ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು (CM Siddaramaih) ಮಾರ್ಚ್ 15, 2024ರಂದು ರಾಜ್ಯದ ಮಹಿಳೆಯರಿಗೆ ಮತ್ತೊಂದು ಗ್ಯಾರಂಟಿ ಯೋಜನೆಯ (Gyaranty Scheme) ಭರವಸೆ ನೀಡಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆ – 2023ರ (Karnataka Assembly Election – 2023) ಸಮಯದಲ್ಲಿ ಕರ್ನಾಟಕದ ಜನತೆಗೆ 5 ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಪಕ್ಷ (Congress Party) ತನ್ನ ಚುನಾವಣೆ ಪ್ರಣಾಳಿಕೆಯ ಭರವಸೆಗಳಾಗಿ ಘೋಷಿಸಿತ್ತು.
ಇವುಗಳಲ್ಲಿ ಮಹಿಳೆಯರದ್ದೇ ಮೇಲುಗೈ ಆಗಿತ್ತು, ಯಾಕೆಂದರೆ ಗೃಹಲಕ್ಷ್ಮಿ ಯೋಜನೆ (Gruhalakshmi) ಮಹಿಳೆಯರಿಗೆ ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ ರೂ.2000 ಸಹಾಯಧನವನ್ನು ನೀಡಿ ಮಹಿಳೆಯರ ಲಿಂಗ ಸಮಾನತೆ ಮತ್ತು ಆರ್ಥಿಕ ಸಮಾನತೆಯನ್ನು ಪ್ರೋತ್ಸಾಹಿಸುತ್ತೇವೆ ಎಂದು ಹೇಳಿತ್ತು, ಹಾಗೆ ಶಕ್ತಿ ಯೋಜನೆಯಡಿ (Shakthi Yojane) ಕರ್ನಾಟಕದ ಗಡಿಯೊಳಗೆ ರಾಜ್ಯದ ಮಹಿಳೆಯರಿಗೆ AC ಬಸ್ ಹೊರತುಪಡಿಸಿ ನಾಲ್ಕು ನಿಗಮದ ಎಲ್ಲಾ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕೊಡುವುದಾಗಿ ಹೇಳಿತ್ತು ಮತ್ತು ಅಂತೆಯೇ ಈ ಯೋಜನೆಗಳು ಈಗ ರಾಜ್ಯದಲ್ಲಿ ಚಾಲ್ತಿಯಲ್ಲಿವೆ.
ಈ ಸುದ್ದಿ ಓದಿ:- ಮನೆಯಲ್ಲಿ ಲಕ್ಷ್ಮೀ ಶಾಶ್ವತವಾಗಿ ನಡೆಸಲು ಈ 6 ಸಣ್ಣ ಬದಲಾವಣೆಗಳನ್ನು ಮಾಡಿ ನೋಡಿ.!
ಈ ಎರಡು ಯೋಜನೆಗಳು ಯಶಸ್ವಿಯಾಗಿದ್ದು ಜೊತೆಗೆ ಅನ್ನಭಾಗ್ಯ (Annabhagya) ಯೋಜನೆ ಮೂಲಕ ಕೂಡ ಮಹಿಳೆಯರಿಗೆ ಹಣ ಸೇರುತ್ತಿದೆ. ಪಂಚಖಾತ್ರಿ ಭರವಸೆಗಳಲ್ಲಿ ಒಂದಾಗಿ ಘೋಷಣೆಯಾದಂತೆ ಅನ್ನಭಾಗ್ಯ ಯೋಜನೆಯಡಿ ಉಚಿತ ಪಡಿತರವನ್ನು 10Kg ಏರಿಸುವುದಾಗಿ ನೀಡಿದ್ದ ವಚನವನ್ನು ಪೂರ್ತಿಯಾಗಿ ಯಶಸ್ವಿಯಾಗಿಸಲು ಅಕ್ಕಿ ಕೊರತೆ ಕಂಡು ಬಂದ ಕಾರಣ ಪ್ರತಿ ಸದಸ್ಯರ 5Kg ಹೆಚ್ಚುವರಿ ಅಕ್ಕಿ ಹಣವನ್ನು ಕೂಡ ಕುಟುಂಬದ ಮುಖ್ಯಸ್ಥೆ ಮಹಿಳೆ ಖಾತೆಗೆ ಪ್ರತಿಸದಸ್ಯನಿಗೆ 170 ರೂಪಾಯಿಯಂತೆ ವರ್ಗಾವಣೆ ಮಾಡುತ್ತಿದೆ.
ಹಾಗಾಗಿ 5 ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರ ಪಾಲಿಗೆ ಮೂರು ಗ್ಯಾರಂಟಿ ಯೋಜನೆಗಳು ಮೀಸಲಿಟ್ಟ ರೀತಿ ಆಗಿದೆ. ಈಗ ಲೋಕಸಭಾ ಚುನಾವಣೆ – 2024 (Parliment Election – 2024) ಸಮರಕ್ಕೆ ಅಖಾಡ ಸಿದ್ಧವಾಗುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಬಳಸಿದ ಈ ಅಸ್ತ್ರವನ್ನೇ ಉಪಯೋಗಿಸಿ ಕೇಂದ್ರದಲ್ಲೂ ತನ್ನ ಸ್ಥಾನವನ್ನು ಗಟ್ಟಿಯಾಗಿರಿಸಿಕೊಳ್ಳಲು ರಣತಂತ್ರ ರಚಿಸುತ್ತಿರುವ ಕಾಂಗ್ರೆಸ್ ಇದನ್ನೇ ಹೋಲುವಂತಹ ಗ್ಯಾರಂಟಿ ಯೋಜನೆಗಳ ಭರವಸೆಯನ್ನು ದೇಶಕ್ಕೆ ಘೋಷಿಸಿದ್ದಾರೆ.
ಈ ಸುದ್ದಿ ಓದಿ:- ಸಂಜೆ ವೇಳೆ 5 ಕೆಲಸ ಮಾಡಿದರೆ ಮನೆ ಸರ್ವನಾಶವಾಗುತ್ತದೆ, ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ, ಮಹಾಲಕ್ಷ್ಮಿಯು ಹೊರಟು ಹೋಗುತ್ತಾಳೆ.!
ಮಹಿಳಾ ಖಾತರಿ ನ್ಯಾಯ ಯೋಜನೆಗಳು ಎಂದು ಇದಕ್ಕೆ ಹೆಸರಿಡಲಾಗಿದೆ. ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯನ್ನೇ ಹೋಲುವ ಮಹಾಲಕ್ಷ್ಮಿ ಯೋಜನೆಯನ್ನು (Mahalakshmi) ಕೇಂದ್ರದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಇಡೀ ದೇಶಕ್ಕೆ ವಿಸ್ತರಿಸುವುದಾಗಿ ಕಾಂಗ್ರೆಸ್ ಮುಖಂಡರು ಹೇಳಿಕೆ ನೀಡಿದ್ದಾರೆ.
ಒಂದು ಬದಲಾವಣೆ ಏನೆಂದರೆ ಪ್ರತಿ ತಿಂಗಳು ರೂ.2,000 ಬದಲಾಗಿ ವರ್ಷಕ್ಕೆ 1 ಲಕ್ಷ ರೂಪಾಯಿಯನ್ನು ಮಹಿಳೆ ಖಾತೆಗೆ DBT ಮೂಲಕ ವರ್ಗಾವಣೆ ಮಾಡುವುದಾಗಿ ಹೇಳಲಾಗಿದೆ. ಮಾನ್ಯ ರಾಜ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರೂ ಸಹಾ ತಮ್ಮ ಟ್ವಿಟರ್ ಖಾತೆಯಲ್ಲಿ ಸ್ತ್ರೀ ಸಮಾನತೆ ಕನಸಿಗೆ ಕಾಂಗ್ರೆಸ್ ಶಕ್ತಿ ಎನ್ನುವ ಟ್ಯಾಗ್ ಲೈನ್ ನೊಂದಿಗೆ ಮಹಾಲಕ್ಷ್ಮಿ ಯೋಜನೆ ಬಗ್ಗೆ ಹಂಚಿಕೊಂಡಿದ್ದಾರೆ.
ಈ ಸುದ್ದಿ ಓದಿ:- ರೈತರಿಗೆ 80% ಸಹಾಯಧನದಲ್ಲಿ ಸೌರ ಪಂಪ್ಸೆಟ್ ಅಳವಡಿಸಿಕೊಳ್ಳಲು ಅರ್ಜಿ ಆಹ್ವಾನ, ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತಾ.?
ಮಹಿಳಾ ನ್ಯಾಯ ಖಾತರಿ ಯೋಜನೆಗಳು ಎಂದು ಹೆಸರಿಟ್ಟಿರುವ ಈ ಕೇಂದ್ರದ ಗ್ಯಾರಂಟಿ ಯೋಜನೆಗಳಲ್ಲಿ ಮೊದಲನೇದಾಗಿ ಮಹಾಲಕ್ಷ್ಮಿ ಯೋಜನೆಯ ಘೋಷಣೆಯಾಗಿದ್ದು ದೇಶದಾದ್ಯಂತ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬದ ಮಹಿಳೆಯರಿಗೆ (Below Poverty line) ವಾರ್ಷಿಕವಾಗಿ 1 ಲಕ್ಷ ಹಣಕಾಸಿನ ನೆರವು ನೀಡುವ ಮಹಾಲಕ್ಷ್ಮಿ ಯೋಜನೆಯನ್ನು ಬಹುಮತದ ಬೆಂಬಲದೊಂದಿಗೆ.
ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದರೆ ತಕ್ಷಣವೇ ಚಾಲ್ತಿಗೆ ತರಲಿದ್ದೇವೆ ನಮ್ಮದು ನುಡಿದಂತೆ ನಡೆಯುವ ಸರ್ಕಾರ ಸಮ ಸಮಾಜದ ನಿರ್ಮಾಣ ಗ್ಯಾರಂಟಿ ನೀಡುವ ಸರ್ಕಾರ ಎಂದು ವಿಷಯ ಹಂಚಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷವು ಘೋಷಿಸಿರುವ ಮಹಿಳಾ ನ್ಯಾಯ ಖಾತರಿ ಯೋಜನೆಗಳಲ್ಲಿ ಇನ್ನುಳಿದ ನಾಲ್ಕು ಯೋಜನೆಗಳು ಕೂಡ ಇದೇ ರೀತಿಯಾಗಿ ಮಹಿಳೆಯರಿಗಾಗಿ ಮೀಸಲಾಗಿರುವ ಯೋಜನೆಗಳು ಆಗಿವೆ.