ರೇಷನ್ ಕಾರ್ಡ್ (Rationcard) ಸದ್ಯಕ್ಕೆ ರಾಜ್ಯದಲ್ಲಿ ಹೆಚ್ಚು ಸುದ್ದಿಯಲ್ಲಿರುವ ವಿಷಯ ಎಂದೇ ಹೇಳಬಹುದು. ಯಾಕೆಂದರೆ ರೇಷನ್ ಕಾರ್ಡ್ ಇದ್ದವರಿಗೆ ಮಾತ್ರ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ (Annabhagya and Gruhalakshmi) ಪ್ರಯೋಜನ ಸಿಗುವುದು ಅಲ್ಲದೆ ಆಯುಷ್ಮಾನ್ ಕಾರ್ಡ್ ಯೋಜನೆ (Ayushman Card) ಮೂಲಕ ಚಿಕಿತ್ಸಾ ವೆಚ್ಚಗಳಲ್ಲಿ ರಿಯಾಯಿತಿ ಸಿಗಬೇಕು ಎಂದರೂ ಕೂಡ ರೇಷನ್ ಕಾರ್ಡ್ ಹೊಂದಿರಲೇಬೇಕು.
ಇದಿಷ್ಟೇ ಅಲ್ಲದೆ ಇನ್ನು ಅನೇಕ ವಿಚಾರವಾಗಿ ರೇಷನ್ ಕಾರ್ಡ್ ಒಂದು ಮುಖ್ಯ ದಾಖಲೆಯಾಗಿದೆ. ರೇಷನ್ ಕಾರ್ಡ್ ಹೊಂದಿರುವುದು ಮಾತ್ರವಲ್ಲದೇ ರೇಷನ್ ಕಾರ್ಡ್ ನಲ್ಲಿ ಯಾವುದೇ ವ್ಯತ್ಯಾಸ ಇಲ್ಲದಂತೆ ಹೆಸರು, ವಿಳಾಸ ಸಹಿತ ಮಾಹಿತಿ ಸರಿಯಾಗಿರಬೇಕು ಇವುಗಳಲ್ಲಿ ಸಮಸ್ಯೆ ಇದ್ದು ತಿದ್ದುಪಡಿಗಳು ಇದ್ದರೆ ಅವರಿಗೂ ಕೂಡ ಯಾವುದೇ ಕಲ್ಯಾಣ ಯೋಜನೆಗಳ ಪ್ರಯೋಜನ ಸಿಗುವುದಿಲ್ಲ.
ಈ ಸುದ್ದಿ ಓದಿ:- ಮನೆಯಲ್ಲಿ ಲಕ್ಷ್ಮೀ ಶಾಶ್ವತವಾಗಿ ನಡೆಸಲು ಈ 6 ಸಣ್ಣ ಬದಲಾವಣೆಗಳನ್ನು ಮಾಡಿ ನೋಡಿ.!
ಹೀಗಾಗಿ ರೇಷನ್ ಕಾರ್ಡ್ ಇಲ್ಲದೆ ಇದ್ದವರು ಹೊಸ ರೇಷನ್ ಕಾರ್ಡ್ (New Ration Card) ಪಡೆದುಕೊಳ್ಳಲು ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ (Ration Card correction) ಇದ್ದವರು ಇದನ್ನು ಸರಿಪಡಿಸಿಕೊಳ್ಳಲು ಮತ್ತು ಈಗಾಗಲೇ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದವರು ಚುನಾವಣೆ ನೀತಿ ಸಂಹಿತೆ (Code of Conduct) ಕಾರಣದಿಂದಾಗಿ ಕಳೆದ ವರ್ಷದ ಕರ್ನಾಟಕ ವಿಧಾನಸಭಾ ಚುನಾವಣೆ (Assembly Election – 2023) ಸಮಯದಲ್ಲಿ ಸ್ಥಗಿತಗೊಂಡಿದ್ದ ರೇಷನ್ ಕಾರ್ಡ್ ವಿತರಣೆ ಕಾರ್ಯಕ್ಕೆ ಯಾವಾಗ ಚಾಲನೆ ಸಿಗಲಿದೆ ಎಂದು ಸರ್ಕಾರವನ್ನು ಎದುರು ನೋಡುತ್ತಿದ್ದಾರೆ.
ಇದರ ಜೊತೆಗೆ ಈಗಾಗಲೇ ಎಲ್ಲಾ ದಾಖಲೆ ಸರಿ ಇದ್ದು ಉಚಿತ ಪಡಿತರ ಪಡೆಯುತ್ತಿರುವವರು ಅನ್ನಭಾಗ್ಯ ಯೋಜನೆಯ (Annabhagya Amount) ಫೆಬ್ರವರಿ ಕಂತಿನ ಹಣ ಯಾವಾಗ ಬರುತ್ತದೆ ಎಂದು ಎದುರು ನೋಡುತ್ತಿದ್ದಾರೆ. ಇವರಿಗೆಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (Food and Civil Supply Department) ವತಿಯಿಂದ ಕೆಲ ಘೋಷಣೆಗಳನ್ನು ಮಾಡಲಾಗಿದೆ.
ಈ ಸುದ್ದಿ ಓದಿ:- ಯಾರು ಲಕ್ಷ್ಮಿ ದೇವಿಗೆ ಈ ಹೂವನ್ನು ಸಮರ್ಪಣೆ ಮಾಡುತ್ತಾರೋ ಅವರಿಗೆ ಜೀವನಪೂರ್ತಿ ದುಡ್ಡಿನ ಕೊರತೆ ಬರುವುದಿಲ್ಲ.!
ಮೊದಲನೇಯದಾಗಿ ಏನೆಂದರೆ ಈಗಷ್ಟೇ ಜನವರಿ ತಿಂಗಳ ಅನ್ನಭಾಗ್ಯ ಯೋಜನೆ ಹಣ ವಿತರಣೆ ಆಗಿದೆ ಮತ್ತು ಈ ತಿಂಗಳ ಅಂತ್ಯದ ಒಳಗಡೆ ಫೆಬ್ರವರಿ ತಿಂಗಳ ಅನ್ನಭಾಗ್ಯ ಯೋಜನೆ ಹಣವು ಕೂಡ DBT ಮೂಲಕ ಫಲಾನುಭವಿಗಳ ಖಾತೆಗೆ ವರ್ಗಾವಣೆ ಆಗಲಿದೆ. ಇನ್ನೊಂದೆಡೆ ನಕಲಿ ರೇಷನ್ ಕಾರ್ಡ್ ಹೊಂದಿರುವವರ ಕಾರ್ಡುಗಳನ್ನು ಅಂದರೆ ಅರ್ಹರಲ್ಲದಿದ್ದರೂ ಕೂಡ.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡುವ ರೇಷನ್ ಕಾರ್ಡ್ ಗಳನ್ನು ಅಕ್ರಮವಾಗಿ ಪಡೆದಿರುವವರ ಕಾರ್ಡ್ ಗಳನ್ನು ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದಾರೆ. ರೇಷನ್ ಕಾರ್ಡ್ ಇ-ಕೆವೈಸಿ (e-KYC) ಮಾಡಿಸದೆ ಇದ್ದಲ್ಲಿ ಅಂತಹ ಫಲಾನುಭವಿಗಳ ಅನ್ನಭಾಗ್ಯ ಹಣವು ಸಿಗದೇ ಇರಬಹುದು ಹಾಗಾಗಿ ತಪ್ಪದೆ ಕುಟುಂಬ ಎಲ್ಲಾ ಸದಸ್ಯರು ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸಿ.
ಈ ಸುದ್ದಿ ಓದಿ:- ನೀವು ರಾತ್ರಿ ಮಲಗಿದ್ದಾಗ ಇಂತಹ ಕನಸುಗಳು ಬಿದ್ದರೆ ಶೀಘ್ರದಲ್ಲಿ ಕೋಟ್ಯಾಧಿಪತಿಗಳಾಗುತ್ತೀರಿ ಎಂದು ತಾಯಿ ಮಹಾಲಕ್ಷ್ಮಿ ಸೂಚನೆ ಕೊಡುತ್ತಿದ್ದಾರೆ ಎಂದರ್ಥ.!
ಮುಖ್ಯವಾದ ಎರಡನೇ ವಿಚಾರ ಏನೆಂದರೆ ಹೊಸ ರೇಷನ್ ಕಾರ್ಡ್ ಗೆ ಅರ್ಜ ಸ್ವೀಕಾರ ಹಾಗೂ ರೇಷನ್ ಕಾರ್ಡ್ ವಿತರಣೆ ಕಾರ್ಯಕ್ರಮದ ಬಗ್ಗೆ ಸಚಿವರೇ ಮಾತನಾಡಿದ್ದಾರೆ ಮಾರ್ಚ್ 31 2024ರ ಒಳಗೆ ಎಲ್ಲಾ ರೇಷನ್ ಕಾರ್ಡ್ ಗಳ ಪರಿಶೀಲನೆ ನಡೆದು ವಿತರಣೆ ಕಾರ್ಯಕ್ರಮ ಆರಂಭ ಆಗಲಿದೆ ಇದಾದ ಬಳಿಕ ಏಪ್ರಿಲ್ 1, 2024 ರಿಂದ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿಗಳನ್ನು ಆಹ್ವಾನಿಸಲಿದ್ದೇವೆ.
ಕುಟುಂಬದ ಆದಾಯದ ಆಧಾರದ ಮೇಲೆ ಹೊಸ ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡಲಾಗುವುದು ಎಂದು ಆಹಾರ ಸಚಿವರಾದ ಕೆ.ಎಚ್ ಮುನಿಯಪ್ಪರವರು(Minister K.H Muniyappa) ಹೇಳಿಕೆ ನೀಡಿದ್ದಾರೆ. ರೇಷನ್ ಕಾರ್ಡ್ ಕುರಿತಾಗಿ ಯಾವುದೇ ಗೊಂದಲಗಳಿದ್ದರೂ https://ahara.kar.nic.in ವೆಬ್ ಸೈಟ್ ಗೆ ಭೇಟಿ ಕೊಟ್ಟು ಹೆಚ್ಚಿನ ಮಾಹಿತಿ ಪಡೆಯಿರಿ.