ಕೇಂದ್ರ ಸರ್ಕಾರವು ರೈತರ ಏಳಿಗೆಗಾಗಿ ಸಾಕಷ್ಟು ಶ್ರಮಿಸುತ್ತಿದೆ. ಅದರ ಜೊತೆ ರಾಜ್ಯ ಸರ್ಕಾರಗಳು ಕೂಡ ಪ್ರತಿ ಬಾರಿ ಬಜೆಟ್ ಘೋಷಣೆ ಆದಾಗಲು ರೈತರಿಗಾಗಿ ವಿಶೇಷ ಘೋಷಣೆಗಳನ್ನು ನೀಡಿ ಸಹಾಯ ಮಾಡುತ್ತಿದೆ. ಕೃಷಿ ಚಟುವಟಿಕೆಯಲ್ಲಿ ಉತ್ಪನ್ನ ಹೆಚ್ಚಾದಾಗ ಮಾತ್ರ ದೇಶದ ಆರ್ಥಿಕತೆಯು ಕೂಡ ಅಭಿವೃದ್ಧಿ ಹೊಂದುವುದು, ಭಾರತವು ಕೃಷಿ ಪ್ರಧಾನ ದೇಶ ಆದ್ದರಿಂದ ಈ ಮೂಲದಿಂದಲೇ ಹೆಚ್ಚಿನ ಆದಾಯ ಬರಬೇಕು ಎಂದು ಸರ್ಕಾರಗಳು ಚಿಂತನೆ ನಡೆಸುತ್ತಿವೆ.
ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ರೂಪಿಸಿರುವ ಸಾಕಷ್ಟು ಯೋಜನೆಗಳು ಪ್ರಯೋಜನವನ್ನು ರೈತರು ಪಡೆಯುತ್ತಿದ್ದಾರೆ. ಪ್ರಮುಖವಾಗಿ ಪಿ.ಎಂ ಕಿಸಾನ್ ಸಮ್ಮಾನ್ ಯೋಜನೆ, ಸಿಎಂ ಕಿಸಾನ್ ಸಮ್ಮಾನ್ ಯೋಜನೆ, ಪಿಎಂ ಫಸಲ್ ಭೀಮಾ ಯೋಜನೆ ಇನ್ನು ಮುಂತಾದ ಯೋಜನೆಗಳಿಂದ ಸಹಾಯಧನ ಹಾಗೂ ಬೆಳೆ ವಿಮೆಗಳನ್ನು ಪಡೆದಿರುವ ರೈತರುಗಳಿಗೆ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಮತ್ತು ಸಹಕಾರಿ ವಲಯದಲ್ಲೂ ಕೂಡ ಕೃಷಿ ಚಟುವಟಿಕೆಗಳ ಸಂಬಂಧಿತ ಕೆಲಸಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತಿದೆ.
ಕೃಷಿ ಯಂತ್ರೋಪಕರಣ, ಅವುಗಳ ಬಿಡಿ ಭಾಗಗಳು, ರಸಗೊಬ್ಬರ, ಬಿತ್ತನೆ ಬೀಜ ಖರೀದಿ ಇನ್ನು ಮುಂತಾದ ಅನುಕೂಲತೆಗಾಗಿ ಸರ್ಕಾರದಿಂದ ಸಬ್ಸಿಡಿ ರೂಪದ ಸಾಲವೂ ಕೂಡ ಸಿಗುತ್ತಿದೆ. ಹೈನುಗಾರಿಕೆ ಮಾಡಲು ಬಯಸುವ ರೈತರಿಗೂ ಕೂಡ ವಿಶೇಷವಾದ ಯೋಜನೆಗಳನ್ನು ರೂಪಿಸಿ ಅವುಗಳ ಶೆಡ್ ನಿರ್ಮಾಣಕ್ಕೆ ಮತ್ತು ಹೈನುಗಳ ಖರೀದಿಗೆ ಸಹಾಯ ಮಾಡಲಾಗುತ್ತಿದೆ.
ಜೊತೆಗೆ ಯುವಜತೆಯನ್ನು ಕೃಷಿಯತ್ತ ಆಕರ್ಷಿಸುವ ಸಲುವಾಗಿ ಕೃಷಿ ಮೂಲಕ ಅವರ ಸಬಲೀಕರಣ ಮಾಡುವುದಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಿ ತರಬೇತಿಗಳನ್ನು ಕೊಡಿಸಿ ಎಲ್ಲರೂ ಕೃಷಿಯತ್ತ ಮುಖ ಮಾಡುವಂತೆ ಮಾಡಲಾಗುತ್ತಿದೆ. ರೈತರ ಮಕ್ಕಳಿಗೂ ಕೂಡ ವಿದ್ಯಾನಿಧಿಯಂತಹ ಯೋಜನೆಗಳಿಂದ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಲಾಗುತ್ತಿದೆ.
ಹೀಗೆ ಈಗಾಗಲೇ ಹತ್ತಾರು ಈ ರೀತಿಯ ಯೋಜನೆಗಳನ್ನು ಹಾಕಿಕೊಂಡು ಅದರ ಪ್ರಕಾರ ನಡೆದು ಸರ್ಕಾರ ರೈತರ ಕೈ ಹಿಡಿದಿದೆ. ಇದರೊಂದಿಗೆ ಇನ್ನು ಹೊಸ ಮೂರು ಘೋಷಣೆಗಳನ್ನು ಮಾಡಿ ಇದರ ಫಲಾನುಭವಿಗಳು ಆಗಲು ಇಚ್ಛಿಸುವ ರೈತರರಿಂದ ಅರ್ಜಿ ಆಹ್ವಾನ ಕೂಡ ಮಾಡಿದೆ. ಅದೇನೆಂದರೆ ರೈತರಿಗೆ ಮಳೆ ಅಥವಾ ಬಿಸಿಲು ಸಮಯದಲ್ಲಿ ತಾವು ಕಟಾವು ಮಾಡಿ ಇಟ್ಟುಕೊಂಡ ಬೆಳೆಯನ್ನು ರಕ್ಷಿಸಿಕೊಳ್ಳಲು ಟಾರ್ಪಲಿನ್ ಅವಶ್ಯಕತೆ ಇರುತ್ತದೆ. ಇದನ್ನು ತಾಡಪತ್ರಿ ಎಂದು ಕೂಡ ಕರೆಯುತ್ತಾರೆ.
ಈಗ ಸರ್ಕಾರವು ರೈತರಿಗೆ ಉಚಿತವಾಗಿ ಟಾರ್ಪಲಿನ್ ಕೊಡಲು ಚಿಂತನೆ ನಡೆಸಿದೆ. ಅದಕ್ಕಾಗಿ ಅರ್ಜಿ ಆಹ್ವಾನಿಸಿ, ವಿತರಣೆ ಕೂಡ ಮಾಡುತ್ತಿದೆ. ಮತ್ತು ಕೃಷಿಯಲ್ಲಿ ಯಂತ್ರೋಪಕರಣ ಬಳಕೆಯನ್ನು ಪ್ರೋತ್ಸಾಹಿಸುತ್ತಿರುವ ಸರ್ಕಾರವು ಕೃಷಿ ಚಟುವಟಿಕೆಗೆ ಈಗ ಯಂತ್ರಗಳ ಬಳಕೆ ಎಷ್ಟು ಮುಖ್ಯವಾಗಿದೆ ಎನ್ನುವುದನ್ನು ಮನಗಂಡಿದೆ. ಅದರ ಸಲುವಾಗಿ ಟ್ರಾಕ್ಟರ್ ಬಿಡಿಭಾಗಗಳು, ನೇಗಿಲು, ಕಟಾವು ಯಂತ್ರ ಮುಂತಾದವುಗಳ ಖರೀದಿಗೆ ಸಬ್ಸಿಡಿ ರೂಪದ ಸಾಲಧನವನ್ನು ಕೂಡ ನೀಡುತ್ತಿದೆ.
ಕರ್ನಾಟಕದ ರೈತರಿಗೆ ಮಾತ್ರ ರಾಜ್ಯ ಸರ್ಕಾರ ಕಡೆಯಿಂದ ಇನ್ನೂ ಒಂದು ಹೆಚ್ಚಿನ ಘೋಷಣೆ ಸಿಕ್ಕಿದೆ. ಅದೇನೆಂದರೆ ಕರ್ನಾಟಕ ರಾಜ್ಯದ ತೋಟಗಾರಿಕೆ ಕೃಷಿಯಲ್ಲಿ ಕೃಷಿ ಮಾಡುತ್ತಿರುವ ರೈತರುಗಳಿಗೆ ಉಚಿತ ಸ್ಪ್ಲಿಂಕರ್ ಪೈಪ್ ಗಳ ವಿತರಣೆ ಕೆಲಸವನ್ನು ಕೂಡ ಸರ್ಕಾರ ಮಾಡುತ್ತಿದೆ. ಇದಕ್ಕಾಗಿ ಅರ್ಜಿ ಕೂಡ ಆಹ್ವಾನ ಮಾಡಿದೆ. ಇದರ ಫಲಾನುಭವಿಗಳು ಆಗಲು ಇಚ್ಚಿಸುವ ರೈತರುಗಳು ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಅಧಿಕಾರಿಗಳ ಬಳಿ ಮಾಹಿತಿ ಪಡೆದು ಬೇಕಾದ ದಾಖಲೆಗಳ ಜೊತೆ ಅರ್ಜಿ ಸಲ್ಲಿಸಿ ಇದರ ಪ್ರಯೋಜನ ಪಡೆಯಬಹುದು.