ಗೃಹಲಕ್ಷ್ಮೀ ಯೋಜನೆಯನ್ನು ಪಡೆದುಕೊಳ್ಳುತ್ತಿರುವಂತಹ ಕೆಲವೊಂದ ಷ್ಟು ಮಹಿಳೆಯರಿಗೆ ಈಗ ನಾವು ಹೇಳುವಂತಹ ಕೆಲವೊಂದು ಮಾಹಿತಿ ನಿಮಗೆ ಬಿಗ್ ಶಾಕ್ ಎಂದೇ ಹೇಳಬಹುದು. ಹಾಗಾದರೆ ಗೃಹಲಕ್ಷ್ಮಿ ಹಣವನ್ನು ಪಡೆದುಕೊಳ್ಳಲು ಅನರ್ಹರಾಗಿರುವಂತಹ ಮಹಿಳೆಯರು ಯಾರು ಹಾಗೂ ಈ ರೀತಿ ನಿಮ್ಮ ಗೃಹಲಕ್ಷ್ಮಿ ಹಣ ಕ್ಯಾನ್ಸಲ್ ಆಗುವುದಕ್ಕೆ ಬಹಳ ಪ್ರಮುಖವಾದಂಥ ಕಾರಣಗಳು ಏನು.
ಹಾಗೂ ಈಗಾಗಲೇ ಎರಡರಿಂದ ಮೂರು ಕಂತಿನ ಹಣವನ್ನು ಪಡೆದು ಐದು ಮತ್ತು ಆರನೇ ಕಂತಿನ ಹಣ ಬಂದಿಲ್ಲದೆ ಇರುವಂತಹ ಕೆಲವೊಂದಷ್ಟು ಜನರ ರೇಷನ್ ಕಾರ್ಡ್ ರದ್ದು ಆಗಲು ಬಹಳ ಪ್ರಮುಖವಾದಂತಹ ಕಾರಣಗಳು ಏನು ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಎಲ್ಲರಿಗೂ ತಿಳಿದಿರುವಂತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಐದು ಗ್ಯಾರಂಟಿಗಳನ್ನು ಜನರಿಗೆ ಉಚಿತವಾಗಿ ಕೊಡುತ್ತೇವೆ ಎಂಬ ಮಾಹಿತಿಯನ್ನು ಹೊರಡಿಸಿದ್ದರು. ಅದರಂತೆ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಸಹ ಬಿಡುಗಡೆ ಮಾಡುವಲ್ಲಿ ಯಶಸ್ವಿಯಾಗಿದ್ದು. ಇದರಲ್ಲಿ ಎಲ್ಲಾ ರೀತಿಯ ಪ್ರಯೋಜನಗಳನ್ನು ಸಹ ಪ್ರತಿಯೊಬ್ಬರು ಪಡೆದುಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದು.
ಈ ಸುದ್ದಿ ಓದಿ:- ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ಹಾಗೂ ಮಹಿಳೆಯರಿಗೆ 2 ಲಕ್ಷ ಸಿಗುತ್ತೆ…|
ಅದರಲ್ಲಿ ಮುಖ್ಯವಾಗಿ ಮಹಿಳೆಯರಿಗೆ ಅನುಕೂಲವಾಗುವಂತೆ ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಹಾಗಾಗಿ ಪ್ರತಿಯೊಬ್ಬ BPL ಕಾರ್ಡ್ ಹೊಂದಿ ರುವಂತಹ ಪ್ರತಿಯೊಬ್ಬ ಸದಸ್ಯರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದರು. ಆದರೆ ಕೆಲವೊಂದಷ್ಟು ಜನ BPL ಕಾರ್ಡ್ ಹೊಂದಿಲ್ಲದೆ ಇದ್ದರೂ ಬಿಪಿಎಲ್ ಕಾರ್ಡ್ ಹೊಸದಾಗಿ ಮಾಡಿಸುವುದರ ಮೂಲಕ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ.
ಕೆಲವೊಂದಷ್ಟು ಜನರು ಈ ಒಂದು ಯೋಜನೆಗೆ ಅನರ್ಹರಾಗಿದ್ದರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿರುವುದು ವಿಷಾಧನೀಯ ಎಂದು ಹೇಳಿದರೆ ತಪ್ಪಾಗುವುದಿಲ್ಲ.ಆದ್ದರಿಂದ ಅಂತಹ ಕೆಲವೊಂದಷ್ಟು ರೇಷನ್ ಕಾರ್ಡ್ ಗಳನ್ನು ರದ್ದು ಪಡಿಸುವ ಉದ್ದೇಶದಿಂದ ಅರ್ಹರಿರುವಂತಹ ಕೆಲವೊಂದಷ್ಟು ಜನರ ರೇಷನ್ ಕಾರ್ಡ್ ಅನ್ನು ಕೂಡ ರದ್ದುಪಡಿಸಿದ್ದಾರೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಭಯಪಡುವ ಅವಶ್ಯಕತೆ ಇಲ್ಲ.
ಯಾರೆಲ್ಲಾ ಅನರ್ಹರೋ ಎನ್ನುವುದನ್ನು ಕಂಡುಹಿಡಿಯುವುದಕ್ಕಾಗಿ ಈ ಒಂದು ನಿರ್ಧಾರವನ್ನು ಸರ್ಕಾರ ಕೈಗೊಂಡಿದ್ದು ಅನರ್ಹರ ರೇಷನ್ ಕಾರ್ಡ್ ಗಳನ್ನು ರದ್ದುಪಡಿಸಿ ಅವರಿಗೆ ಗೃಹಲಕ್ಷ್ಮಿ ಹಣ ಬಾರದೆ ಇರುವ ಹಾಗೆ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದಾರೆ.
ಈ ಸುದ್ದಿ ಓದಿ:- ಸಿಂಹ ರಾಶಿಯವರಿಗೆ ಮಾರ್ಚ್ ತಿಂಗಳಿನಲ್ಲಿ ಶುಕ್ರ ಬಲ, ಹೇಗಿರಲಿದೆ ಗೊತ್ತಾ ಮಾರ್ಚ್ – 2024ರ ಮಾಸ ಭವಿಷ್ಯ, ಮುತ್ತಿನಂಥ 3 ಶುಭ ವಿಚಾರಗಳು.!
ಅದೇ ರೀತಿ ಪ್ರತಿ ತಿಂಗಳು ಹಲವಾರು ಜನರ ರೇಷನ್ ಕಾರ್ಡ್ ಅನ್ನು ರದ್ದುಪಡಿಸುತ್ತಿದ್ದಾರೆ ಆಹಾರ ಸರಬರಾಜು ಇಲಾಖೆಯ ಮೂಲ ವೆಬ್ಸೈಟ್ ನಲ್ಲಿ ಪ್ರತಿ ತಿಂಗಳು ಯಾವ ರೇಷನ್ ಕಾರ್ಡ್ ಅನ್ನು ರದ್ದುಪಡಿಸಲಾಗುತ್ತಿದೆ ಎನ್ನುವಂತಹ ಮಾಹಿತಿಯನ್ನು ತಿಳಿಸಿದ್ದಾರೆ.
ಆ ಒಂದು ವೆಬ್ಸೈಟ್ ನಲ್ಲಿ ಹೋಗಿ ನಿಮ್ಮ ಆಧಾರ್ ಕಾರ್ಡ್ ನಿಮ್ಮ ರಾಜ್ಯ ನಿಮ್ಮ ತಾಲೂಕು ನಿಮ್ಮ ಜಿಲ್ಲೆ ನಿಮ್ಮ ಮೊಬೈಲ್ ಸಂಖ್ಯೆ ಎಲ್ಲಾ ದಾಖಲಾತಿಗಳನ್ನು ಹಾಕಿ ನೋಡುವುದರ ಮೂಲಕ ಯಾವ ರೇಷನ್ ಕಾರ್ಡ್ ರದ್ದಾಗಿದೆ ಯಾವ ರೇಷನ್ ಕಾರ್ಡ್ ರದ್ದಾಗಿಲ್ಲ ಎನ್ನುವಂತಹ ಮಾಹಿತಿಯನ್ನು ಪಡೆಯಬಹುದು.
ಈ ಒಂದು ವಿಧಾನ ಬಹಳ ಉತ್ತಮವಾಗಿದ್ದು ಅರ್ಹರಿಗೆ ಇದರ ಪ್ರಯೋಜನ ಸಿಗಬೇಕು ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಹಾಗಾಗಿ ಮೇಲೆ ಹೇಳಿದ ಎಷ್ಟು ಮಾಹಿತಿಗಳನ್ನು ನೀವು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಒಟ್ಟಾರೆಯಾಗಿ ಈ ಒಂದು ಯೋಜನೆ ಅರ್ಹರಿಗೆ ಮಾತ್ರ ಸಲ್ಲಬೇಕು ಎನ್ನುವುದು ಇದರ ಮೂಲ ಉದ್ದೇಶವಾಗಿದೆ.