ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತನಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಕೃಷಿ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ರೈತನನ್ನು ಕೂಡ ಆರ್ಥಿಕವಾಗಿ ಶಕ್ತನನ್ನಾಗಿ ಮಾಡುವ ಉದ್ದೇಶದಿಂದ ಕೃಷಿ ಚಟುವಟಿಕೆ ಹಾಗೂ ಯಂತ್ರೋಪಕರಣಗಳ ಖರೀದಿಗೆ ಬಡ್ಡಿ ರಹಿತ ಸಾಲಗಳು, ಸಾಲ ಮನ್ನಾ, ಸಬ್ಸಿಡಿ ಸಾಲ ವಿತರಣೆ, ಸಹಾಯಧನ, ಬೆಳೆ ವಿಮೆ ಇನ್ನು ಮುಂತಾದ ಅನೇಕ ಅನುಕೂಲತೆಯನ್ನು ಸರ್ಕಾರ ಮಾಡಿಕೊಟ್ಟಿದೆ.
ಈಗ ಕರ್ನಾಟಕ ಸರ್ಕಾರವು ಕೃಷಿ ಇಲಾಖೆ ವತಿಯಿಂದ ನಮ್ಮ ರಾಜ್ಯದಲ್ಲಿರುವ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕಾಗಿ ಉಚಿತವಾಗಿ ತಾಡಪತ್ರಿ ವಿತರಣೆ (Free Tarpaulin Scheme) ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. 2023-24ನೇ ಸಾಲಿನ ಉಚಿತ ತಾಡಪತ್ರಿ ವಿತರಣೆ ಕೃಷಿ ಇಲಾಖೆ (Agricultural Depatment) ಅರ್ಜಿ ಆಹ್ವಾನ ಮಾಡುತ್ತಿದೆ.
ಮೊಬೈಲ್ ಕಳೆದು ಹೋದ್ರೆ ಟೆನ್ಶನ್ ಬೇಡ, ಇನ್ಮುಂದೆ ಸರ್ಕಾರವೇ ನಿಮ್ಮ ಫೋನ್ ಹುಡುಕಿ ಕೊಡುತ್ತದೆ.!
ಕರ್ನಾಟಕದ ಅರ್ಹ ರೈತರು ಅರ್ಜಿ ಸಲ್ಲಿಸಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಈ ಬಾರಿ ಈ ಹಿಂದಿಗಿಂತಲೂ ಕೂಡ ಉತ್ತಮ ಗುಣಮಟ್ಟ ಹೊಂದಿರುವ ಕೃಷಿ ಹೊಂಡಗಳಲ್ಲಿ ಬಳಕೆ ಮಾಡಬಹುದಾದಂತಹ ಟಾರ್ಪಲಿನ್ ಗಳನ್ನು ರೈತರಿಗೆ ನೀಡಲಾಗುತ್ತಿದೆ. ಈ ಟಾರ್ಪಲಿನ್ ಗಳನ್ನು ರೈತರು ಕೃಷಿಹೊಂಡಗಳಲ್ಲಿ ನೀರು ಸಂಗ್ರಹಣೆ ಕಾರಣಕ್ಕಾಗಿ ಮಾತ್ರ ಅಲ್ಲದೆ ಮಳೆ, ಗಾಳಿ, ಬಿಸಿಲು ಮುಂತಾದ ಹವಾಮಾನ ವೈಪರಿತ್ಯ ಸಂದರ್ಭದಲ್ಲಿ ಕಟಾವಿನ ನಂತರ ತಾವು ಬೆಳೆದ ಕೃಷಿ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ಕೂಡ ಬಳಸಬಹುದಾಗಿದೆ.
ಇನ್ನೊಬ್ಬರ ಖಾತೆಗೆ ಒಂದು ಲಕ್ಷಕ್ಕಿಂತ ಹೆಚ್ಚಿನ ಹಣ ಡೆಪಾಸಿಟ್ ಮಾಡುವವರಿಗೆ RBI ಮಹತ್ವದ ಸೂಚನೆ.!
ಕೃಷಿ ಕ್ಷೇತ್ರದಲ್ಲಿ ಬೆಳೆಗಾರರಿಗೆ ನಾನಾ ವಿಧಾನದಲ್ಲಿ ಅನುಕೂಲಕ್ಕೆ ಬರುವ ಅಗತ್ಯ ಪರಿಕರವಾದ ಈ ಟಾರ್ಪಲಿನ್ ವಿತರಣೆ ಕಾರ್ಯಕ್ರಮದಿಂದ ರಾಜ್ಯದ ಲಕ್ಷಾಂತರ ರೈತರಿಗೆ ಅನುಕೂಲ ಆಗಲಿದೆ. ಹಾಗಾಗಿ ಎಲ್ಲಾ ರೈತರು ಈ ಪ್ರಯೋಜನ ಪಡೆದುಕೊಳ್ಳಲಿ ಎನ್ನುವ ಕಾರಣಕ್ಕಾಗಿ ಅರ್ಜಿ ಸಲ್ಲಿಸುವ ವಿಧಾನ ಹಾಗೂ ಕೇಳಲಾಗುವ ದಾಖಲೆ ಪತ್ರಗಳು ಮತ್ತು ರೈತರು ಎಲ್ಲಿ ಅರ್ಜಿ ಸಲ್ಲಿಸಬೇಕು ಎನ್ನುವ ಮಾಹಿತಿಯನ್ನು ತಿಳಿಸುತ್ತೇವೆ. ಈ ಪ್ರಕಾರವಾಗಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಿ.
ಯೋಜನೆಯ ಹೆಸರು:- ಉಚಿತ ತಾಡಪತ್ರಿ ವಿತರಣೆ.
ಅರ್ಜಿ ಸಲ್ಲಿಸಲು ಅರ್ಹತೆಗಳು:-
● ಕರ್ನಾಟಕದ ರೈತರಾಗಿರಬೇಕು
● ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೇಳಲಾಗಿರುವ ಎಲ್ಲ ದಾಖಲೆಗಳನ್ನು ಕೂಡ ಹೊಂದಿರಬೇಕು
● ಕಳೆದ ಮೂರು ವರ್ಷಗಳ ಹಿಂದೆ ಉಚಿತ ಟಾರ್ಪಲಿನ್ ವಿತರಣೆ ಯೋಜನೆಯಡಿ ಪ್ರಯೋಜನ ಪಡೆದಿರಬಾರದು
● ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಮಾತ್ರ ಅವಕಾಶ
● ಹೆಚ್ಚಿನ ಅರ್ಜಿ ಸಲ್ಲಿಕೆಯಾದಲ್ಲಿ ಅರ್ಜಿ ಸಲ್ಲಿಸಿದ ಹಿರಿತನದ ಆಧಾರದ ಮೇಲೆ ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ನೀಡಲಾಗುವುದು.
ಬೇಕಾಗುವ ಪ್ರಮುಖ ದಾಖಲೆಗಳು:-
● ರೈತನ ಆಧಾರ್ ಕಾರ್ಡ್
● ಜಮೀನಿನ ಪಹಣಿ ಪತ್ರ
● ಇತ್ತೀಚಿನ ಭಾವಚಿತ್ರ
● ಮೊಬೈಲ್ ಸಂಖ್ಯೆ
● ಉಚಿತ ಟಾರ್ಪಲಿಂಗ್ ಯೋಜನೆಗೆ ಅರ್ಜಿ ನಮೂನೆ
ಅರ್ಜಿ ಸಲ್ಲಿಸುವ ವಿಧಾನ:-
● ರೈತರು ಮೇಲೆ ತಿಳಿಸಲಾದ ಎಲ್ಲಾ ದಾಖಲೆಗಳ ಜೊತೆ ಹೋಗಿ ತಮ್ಮ ವ್ಯಾಪ್ತಿಗೆ ಬರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಕೊಡಬೇಕು.
● ರೈತ ಸಂಪರ್ಕ ಕೇಂದ್ರದಲ್ಲಿ ನೀಡಲಾಗುವ ಅರ್ಜಿ ನಮೂನೆಯಲ್ಲಿ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಪೂರಕ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಿದರೆ ಈ ಯೋಜನೆ ಫಲಾನುಭವಿಗಳಾಗಬಹುದು.
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸುವುದಕ್ಕೆ ಆರಂಭ ದಿನಾಂಕ:- 24 ಜುಲೈ, 2023.
● ಅರ್ಜಿ ಸಲ್ಲಿಸುವುದಕ್ಕೆ ಕೊನೆಯ ದಿನಾಂಕ:- 31 ಆಗಸ್ಟ್, 2023.