ಮುಖ್ಯಮಂತ್ರಿ ಸಿದ್ದರಾಮಯ್ಯ (C.M Siddaramaiah ) ಅವರು ರಾಜ್ಯದಲ್ಲಿ ಎರಡನೇ ಬಾರಿ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡ ಮೇಲೆ ತಮ್ಮ ಪಕ್ಷವು ಅಧಿಕಾರ ಸ್ವೀಕರಿಸುವ ಮುನ್ನ ಘೋಷಿಸಿದ್ದ ಪಂಚಖಾತ್ರಿ ಯೋಜನೆಗಳ ಜಾರಿ ಜೊತೆಗೆ ಗ್ಯಾರಂಟಿಯೇತರ ಯೋಜನೆಗಳ ಬಗ್ಗೆ ಕೂಡ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.
ಆ ಪೈಕಿ ರೈತ ವರ್ಗವನ್ನು(Farmers) ಕೂಡ ಗಮನದಲ್ಲಿಟ್ಟುಕೊಂಡು ಅವರಿಗಾಗಿ ಹೊಸ ಯೋಜನೆಗಳನ್ನು ಜಾರಿಗೆ ತಂದಿರುವ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಆಧುನಿಕ ಯಂತ್ರೋಪಕರಣಗಳ ಬಳಕೆಯಿಂದ ಕೃಷಿಯಲ್ಲಿ ಹೆಚ್ಚಿನ ಸಾಧನೆ ಪಡೆದು ರೈತರು ಲಾಭ ಮಾಡಬೇಕು ಎನ್ನುವ ಉದ್ದೇಶದಿಂದ ಯಂತ್ರೋಪಕರಣಗಳನ್ನು ಖರೀದಿಸುವ ರೈತರಿಗೆ ಸಬ್ಸಿಡಿ (Subsidy) ಯನ್ನು ಘೋಷಣೆ ಮಾಡಿದ್ದಾರೆ.
ಪೋಸ್ಟ್ ಆಫೀಸ್ ನಾ ಈ ಸ್ಕೀಮ್ ನಲ್ಲಿ ಕೇವಲ 100 ರೂಪಾಯಿ ಹೂಡಿಕೆ ಮಾಡಿ ಸಾಕು 20 ಲಕ್ಷ ಸಿಗುತ್ತೆ.!
ಮುಖ್ಯಮಂತ್ರಿಗಳ ಘೋಷಿಸಿರುವ ಈ ಹೊಸ ಆದೇಶದ ಕುರಿತು ಮಾಹಿತಿ ಇಲ್ಲಿದೆ ನೋಡಿ. ಬಿತ್ತನೆ ಮಾಡುವುದರಿಂದ ಬೆಳೆ ಕಟಾವು ಹಂತದ ತನಕ ರೈತರಿಗೆ ಅನುಕೂಲಕ್ಕೆ ಬರುವ ಆಧುನಿಕ ಯಂತ್ರೋಪಕರಣಗಳಾದ ಟ್ರಾಕ್ಟರ್ ಚಾಲಿತ ಟಿಲ್ಲರ್, ಬೌಂಡರ್, ಕ್ರಾಪ್ ರೀಪರ್ ಇನ್ನು ಮುಂತಾದ ಯಂತ್ರೋಪಕರಣಗಳು ಮಾತ್ರವಲ್ಲದೆ ಸೂಪರ್ ಸೀಡರ್ ಯಂತ್ರಗಳ ಖರೀದಿಗೂ ಸರ್ಕಾರ ಸಬ್ಸಿಡಿ ಘೋಷಿಸಿದೆ.
ಈ ಕೃಷಿ ಯಂತ್ರೋಪಕರಣ ಅನುದಾನದ ಯೋಜನೆಯಡಿ ಅರ್ಹ ರೈತರು ಅರ್ಜಿ ಸಲ್ಲಿಸಿ ಈ ಬಾರಿ 80%ವರೆಗು ಕೂಡ ಸಬ್ಸಿಡಿ ಸಹಾಯ ಪಡೆಯಬಹುದಾಗಿದೆ. ಇವುಗಳಿಗೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ, ಎಲ್ಲಿ ಅರ್ಜಿ ಸಲ್ಲಿಸಬೇಕು, ಅರ್ಜಿ ಸಲ್ಲಿಸಲು ಯಾವ ರೈತರು ಅರ್ಹರು ಇನ್ನು ಮುಂತಾದ ವಿವರಗಳನ್ನು ತಿಳಿಸುತ್ತಿದ್ದೇವೆ. 6 ಅಡಿ, 7 ಅಡಿ ಮತ್ತು 8 ಅಡಿ ಎತ್ತರದಲ್ಲಿ ದೊರಕುವ ಎಲ್ಲಾ ಮೂರು ಬಗೆಯ ಟ್ರಾಕ್ಟರ್ ಚಾಲಿತ ಸೂಪರ್ ಸೀಡರ್ ಗಳ ಮೇಲೆ ಈ ಸಬ್ಸಿಡಿ ಅನುದಾನ ಸಿಗುತ್ತಿದೆ.
ನಿಮ್ಮ ಮೊಬೈಲ್ ಅನ್ನು ಯಾರದ್ರು ಕಳ್ಳ ಕದ್ದಿದ್ರೆ ಆ ಫೋನ್ ಬಳಸಲಾಗದಂತೆ ಮಾಡುವ ಸುಲಭ ವಿಧಾನ.!
ಸಬ್ಸಿಡಿ ವಿವರ:-
● ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿರುವ ರೈತರುಗಳು 80% ರಷ್ಟು ಈ ಸಬ್ಸಿಡಿ ಪಡೆಯಲಿದ್ದಾರೆ.
● ಸಾಮಾನ್ಯ ವರ್ಗದ ರೈತರು 75% ವರೆಗು ಕೂಡ ಈ ಸಬ್ಸಿಡಿ ಪಡೆಯಲಿದ್ದಾರೆ.
● ಸಾಮಾನ್ಯ ವರ್ಗದ ರೈತರಿಗೆ 6 ಅಡಿ ಸೂಪರ್ ಸೀಡರ್ ಮೇಲೆ ಗರಿಷ್ಠ 1,43,000ರೂ.
● 7 ಅಡಿ ಸೂಪರ್ ಸೀಡರ್ ಮೇಲೆ ಗರಿಷ್ಠ 1,50,000ರೂ.
● 8ಅಡಿ ಸೂಪರ್ ಸೀಡರ್ ಮೇಲೆ 1,57,000 ಅನುದಾನ ಸಿಗುತ್ತಿದೆ.
ಅರ್ಜಿ ಸಲ್ಲಿಸುವ ವಿಧಾನ:-
●”ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಕೊಟ್ಟು ಅರ್ಜಿ ಜೊತೆಗೆ ಪೂರಕ ದಾಖಲೆಗಳನ್ನು ಸಲ್ಲಿಸಿದರೆ ಲಭ್ಯತೆ ಆಧಾರದ ಮೇಲೆ ಸಬ್ಸಿಡಿ ಸಿಗುತ್ತದೆ.
ಕೃಷಿ ಇಲಾಖೆಯು ಕೆ-ಕಿಸಾನ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಮೊಬೈಲ್ ಮೂಲಕವೂ ವೆಬ್ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:-
● ರೈತರ ಆಧಾರ್ ಕಾರ್ಡ್
● ರೈತ ನೋಂದಣಿ ಸಂಖ್ಯೆ
● ಬ್ಯಾಂಕ್ ಖಾತೆ ವಿವರ
● ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ
● ಜಮೀನಿಗೆ ಸಂಬಂಧಪಟ್ಟ ದಾಖಲೆಗಳು
● ಯಂತ್ರೋಪಕರಣಗದ ಖರೀದಿಗೆ ಸಂಬಂಧಪಟ್ಟ ದಾಖಲೆಗಳು
● ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
● ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸುವವರಿಗೆ ಸ ವಿವರಗಳೊಂದಿಗೆ ಭರ್ತಿ ಮಾಡಿದ ಅರ್ಜಿ ಫಾರಂ
● ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು
● ಇನ್ನಿತರ ಪ್ರಮುಖ ದಾಖಲೆಗಳು.