ಗ್ರಾಮೀಣ ಭಾಗದಲ್ಲಿ ರೈತರಿಗೆ (farmers) ಕೃಷಿ ಜೊತೆ ಜೊತೆಗೆ ಸಾಗುವ ಪಶುಪಾಲನೆ ಹೈನುಗಾರಿಕೆ ಎಲ್ಲವೂ ಕೂಡ ಆದಾಯದ ಮೂಲಗಳೇ ಆಗಿವೆ. ಕೃಷಿಗೆ ಹೊಂದಿಕೊಂಡಂತೆ ನಡೆಯುವ ಈ ಕಾರ್ಯ ಚಟುವಟಿಕೆಗಳಿಂದ ರೈತನಿಗೆ ಕೃಷಿಗೆ ಬೇಕಾದ ಆದಾಯ ದೊರೆಯುತ್ತದೆ.
ರೈತನ ದೈನಂದಿಕ ಜೀವನ ನಿರ್ವಹಣೆಯಿಂದ ಹಿಡಿದು ಆತನ ಕುಟುಂಬದ ಅಗತ್ಯತೆಗಳಿಗೆ ಈ ಮೂಲಗಳಿಂದ ಬರುವ ಹಣವು ಬಹಳ ಸಹಾಯ ಮಾಡುತ್ತದೆ. ಹಳ್ಳಿಗಾಡಿನಲ್ಲಿ ದಿನಪೂರ್ತಿ ಜಮೀನಲ್ಲಿ ಕೆಲಸ ಇಲ್ಲದ ಕಾರಣ ಉಪಕಸುಬುಗಳಾಗಿ ಕುಟುಂಬದ ಎಲ್ಲರೂ ಒಟ್ಟಿಗೆ ಜವಾಬ್ದಾರಿ ತೆಗೆದುಕೊಂಡು ಇವುಗಳಲ್ಲಿ ಪಾಲ್ಗೊಂಡು ಕುಟುಂಬ ನಿರ್ವಹಣೆಗಾಗಿ ಆದಾಯದ ಮೂಲ ಹುಡುಕುತ್ತಾರೆ.
ಈ ರೀತಿ ಮಾಡುವವರು ಮೊದಲು ನಿರ್ಧಾರ ಮಾಡುವುದೇ ಪಶುಗಳನ್ನು ಸಾಕಲು. ಹಸು, ಎತ್ತು, ಎಮ್ಮೆ, ಕುರಿ, ಮೇಕೆ ಸಾಕಾಣಿಕೆ ಜಮೀನು ಹೊಂದಿರುವ ರೈತನಿಗೆ ಇದು ಕಷ್ಟದ ಕೆಲಸವೇ ಅಲ್ಲ. ಪ್ರತಿನಿತ್ಯವೂ ಜಮೀನಿಗೆ ಕೆಲಸಕ್ಕೆ ಹೋಗುವಾಗ ಇವುಗಳನ್ನು ಹೊಡೆದುಕೊಂಡು ಹೋಗಿ ಮೇಯಿಸುತ್ತಾ ಜೊತೆ ಜೊತೆಗೆ ಬದುಕುತ್ತಿರುತ್ತಾನೆ.
ಈ ಸುದ್ದಿ ಓದಿ:- ಮಾತ್ರೆ, ಟಾನಿಕ್ ಎಕ್ಸ್ ಪಾಯರ್ ಆಗಿದೆ ಅಂತ ಬಿಸಾಡಿ ತಪ್ಪು ಮಾಡಬೇಡಿ.! ಇದು ಬಹಳಷ್ಟು ಉಪಯೋಗಕ್ಕೆ ಬರುತ್ತೆ.!
ಆದರೆ ಮರಳಿ ಮನೆಗೆ ಹಿಂತಿರುಗಿದ ಮೇಲೆ ಅವುಗಳಿಗೂ ಕೂಡ ಸೂರಿನ ಅವಶ್ಯಕತೆ ಇರುತ್ತದೆ ಎಲ್ಲಾ ರೈತರಿಗೆ ಕೂಡ ಸ್ವಂತ ಖರ್ಚಿನಲ್ಲಿ ಬಿಸಿಲು ಮಳೆಗೆ ತನ್ನ ಸಾಕು ಪ್ರಾಣಿಗಳಿಗೆ ತೊಂದರೆ ಆಗದಂತೆ ಶೆಡ್ ನಿರ್ಮಾಣ ಮಾಡಿಕೊಡುವ ಶಕ್ತಿ ಇರುವುದಿಲ್ಲ ಇತ್ತ ಈ ಕಾರಣದಿಂದ ರೈತನಿಗೆ ಸಮಾಧಾನವು ಇರುವುದಿಲ್ಲ.
ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ಸಿಲುಕಿರುವ ರೈತನ ಪರಿಸ್ಥಿತಿಯನ್ನು ಮನಗಂಡ ಸರ್ಕಾರವು ರೈತನ ಜಾನುವಾರುಗಳ ರಕ್ಷಣೆ ಮಾಡಲು ಪಶು ಶೆಡ್ ನಿರ್ಮಾಣ (Pashu Shed) ಮಾಡಿಕೊಳ್ಳುವುದಕ್ಕೆ ಮಹಾತ್ಮ ಗಾಂಧೀಜಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MNREGA) ಮೂಲಕ ನೆರವು ನೀಡುತ್ತಿದೆ. ಎಲ್ಲ ಅರ್ಹ ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಹೇಗೆ ಅರ್ಜಿ ಸಲ್ಲಿಸಬೇಕು? ಈ ಪ್ರಕ್ರಿಯೆ ಹೇಗೆ ಜರುಗುತ್ತದೆ? ಬೇಕಾಗುವ ದಾಖಲೆಗಳೇನು? ಇತ್ಯಾದಿ ವಿವರ ಹೀಗಿದೆ ನೋಡಿ.
ಯೋಜನೆಯ ಹೆಸರು:- ನರೇಗಾ ಯೋಜನೆಯಡಿ ಪಶು ಶೆಡ್ ನಿರ್ಮಾಣ
ಸಿಗುವ ಸಹಾಯಧನ:- ಗರಿಷ್ಠ 2 ಲಕ್ಷದವರೆಗೆ
ಅರ್ಜಿ ಸಲ್ಲಿಸಲು ಕಂಡಿಷನ್ ಗಳು:-
* ನಮ್ಮ ಕರ್ನಾಟಕ ರೈತರಿಗೆ ಮಾತ್ರ ಈ ಯೋಜನೆಯ ಪ್ರಯೋಜನ ಸಿಗುವುದು
* 18 ವರ್ಷ ಮೇಲ್ಪಟ್ಟ ಪಶು ಪಾಲನೆಯಲ್ಲಿ ತೊಡಗಿರುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸೇರಿದ ರೈತನ ಮಾತ್ರ ಅರ್ಜಿ ಸಲ್ಲಿಸಬಹುದು
* ಪೂರಕವಾಗಿ ಕೇಳಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು.
ಈ ಸುದ್ದಿ ಓದಿ:- ಜೂನ್ 01 ನೇ ತಾರೀಕಿನಿಂದ 40 ವರ್ಷಗಳ ಕಾಲ ಈ 6 ರಾಶಿಯವರಿಗೆ ಗಜಕೇಸರಿ ಯೋಗ ಹೆಜ್ಜೆ ಹೆಜ್ಜೆಗೂ ದುಡ್ಡಿನ ಮಳೆ.!
ಬೇಕಾಗುವ ದಾಖಲೆಗಳು :-
* ರೈತನ ಆಧಾರ್ ಕಾರ್ಡ್
* ರೇಷನ್ ಕಾರ್ಡ್
* ರೈತನ ಶೆಡ್ ನಿರ್ಮಾಣಕ್ಕೆ ಯೋಚನಾ ಘಟಕದ ವಿವರ
* ಶೆಡ್ ನಿರ್ಮಾಣ ಮಾಡುವುದುಕ್ಕೆ ಸೂಕ್ತ ಸ್ಥಳ ಮತ್ತು ಅದಕ್ಕೆ ಸಂಬಂಧಪಟ್ಟ ದಾಖಲೆ
* ಬ್ಯಾಂಕ್ ಪಾಸ್ ಬುಕ್ ಇವರ
* ಮೊಬೈಲ್ ಸಂಖ್ಯೆ
* ರೈತನು ಸಾಕಿರುವ ಪಶುಗಳ ಬಗ್ಗೆ ವೈದ್ಯಕೀಯ ಇಲಾಖೆಯಿಂದ ಪಡೆದ ಪ್ರಮಾಣ ಪತ್ರಗಳು
* ಇನ್ನಿತರ ಪ್ರಮುಖ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:-
* ನೇರವಾಗಿ ರೈತನು ತನ್ನ ಗ್ರಾಮ ಪಂಚಾಯಿತಿಗೆ ಭೇಟಿ ಕೊಟ್ಟು ಯೋಜನೆ ಬಗ್ಗೆ ಸಂಪೂರ್ಣ ವಿವರ ಪಡೆದು ನೀಡಲಾಗುವ ನರೇಗಾ ಯೋಜನೆ ಅರ್ಜಿ ಫಾರಂ ಭರ್ತಿ ಮಾಡಿ ಪೂರಕ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು
* ಅರ್ಜಿ ಸಲ್ಲಿಕೆ ಯಶಸ್ವಿಯಾಗಿ ಅನುಮೋದನೆ ಆದ ನಂತರ DBT ಮೂಲಕ ಹಣ ಖಾತೆಗೆ ತಲುಪುತ್ತದೆ.
* ಹತ್ತಿರದ ಪಶು ವೈದ್ಯ ಶಾಲೆ ಅಥವಾ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಿದರೆ ಕೂಡ ಹೆಚ್ಚಿನ ಮಾಹಿತಿ ಸಿಗುತ್ತದೆ.