ಗೃಹಜ್ಯೋತಿ ಉಚಿತ ವಿದ್ಯುತ್ ಪಡೆಯಲು ಆಧಾರ್ ಲಿಂಕ್ ಮಾಡುವುದು ಕಡ್ಡಾಯ. ಆಧಾರ್ ಲಿಂಕ್ ಮಾಡುವುದೇಗೆ ನೋಡಿ.!

 

ರಾಜ್ಯದಲ್ಲಿ ಕಳೆದ ತಿಂಗಳಿನಿಂದ ಕಾಂಗ್ರೆಸ್ ಸರ್ಕಾರ ತಾತ್ವಿಕ ಆದೇಶ ನೀಡಿದ್ದ ಗ್ಯಾರಂಟಿ ಕಾರ್ಡ್ ಯೋಜನೆಗಳ ಅನುಷ್ಠಾನದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಅಂತಿಮವಾಗಿ ಎರಡನೇ ಸುತ್ತಿನ ಕ್ಯಾಬಿನೆಟ್ ಮೀಟಿಂಗ್ ನಡೆದು ಜೂನ್ ಎರಡನೇ ತಾರೀಖಿನಂದು ಸರ್ಕಾರದ ಕಡೆಯಿಂದ ಮತ್ತೊಂದು ಆದೇಶ ಪತ್ರವು ಹೊರ ಬಿದ್ದಿದೆ.

ಪ್ರತಿಯೊಂದು ಯೋಜನೆಗೂ ಕೂಡ ಇರುವ ಕಂಡೀಶನ್ಗಳು ಏನು ಆ ಯೋಜನೆಗಳನ್ನು ಜಾರಿಗೆ ತರುವುದಕ್ಕೆ ಅನುಸರಿಸುತ್ತಿರುವ ಮಾರ್ಗಸೂಚಿಗಳು ಏನಿರುತ್ತದೆ, ಯಾರೆಲ್ಲ ಈ ಯೋಜನೆಯ ಫಲಾನುಭವಿಗಳಾಗುವ ಅರ್ಹತೆ ಹೊಂದಿ ಯೋಜನೆ ವ್ಯಾಪ್ತಿ ಒಳಗೆ ಬರುತ್ತಾರೆ ಎನ್ನುವುದಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಈ ಆದೇಶ ಪತ್ರವು ಒಳಗೊಂಡಿದೆ.

ಅದರಲ್ಲಿ ಮೊದಲನೆಯ ಗ್ಯಾರಂಟಿ ಕಾರ್ಡ್ ಯೋಜನೆಯಾದ ಗೃಹಜೋತಿ ಯೋಜನೆ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಸರ್ಕಾರ ಸ್ಥಾಪನೆಗೊ ಮುನ್ನ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಸರ್ಕಾರವು ಕರ್ನಾಟಕವನ್ನು ಕತ್ತಲೆ ಮುಕ್ತ ಮಾಡುವ ಉದ್ದೇಶದಿಂದ ಎಲ್ಲಾ ಕುಟುಂಬಗಳಿಗೂ ಸಹ ಉಚಿತವಾಗಿ 200 ಯೂನಿಟ್ ವಿದ್ಯುತ್ ಕೊಡುವುದಾಗಿ ಹೇಳಿತ್ತು ಆದರೆ ಆದೇಶಪತ್ರ ಹೊರಬಿದ್ದ ಬಳಿಕ ಅದಕ್ಕೆ ಕೆಲವು ಕಂಡೀಶನ್ ಗಳನ್ನು ಸೇರಿಸಲಾಯಿತು.

ಕಳೆದ ಒಂದು ವರ್ಷದಿಂದ ಜನಸಾಮಾನ್ಯರು ಬಳಸಿರುವ ವಿದ್ಯುತ್ ಸರಾಸರಿಯಲ್ಲಿ ಹೆಚ್ಚುವರಿಯಾಗಿ 10% ಉಚಿತ ವಿದ್ಯುತ್ ಕೊಡುತ್ತೇವೆ ಅದಕ್ಕಿಂತ ಹೆಚ್ಚಿನ ವಿದ್ಯುತ್ ಬಳಕೆಗೆ ಮಾಲೀಕರೇ ಹೊಣೆ ಹಾಗೂ 200 ಯೂನಿಟ್ ಕಿಂತ ಹೆಚ್ಚು ವಿದ್ಯುತ್ ಬಳಸಿದರೆ ಸಂಪೂರ್ಣ ವಿದ್ಯುತ್ ಬಿಲ್ ಅನ್ನು ಮನೆಮಾಲೀಕರೇ ಕಟ್ಟಬೇಕು ಎನ್ನುವುದು ಸರ್ಕಾರ ಹಾಕಿದ ಪ್ರಮುಖ ಕಂಡಿಶನ್. ಜೊತೆಗೆ ಈ ಯೋಜನೆಗೆ ಫಲಾನುಭವಿಗೆಗಳನ್ನು ಆಯ್ಕೆ ಮಾಡುವ ವಿಚಾರಕ್ಕಾಗಿ ಫಲಾನುಭವಿಗಳ ಆಧಾರ್ ಕಾರ್ಡನ್ನು ಅವರ ಗ್ರಾಹಕರ ಐಡಿ ನಂಬರ್ ಅಥವಾ ವಿದ್ಯುತ್ ಖಾತೆ ಸಂಖ್ಯೆಗೆ ಲಿಂಕ್ ಮಾಡಬೇಕು ಈ ಮೂಲಕ ಫಲಾನುಭವಿಗಳನ್ನು ಗುರುತಿಸಲಾಗುತ್ತದೆ ಎಂದು ಹೇಳಲಾಗಿತ್ತು.

ಈ ವಿಷಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಆಗುತ್ತಿತ್ತು. ಯಾಕೆಂದರೆ ಈ ರೀತಿ ಗ್ರಾಹಕರ ಐಡಿ ಸಂಖ್ಯೆಗೆ ಅಥವಾ ವಿದ್ಯುತ್ ಖಾತೆ ಸಂಖ್ಯೆಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡುವ ವಿಚಾರ ಸಾಕಷ್ಟು ಗೊಂದಲಗಳನ್ನು ಸೃಷ್ಟಿ ಮಾಡಿದೆ. ಯಾಕೆಂದರೆ ಸ್ವಂತ ಮನೆ ಹೊಂದಿರುವವರಿಗೆ ಇದರ ಸಮಸ್ಯೆಗಳು ಉಂಟಾಗುವುದಿಲ್ಲ ಆದರೆ ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳು ಇನ್ನೂ ಸಹ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ.

ಈ ರೀತಿ ಗ್ರಾಹಕರ ಖಾತೆ ಸಂಖ್ಯೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದಾದರೆ ಬಾಡಿಗೆದಾರರು ಅದರ ವ್ಯಾಪ್ತಿಯಿಂದ ಹೊರಗುಳಿಯಬಹುದು ಎನ್ನುವುದು ಸೇರಿದಂತೆ ಇನ್ನೂ ಅನೇಕ ಜಟಿಲ ಸಮಸ್ಯೆಗಳನ್ನು ಇದು ಹೊಂದಿದೆ. ಬಾಡಿಗೆ ಮನೆಗಳಿಗೂ ಸಹ ಪ್ರತಿಯೊಬ್ಬವಾಗಿ ವಿದ್ಯುತ್ ಖಾತೆ ಸಂಖ್ಯೆ ಇರುವ ಕಾರಣವಾಗಿ ಆಧಾರ್ ಕಾರ್ಡ್ ಲಿಂಕ್ ಮಾಡಿದರೆ ಈ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದು ಊಹಿಸಲಾಗಿದೆ.

ಈಗ ಇಂಧನ ಇಲಾಖೆಯಿಂದ ಈ ಬಗ್ಗೆ ಸ್ಪಷ್ಟತೆ ಕೂಡ ಸಿಕ್ಕಿದ್ದು ಪ್ರತಿಯೊಬ್ಬರು ಗೃಹಜ್ಯೋತಿ ಯೋಜನೆಯ ಪ್ರಯೋಜನ ಪಡೆಯಲು ಅವರ ವಿದ್ಯುತ್ ಖಾತೆ ಸಂಖ್ಯೆ ಅಥವಾ ಗ್ರಾಹಕರ ಐಡಿ ಸಂಖ್ಯೆಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಲೇಬೇಕು ಇದು ಕಡ್ಡಾಯ ಎನ್ನುವ ಸ್ಪಷ್ಟತೆ ಕೊಟ್ಟಿದ್ದಾರೆ. ಇಲಾಖೆಯಿಂದ ಈ ರೀತಿಯ ಆದೇಶ ಹೊರ ಬಿದ್ದಿದ್ದರೂ ಕರ್ನಾಟಕಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿರುವ ಯಾವುದೇ ಕಂಪನಿಗಳಿಂದ ಕೂಡ ಇದಕ್ಕಾಗಿ ವೆಬ್ಸೈಟ್ ಓಪನ್ ಆಗಿಲ್ಲ. ಇದರ ಸಿದ್ಧತೆ ನಡೆಯುತ್ತಿರುವುದರಿಂದ ಶೀಘ್ರವಾಗಿ ಸರ್ಕಾರದಿಂದ ಅಥವಾ ಇಂಧನ ಇಲಾಖೆಯಿಂದ ಇದರ ಕುರಿತು ಮಾಹಿತಿ ಹೊರಬೀಳಬಹುದು.

Leave a Comment