಯುವ ದಿಕ್ಕು ಕೂಡ ಅತ್ಯಂತ ಪ್ರಮುಖ ಸ್ಥಾನವನ್ನು ವಹಿಸುತ್ತದೆ. ಬೀರುವನ್ನು ತೆಗೆಯುವಾಗ ಅದರ ಬಾಗಿಲು ದಕ್ಷಿಣ ಭಾಗಕ್ಕೆ ತೆಗೆದುಕೊಳ್ಳುವ ಹಾಗೆ ಇಡಬಾರದು.
ದಕ್ಷಿಣ ಭಾಗಕ್ಕೆ ಬಾಗಿಲು ತೆಗೆಯುವಂತಹ ಮನೆಯಲ್ಲಿ ಲಕ್ಷ್ಮಿ ದೇವಿ ವಾಸಿಸುವುದಿಲ್ಲ ಅಂಥವರ ಮನೆಯಲ್ಲಿ ಹಣಕಾಸಿನ ತೊಂದರೆಗಳು ಹೆಚ್ಚಾಗುತ್ತದೆ. ಹಾಗೂ ಹಣಕಾಸಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಎದು ರಿಸಬೇಕಾಗಬಹುದು. ಹಣವನ್ನು ಎಂದಿಗೂ ನೆಲದ ಮೇಲೆ ಇಡಬಾರದು ಮನೆಯ ಗೋಡೆಗೆ ಕಪಾಟುಗಳನ್ನು ಅಳವಡಿಸಿ ಅಲ್ಲಿ ಹಣವನ್ನು ಇಡಬಹುದು.
ಆದರೆ ನೆಲಕ್ಕೆ ತಾಕುವಂತೆ ನೇರವಾಗಿ ಹಣಕಾಸನ್ನು ಇಡಬಾರದು. ಹಣದ ಪೆಟ್ಟಿಗೆಯನ್ನು ಸಹ ನೆಲದ ಮೇಲೆ ನೇರವಾಗಿ ಇಡಬಾರದು ಯಾವುದಾದರೂ ಮರದ ಹಲಗೆ ಅಥವಾ ಬಟ್ಟೆಯನ್ನು ಹಾಕಿ ಅದರ ಮೇಲೆ ಇಡುವುದು ಸೂಕ್ತ. ಹಣದ ಪೆಟ್ಟಿಗೆಯನ್ನು ಸಾಕ್ಷಾತ್ ಲಕ್ಷ್ಮಿ ದೇವಿಯ ರೂಪ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ನೆಲದ ಮೇಲೆ ನೇರವಾಗಿ ಹಣವನ್ನು ಹಣದ ಪೆಟ್ಟಿಗೆಯನ್ನು ಇಟ್ಟರೆ ಲಕ್ಷ್ಮಿ ದೇವಿಗೆ ಅವಮಾನ ಮಾಡಿದಂತಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.