ಎಷ್ಟೇ ಹಳೆ ಕಾವಲಿ ಆಗಿದ್ರು ದೋಸೆ ನೀಟಾಗಿ ಬರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು.!

 

ಬಿಸಿ ಬಿಸಿ ದೋಸೆ ಎನ್ನುವುದು ಹೆಸರು ಹೇಳಿದ ತಕ್ಷಣ ಎಲ್ಲರ ಬಾಯಿಯಲ್ಲೂ ನೀರು ತರುಸುವ ಟಿಫನ್. ಯಾರು ಕೂಡ ಬೇಡ ಎಂದು ಹೇಳದ ಆಹಾರ. ಆದರೆ ಇದನ್ನು ಮಾಡಲು ಪಡುವ ಪಾಡು ಅಷ್ಟಿಷ್ಟಲ್ಲ. ಒಮ್ಮೆ ಹಿಟ್ಟು ಹದ ತಪ್ಪಿದ್ದರೆ ಮತ್ತೊಮ್ಮೆ ದೋಸೆ ತಾವಲಿಗೆ ಕೈ ಕೊಡುತ್ತದೆ. ದೋಸೆ ಹಾಕುವಾಗ ಒಮ್ಮೊಮ್ಮೆ ಅದು ನೀಟಾಗಿ ಏಳುವುದಿಲ್ಲ, ಇದರಿಂದ ಗೃಹಿಣಿಯರಿಗೆ ಬಹಳ ಕಿರಿಕಿರಿ ಆಗುತ್ತದೆ.

ಆಫೀಸಿಗೆ ಹೋಗುವ ಅರ್ಜೆಂಟ್ ಇದ್ದಾಗ, ಮಕ್ಕಳಿಗೆ ಶಾಲೆಗೆ ತಡವಾದಾಗ ಅಥವಾ ಮನೆಯಲ್ಲಿ ನೆಂಟರು ಬಂದಾಗ ಈ ರೀತಿ ಕಿರಿಕಿರಿ ಆದರೆ ಬಹಳ ಬೇಸರ ಮತ್ತು ಟೆನ್ಶನ್ ಆಗುತ್ತದೆ. ತಕ್ಷಣಕ್ಕೆ ಹೊಸ ಕಾವಲಿ ತರಲು ಸಾಧ್ಯವಾಗುವುದಿಲ್ಲ, ಅದನ್ನು ತರುವ ಅವಶ್ಯಕತೆಯೂ ಇಲ್ಲ ಈಗ ನಾವು ಹೇಳುವ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದರೆ ನಿಮ್ಮ ಮನೆ ಕಾವಲಿ ಎಷ್ಟೇ ಹಳೆಯದಾಗಿದ್ದರೂ, ಅದು ಕಬ್ಬಿಣದ್ದೇ ಆಗಿದ್ದರೂ, ನಾನ್ ಸ್ಟಿಕ್ ಆಗಿದ್ದರೂ ಅಥವಾ ಕಲ್ಲಿನ ಕಾವಲಿ ಆಗಿದ್ದರೂ ಒಂದು ಚೂರು ಹರಿಯದೆ ಅಂಟಿಕೊಳ್ಳದೆ ದೋಸೆ ಬಹಳ ನೀಟಾಗಿ ಬರುತ್ತದೆ.

ಎಲ್ಲಾ ವಾಹನ ಸವಾರರಿಗೂ ಸರ್ಕಾರದಿಂದ ಸಿಹಿ ಸುದ್ದಿ, ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೆ ಇನ್ನು ಮುಂದೆ ಫೈನ್ ಕಟ್ಟುವಂತಿಲ್ಲ ಹೊಸ ಟ್ರಾಫಿಕ್ ರೂಲ್ಸ್ ಜಾರಿ.!

● ಇದಕ್ಕಾಗಿ ಮೊದಲ ಟಿಪ್ ಏನೆಂದರೆ ನೀವು ಮನೆಯಲ್ಲಿ ಅನ್ನ ಮಾಡಿ ಗಂಜಿ ಇಟ್ಟುಕೊಂಡಿರಬೇಕು. ಈ ರೀತಿ ಗಂಜಿ ಮಾಡಿಕೊಳ್ಳುವುದು ಬಹುತೇಕ ಎಲ್ಲರಿಗೂ ಗೊತ್ತಿರುತ್ತದೆ. ಒಂದು ಪಾತ್ರೆಯಲ್ಲಿ ನೀರಿಟ್ಟು ಅದು ಕುದಿದ ಮೇಲೆ ನೆನೆಸಿದ ಅಕ್ಕಿಯನ್ನು ಹಾಕಿ ಅದು ಬೆಂದ ಮೇಲೆ ಬಸಿದಾಗ ಬರುವ ಗಂಜಿಯನ್ನು ಒಂದು ಲೋಟದಷ್ಟು ಇಟ್ಟುಕೊಳ್ಳಬೇಕು.

ಅದು ತೆಳುಗಂಜಿ ಆಗಿದ್ದರೂ ಸರಿ, ಗಟ್ಟಿಯಾಗಿರುವ ಗಂಜಿ ಆಗಿದ್ದರೂ ಸರಿ. ಈಗ ಅದನ್ನು ನಿಮ್ಮ ದೋಸೆ ಕಾವಲಿ (ತವ) ಮೇಲೆ ಹಾಕಿ ಸ್ವಲ್ಪ ಸಣ್ಣದಾಗಿ ಹೆಚ್ಚಿದ ಈರುಳ್ಳಿಯನ್ನು ಅದರ ಮೇಲೆ ಹಾಕಿ ಚೆನ್ನಾಗಿ ಗಂಜಿಯ ಜೊತೆ ಈರುಳ್ಳಿ ಪೀಸ್ ಬೇಯಲು ಬಿಡಿ ಅದು ಬೆಂದ ಮೇಲೆ ಕಾವಲಿವನ್ನು ನೀರಿನಲ್ಲಿ ತೊಳೆಯಿರಿ ಈಗ ನೀವು ಎಣ್ಣೆ ಹಾಕಿ ಉಜ್ಜಿ ದೋಸೆ ಹಾಕಿದರೆ ದೋಸೆ ನೀಟಾಗಿ ಏಳುತ್ತದೆ.

ಕೇಂದ್ರ ಸರ್ಕಾರದ ಈ 2 ಸ್ಕೀಮ್ ನಲ್ಲಿ ಒಮ್ಮೆ ಹೂಡಿಕೆ ಮಾಡಿದ್ರೆ ಸಾಕು ಡಬಲ್ ಹಣ ಪಡೆಯಬಹುದು.!

● ಮತ್ತೊಂದು ಟಿಪ್ ಇದೆ, ಇದೇನೆಂದರೆ ಇದಕ್ಕಾಗಿ ಬಹಳ ಹೊತ್ತು ಕಾಯುವ ಅವಶ್ಯಕತೆ ಇಲ್ಲ ಈ ಮೊದಲು ಹೇಳಿದ ಟಿಪ್ ಮಾಡಲು ಕನಿಷ್ಠ ಐದು ನಿಮಿಷಗಳಾದರೂ ಬೇಕು. ಆದರೆ ಈಗ ನಾವು ಹೇಳುವ ಈ ಟಿಪ್ ಅನ್ನು ನೀವು ತಕ್ಷಣವೇ ಮಾಡಬಹುದು. ಅದೇನೆಂದರೆ, ಕಾವಲಿ ಕಾದ ಮೇಲೆ ಸ್ವಲ್ಪ ಎಣ್ಣೆ ಹಾಕಿ ಒಂದು ಈರುಳ್ಳಿಯನ್ನು ತೆಗೆದುಕೊಂಡು ಅದರ ಮುಂದಿನ 1/4 ಭಾಗ ಮಾತ್ರ ಕಟ್ ಮಾಡಿ ನಂತರ ಈರುಳ್ಳಿಯನ್ನು ಚೆನ್ನಾಗಿ ತವ ಮೇಲೆ ಉಜ್ಜಿ ಈಗ ನೀವು ದೋಸೆ ಹಾಕಿದರೆ ದೋಸೆ ಅಂಟಿಕೊಳ್ಳದೆ ಏಳುತ್ತದೆ.

● ಈ ಟಿಪ್ ಎಲ್ಲರಿಗೂ ಗೊತ್ತಿರುತ್ತದೆ ಕಾವಲಿ ಬಿಸಿ ಆದಮೇಲೆ ದೋಸೆ ಹಾಕಬೇಕು, ಹಾಕುವಾಗ ಹೈ ಫ್ಲೇಮ್ ನಲ್ಲಿ ಹಾಕಿ ನಂತರ ಬೇಕಾದರೆ ಸ್ಲೋ ಮಾಡಿ ಬೇಯಿಸಿ. ಈ ಟಿಪ್ಗಳನ್ನು ಫಾಲೋ ಮಾಡಿದರೆ ನಿಮ್ಮ ಮನೆಯಲ್ಲಿ ಒಂದೇ ಕಾವಲಿ ಇದ್ದರೂ ಅದರಲ್ಲೇ ನೀವು ನೀರು ದೋಸೆ ಬೇಕಾದರೂ ಹಾಕಬಹುದು, ಮಸಾಲೆ ದೋಸೆ ಬೇಕಾದರೂ ಹಾಕಬಹುದು ಅಥವಾ ಪ್ಲೇನ್ ದೋಸೆ ಬೇಕಾದರೂ ಹಾಕಬಹುದು.

ಸೊಸೆಗಾಗಿ ತನ್ನ ಕಿಡ್ನಿಯನ್ನೇ ದಾನ ಮಾಡಿದ ಕಲಿಯುಗದ ಆದರ್ಶ ಅತ್ತೆ, 70 ವರ್ಷದ ಅತ್ತೆ ಈ ನಿರ್ಧಾರಕ್ಕೆ ಬರಲು ಕಾರಣವೇನು ಗೊತ್ತಾ.?

ಯಾವುದೇ ರೀತಿ ದೋಸೆ ಮಾಡಿದರು ಅದು ಚೆನ್ನಾಗಿ ಏಳುತ್ತದೆ ಗರಿಗರಿಯಾದ ತವಾಗೆ ಅಂಟಿಕೊಳ್ಳದ ನೀಟ್ ಆದ ದೋಸೆ ನಿಮಗೆ ಬರುತ್ತದೆ. ಈ ಸುಲಭವಾದ ಟಿಪ್ ಅನ್ನು ಫಾಲೋ ಮಾಡಿ ದೋಸೆ ಮಾಡುವಾಗ ದೋಸೆ ತವದಿಂದ ಆಗುವ ಸಮಸ್ಯೆಗಳಿಂದ ಮುಕ್ತಿ ಪಡೆಯಿರಿ ಹಾಗೆ ಇಂತಹ ಉಪಯುಕ್ತವಾದ ಟಿಪ್ ಅನ್ನು ತಪ್ಪದೆ ನಿಮ್ಮ ಸ್ನೇಹಿತೆಯರಿಗೂ ಕೂಡ ತಿಳಿಸಿಕೊಡಿ.

Leave a Comment