Sunday, May 28, 2023
HomeEntertainmentವೈವಾಹಿಕ ಜೀವನಕ್ಕೆ ಕಾಲಿಟ್ಟ ಕಿರುತೆರೆಯ ಜನಪ್ರಿಯ ನಟಿ ಪ್ರಿಯಾ & ನಟ ಸಿದ್ದು.

ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಿರುತೆರೆಯ ಜನಪ್ರಿಯ ನಟಿ ಪ್ರಿಯಾ & ನಟ ಸಿದ್ದು.

 

ಪ್ರಿಯ ಜೆ ಆಚಾರ್ (Priya J Achar) ಹಾಗೂ ಸಿದ್ದು ಮೂಲಿಮನಿ (Siddu Moolimane) ಅವರು ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಈ ಹೆಸರು ಹೇಳಿದರೆ ಇವರು ಯಾರು ಎಂದು ಎಲ್ಲರಿಗೂ ಕನ್ಫ್ಯೂಸ್ ಆಗಬಹುದು. ಗಟ್ಟಿಮೇಳ (Gattimela) ಧಾರಾವಾಹಿ ಅಧಿತಿ (Adhiti) ಮತ್ತು ಪಾರು (Paru) ಧಾರವಾಹಿಯ ಪ್ರೀತಮ್ (Preetham) ಎಂದ ತಕ್ಷಣ ಎಲ್ಲರಿಗೂ ಇವರ ಮುದ್ದು ಮುಖ ನೆನಪಿಗೆ ಬರುತ್ತದೆ.

ಇದೇ ಪಾತ್ರದ ಹೆಸರುಗಳಿಂದ ಕಿರುತೆರೆ ಜನರ ಗಮನ ಸೆಳೆದಿರುವ ಇವರಿಬ್ಬರೂ ಪ್ರೀತಿಯಲ್ಲಿ ಬಿದ್ದಿರುವ ವಿಷಯ ಹಾಗೂ ಕುಟುಂಬದವರ ಒಪ್ಪಿಗೆ ಪಡೆದುಕೊಂಡು ನಿಶ್ಚಿತಾರ್ಥ ಮಾಡಿಕೊಂಡಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಕಳೆದ ನವೆಂಬರ್ ತಿಂಗಳಲ್ಲಿ ಇಬ್ಬರು ಕೂಡ ಅದ್ದೂರಿಯಾಗಿ ನಿಶ್ಚಿತಾರ್ಥ ಕಾರ್ಯಕ್ರಮ ಮಾಡಿಕೊಂಡಿದ್ದರು, ಆ ಕಾರ್ಯಕ್ರಮಕ್ಕೆ ಕಿರುತೆರೆ ಧಾರಾವಾಹಿಗಳ ದಂಡೆ ಬಂದು ಆಶೀರ್ವಾದ ಮಾಡಿತ್ತು.

ನಂತರ ಸೋಶಿಯಲ್ ಮೀಡಿಯಾದಲ್ಲಿ ಆ ಫೋಟೋಗಳು ವೈರಲ್ ಆಗುವ ಮೂಲಕ ಅಧಿಕೃತವಾಗಿ ಇವರಿಬ್ಬರು ಮುಂದಿನ ವರ್ಷ ಮದುವೆ ಆಗಲಿದ್ದಾರೆ ಎನ್ನುವುದು ಕನ್ಫರ್ಮ್ ಆಯ್ತು. ಇಂದು ಲವ್ ಬರ್ಡ್ಸ್ ಆಗಿದ್ದ ಇವರು ಸತಿಪತಿಗಳಾಗಿ ಜೀವನದ ಮುಂದಿನ ಅಧ್ಯಾಯ ಶುರು ಮಾಡುತ್ತಿದ್ದಾರೆ. ಸಿದ್ದು ಮೂಲಿಮನಿ ಹಾಗೂ ಪ್ರಿಯ ಜೆ ಆಚಾರ್ ಅವರು ಒಂದೇ ವಾಹಿನಿಯ ಬೇರೆ ಬೇರೆ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದರು.

ಮೊದಲಿಗೆ ಮುಖ ಪರಿಚಯ ಇದ್ದರೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (DKD) ಕಾರ್ಯಕ್ರಮದಲ್ಲಿ ಇಬ್ಬರು ಕಂಟೆಸ್ಟೆಂಟ್ಗಳಾಗಿ ಕಾಣಿಸಿಕೊಂಡಿದ್ದರಿಂದ ಇಬ್ಬರ ನಡುವೆ ಸ್ನೇಹ ಮೊಳೆತು ನಂತರ ಅದು ಪ್ರೀತಿಯಾಗಿ ಬದಲಾಗಿತ್ತು. ಈ ನಡುವೆ ಇಬ್ಬರು ಕೂಡ ಧಮಾಕ (Dhamaka) ಎನ್ನುವ ಚಿತ್ರದಲ್ಲಿ ಜೋಡಿಗಳಾಗಿ ಕೂಡ ಅಭಿನಯಿಸಿದ್ದರು. ಧಮಾಕ ಚಿತ್ರದ ಹಾಡುಗಳು ಹಿಟ್ ಆಗಿ ಟ್ರೆಂಡಿಂಗ್ ಕೂಡ ಆಗಿತ್ತು, ಆಗ ಇವರಿಬ್ಬರು ಜೀವನದಲ್ಲೂ ಜೊತೆ ಆಗುತ್ತಾರೆ ಎಂದು ಯಾರು ಊಹಿಸಿಕೊಂಡು ಇರಲಿಲ್ಲ.

ಇವರ ನಿಶ್ಚಿತಾರ್ಥದ ಆದ ಬಳಿಕ ಎಲ್ಲರಿಗೂ ಈ ವಿಷಯ ಬಹಳ ಅಚ್ಚರಿ ಮೂಡಿಸಿದೆ ತಮ್ಮ ಪ್ರೀತಿಯನ್ನು ಕುಟುಂಬದವರಿಗೆ ತಿಳಿಸಿ ಗುರು ಹಿರಿಯರು ಬಂದು ಬಾಂಧವರು ಮತ್ತು ಸ್ನೇಹಿತರು ಹಾಗೂ ಪರಿಚಯಸ್ತರ ಸಮ್ಮುಖದಲ್ಲಿ ಇಂದು ಇಬ್ಬರು ಶಾಸ್ತ್ರೋಕ್ತವಾಗಿ ಮದುವೆ ಮಾಡಿಕೊಂಡಿದ್ದಾರೆ. ಮದುವೆಗೆ ತಿಂಗಳ ಹಿಂದೆ ತಯಾರಿ ಜೋರಾಗಿ ನಡೆದಿತ್ತು. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರು ಕೂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮದುವೆಗೆ ಮಾಡಿಕೊಂಡಿದ್ದ ತಯಾರಿಯ ಬಗ್ಗೆ ಹಾಗೂ ಪ್ರೀ ವೆಡ್ ಶೂಟ್ ವಿಡಿಯೋ ಮತ್ತು ಸ್ನೇಹಿತರ ಜೊತೆ ಬ್ಯಾಚುಲರ್ ಪಾರ್ಟಿ ಮಾಡಿರುವ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ಯಾವ ಸಿನಿಮಾ ಶೂಟಿಂಗ್ ಗಿಂತಲೂ ಕಡಿಮೆ ಇಲ್ಲದಂತೆ ಇವರ ಪ್ರೀ ವೆಡ್ ಶೂಟಿಂಗ್ ನಡೆದಿತ್ತು. ಈಗ ಮದುವೆ ಸಹ ಅಷ್ಟೇ ಗ್ರಾಂಡ್ ಆಗಿ ನಡೆದಿದ್ದು ಮಧು ಮಕ್ಕಳಿಬ್ಬರು ಯುವರಾಜ, ಯುವರಾಣಿಯಂತೆ ಕಾಣುತ್ತಿದ್ದಾರೆ. ರೇಷ್ಮೆಬಣ್ಣದ ರೇಷ್ಮೆ ಸೀರೆ ಹಾಗೂ ಶಲ್ಯ ತೊಟ್ಟು ಜೋಡಿಗಳು ಸಾಂಪ್ರದಾಯ ಉಡುಗೆಯಲ್ಲಿ ರಾಯಲ್ ಆಗಿ ಕಾಣುತ್ತಿದ್ದಾರೆ. ಇವರಿಬ್ಬರ ವಿವಾಹ ಕಾರ್ಯಕ್ರಮಕ್ಕೆ ಗಟ್ಟಿಮೇಳ ಹಾಗೂ ಪಾರು ಧಾರವಾಹಿಯ ಇಡೀ ತಂಡವೇ ಬಂದಿದೆ.

ಜೊತೆಗೆ ಜೀ ಕನ್ನಡ ವಾಹಿನಿಯ ಇತರೆ ಧಾರಾವಾಹಿ ಕಲಾವಿದರು ತಂತ್ರಜ್ಞರು ಎಲ್ಲರೂ ಸಹ ಭಾಗಿಯಾಗಿ ದಂಪತಿಗಳಿಗೆ ಶುಭ ಹಾರೈಸಿದ್ದಾರೆ. ಸದ್ಯಕ್ಕೆ ವೈರಲಾಗುತ್ತಿರುವ ಫೋಟೋಗಳಲ್ಲಿ ಸುಧಾ ನರಸಿಂಹಮೂರ್ತಿ, ಅಶ್ವಿನಿ, ವಿನಯ ಪ್ರಸಾದ್, ಶರತ್ ಪದ್ಮನಾಭ್ ಮುಂತಾದವರು ಕಾಣಿಸಿಕೊಂಡಿದ್ದಾರೆ. ಇಬ್ಬರು ತಮ್ಮ ದಾಂಪತ್ಯ ಜೀವನವನ್ನು ನೆಮ್ಮದಿಯಿಂದ ಕಳೆಯಲಿ ಎಂದು ನಾವು ಸಹ ಹಾರೈಸೋಣ.