Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಸ್ನೇಹಿತೆಯ ಗಂಡನನ್ನೆ ಪಟಾಯಿಸಿ ಮದುವೆಯಾಗುತ್ತಿರುವ ನಟಿ ಹನ್ಸಿಕಾ, ಅಂದು ತಾನೇ ಮುಂದೆ ನಿಂತು ಮದುವೆ ಮಾಡಿದ್ದ...

ಸ್ನೇಹಿತೆಯ ಗಂಡನನ್ನೆ ಪಟಾಯಿಸಿ ಮದುವೆಯಾಗುತ್ತಿರುವ ನಟಿ ಹನ್ಸಿಕಾ, ಅಂದು ತಾನೇ ಮುಂದೆ ನಿಂತು ಮದುವೆ ಮಾಡಿದ್ದ ಹನ್ಸಿಕಾ ಇಂದು ಸ್ನೇಹಿತೆ ಬಾಳಿಗೆ ಮುಳ್ಳದ್ಲು.

ಜಗತ್ತು ಬದಲಾಗುತ್ತಿದ್ದ ಹಾಗೆ ಈ ಭಾವನೆ ಸ್ನೇಹ ಸಂಬಂಧ ಎಲ್ಲವೂ ಅರ್ಥವನ್ನೇ ಕಳೆದುಕೊಳ್ಳುತ್ತಿದೆ. ಈ ವಿಷಯವನ್ನು ಪ್ರಸ್ತಾಪಿಸಲು ಕಾರಣ ಏನೆಂದರೆ ಹನ್ಸಿಕಾ ಅವರ ಮದುವೆಯ ವಿಷಯ. ಹನ್ಸಿಕಾ ಭಾರತದ ಹೆಸರಾಂತ ನಟಿ ಹಾಗೂ ಕನ್ನಡದಲ್ಲಿ ಬಿಂದಾಸ್ ಸಿನಿಮಾದಲ್ಲಿ ಬಿಂದಾಸ್ ಆಗಿ ಪುನೀತ್ ಅವರ ಜೊತೆ ಅಭಿನಯಿಸಿರುವ ನಟಿ. ಈ ನಟಿ ಈಗ ತಮ್ಮ ಗೆಳತಿಯ ಗಂಡನ್ನನ್ನೇ ಪ್ರೀತಿಸಿ ಮದುವೆಯಾಗುತ್ತಿದ್ದಾರೆ.

ತನ್ನ ಗೆಳತಿಯ ಮದುವೆ ಅಂದರೆ ಭಾವಿ ಪತಿಯ ಮೊದಲ ಮದುವೆಯಲ್ಲಿ ಹನ್ಸಿಕ ಅವರು ಭಾಗವಹಿಸಿದ್ದರು ಆ ಮದುವೆಯ ಸೆಂಟರ್ ಆಫ್ ಅಟ್ರಾಕ್ಷನ್ ಆಗಿ ಕುಣಿದು ಕುಪ್ಪಳಿಸಿದ್ದರು. ಇಬ್ಬರಿಗೂ ಕೂಡ ಮನಃಸ್ಪೂರ್ತಿಯಾಗಿ ಹರಸಿ ಹಾರೈಸಿ ಬಂದಿದ್ದರು. ಇದೀಗ ಅದೇ ಗೆಳತಿಯ ಗಂಡನನ್ನೇ ಹಂಸಿಕ ಮೊಟ್ವಾನಿ ಅವರು ಮದುವೆ ಆಗುತ್ತಿದ್ದಾರೆ. ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಒಳಗಾಗಿದ್ದು ಕೆಲವರು ಹನ್ಸಿಕ ಅವರನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಸ್ನೇಹಕ್ಕೆ ಬೆಲೆಯೇ ಇಲ್ಲವೇ ಸಂಬಂಧಿಗಳಿಗೆ ಅರ್ಥವೇ ಇಲ್ಲವೇ ಎನ್ನುವ ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದಾರೆ. ಹನ್ಸಿಕಾ ಅವರ ಬಗ್ಗೆ ಹೇಳುವದಾದರೆ ಬಾಲ ನಟಿ ಹಾಕಿ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟವರು, ಶಕಲಕ ಬೂಮ್ ಭೂಮ್ ಎನ್ನುವ ಧಾರಾವಾಹಿಯಲ್ಲಿ ಪಾತ್ರ ಮಾಡಿದ್ದರು. ಬಳಿಕ 2003ರಲ್ಲಿ ಕೊಯಿ ಮಿಲ್ಕಯ ಎನ್ನುವ ಸಿನಿಮಾದಲ್ಲಿ ಹೃತಿಕ್ ರೋಷನ್ ಅವರ ಜೊತೆ ಬಾಲ ನಟಿಯಾಗಿ ಸ್ಕ್ರೀನ್ ಶೇರ್ ಮಾಡಿರುತ್ತಾರೆ.

ಆ ಸಿನಿಮಾದಲ್ಲಿ ಹನ್ಸಿಕ ಅವರ ಟ್ಯಾಲೆಂಟ್ ಅನ್ನು ಕೂಡ ಅನೇಕರು ಗುರುತಿಸಿರುತ್ತಾರೆ. ಇದಾದ ಬಳಿಕ 3 ವರ್ಷಗಳಲ್ಲೇ ಅಂದರೆ ಹನ್ಸಿಕ ಅವರಿಗೆ 15 ವರ್ಷಗಳಿದ್ದಾಗ ಇವರು ನಾಯಕಿ ಆಗಿ ತೆಲುಗಿನ ದೇಶಮುದ್ರು ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. ನಟಿಯಾಗಿ ಕಾಣಿಸಿಕೊಂಡ ಇವರನ್ನು ನೋಡಿ ಎಲ್ಲರೂ ಶಾ.ಕ್ ಆಗುತ್ತಾರೆ.

ಕಾರಣ ಏನೆಂದರೆ ಕೊಯಿ ಮಿಲ್ಗಯ ಸಿನಿಮಾ ಬಂದಾಗ ಪುಟ್ಟ ಬಾಲೆಯಂತೆ ಇದ್ದ ಹನ್ಸಿಕ ಮೊಟ್ವಾಣಿ ಅವರು ದೇಶಮುದ್ರು ಸಿನಿಮಾದಲ್ಲಿ ಮೈ ಕೈ ತುಂಬಿಕೊಂಡು ದೊಡ್ಡ ನಟಿಯಂತೆ ಆಗಿಬಿಟ್ಟಿರುತ್ತಾರೆ. ಯಾರು ಕೂಡ ಅವರನ್ನು ಹದಿನೈದು ವರ್ಷದವರು ಎಂದು ಗುರಿತುಸಲಾಗದಷ್ಟು ಇವರ ದೇಹ ಬದಲಾವಣೆ ಆಗಿರುತ್ತದೆ. ಒಬ್ಬ ನಟಿ ಯಾವ ರೀತಿ ಬಾಡಿ ಹೊಂದಿರಬೇಕು ಅದೇ ರೀತಿ ಹನ್ಸಿಕ ಬದಲಾಗಿರುತ್ತಾರೆ.

ಈ ವಿಷಯದ ಬಗ್ಗೆ ನಂತರ ತಿಳಿದುಬಂದ ಸತ್ಯ ಅಂಶವೇನೆಂದರೆ, ಹನ್ಸಿಕ ಮುಟ್ವಾನಿ ಅವರ ತಾಯಿ ವೈದ್ಯ ಆಗಿದ್ದು ಹಾರ್ಮೋನ್ ಗಳ ವಿಚಾರದ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿತ್ತು. ಅವರೇ ಈ ರೀತಿ ಹಾರ್ಮೋನ್ಸ್ ಇಂಜೆಕ್ಷನ್ ಮಾಡಿ ಹನ್ಸಿಕ ಅವರನ್ನು ಆ ರೀತಿ ತಯಾರಿ ಮಾಡಿದ್ದಾರೆ ಎಂದು ಸಾಕಷ್ಟು ವಿವಾದಗಳು ಆ ಬಗ್ಗೆ ಎದ್ದವು. ಹನ್ಸಿಕ ಅವರು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಭಾರತೀಯ ಚಿತ್ರರಂಗದ ಪ್ರಮುಖ ಭಾಷೆಗಳ ಪ್ರಮುಖ ನಟಗಳಿಗೆ ನಾಯಕ ನಟಿಯಾಗಿ ಮಿಂಚಲು ಆರಂಭಿಸಿದರು.

ಯಾವಾಗಲೂ ಅವರ ಮದುವೆ ವಿಷಯ ಸುದ್ದಿ ಆಗುತ್ತಿತ್ತು ಇದುವರೆಗೆ ಈ ವಿಚಾರವಾಗಿ ಎಲ್ಲೂ ಮಾತನಾಡಿರದ ಅವರು ಮದುವೆ ಆಗುವುದರ ಬಗ್ಗೆ ಇತ್ತೀಚೆಗೆ ಸುಳಿವು ಬಿಟ್ಟಿಕೊಟ್ಟಿದ್ದರು. ಹುಡುಗ ಯಾರು ಬಗ್ಗೆ ಎಲ್ಲರಿಗೂ ಕುತೂಹಲ ಇತ್ತು. ಹನ್ಸಿಕ ಸುಹಾನ್ ಕತ್ತುರಿಯ ಎನ್ನುವ ಬಿಸಿನೆಸ್ ಮ್ಯಾನ್ ಅನ್ನು ಡಿಸೆಂಬರ್ 4ರಂದು ಮದುವೆ ಆಗುವುದಾಗಿ ತಿಳಿಸಿದರು.

ಸೋಶಿಯಲ್ ಮೀಡಿಯಾದ ಸುಹಾಲ್ ಕತೂರಿಯ ಬೇರೆ ಹುಡುಗಿಯನ್ನು ಮದುವೆಯಾಗುತ್ತಿರುವುದು ಆ ಮದುವೆಯಲ್ಲಿ ಹನ್ಸಿಕ ಭಾಗಿಯಾಗಿರುವ ಎಲ್ಲಾ ವಿಡಿಯೋಗಳು ಹೊರ ಬರಲಾರಂಭಿಸಿದ್ದವು. ಸುಹಾಲ್ ಮೊದಲ ಮದುವೆ ಹನ್ಸಿಕಾ ಸ್ನೇಹಿತೆ ರಿಂಕಿ ಎನ್ನುವವರ ಜೊತೆ ನಡೆದಿತ್ತು ಬಳಿಕ ಇಬ್ಬರ ನಡುವೆ ಮನಸ್ತಾಪ ಏರ್ಪಟ್ಟು ಬೇರೆ ಆಗಿದ್ದು ಇದೀಗ ಹನ್ಸಿಕಾ ಕೈಯನ್ನು ಹಿಡಿಯುತ್ತಿದ್ದಾರೆ. ಈ ವಿಷಯದ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.