ಈ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್ 5 ಲಕ್ಷದವರೆಗೆ ಉಚಿತ ಚಿಕಿತ್ಸೆ, ನೀವೂ ಅರ್ಜಿ ಸಲ್ಲಿಸಿ.!

 

ದೇಶದ ಪ್ರತಿಯೊಂದು ವರ್ಗಕ್ಕೂ ಉತ್ತಮ ಆರೋಗ್ಯ ಸೌಲಭ್ಯ(Health facility)ಗಳನ್ನ ಒದಗಿಸುವ ಸಲುವಾಗಿ ಕೇಂದ್ರದ ಮೋದಿ ಸರ್ಕಾರ(Modi Govt)ವು ಪ್ರಧಾನ ಮಂತ್ರಿ ಜನ-ಆರೋಗ್ಯ ಯೋಜನೆ ಅಂದರೆ ಆಯುಷ್ಮಾನ್ ಭಾರತ್ ಯೋಜನೆ(Ayushman Bharat Yojana)ಯನ್ನ ಪ್ರಾರಂಭಿಸಿದೆ.

ಇದು ವಿಶ್ವದ ಅತಿ ದೊಡ್ಡ ಆರೋಗ್ಯ ಯೋಜನೆಯಾಗಿದ್ದು, ಇದರ ಮೂಲಕ ಮಧ್ಯಮ ವರ್ಗದ ಜನರು 5 ಲಕ್ಷದವರೆಗೆ ಉಚಿತ ಚಿಕಿತ್ಸೆ(Free treatment)ಯ ಪ್ರಯೋಜನವನ್ನ ಪಡೆಯುತ್ತಿದ್ದಾರೆ. ಕೇಂದ್ರದ ಮೋದಿ ಸರ್ಕಾರವು ಸೆಪ್ಟೆಂಬರ್ 23, 2018ರಂದು ಈ ಯೋಜನೆಯನ್ನ ಪ್ರಾರಂಭಿಸಿತು. ನೀವು ಸಹ ಈ ಯೋಜನೆಯ ಲಾಭವನ್ನ ಪಡೆಯಲು ಬಯಸಿದ್ರೆ, ನೀವು ಸುಲಭವಾಗಿ ಅರ್ಜಿ ಸಲ್ಲಿಸಬಹುದು.

Gruhalakshmi: ಮನೆ ಯಜಮಾನಿಯರ ಖಾತೆಗೆ 2000 ರೂ. ಹಣ ವರ್ಗಾವಣೆಗೆ ಡೇಟ್ ಫಿಕ್ಸ್, ಆದರೆ ಈ ಮಹಿಳೆಯರಿಗೆ ಮಾತ್ರ ಇಲ್ಲ ಹಣದ ಭಾಗ್ಯ.!

ಆಯುಷ್ಮಾನ್ ಭಾರತ್ ಯೋಜನೆಯ ಅರ್ಹತೆ ಏನು?

ಆಯುಷ್ಮಾನ್ ಭಾರತ್ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು, ಅದರ ಅರ್ಹತೆಯ ಬಗ್ಗೆ ಮಾಹಿತಿಯನ್ನ ಪಡೆಯುವುದು ಅವಶ್ಯಕ. ಬಡ ಮತ್ತು ದುರ್ಬಲ ಆದಾಯ ವರ್ಗದ ಜನರಿಗಾಗಿ ಸರ್ಕಾರ ಈ ಯೋಜನೆಯನ್ನ ಪ್ರಾರಂಭಿಸಿದೆ. ಬುಡಕಟ್ಟು (SC / ST) ನಿರಾಶ್ರಿತರು, ನಿರ್ಗತಿಕರು, ದಾನ ಅಥವಾ ಭಿಕ್ಷೆಯನ್ನ ಬಯಸುವ ವ್ಯಕ್ತಿ, ಕಾರ್ಮಿಕರು ಮುಂತಾದವರು ಈ ಯೋಜನೆಯ ಪ್ರಯೋಜನವನ್ನ ಪಡೆಯಬಹುದು.

ನಿಮ್ಮ ಅರ್ಹತೆಯನ್ನ ಪರಿಶೀಲಿಸಲು ನೀವು ಬಯಸಿದ್ರೆ, PMJAYನ ಅಧಿಕೃತ ವೆಬ್‌ಸೈಟ್’ಗೆ ಭೇಟಿ ನೀಡಿ. ಇಲ್ಲಿ Am I Eligible ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಇದರ ನಂತ್ರ ನಿಮ್ಮ ಅರ್ಹತೆಯನ್ನ ನೀವು ಸುಲಭವಾಗಿ ಪರಿಶೀಲಿಸಬಹುದಾದ ಪುಟಕ್ಕೆ ನಿಮ್ಮನ್ನ ಮರು ನಿರ್ದೇಶಿಸಲಾಗುತ್ತದೆ. ಈ ಪುಟದಲ್ಲಿ ನೀವು ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಪಡಿತರ ಚೀಟಿ ಸಂಖ್ಯೆಯನ್ನ ನಮೂದಿಸಬೇಕು. ಇದರ ನಂತರ ನೀವು ಕೆಲವೇ ನಿಮಿಷಗಳಲ್ಲಿ ನಿಮ್ಮ ಅರ್ಹತೆಯನ್ನ ತಿಳಿಯುವಿರಿ.

ದೇವರ ಫೋಟೋದಿಂದ ಪದೇ ಪದೇ ಹೂ ಬೀಳುತ್ತಿದ್ದರೆ ಅದರ ಅರ್ಥ ಏನು ಗೊತ್ತಾ.?

ಈ ಸೌಲಭ್ಯಗಳ ಪ್ರಯೋಜನಗಳು ಯೋಜನೆಯ ಅಡಿಯಲ್ಲಿ ಲಭ್ಯ.!

ಈ ಯೋಜನೆಯಡಿ, ಫಲಾನುಭವಿಗಳು ದೇಶದ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ 5 ಲಕ್ಷದವರೆಗೆ ಉಚಿತ ಚಿಕಿತ್ಸೆಯ ಸೌಲಭ್ಯವನ್ನ ಪಡೆಯುತ್ತಾರೆ. ಇದರೊಂದಿಗೆ ಆಸ್ಪತ್ರೆಗೆ ದಾಖಲಾದ ನಂತರವೂ ಮುಂದಿನ 15 ದಿನಗಳ ಎಲ್ಲ ವೆಚ್ಚವನ್ನ ಸರಕಾರವೇ ಭರಿಸುತ್ತದೆ. ಈ ಯೋಜನೆಯ ವಿಶೇಷವೆಂದರೆ ಇದರಲ್ಲಿ ಕುಟುಂಬದ ಎಲ್ಲಾ ಸದಸ್ಯರು ತಮ್ಮ ವಯಸ್ಸು ಮತ್ತು ಸಂಖ್ಯೆಯನ್ನ ಗಮನದಲ್ಲಿಟ್ಟುಕೊಂಡು ಯೋಜನೆಯ ಲಾಭವನ್ನ ಪಡೆಯುತ್ತಾರೆ. ಇದರಲ್ಲಿ, ಆಯುಷ್ಮಾನ್ ಯೋಜನೆ ಸಂಪೂರ್ಣವಾಗಿ ನಗದು ರಹಿತ ಯೋಜನೆಯಾಗಿರುವ ಕಾರಣ ನೀವು ಒಂದು ರೂಪಾಯಿಯನ್ನ ಸಹ ನಗದು ರೂಪದಲ್ಲಿ ಪಾವತಿಸಬೇಕಾಗಿಲ್ಲ.

ಈ ದಾಖಲೆಗಳು ಬೇಕಾಗುತ್ತವೆ.!

* ಆಧಾರ್ ಕಾರ್ಡ್
* ಪಡಿತರ ಚೀಟಿ
* ಆದಾಯ ಪ್ರಮಾಣಪತ್ರ
* ಜಾತಿ ಪ್ರಮಾಣಪತ್ರ (ಅಗತ್ಯವಿದ್ದರೆ)
* ಮೊಬೈಲ್ ನಂಬರ
* ಪಾಸ್ಪೋರ್ಟ್ ಗಾತ್ರದ ಫೋಟೋ

ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ.?

* ಮೊದಲು ಆಯುಷ್ಮಾನ್ ಭಾರತ್ ಯೋಜನೆಗೆ ಅರ್ಜಿ ಸಲ್ಲಿಸಲು, ಮೊದಲು ಅದರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
* ಹೊಸ ನೋಂದಣಿಗಾಗಿ, ‘ಹೊಸ ನೋಂದಣಿ’ ಅಥವಾ ‘ಅನ್ವಯಿಸು’ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
* ಇದರ ನಂತರ ನೀವು ನಿಮ್ಮ ಹೆಸರು, ಲಿಂಗ, ಆಧಾರ್ ಸಂಖ್ಯೆ, ಪಡಿತರ ಚೀಟಿ ಇತ್ಯಾದಿಗಳ ಮಾಹಿತಿಯನ್ನ ನಮೂದಿಸಬೇಕಾಗುತ್ತದೆ.
* ನೀವು ನಮೂದಿಸುವ ಯಾವುದೇ ಮಾಹಿತಿಯು ಸರಿಯಾಗಿರಬೇಕು ಮತ್ತು ಅದನ್ನ ಕ್ರಾಸ್ ಚೆಕ್ ಮಾಡಬೇಕು ಅನ್ನೋದನ್ನ ನೆನಪಿನಲ್ಲಿಡಿ.

ಭಾರತೀಯ ಅಂಚೆ ಇಲಾಖೆಯಿಂದ ಬರೋಬ್ಬರಿ 30,041 ಹುದ್ದೆಗಳ ನೇಮಕಾತಿ, 10th ಪಾಸ್ ಆಗಿದ್ರೆ ಸಾಕು.! ವೇತನ 29,380/- ಆಸಕ್ತರು ಅರ್ಜಿ ಸಲ್ಲಿಸಿ.!

* ಕೇಳಲಾದ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
* ಸಂಪೂರ್ಣ ಅರ್ಜಿ ನಮೂನೆಯನ್ನ ಒಮ್ಮೆ ಪರಿಶೀಲಿಸಿ ನಂತರ ಅದನ್ನ ಸಲ್ಲಿಸಿ.
* ಅರ್ಜಿಯನ್ನ ಸಲ್ಲಿಸಿದ ನಂತರ, ಅಧಿಕಾರಿಗಳು ನಿಮ್ಮ ಅರ್ಜಿಯನ್ನ ಪರಿಶೀಲಿಸುತ್ತಾರೆ.
* ಇದರ ನಂತರ ನೀವು ಸುಲಭವಾಗಿ ಆಯುಷ್ಮಾನ್ ಭಾರತ್ ಯೋಜನೆಯಡಿ ಆರೋಗ್ಯ ಕಾರ್ಡ್ ಪಡೆಯುತ್ತೀರಿ.

Leave a Comment