ನಿಮ್ಮ ಮನೆಯಲ್ಲಿ ನೀವು ಕನ್ನಡಿಯನ್ನು ಯಾವ ದಿಕ್ಕಿನಲ್ಲಿ ಹಾಕಿದ್ದೀರಿ ಎನ್ನುವುದನ್ನು ಪರೀಕ್ಷಿಸಿ ನೋಡಿ. ಅದರ ಮೇಲೆ ನಿರ್ಧಾರವಾಗುತ್ತದೆ ನಿಮ್ಮ ಮನೆಯ ಶಾಂತಿ ನೆಮ್ಮದಿ ಸಂತೋಷ ಸಮೃದ್ಧಿ ಆದಾಯ ಎಲ್ಲವೂ. ಹೌದು ಒಂದು ಕನ್ನಡಿ ಇಡೀ ಬದುಕನ್ನೇ ಬದಲಾಯಿಸುತ್ತದೆ ಎಂದರೆ ನೀವು ನಂಬುತ್ತೀರಾ ಆದರೆ ನಂಬಬೇಕು ಎನ್ನುತ್ತದೆ ವಾಸ್ತು ಶಾಸ್ತ್ರ.
ಒಂದು ಮಿರರ್ ಮಿರಾಕಲ್ ಮಾಡಿಬಿಡುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಹೌದು ನಿಮ್ಮ ಜೀವನದಲ್ಲಿ ಮಿರರ್ ಒಂದು ಮ್ಯಾಜಿಕ್ ಅನ್ನೇ ಮಾಡಿಬಿಡುತ್ತಂತೆ. ಹಾಗಾದರೆ ಈ ದಿನ ನಾವು ಹೇಳುವಂತಹ ಮಾಹಿತಿ ನಿಮಗೆ ತಿಳಿದರೆ ಅವರು ಇದು ನಿಜ ಎಂದು ನಿಮಗೆ ಮನವರಿಕೆಯಾಗುತ್ತದೆ. ಹಾಗಾದರೆ ಈಗಿನ ಮನೆಯಲ್ಲಿ ಎಂತಹ ಕನ್ನಡಿಯನ್ನು ಇಟ್ಟುಕೊಳ್ಳಬೇಕು?
ಇತ್ತೀಚಿನ ದಿನದಲ್ಲಿ ಮಿರರ್ ಎನ್ನುವುದು ಫ್ಯಾಷನ್ ಆಗಿ ಬದಲಾಗಿ ವಿವಿಧ ರೂಪದ ಮಿರರ್ ಗಳನ್ನು ನಾವು ನೋಡುತ್ತೇವೆ. ಹಾಗಾದರೆ ಮನೆಯಲ್ಲಿ ಯಾವ ರೀತಿಯಾಗಿ ಒಳ್ಳೆಯದಾಗುತ್ತದೆ ಎಂದರೆ ಎಂತಹ ಕನ್ನಡಿಯನ್ನು ಬಳಸಬೇಕು ಯಾವ ದಿಕ್ಕಿನಲ್ಲಿ ಈ ಕನ್ನಡಿಯನ್ನು ಇಟ್ಟರೆ ನಮ್ಮ ಮನೆಗೆ ಶುಭವಾಗುತ್ತದೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.
* ಸಾಮಾನ್ಯವಾಗಿ ಮನೆಯಲ್ಲಿ ಕನ್ನಡಿಯನ್ನು ಚೌಕಾಕಾರವಾಗಿ ಇರು ವಂತಹ ಕನ್ನಡಿಯನ್ನು ಇಟ್ಟುಕೊಳ್ಳುತ್ತೇವೆ ಆದರೆ ಇದು ತಪ್ಪು ಯಾವಾ ಗಲೂ ಉದ್ದನೆಯ ನಿಲುಗನ್ನಡಿಯನ್ನು ಯಾವಾಗಲೂ ಬಳಸಬೇಕು ಎಂದು ಹೇಳುತ್ತಾರೆ ವಾಸ್ತು ತಜ್ಞರು. ನೀವು ಮನೆಯಲ್ಲಿ ನಿಲುಗನ್ನಡಿ ಯನ್ನು ಇಟ್ಟು ನೋಡಿ ಮನೆಯಲ್ಲಿ ಆಗುವ ಶುಭ ಕಾರ್ಯಗಳು ನಿಮಗೆ ಅದರ ಸೂಚನೆಯನ್ನು ಹೇಳಿಬಿಡುತ್ತವೆ ಎನ್ನುತ್ತಾರೆ.
* ಯಾವಾಗಲೂ ಒಂದೇ ಶೇಪ್ ನ ಕನ್ನಡಿಯನ್ನು ಇಟ್ಟುಕೊಳ್ಳುವುದು ಕೂಡ ಶುಭ ಪ್ರಧವಲ್ಲ ಅಪ್ಪಿತಪ್ಪಿಯು ಉತ್ತರ ದಿಕ್ಕಿಗೆ ಚೌಕಕಾರದ ಕನ್ನಡಿಯನ್ನು ಇಡಲೇಬಾರದು. ಹಾಗೇನಾದರೂ ಆ ದಿಕ್ಕಿನಲ್ಲಿ ಇದ್ದರೆ ಎಂತಹ ಕಷ್ಟದ ಪರಿಸ್ಥಿತಿಗಳು ಎದುರಾಗುತ್ತದೆ ಎಂದು ನಿಮ್ಮ ಕಣ್ಣ ಮುಂದೆಯೇ ಗೊತ್ತಾಗುತ್ತದೆ.
* ಅದೇ ಉತ್ತರ ದಿಕ್ಕಿಗೆ ವೃತ್ತಾಕಾರವಾಗಿರುವ ಕನ್ನಡಿಯನ್ನು ಇಟ್ಟು ನೋಡಿ ಆಗ ಆಗುವ ಒಳ್ಳೆಯ ಕೆಲಸಗಳು ಕೂಡ ನಿಮ್ಮ ಗಮನಕ್ಕೆ ಬರುತ್ತದೆ. ಇದಕ್ಕೆ ಒಂದು ವಿಚಾರವಿದೆ ಮನೆಯಲ್ಲಿ ಪಂಚಭೂತಗಳು ಸಮನಾಗಿ ಇರುತ್ತದೆ. ಅಗ್ನಿ ಭೂಮಿ ಜಲ ವಾಯು ಆಕಾಶ ಹೀಗೆ ಒಂದೊಂದಕ್ಕೂ ಒಂದೊಂದು ಆಕಾರ ಇರುತ್ತದೆ.
ಅದಕ್ಕೆ ಹೇಳಿದ್ದು ವಾಸ್ತು ತಜ್ಞರು ಒಂದೊಂದು ದಿಕ್ಕಿಗೂ ಒಂದೊಂದು ಆಕಾರದ ಕನ್ನಡಿಯನ್ನು ಇಡಬೇಕು ಎಂದು ಹೌದು ನೀರು ಮತ್ತು ಸ್ಪೇಸ್ ಇವೆರಡು ತತ್ವಗಳ ಮಿಶ್ರಣವೇ ಕನ್ನಡಿ. ಕೆಲವೊಂದು ಮನೆಗಳಲ್ಲಿ ಈಶಾನ್ಯ ಭಾಗ ಕಡಿಮೆ ಇರಬಹುದು ಅದನ್ನು ಗೋಡೆ ಕನ್ನಡಿ ಹಾಕುವುದರಿಂದ ಜಾಸ್ತಿ ಮಾಡಬಹುದು.
* ಪೂರ್ವ ದಿಕ್ಕಿನಲ್ಲಿ ಕನ್ನಡಿಯನ್ನು ಹಾಕಬೇಕಾದರೆ ನೀವು ಖಂಡಿತವಾಗಿ ಯಾವುದೇ ಕಾರಣಕ್ಕೂ ಚೌಕಾಕಾರದ ಕನ್ನಡಿಯನ್ನು ಬಳಸಲೇಬೇಡಿ. ಬದಲಿಗೆ ಯಾವಾಗಲೂ ಉದ್ದವಾಗಿರುವ ನಿಲುಗನ್ನಡಿಯನ್ನೇ ಹಾಕಬೇಕು. ಆಗ ಮಾತ್ರ ಉತ್ತಮವಾದ ಫಲಿತಾಂಶ ನಿಮಗೆ ಸಿಗುತ್ತದೆ. ಧನಾಗಮನವೂ ಕೂಡ ದಿನೇ ದಿನೇ ಹೆಚ್ಚಾಗುತ್ತಾ ಹೋಗುತ್ತದೆ.
* ಹಾಗಾದರೆ ಚೌಕಾಕಾರವಾಗಿರುವಂತಹ ಕನ್ನಡಿಯನ್ನು ಯಾವ ದಿಕ್ಕಿ ನಲ್ಲಿ ಇಡಬೇಕು ಎಂದು ನೋಡುವುದಾದರೆ ಪಶ್ಚಿಮ ದಿಕ್ಕಿನಲ್ಲಿ ಇಡ ಬೇಕು. ಈ ದಿಕ್ಕಿನಲ್ಲಿ ಕನ್ನಡಿ ಹಾಕುವುದರಿಂದ ನಿಮಗೆ ಒಳ್ಳೆಯ ಶುಭ ಘಟನೆಗಳು ಜರಗುವುದಕ್ಕೆ ಪ್ರಾರಂಭವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.