ಜೀವನದಲ್ಲಿ ಹಣ ಹೂಡಿಕೆ ಬಹಳ ಮುಖ್ಯ. ನಾವು ನಮ್ಮ ಭವಿಷ್ಯದಲ್ಲಿ ಆರಾಮದಾಯಕವಾಗಿ ಜೀವನ ನಡೆಸಬೇಕು ಅಂತ ಇದ್ರೆ ಹೂಡಿಕೆಯನ್ನು ಆರಂಭಿಸಬೇಕು ಹನಿ ಹನಿ ಕೂಡಿ ಹಳ್ಳ ಎನ್ನುವಂತೆ ನಮ ಕೈಯಲ್ಲಿ ಎಷ್ಟಾಗುತ್ತದೆಯೋ ಅಷ್ಟಾದರೂ ಸರಿ ಬ್ಯಾಂಕ್ ನಲ್ಲಿ ಪೋಸ್ಟ್ ಆಫೀಸ್ ನಲ್ಲಿ ಅಥವಾ ನಿಮಗೆ ಎಲ್ಲಿ ಬೇಕೋ ಅಲ್ಲಿ ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿಕೊಂಡು ಹಣವನ್ನು ಹೊಂದಿಸಿಕೊಳ್ಳಬೇಕು.
ಈ ರೀತಿ ಹಣ ಹೊಂದಿಸುವುದಕ್ಕೆ ನೀವು ಆಯ್ಕೆ ಮಾಡಿಕೊಳ್ಳಬೇಕಾದ ಒಂದು ಉತ್ತಮ ಹೂಡಿಕೆ ಮಾದರಿ ಅಂದರೆ ಬ್ಯಾಂಕ್ಗಳಲ್ಲಿ ಸ್ಥಿರ ಠೇವಣಿ ಇಡುವುದು. ಇತ್ತೀಚೆಗೆ ಬಹುತೇಕ ಎಲ್ಲಾ ಬ್ಯಾಂಕ್ ಗಳು ಕೂಡ ಎಫ್ ಡಿ (FD) ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿವೆ. ಅದರಲ್ಲೂ ಹಿರಿಯ ನಾಗರಿಕರ ಸ್ಥಿರ ಠೇವಣಿಯ ಮೇಲೆ ಬಡ್ಡಿದರವನ್ನು ಸಾಮಾನ್ಯ ನಾಗರಿಕರಿಗಿಂತಲೂ ಹೆಚ್ಚಿಗೆ ನೀಡಲಾಗುತ್ತಿದೆ. ಹೀಗೆ ಉತ್ತಮ ಬಡ್ಡಿದರವನ್ನು ಹೊಂದಿರುವ ಬ್ಯಾಂಕ್ಗಳಲ್ಲಿ ಎಸ್‌ಬಿಐ ಕೂಡ ಒಂದು.
SBI ನ ಅಮೃತ್ ಕಲಾಷ್ ಯೋಜನೆ
ಎಸ್ ಬಿ ಐ (SBI) ಬ್ಯಾಂಕ್ ತನ್ನ ಗ್ರಾಹಕರಿಗೆ ಅನುಕೂಲವಾಗುವಂತೆ ಅಮೃತ ಕಲಾಷ್ ಯೋಜನೆಯನ್ನು ಪರಿಚಯಿಸಿತು ಅಧಿಕ ಮತದಲ್ಲಿ ಬಡ್ಡಿ ನೀಡಲಾಗುತ್ತದೆ. ಅಮೃತ ಕಲಶ ಯೋಜನೆಯಲ್ಲಿ ಹೂಡಿಕೆ ಮಾಡಲು ಕೆಲವು ದಿನಗಳವರೆಗೆ ಮಾತ್ರ ಅವಕಾಶವಿತ್ತು. ಅಂದ್ರೆ ಈ ಯೋಜನೆಯ ಆರಂಭವಾಗಿದ್ದು 2023 ಏಪ್ರಿಲ್ 12ರಂದು. ಯೋಚನೆಯನ್ನು ಆಗಸ್ಟ್ 15 2023, ಅಂದ್ರೆ ಸ್ವಾತಂತ್ರ್ಯೋತ್ಸವದ ದಿನದಂದು ಎಸ್ ಬಿ ಐ (SBI) ಯೋಜನೆಗೆ ಅಪ್ಲೈ ಮಾಡುವುದನ್ನು ನಿಲ್ಲಿಸುವುದಾಗಿ ಮಾಹಿತಿ ನೀಡಿತ್ತು. ಆದರೆ ಈಗ ಗ್ರಾಹಕರ ಬೇಡಿಕೆಯ ಮೇರೆಗೆ ಗಡುವನ್ನು ವಿಸ್ತರಿಸಲು ಎಸ್ ಬಿ ಐ ಬ್ಯಾಂಕ್ (SBI Bank) ನಿರ್ಧರಿಸಿದೆ.
ಹೌದು ಅಮೃತ್ ಕಲಾಸಿ ಯೋಜನೆ (Amrit Kalash Yojana) ಯಲ್ಲಿ ಹೂಡಿಕೆ ಮಾಡುವುದಿದ್ದರೆ ಗ್ರಾಹಕರಿಗೆ ಇನ್ನೂ ಹೆಚ್ಚಿನ ಸಮಯ ಇದೆ ಅಂದರೆ ಈ ವರ್ಷ ಡಿಸೆಂಬರ್ 31ರವರೆಗೆ ಕೂಡ ಅಮೃತ ಕಲಾಸಿ ಯೋಜನೆ ಅಡಿಯಲ್ಲಿ ಗ್ರಾಹಕರು ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ನೋಡೋದಾದ್ರೆ, 400 ದಿನಗಳ ಹೂಡಿಕೆಯ ವಿಶೇಷ ಯೋಜನೆ ಇದಾಗಿದೆ. ಟಿಡಿಎಸ್ ಕಡಿತಗೊಳಿಸಿದ ಬಳಿಕ ಸ್ಥಿರ ಠೇವಣಿಯ ಮೇಲೆ, ಮಾಸಿಕ ತ್ರೈಮಾಸಿಕ ಹಾಗೂ ಅರ್ಥ ವಾರ್ಷಿಕ ಎನ್ನುವಂತೆ ಬಡ್ಡಿ ನೀಡಲಾಗುತ್ತದೆ.
ಬಾಡಿಗೆ ಮನೆಯಲ್ಲಿ ವಾಸ ಮಾಡುತಿದ್ದವರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ ಹರ್ಷ ವ್ಯಕ್ತ ಪಡಿಸಿದ ಬಾಡಿಗೆದಾರರು.!
ಈ ಯೋಜನೆಯಡಿಯಲ್ಲಿ ಸಾಮಾನ್ಯವಾಗಿ ಹೂಡಿಕೆದಾರರಿಗೆ 7.10% ನಷ್ಟು ಬಡ್ಡಿ ಸಿಗುತ್ತದೆ. ಅದೇ ರೀತಿ ಹಿರಿಯ ನಾಗರಿಕರು ಯೋಜನೆಯಲ್ಲಿ ಠೇವಣಿ ಇಟ್ಟರೆ 7.60% ಬಡ್ಡಿಯನ್ನು ಕೊಡಲಾಗುವುದು. ಒಂದು ಲಕ್ಷ ರೂಪಾಯಿಗಳ ಎಫ್‌ಟಿಇಗೆ ವಾರ್ಷಿಕವಾಗಿ 8,017 ರೂಪಾಯಿ ಬಡ್ಡಿ ಸಿಗುತ್ತದೆ. ಅದೇ ರೀತಿ ಹಿರಿಯ ನಾಗರಿಕರಿಗೆ 8,600 ರೂಪಾಯಿಗಳ ಬಡ್ಡಿ ಸಿಗುತ್ತದೆ.
ಯೋಜನೆಯಲ್ಲಿದೆ ಸಾಲ ಸೌಲಭ್ಯ
ಇನ್ನು ಎಸ್‌ಬಿಐ (SBI) ನ ಅಮೃತ ಕಲಾಷ್ ಯೋಜನೆ (Amrit Kalash Yojana) ಯ ಅಡಿಯಲ್ಲಿ ಠೇವಣಿ ಮಾಡಿದರೆ ಆದಾಯ ತೆರಿಗೆ ಕಾಯ್ದೆಯ ಅನ್ವಯ ಟಿಡಿಎಸ್ ದರವನ್ನು ವಿಧಿಸಲಾಗುತ್ತದೆ. ಇನ್ನು ಈ ಯೋಜನೆಯಲ್ಲಿ ಅವಧಿಪೂರ್ವ ಸಾಲ ಸೌಲಭ್ಯವನ್ನು ಕೂಡ ಪಡೆಯಬಹುದು. ಯೋಜನೆಯಲ್ಲಿ ಎರಡು ಕೋಟಿ ಹೂಡಿಕೆ ಮಾಡಿದರೆ ಮುಂಚಿತವಾಗಿ ಸಾಲ ತೆಗೆದುಕೊಳ್ಳುವ ಅವಕಾಶವಿದೆ. ಏನು ಎಸ್ ಬಿ ಐ ನಲ್ಲಿ ಅಮೃತ ಕಲಾಷ್ ಎಫ್ ಡಿ ಯೋಜನೆಯನ್ನು ಆರಂಭಿಸಲು ಯುನೋ ಬ್ಯಾಂಕಿಂಗ್ ಆಪ್ ಅನ್ನು ಬಳಸಿಕೊಳ್ಳಬಹುದು. ಅಥವಾ ಹತ್ತಿರದ ಎಸ ಬಿ ಐ ಬ್ಯಾಂಕ್ ಶಾಖೆಗೆ ಹೋಗಿ ಅಲ್ಲಿಯೂ ನಿಮ್ಮ ಖಾತೆಯನ್ನು ತೆರೆಯಬಹುದು.