ಇನ್ನೊಬ್ಬರ ಖಾತೆಗೆ ಒಂದು ಲಕ್ಷಕ್ಕಿಂತ ಹೆಚ್ಚಿನ ಹಣ ಡೆಪಾಸಿಟ್ ಮಾಡುವವರಿಗೆ RBI ಮಹತ್ವದ ಸೂಚನೆ.!

ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಪೇಮೆಂಟ್ ಹೆಚ್ಚಾಗಿ ನಡೆಯುತ್ತಿದೆ. ನಾವು ಶಾಪಿಂಗ್ ಮಾಡುವಾಗಲೂ ಅಥವಾ ಮತ್ತೊಬ್ಬರಿಗೆ ಯಾವುದಾದರೂ ಕಾರಣಕ್ಕೆ ಹಣ ಕೊಡುವಾಗಲು ಯಾವುದೇ ರಿಚಾರ್ಜ್ ಮಾಡಬೇಕಾದಗಲೂ ಯಾವುದೇ ಶುಲ್ಕ ಪಾವತಿ ಮಾಡಬೇಕಾದಾಗಲೂ UPI ಆಧಾರಿತ ಈ ಡಿಜಿಟಲ್ ಪೇಮೆಂಟ್ ಆಪ್ ಗಳ ಮೊರೆ ಹೋಗುತ್ತೇವೆ.

ಫೋನ್ ಪೇ, ಗೂಗಲ್ ಪೇ, ಪೇಟಿಎಂ ಈ ರೀತಿ UPI ಆಧಾರಿತ ಆಪ್ ಗಳ ಮೂಲಕ ಆನ್ಲೈನ್ ಪೇಮೆಂಟ್ ಮಾಡುವಾಗ ಒಮ್ಮೊಮ್ಮೆ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ರಾಂಗ್ ಆಗಿ ಟ್ರಾನ್ಸಾಕ್ಷನ್ ಮಾಡಿಬಿಡುತ್ತೇವೆ. ಒಂದು ವೇಳೆ ನಾವು ಬೇರೆಯವರ ಖಾತೆಗೆ ಹಣ ಹಾಕಲು ಹೋಗಿ ತಪ್ಪಾಗಿ ಮತ್ತೊಬ್ಬರ ಖಾತೆಗೆ ಹಣ ಹಾಕಿದರೆ ಪರಿಣಾಮ ಏನಾಗಬಹುದು ಯೋಚಿಸಿ.

ರಾಜ್ಯದ ರೈತರಿಗೆಲ್ಲಾ ಸಿಹಿಸುದ್ದಿ, ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ ಘೋಷಿಸಿದ ಮಾನ್ಯ ಮುಖ್ಯಮಂತ್ರಿಗಳು…

ಒಂದು ವೇಳೆ ನಾವು ಹಾಕಿದ ಮೊತ್ತ ಕಡಿಮೆಯಾಗಿದ್ದರೆ ಸುಮ್ಮನಾಗಿರಬಹುದು. ಆದರೆ ಸಾವಿರಾರು ಮೊತ್ತದ ಹಣ ಅಥವಾ ಲಕ್ಷಾಂತರ ಹಣವನ್ನು ಈ ರೀತಿ ತಪ್ಪಾದ ಅಕೌಂಟಿಗೆ ಹಾಕಿಬಿಟ್ಟರೆ ಅದು ನಮಗಾಗುವ ಅತಿ ದೊಡ್ಡ ನಷ್ಟ. ಅದು ಕಷ್ಟಪಟ್ಟು ಸಂಪಾದನೆ ಮಾಡಿದ ಹಣವಾಗಿದ್ದರೆ ಯಾರು ಕೂಡ ಸುಲಭವಾಗಿ ಬಿಟ್ಟುಕೊಡಲು ಮನಸ್ಸು ಮಾಡುವುದಿಲ್ಲ.

ಇಂತಹ ಸಂದರ್ಭದಲ್ಲಿ ಅದನ್ನು ಹೇಗೆ ವಾಪಸ್ ಪಡೆಯಬಹುದು ಅಥವಾ ಈ ಬಗ್ಗೆ ಬ್ಯಾಂಕ್ ನಿಯಮಗಳು ಏನಿದೆ RBI ಈ ವಿಚಾರವಾಗಿ ಏನೆಂದು ತಿಳಿಸಿದೆ ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ನೀವೇನಾದರೂ ತಪ್ಪಾದ ಅಕೌಂಟಿಗೆ ಈ ರೀತಿ ಆನ್ಲೈನ್ ಪೇಮೆಂಟ್ ಮಾಡಿ ಹಣ ಹಾಕಿಬಿಟ್ಟಿದ್ದರೆ ತಕ್ಷಣವೇ ಕಸ್ಟಮರ್ ಕೇರ್ ಗೆ ಕರೆ ಮಾಡಿ ಮಾಹಿತಿ ತಿಳಿಸಿ, ಸಹಾಯ ಪಡೆದುಕೊಳ್ಳಿ.

ಪೋಸ್ಟ್ ಆಫೀಸ್ ನಾ ಈ ಸ್ಕೀಮ್ ನಲ್ಲಿ ಕೇವಲ 100 ರೂಪಾಯಿ ಹೂಡಿಕೆ ಮಾಡಿ ಸಾಕು 20 ಲಕ್ಷ ಸಿಗುತ್ತೆ.!

ನೀವು ಹಣ ಹಾಕಿರುವ ಬ್ಯಾಂಕ್ ಶಾಖೆಗೆ ಕರೆ ಮಾಡಿ ಮಾಹಿತಿ ತಿಳಿಸಿ ಮತ್ತು ನೀವು ನಿಮ್ಮ ಯಾವ ಅಕೌಂಟಿಂದ ಡಿಪೋಸಿಟ್ ಮಾಡಿದ್ದೀರಾ ಆ ನಿಮ್ಮ ಬ್ಯಾಂಕ್ ಅಕೌಂಟ್ ಗೂ ಕೂಡ ಕರೆ ಮಾಡಿ ಮಾಹಿತಿ ತಿಳಿಸಿ. ಆಗ ಅವರು ನಿಮಗೆ ಕಂಪ್ಲೇಂಟ್ ರೈಸ್ ಮಾಡಿ ನಂಬರ್ ಕೊಡುತ್ತಾರೆ. ನಿಮ್ಮ ಹಣವನ್ನು ವಾಪಸು ತರುವುದಕ್ಕೆ ಅವರು ಕೂಡ ನಿಮಗೆ ಸಹಾಯ ಮಾಡುತ್ತಾರೆ.

ಆದರೆ ನಿಮ್ಮ ಹಣ ಖಂಡಿತವಾಗಿ ವಾಪಸ್ ಬರುತ್ತದೆ ಎನ್ನುವ ಯಾವುದೇ ಗ್ಯಾರೆಂಟಿ ನೀಡುವುದಿಲ್ಲ. ಯಾಕೆಂದರೆ ನೀವು ಮಿಸ್ ಆಗಿ ಬೇರೆಯವರಿಗೆ ಡೆಪಾಸಿಟ್ ಮಾಡಿರುವ ಖಾತೆ ಸಂಖ್ಯೆ ತಪ್ಪಾಗಿ ಇದ್ದು ಆ ರೀತಿಯ ಯಾವುದೇ ಅಕೌಂಟ್ ಇಲ್ಲದೆ ಹೋದಲ್ಲಿ ನಿಮಗೆ ತಕ್ಷಣವೇ ಹಣ ಬರುತ್ತದೆ ಆದರೆ ಬೇರೆ ತಪ್ಪಾದ ವ್ಯಕ್ತಿಯ ಖಾತೆಗೆ ಹಣ ಹೋಗಿದ್ದಲ್ಲಿ ಖಂಡಿತವಾಗಿಯೂ ವಾಪಸ್ಸು ಬರುತ್ತದೆ ಎಂದು ಹೇಳುವುದು ಕಷ್ಟ ಸಾಧ್ಯ.

ಅನ್ನದಾತನಿಗೆ ಸಾಲ ಮನ್ನಾ ಭಾಗ್ಯ ಕರುಣಿಸಿದ ನೂತನ ಸರ್ಕಾರ, ಈಗಲೇ ಅರ್ಜಿ ಸಲ್ಲಿಸಿ.!

ಆಗ ನೀವು ಬ್ಯಾಂಕ್ಗಳನ್ನು ದೂಷಿಸುವಂತಿಲ್ಲ ಎಂದು RBI ನಿಯಮ ಹೇಳುತ್ತದೆ. ಇತ್ತೀಚಿಗೆ SBI ಬ್ಯಾಂಕ್ ಕೂಡ ಈ ರೀತಿ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಘೋಷಣೆಯನ್ನು ಹೊರಡಿಸಿದೆ. ಅದೇನೆಂದರೆ, ನೀವು ಆನ್ಲೈನ್ ವ್ಯವಹಾರ ಮಾಡುವಾಗ ಎರಡು ಅಥವಾ ಎರಡಕ್ಕಿಂತ ಹೆಚ್ಚು ಬಾರಿ ಎಲ್ಲಾ ವಿವರಗಳನ್ನು ಸರಿಯಾಗಿ ಪರಿಶೀಲಿಸಿ ನಂತರ ಪಿನ್ ಕೋಡ್ ಅನ್ನು ಹಾಕಬೇಕು.

ಇಲ್ಲವಾದಲ್ಲಿ ನೀವು ತಪ್ಪಾಗಿ ಮಾಡಿದ ಎಡವಟ್ಟುಗಳಿಗೆ ಬ್ಯಾಂಕ್ ಹೊಣೆ ಆಗುವುದಿಲ್ಲ. ಬ್ಯಾಂಕ್ ಗಳು ನಿಮ್ಮ ಹಣವನ್ನು ವಾಪಸ್ ತರುವುದಕ್ಕೆ ಮ್ಯಾಕ್ಸಿಮಮ್ ಸಹಾಯ ಮಾಡುತ್ತವೆ, ಒಂದು ವೇಳೆ ಸಾಧ್ಯವಾಗದೇ ಹೋದರೆ ಬ್ಯಾಂಕ್ ಗಳು ಹೊಣೆಯಲ್ಲ. ನೀವು ಮಾಡುವ ಹಣದ ವ್ಯವಹಾರಗಳಿಗೆ ನೀವೇ ಸಂಪೂರ್ಣ ಜವಾಬ್ದಾರಿ ಎಂದು ತಿಳಿಸಿದೆ. ಹಾಗಾಗಿ ಇನ್ನು ಮುಂದೆ ದೊಡ್ಡ ಮೊತ್ತದ ಹಣವನ್ನು ಆನ್ಲೈನ್ ಟ್ರಾನ್ಸ್ಫರ್ ಮಾಡುವ ಮುನ್ನ ಎಚ್ಚರಿಕೆಯಿಂದ ಮಾಡಿ.

Leave a Comment