Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಎಲ್ಲಾ ವಾಹನ ಸವಾರರಿಗೂ ಸರ್ಕಾರದಿಂದ ಸಿಹಿ ಸುದ್ದಿ, ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೆ ಇನ್ನು ಮುಂದೆ ಫೈನ್ ಕಟ್ಟುವಂತಿಲ್ಲ ಹೊಸ ಟ್ರಾಫಿಕ್ ರೂಲ್ಸ್ ಜಾರಿ.!

Posted on August 10, 2023August 10, 2023 By Kannada Trend News No Comments on ಎಲ್ಲಾ ವಾಹನ ಸವಾರರಿಗೂ ಸರ್ಕಾರದಿಂದ ಸಿಹಿ ಸುದ್ದಿ, ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೆ ಇನ್ನು ಮುಂದೆ ಫೈನ್ ಕಟ್ಟುವಂತಿಲ್ಲ ಹೊಸ ಟ್ರಾಫಿಕ್ ರೂಲ್ಸ್ ಜಾರಿ.!

 

ನಮ್ಮ ಭಾರತ ದೇಶದಲ್ಲಿ ಕಟ್ಟುನಿಟ್ಟಾದ ಟ್ರಾಫಿಕ್ ನಿಯಮಗಳು (Traffic rules) ಇವೆ. ಅದರಲ್ಲಿ ಬಹಳ ಮುಖ್ಯವಾದದ್ದು ಎಂದರೆ ಡ್ರೈವಿಂಗ್ ಲೈಸೆನ್ಸ್ ಹೊಂದಿಲ್ಲದೆ ಇರುವವರು ಸಾರ್ವಜನಿಕ ರಸ್ತೆಯಲ್ಲಿ ವಾಹನಗಳನ್ನು ಓಡಿಸುವಂತಿಲ್ಲ ಎನ್ನುವುದು (Driving not allowed without Liecense). 18 ವರ್ಷ ತುಂಬದೇ ಇದ್ದವರು ನಮ್ಮ ದೇಶದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸಾಧ್ಯವಾಗುವುದಿಲ್ಲ, 18ನೇ ವಯಸ್ಸನ್ನು ದಾಟಿದ ನಂತರ ಡ್ರೈವಿಂಗ್ ಕಲಿತು ಡ್ರೈವಿಂಗ್ ಲೈಸೆನ್ಸ್ ಗಳನ್ನು ಪಡೆದು ವಾಹನಗಳನ್ನು ಓಡಿಸಬಹುದು.

ಒಂದು ವೇಳೆ ಡ್ರೈವಿಂಗ್ ಲೈಸೆನ್ಸ್ ಇದ್ದರೂ ಕೂಡ ಅದನ್ನು ಮನೆಯಲ್ಲೇ ಬಿಟ್ಟು ದ್ವಿಚಕ್ರ ಅಥವಾ ನಾಲ್ಕು ಚಕ್ರದ ವಾಹನ ಓಡಿಸುವಾಗ ರಸ್ತೆಗಳಲ್ಲಿ ಟ್ರಾಫಿಕ್ ಪೊಲೀಸ್‌ಗಳ ತಪಾಸಣೆ ವೇಳೆ ಸಿಕ್ಕೆ ಬಿದ್ದರೆ ದಂಡ (Fine) ಬೀಳುತ್ತದೆ. ಡ್ರೈವಿಂಗ್ ಲೈಸನ್ಸ್ ಇಲ್ಲ ಎನ್ನುವ ಕಾರಣಕ್ಕೆ ದಾಖಲೆ ಮೊತ್ತದ ದಂಡ ಸಂಗ್ರಹಣೆ ಆಗಿರುವುದನ್ನು ಅಂಕಿ ಅಂಶ ತಿಳಿಸುತ್ತದೆ.

ಕೇಂದ್ರ ಸರ್ಕಾರದ ಈ 2 ಸ್ಕೀಮ್ ನಲ್ಲಿ ಒಮ್ಮೆ ಹೂಡಿಕೆ ಮಾಡಿದ್ರೆ ಸಾಕು ಡಬಲ್ ಹಣ ಪಡೆಯಬಹುದು.!

ಈಗ ವಾಹನ ಸವಾರರಿಗೆಲ್ಲಾ ಈ ವಿಷಯದ ಕುರಿತು ಸಿಹಿ ಸುದ್ದಿ. ಯಾಕೆಂದರೆ ಇನ್ನು ಮುಂದೆ ನೀವು ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ಮನೆಯಲ್ಲಿ ಬಿಟ್ಟು ಹೋದರು ಕೂಡ ಫೈನ್ ಕಟ್ಟಬೇಕಾದ ಅವಶ್ಯಕತೆ ಇರುವುದಿಲ್ಲ. ಇದು ಬಹಳ ಆಶ್ಚರ್ಯ ಎನಿಸಬಹುದು ಆದರೆ ಕೂಡ ಇಂತಹದೊಂದು ಹೊಸ ನಿಯಮವನ್ನು ಸರ್ಕಾರ ಮಾಡಿದೆ.

ಬದಲಾದ ಸಂಚಾರಿ ನಿಯಮಗಳ ಪ್ರಕಾರ ವಾಹನ ಸವಾರನು ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದಿದ್ದು ಆತ ಅದನ್ನು ಮನೆಯಲ್ಲಿ ಬಿಟ್ಟು ಬಂದರೆ ತಪಾಸಣೆ ವೇಳೆ ಅದರ ಬದಲಾಗಿ ಡಿಜಿ ಲಾಕರಲ್ಲಿರುವ (Digi locker) ತನ್ನ DL ನ್ನು ತೋರಿಸಿದರೆ ಆಗ ಆತನಿಗೆ ದಂಡ ಹಾಕುವಂತಿಲ್ಲ ಎಂದು ಸರ್ಕಾರ ಹೇಳಿದೆ. ಡಿಜಿಟಲ್ ಇಂಡಿಯಾವನ್ನು (Digital INDIA) ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರ ಈ ನಿಯಮವನ್ನು ಜಾರಿಗೆ ತಂದಿದೆ.

ಸೊಸೆಗಾಗಿ ತನ್ನ ಕಿಡ್ನಿಯನ್ನೇ ದಾನ ಮಾಡಿದ ಕಲಿಯುಗದ ಆದರ್ಶ ಅತ್ತೆ, 70 ವರ್ಷದ ಅತ್ತೆ ಈ ನಿರ್ಧಾರಕ್ಕೆ ಬರಲು ಕಾರಣವೇನು ಗೊತ್ತಾ.?

ಈಗ ಎಲ್ಲಾ ಕ್ಷೇತ್ರಗಳು ಕೂಡ ಡಿಜಿಟಲ್ಲೀಕರಣವಾಗುತ್ತಿರುವುದು ಎಲ್ಲರಿಗೂ ತಿಳಿದಿದೆ. ಬ್ಯಾಂಕ್, ಕಚೇರಿ ಮತ್ತಿತರ ಕ್ಷೇತ್ರಗಳಲ್ಲಿ ಕೇಳಲ್ಪಡುತ್ತಿದ್ದ ಈ ಹೆಸರು ಈಗ ಜನಸಾಮಾನ್ಯರ ವರೆಗೆ ಕೂಡ ತಲುಪುವಂತೆ ಆಗಿದೆ. ಹಾಗಾಗಿ ನಾಗರಿಕರನ್ನು ಈ ಸಲುವಾಗಿ ಉತ್ತೇಜಿಸುವ ಕಾರಣದಿಂದಾಗಿ ಸರ್ಕಾರ ಈ ನಿಯಮ ಮಾಡಿದೆ. ನೀವು ಡಿಜಿ ಲಾಕರ್ ತೆಗೆದು ನಿಮ್ಮ ಡ್ರೈವಿಂಗ್ ಲೈಸೆನ್ಸ್ ಸಾಫ್ಟ್ ಕಾಪಿಯನ್ನು ಅದರಲ್ಲಿ ಸೇವ್ ಮಾಡಿ ಇಟ್ಟುಕೊಂಡಿದ್ದರೆ ಅವಶ್ಯಕತೆ ಇದ್ದಾಗ ಅದನ್ನೇ ತೋರಿಸಬಹುದು.

ಡ್ರೈವಿಂಗ್ ಲೈಸೆನ್ಸ್ ಮಾತ್ರ ಅಲ್ಲದೆ ಡಿಜಿಟಲ್ ಲಾಕರ್ ನಲ್ಲಿ ಇರುವ ಎಲ್ಲಾ ದಾಖಲೆಗಳು ಕೂಡ ಎಲ್ಲೆಡೆ ಮಾನ್ಯವಾಗುತ್ತದೆ ಎನ್ನುವ ಹೊಸ ಆದೇಶವನ್ನು ಸರ್ಕಾರ ಮಾಡಿದೆ. ಹಾಗಾಗಿ ಇನ್ನು ಮುಂದೆ ಡಿಜಿ ಲಾಕರ್ ಬಳಸಿ ಸರ್ಟಿಫಿಕೇಟ್ಗಳನ್ನು ಇಟ್ಟುಕೊಳ್ಳುವವರು ಮೂಲ ಪ್ರತಿಯನ್ನು ಹೊಂದಿಲ್ಲದೆ ಇದ್ದರೆ ಚಿಂತೆ ಪಡಬೇಕಾಗಿಲ್ಲ.

ರೇಷನ್ ಕಾರ್ಡ್ ರದ್ದತಿ ಆರಂಭ ಈ ಪಟ್ಟಿಯಲ್ಲಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಇದಿಯೋ ಇಲ್ಲವೋ ಎಂದು ಮೊಬೈಲ್ ಮೂಲಕವೇ ಚೆಕ್ ಮಾಡುವ ವಿಧಾನ.!

ನಮ್ಮ ಬೆಲೆಬಾಳುವ ವಸ್ತುಗಳು, ದುಡ್ಡು, ಬಂಗಾರ, ದಾಖಲೆ ಪತ್ರಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಸುರಕ್ಷಿತವಾಗಿಡುವಂತೆ ನಾವು ನಮ್ಮ ಇ-ದಾಖಲೆಪತ್ರಗಳನ್ನು ಡಿಜಿ ಲಾಕರ್‌ ವೆಬ್ಸೈಟ್ ನಲ್ಲಿ ಸುರಕ್ಷಿತವಾಗಿ ಇಡಬಹುದು. ಆಧಾರ್ ಕಾರ್ಡ್ ಹೊಂದಿರುವ ಯಾರು ಬೇಕಾದರೂ ಡಿಜಿ ಲಾಕರ್ ಹೊಂದಬಹುದು. ಅವರದ್ದೇ ಆದ ಪಾಸ್ವರ್ಡ್ ಸೆಟ್ ಮಾಡಿಕೊಂಡು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಎಸ್ಸೆಸ್ಸೆಲ್ಸಿ ಸರ್ಟಿಫಿಕೇಟ್, ಡಿಗ್ರಿ ಸರ್ಟಿಫಿಕೇಟ್, ದಾಖಲೆ ಪತ್ರ.

ಮೊದಲಾದವುಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ಲಾಕರ್‌ನಲ್ಲಿ ಅಪ್‌ಲೋಡ್ ಮಾಡಿ ಇಟ್ಟುಕೊಂಡರೆ ಯಾವುದೇ ಸಮಯ ಸಂದರ್ಭದಲ್ಲಿ ಅದರ ಅವಶ್ಯಕತೆ ಬಂದಾಗ ಅದನ್ನು ತೋರಿಸಬಹುದು. ಇದರಲ್ಲಿ ಡೌನ್ಲೋಡ್ ಮಾಡಿಕೊಡುವ ಆಪ್ಷನ್ ಕೂಡ ಇರುವುದರಿಂದ ಮೂಲ ದಾಖಲೆಗಳನ್ನು ಜೊತೆಗೆ ಕೊಂಡೊಯ್ಯುವ ಭಾರ ಕೂಡ ಇಳಿಯುತ್ತದೆ.

Useful Information
WhatsApp Group Join Now
Telegram Group Join Now

Post navigation

Previous Post: ಕೇಂದ್ರ ಸರ್ಕಾರದ ಈ 2 ಸ್ಕೀಮ್ ನಲ್ಲಿ ಒಮ್ಮೆ ಹೂಡಿಕೆ ಮಾಡಿದ್ರೆ ಸಾಕು ಡಬಲ್ ಹಣ ಪಡೆಯಬಹುದು.!
Next Post: ಎಷ್ಟೇ ಹಳೆ ಕಾವಲಿ ಆಗಿದ್ರು ದೋಸೆ ನೀಟಾಗಿ ಬರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore