ವರನಟ ಡಾ. ರಾಜಕುಮಾರ್ (Dr.Rajkumar) ಅಕ್ಷರಶಃ ಈ ನಾಡು ಕಂಡ ಶ್ರೇಷ್ಠ ವ್ಯಕ್ತಿತ್ವದ ಮನಮೋಹಕ ಅಭಿನಯದ ನಟಸಾರ್ವಭೌಮ. ಇವರ ಅಭಿನಯದ ಮೋಡಿಯದೆಮೇ ಒಂದು ಸೆಳೆತವಾದರೆ ಇವರು ಒಪ್ಪಿಕೊಳ್ಳುತ್ತಿದ್ದ ಪಾತ್ರಗಳು ಮಾಡುತ್ತಿದ್ದ ಸಿನಿಮಾಗಳು ಅದರ ಸಂದೇಶ ಮತ್ತು ಆ ಸಿನಿಮಾದ ಹಾಡುಗಳು ಈ ಬದುಕಿಗೆ ಬೇಕಾದ ಜೀವನ ಪಾಠವೇ ಆಗಿರುತ್ತಿತ್ತು. ಪ್ರತಿಯೊಂದು ಸಿನಿಮಾದಲ್ಲೂ ಕೂಡ ಅರ್ಥಪೂರ್ಣ ಸಂಭಾಷಣೆ ಹಾಗೂ ಸಿನಿಮಾದಲ್ಲಿ ಒಂದು ನೀತಿಯನ್ನು ನೀಡುತ್ತಿದ್ದ ಅಣ್ಣಾವ್ರ ಸಿನಿಮಾ ನೋಡಿ ಹಾಗೂ ಅವರ ವ್ಯಕ್ತಿತ್ವ ನೋಡಿ ಅನೇಕರು ಬದಲಾಗಿದ್ದಾರೆ.
ಎಲ್ಲರಿಗೂ ತಿಳಿದಿರುವಂತೆ ಕನ್ನಡ ಚಲನಚಿತ್ರ ರಂಗದ ಬಂಗಾರದ ಸಿನಿಮಾ ಎಂದೇ ಕರೆಯಬಹುದಾದ ಬಂಗಾರದ ಮನುಷ್ಯ (Bangarada Manushya) ಸಿನಿಮಾ ನೋಡಿ ಎಷ್ಟೋ ಮಂದಿ ಪಟ್ಟಣ ಬಿಟ್ಟು ಹಳ್ಳಿಗೆ ಹೋಗಿ ವ್ಯವಸಾಯ ಮಾಡಲು ಶುರು ಮಾಡಿದರು. ಅಷ್ಟರ ಮಟ್ಟಿಗೆ ಆ ಸಿನಿಮಾದ ಅಣ್ಣಾವ್ರ ಪಾತ್ರ ಜನರ ಮನಸ್ಸಿನ ಮೇಲೆ ಪರಿಣಾಮ ಬೀರಿತ್ತು. ಜನ ಸಾಮಾನ್ಯರು ಮಾತವಲ್ಲದೆ ಜನಪ್ರಿಯ ಸೆಲೆಬ್ರಿಗಳು ಕೂಡ ಈ ಬಗ್ಗೆ ಅನೇಕ ಬಾರಿ ಹೇಳಿಕೊಂಡಿದ್ದಾರೆ.
ಅದೇ ರೀತಿ ಈ ವಾರ ಜೀ ಕನ್ನಡ (Zee kannada) ವಾಹಿನಿಯ ಸರಿಗಮಪ (Saregamapa) ರಿಯಾಲಿಟಿ ಶೋ ವೇದಿಕೆಯಲ್ಲಿ ಹಂಸಲೇಖ ಅವರು ಇಂತಹದೊಂದು ನೆನಪನ್ನು ತೆರೆದುಕೊಂಡಿದ್ದಾರೆ. ಈ ಬಾರಿ ಸರಿಗಮಪ ಶೋ ಅಲ್ಲಿ ರಾಜ್ ಕುಮಾರ್ ಅವರ ವಿಶೇಷದ ಸುತ್ತು ಇದೆ. ಈ ಸುತ್ತಿನಲ್ಲಿ ಅಣ್ಣಾವ್ರ ಹಾಡುಗಳನ್ನು ಹಾಡಲಾಗುತ್ತಿದ್ದು ರಾಘಣ್ಣ ಅವರು ಇದಕ್ಕೆ ಅತಿಥಿಯಾಗಿ ಆಗಮಿಸಿದ್ದಾರೆ. ಚೆನ್ನಪ್ಪ ಅವರು ಆಕಸ್ಮಿಕ (Akasmika) ಚಿತ್ರದ ಬಾಳುವಂತ ಹೂವೆ ಬಾಡುವ ಆಸೆ ಏಕೆ? ಈ ಹಾಡನ್ನು ಹಾಡಿದ್ದಾರೆ.
ಆಕಸ್ಮಿಕ ಚಿತ್ರದಲ್ಲಿ ಅಣ್ಣಾವ್ರು ಅಭಿನಯ ಮಾಡಿರುವುದು ಮಾತ್ರವಲ್ಲದೆ ಈ ಹಾಡಿಗೂ ಕೂಡ ಧ್ವನಿ ಆಗಿದ್ದಾರೆ. ಅಣ್ಣಾವ್ರು ಹಾಡಿರುವ 300ಕ್ಕೂ ಹೆಚ್ಚಿನ ಸಿನಿಮಾ ಹಾಡುಗಳಲ್ಲಿ ಈ ಹಾಡು ಕೂಡ ಒಂದು. ಈ ಹಾಡಿನ ಅರ್ಥ ಬಲು ಸೊಗಸಾಗಿದೆ ಬದುಕಿನಲ್ಲಿ ಸೋಲು ಕಂಡ ಜೀವ ಬದುಕೆ ಮುಗಿದು ಹೋಯಿತು ಎಂದು ನಂಬಿಕೆ ಕಳೆದುಕೊಂಡ ಒಡೆದ ಮನಸ್ಸು ಒಮ್ಮೆ ಈ ಹಾಡನ್ನು ಕೇಳಿದರೆ ಸಾಕು ಯಾವುದೇ ತೆರಪಿ ಇಲ್ಲದೆ ಅವರ ನೋವು ನಿವಾರಣೆ ಆಗಿ ಬಿಡುತ್ತದೆ.
ಅಷ್ಟು ಅರ್ಥಬದ್ಧವಾದ ಈ ಹಾಡನ್ನು ಸೃಶ್ಯಾವ್ಯವಾಗಿ ಅಣ್ಣಾವ್ರು ಹಾಡಿದ್ದಾರೆ. ಈ ಹಾಡನ್ನು ಚೆನ್ನಪ್ಪ (Chennappa) ಅವರು ಹಾಡಿದ ಬಳಿಕ ಹಂಸಲೇಖ (Hamsalekha) ಅವರು ಹಾಡಿನ ಬಗ್ಗೆ ಮಾತನಾಡಿ ನನಗೆ ತಿಳಿದಿರುವ ಒಬ್ಬ ಹುಡುಗ ಆ.ತ್ಮ.ಹ.ತ್ಯೆ (Succide) ಮಾಡಿಕೊಳ್ಳಲು ಹೋಗಿದ್ದ ಆದರೆ ಅಣ್ಣಾವ್ರ ಹಾಡು ಅದೇ ಸಮಯದಲ್ಲಿ ಪ್ಲೇ ಆಗುತ್ತಿತ್ತು ಹಾಡನ್ನು ಕೇಳಿ ಮನ ಪರಿವರ್ತನೆ ಮಾಡಿಕೊಂಡು ಮತ್ತೆ ಜೀವನದ ಯುದ್ಧ ಎದುರಿಸಲು ಸಿದ್ಧನಾದ ಎಂದು ಹಳೆಯ ಕಥೆಯನ್ನು ಹೇಳಿಕೊಂಡಿದ್ದಾರೆ.
ಅದೇ ಸಮಯದಲ್ಲಿ ರಾಘಣ್ಣ (Raghavendra Rajkumar) ಅವರು ಸಹ ನಾನು ಪ್ಯಾರಾಲಿಸಿಸ್ ಅಟ್ಯಾಕ್ (Paralysis attack) ಆಗಿ ಚಿಕಿತ್ಸೆ ಪಡೆಯುತ್ತಿದ್ದಾಗ ಬಹಳ ಖಿನ್ನತೆ (depression) ಅನುಭವಿಸುತ್ತಿದ್ದೆ. ಆ ಸಮಯದಲ್ಲಿ ಅಪ್ಪಾಜಿ ಅವರ ಈ ಹಾಡನ್ನು ಪದೇ ಪದೇ ಕೇಳುತ್ತಿದ್ದೆ ಅದರಿಂದ ನನಗೆ ಸಮಾಧಾನ ಸಿಗುತ್ತಿತ್ತು ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ರೀತಿ ಆಕಸ್ಮಿಕ ಸಿನಿಮಾದ ಈ ಒಂದು ಹಾಡು ಮಾತ್ರ ಅಲ್ಲದೆ ಅಣ್ಣಾವ್ರು ಹಾಡಿರುವ ಅನೇಕ ಹಾಡು ಗಳು ಇದೇ ರೀತಿ ಮನಸ್ಸಿಗೆ ಸಮಾಧಾನ ನೀಡುವ ಮೌಲ್ಯ ಭರಿತ ಪದಪುಂಜ ದಿಂದ ಕುಡಿದ ಹಾಡಾಗಿದೆ, ಜೊತೆಗೆ ಅವುಗಳಿಗೆ ಅಣ್ಣಾವ್ರ ಸ್ವರ ಬೆರೆತಿರುವುದರಿಂದ ಅದಕ್ಕೆ ಇನ್ನಷ್ಟು ಸಕಾರಾತ್ಮಕ ಶಕ್ತಿ ಬಂದಿದೆ ಎಂದು ಹೇಳಬಹುದು.