ಕರ್ನಾಟಕ ರಾಜ್ಯದ ಜನತೆಗಾಗಿ ಕಾಂಗ್ರೆಸ್ ನೇತೃತ್ವದ ಸರ್ಕಾರವು (Karnataka Government) ಕರ್ನಾಟಕ ವಿಧಾನಸಭಾ ಚುನಾವಣೆ-2023ರ ವೇಳೆ (Assembly Election-2023) ಚುನಾವಣೆ ಪ್ರಣಾಳಿಕೆಯಲ್ಲಿ (Manifesto) ಬಳಸಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ತಂದಿದೆ.
ಈಗಾಗಲೇ ರಾಜ್ಯದ ಜನತೆಯು ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಇದರಲ್ಲಿ ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಯು ಮಹಿಳೆಯರಿಗಾಗಿ (Shakti and Gruhalakshmi Scheme) ಮಾಡಿರುವ ಯೋಜನೆಗಳಾಗಿವೆ ಎನ್ನಬಹುದು.
ಶಕ್ತಿ ಯೋಜನೆಯಿಂದ ಕರ್ನಾಟಕದ ಗಡಿಯೊಳಗೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮದ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಶೂನ್ಯ ದರ ಟಿಕೆಟ್ ಪಡೆದ ಪ್ರಯಾಣಿಸುತ್ತಿದ್ದರೆ, ಗೃಹಲಕ್ಷ್ಮಿ ಯೋಜನೆಯ ವತಿಯಿಂದ ಪ್ರತಿ ಕುಟುಂಬದ ಯಜಮಾನಿ ಮಹಿಳೆಯರು ಸರ್ಕಾರದಿಂದ ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು 2,000ರೂ. ಸಹಾಯಧನವನ್ನು ಪಡೆಯುತ್ತಿದ್ದಾರೆ.
ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಿನ ಹಣವು ಫಲಾನುಭವಿಗಳ ಖಾತೆಗೆ ತಲುಪಿದೆ. ಆರಂಭದಲ್ಲಿ ಆದ ತಾಂತ್ರಿಕ ಸಮಸ್ಯೆಗಳ ಕಾರಣದಿಂದಾಗಿ ಲಕ್ಷಾಂತರ ಮಹಿಳೆಯರು ಹಣ ಪಡೆಯಲಾಗದೆ ವಂಚಿತರಾಗಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಜುಲೈ 19 ರಿಂದ ಅನುಮತಿ ನೀಡಲಾಗಿತ್ತು.
ಅಂದಿನಿಂದ ಆಗಸ್ಟ್ 30ರವರೆಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳು ಸಂಖ್ಯೆ 1.06 ಕೋಟಿ ಇದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ (KWCWD) ಅಂಕಿ ಅಂಶಗಳು ಹೇಳುತ್ತಿವೆ. ಇದರಲ್ಲಿ 7 ರಿಂದ 8 ಲಕ್ಷ ಮಹಿಳೆಯರ ಖಾತೆಗಳಿಗೆ ಆಧಾರ್ ಲಿಂಕ್ ಆಗಿರದೇ ಇರುವುದು, ಖಾತೆಗಳು ಆಕ್ಟಿವ್ ಆಗಿರದ ಕಾರಣದಿಂದ ಇನ್ನಷ್ಟು ಮಹಿಳೆಯರ ನೀಡಿರುವ ದಾಖಲೆಗಳ ಮಾಹಿತಿಗಳು ಹೊಂದಾಣಿಕೆ ಆಗದ ಕಾರಣದಿಂದಾಗಿ ಮೊದಲನೇ ಕಂತಿನ ಹಣ ಬಿಡುಗಡೆ ಆಗಾದಾಗ 80%ರಷ್ಟು ಮಹಿಳೆಯರ ಮಾತ್ರ ಹಣವನ್ನು ಪಡೆದಿದ್ದರು•
ಎರಡನೇ ಕಂತಿನ ಹಣವನ್ನು ಸ್ವಲ್ಪ ತಡವಾಗಿ ಬಿಡುಗಡೆ ಮಾಡಿ ಮೊದಲನೇ ಕಂತಿನ ಹಣ ಪಡೆಯಲಾಗದಿದ್ದವರಿಗೆ ಅವರ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಅನುಮತಿ ನೀಡಲಾಗಿತ್ತು. ಆ ಪೈಕಿ ಸರ್ಕಾರ ಸೂಚನೆಯಂತೆ ಸಮಸ್ಯೆ ಸರಿಪಡಿಸಿಕೊಂಡವರಿಗೆ ಎರಡನೇ ಕಂತಿನ ಹಣ ಬಿಡುಗಡೆಯಾದ ಸಮಯದಲ್ಲಿ ಮೊದಲನೇ ಕಂತಿನ ಹಣ ಸೇರಿ ಒಟ್ಟು 4,000 ಹಣವು ಕೈ ಸೇರಿದೆ.
ಆದರೆ ಇನ್ನೂ ಕೂಡ ಸಂಪೂರ್ಣವಾಗಿ ಎಲ್ಲಾ ಫಲಾನುಭವಿಗಳ ಖಾತೆಗೂ ಹಣ ತಲುಪಿಲ್ಲ. ಇತ್ತೀಚಿಗೆ ನಡೆದ ಗೃಹಲಕ್ಷ್ಮಿ ಪ್ರಗತಿ ಪರಿಶೀಲನ ಸಭೆಯಲ್ಲೂ ಕೂಡ ಮಾನ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Minister Lakshmi Hebbalkar) ಅವರು ಇಲಾಖೆ ಅಧಿಕಾರಿಗಳನ್ನು ಉದ್ದೇಶಿಸಿ ಇದೇ ಕಿವಿಮಾತು ಹೇಳಿದ್ದರು.
ಮೂರನೇ ಕಂತಿನ ಹಣ ಬಿಡುಗಡೆಯಾಗುವ ವೇಳೆ ಸಂಪೂರ್ಣವಾಗಿ ಎಲ್ಲಾ ಮಹಿಳೆಯರ ಖಾತೆಗೂ ಹಣ ತಲುಪಬೇಕು ಹಾಗಾಗಿ ಆಯ ವ್ಯಾಪ್ತಿಗೆ ಬರುವ ಅಂಗನವಾಡಿ ಕಾರ್ಯಕರ್ತೆಯ ಸಹಾಯದೊಂದಿಗೆ ಅಧಿಕಾರಿಗಳೇ ಮನೆ ಮನೆಗೆ ಭೇಟಿ ಕೊಟ್ಟು ಸರ್ವೆ ನಡೆಸಿ ಸಮಸ್ಯೆ ಬಗೆಹರಿಸಿ ಗೃಹಲಕ್ಷ್ಮಿ ಯೋಜನೆ ಯಶಸ್ವಿಯಾಗುವಲ್ಲಿ ಕೈಜೋಡಿಸಬೇಕು ಎಂದು ಸೂಚನೆ ಕೊಟ್ಟಿದ್ದರು.
ಈಗ ಇದೇ ವಿಚಾರವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪ್ರಸನ್ನ ಕುಮಾರ್ ರವರು ರಾಮನಗರದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಯೋಜನೆ ಕುರಿತು ಬಿಗ್ ಅಪ್ಡೇಟ್ ನೀಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಈ ಬಾರಿ ಕಳೆದೆರಡು ಕಂತಿಗಿಂತಲೂ ಹೆಚ್ಚಿನ ಫಲಾನುಭವಿಗಳಿಗೆ ತಲುಪುವ ನಿರೀಕ್ಷೆ ಇದೆ.
ಶೀಘ್ರದಲ್ಲೇ ಜಿಲ್ಲೆಯಲ್ಲಿ 3 ನೇ ಕಂತಿನ ಹಣ ಬಿಡುಗಡೆಯಾಗಲಿದೆ. ಗೃಹಲಕ್ಷಿ ಯೋಜನೆಯಡಿ ಕಳೆದ 2ಕಂತಿನಲ್ಲಿ ಹಣ ಬಾರದ ಫಲಾನುಭವಿಗಳಿಗೆ ಈ ಕಂತಿನಲ್ಲಿ ಒಟ್ಟಿಗೆ 6,000 ಹಣ ಬಿಡುಗಡೆಯಾಗಲಿದೆ. ತಾಂತ್ರಿಕ ದೋಷದಿಂದಾಗಿ ಹಣ ಸಂದಾಯವಾಗಿರಲಿಲ್ಲ ಇದೀಗ ಆ ಸಮಸ್ಯೆಗಳು ಬಗೆಹರಿದಿವೆ ಎಂದು ಹೇಳಿದ್ದಾರೆ.